KSCCF FDA Notification: ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ (KSCCF) ದಲ್ಲಿ FDA ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.
KSCCF FDA Notification:ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ (ನಿ)., ಬೆಂಗಳೂರು ಈ ಸಂಸ್ಥೆಯಲ್ಲಿ ಖಾಲಿ ಇರುವ ಈ ಕೆಳಕಂಡ ವಿವಿಧ ವೃಂದದ ಒಟ್ಟು 34 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್-ಲೈನ್ (ON-LINE) ಮುಖಾಂತರ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ (ನಿ), ಬೆಂಗಳೂರು ಇದರ ಅಧಿಕೃತ ವೆಬ್ https://virtualofficeerp.com/ksccf2025 ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮುಖಾಂತರವೇ ಅರ್ಜಿ ಸಲ್ಲಿಸತಕ್ಕದ್ದು ಹಾಗೂ ನಿಗದಿತ ಅರ್ಜಿ ಶುಲ್ಕವನ್ನು ಆನ್-ಲೈನ್ ಮುಖಾಂತರವೇ ಪಾವತಿಸತಕ್ಕದ್ದು,
ಅರ್ಜಿಗಳನ್ನು ಖುದ್ದಾಗಿ / ಅಂಚೆ / ಕೋರಿಯರ್ ಇತ್ಯಾದಿಗಳ ಮೂಲಕ ಸಲ್ಲಿಸಲು ಅವಕಾಶ ಇರುವುದಿಲ್ಲವೆಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ.
ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ (KSCCF) ಹುದ್ದೆಗಳ ವಿವರ / ಮೀಸಲಾತಿ ಈ ಕೆಳಕಂಡಂತೆ ಇರುತ್ತದೆ.
KSCCF FDA Notification DOWNLOAD – CLICK HERE
WEBSITE LINK – CLICK HERE
1) ವಿದ್ಯಾರ್ಹತೆ :
ಸಹಕಾರ ಸಂಘಗಳ ನಿಯಮಗಳು 1960 ಹಾಗೂ ಸಹಕಾರ ಸಂಘಗಳ (ತಿದ್ದುಪಡಿ) ನಿಯಮಗಳು 2017 నిಯಮ 17( ಎ) ಮತ್ತು ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತ ಬೆಂಗಳೂರು ಇದರ ಪೂರಕ ನಿಯಮಗಳಲ್ಲಿ ವಿವಿಧ ಹುದ್ದೆಗಳಿಗನುಗುಣವಾಗಿ ನಿಗದಿಪಡಿಸಿದ ಶೈಕ್ಷಣಿಕ ವಿದ್ಯಾರ್ಹತೆ ಈ ಕೆಳಕಂಡಂತೆ ಇರುತ್ತದೆ.
• ಫಾರ್ಮ್ ಸಿಸ್ಟ್ :- 1. ಸರ್ಕಾರದ ಅಂಗೀಕೃತ ಸಂಸ್ಥೆಯಿಂದ ಡಿಪ್ಲೋಮಾ ಇನ್ ಫಾರಾಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
2. ಕಂಪ್ಯೂಟರ್ ಅಪರೇಷನ್ಸ್ ಮತ್ತು ಅಪ್ಲಿಕೇಷನ್ಸ್‌ನಲ್ಲಿ ಜ್ಞಾನ ಹೊಂದಿರಬೇಕು.
3. ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಚವಾಗಿ ಮಾತನಾಡಬೇಕು ಮತ್ತು ಆರ್ಥಮಾಡಿಕೊಳ್ಳಬೇಕು.
• ಪ್ರಥಮ ದರ್ಜೆ ಸಹಾಯಕರು:- 1. ಭಾರತದ ಕಾನೂನಿನಡಿಯಲ್ಲಿ ವಿಶ್ವವಿದ್ಯಾಲಯದಿಂದ ತೇರ್ಗಡೆಯಾಗಿರಬೇಕು. ಸ್ಥಾಪನೆಯಾದ ಯಾವುದೇ ಪದವಿಯಲ್ಲಿ
2. ಕಂಪ್ಯೂಟರ್ ಅಪರೇಷನ್ಸ್ ಮತ್ತು ಅಪ್ಲಿಕೇಷನ್ಸ್‌ನಲ್ಲಿ ಜ್ಞಾನ ಹೊಂದಿರಬೇಕು.
3. ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.
• ವಿಕ್ರಯ ಸಹಾಯಕರು :- 1. ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರಬೇಕು.
2. ಕಂಪ್ಯೂಟರ್ ಅಪರೇಷನ್ಸ್ ಮತ್ತು ಅಪ್ಲಿಕೇಷನ್ಸ್‌ನಲ್ಲಿ ಜ್ಞಾನ ಹೊಂದಿರಬೇಕು.
3. ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.
2) ವಯೋಮಿತಿ :
ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಈ ಕೆಳಕಂಡ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ನಿಗದಿತ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
• ಸಾಮಾನ್ಯ ವರ್ಗ:-18 ವರ್ಷ ತುಂಬಿರಬೇಕು -35 ವರ್ಷ ಮೀರಿರಬಾರದು.
• ಪ್ರವರ್ಗ 2ಎ, ಪ್ರವರ್ಗ 2ಬಿ, ಪ್ರವರ್ಗಎ, ಪ್ರವರ್ಗ 3ಬಿ:- 18 ವರ್ಷ ತುಂಬಿರಬೇಕು -38 ವರ್ಷ ಮೀರಿರಬಾರದು.
• ಪ.ಜಾ/ಪ.ಪಂ/ಪ್ರವರ್ಗ-1:-18 ವರ್ಷ ತುಂಬಿರಬೇಕು -40 ವರ್ಷ ಮೀರಿರಬಾರದು.
• ವಿಕಲಚೇತನರು ಮತ್ತು ವಿಧವೆಯರಿಗೆ:- 10 ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
3) ಅರ್ಜಿ ಶುಲ್ಕ :
• ಪ.ಜಾತಿ / ಪ.ಪಂ / ಪ್ರ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ:- 500-00 (+ಗೇಟ್ ವೇ ಶುಲ್ಕಗಳು)
• ಇತರೆ ವರ್ಗದ ಅಭ್ಯರ್ಥಿಗಳಿಗೆ:- 1000 ರೂ(+ಗೇಟ್ ವೇ ಶುಲ್ಕಗಳು)
4) ಅರ್ಜಿ ಸಲ್ಲಿಸಲು ಪ್ರಾರಂಭ ಮತ್ತು ಕೊನೆಯ ದಿನಾಂಕ.
• ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:- 16/08/2025
• ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ:- 14/09/2025
5) ಸೂಚನೆಗಳು :
1. ಈ ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಿರುವ ಹುದ್ದೆಗಳ ಸಂಖ್ಯೆ ಮತ್ತು ವರ್ಗೀಕರಣವು ಅನಿವಾರ್ಯ ಸಂದರ್ಭದಲ್ಲಿ ಬದಲಾವಣೆಯಾಗಬಹುದಾಗಿದ್ದು, ನೇಮಕಾತಿ ಪ್ರಾಧಿಕಾರವು ಬದಲಾವಣೆ ಮಾಡುವ ಮತ್ತು ರದ್ದುಪಡಿಸುವ ಅಧಿಕಾರವನ್ನು ಕಾಯ್ದಿರಿಸಿಕೊಂಡಿದೆ.
2. ಅರ್ಜಿಗಳನ್ನು ಆನ್-ಲೈನ್ (ON-LINE) ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಕೋರಿಯರ್ / ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ. ಒಂದು ವೇಳೆ ಆ ರೀತಿ ಅರ್ಜಿಗಳನ್ನು ಸಲ್ಲಿಸಿದರೆ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
3. ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸತಕ್ಕದ್ದು, ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದಲ್ಲಿ, ಅಂತಹ ಅಭ್ಯರ್ಥಿಗಳು ಒಂದೇ ನೋಂದಣಿ ಸಂಖ್ಯೆಯಡಿಯಲ್ಲಿಯೇ ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ, ಪ್ರತ್ಯೇಕವಾಗಿ ಅರ್ಜಿ ಸಲ್ಲಿಸತಕ್ಕದ್ದು.
4. ಅಭ್ಯರ್ಥಿಗಳು ಅರ್ಜಿಯನ್ನು WEB SITEನಲ್ಲಿ ತಿಳಿಸಿರುವ ಸೂಚನೆಗಳನ್ವಯ ಮಾತ್ರ ಭರ್ತಿ ಮಾಡತಕ್ಕದ್ದು.
5. ಆನ್-ಲೈನ್ (ON-LINE) ಮೂಲಕ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಆಪ್ ಲೋಡ್ ಮಾಡಬೇಕಾದ ಪ್ರಮಾಣ ಪತ್ರಗಳು / ದಾಖಲಾತಿಗಳನ್ನು ಸ್ಪಷ್ಟವಾಗಿ ಕಾಣುವಂತೆ ಮತ್ತು ಓದಲು ಸಾಧ್ಯವಾಗುವಂತೆ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡತಕ್ಕದ್ದು.
6. ಮೊಬೈಲ್ ಕ್ಯಾಮರಾ ಸಹಾಯದಿಂದ ಸೆರೆ ಹಿಡಿದ/ ಸ್ಪಷ್ಟತೆ ಇಲ್ಲದೆ ಇರುವ ದಾಖಲಾತಿಗಳನ್ನು ಅಪ್ ಲೋಡ್ ಮಾಡಿದ್ದಲ್ಲಿ ಅಂಥಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
7. ಅಭ್ಯರ್ಥಿಗಳು ಅಪೂರ್ಣ / ಅಸ್ಪಷ್ಟ / ತಪ್ಪು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
8. ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ಅರ್ಜಿಯಲ್ಲಿ ನಮೂದಿಸಿರುವ ಅಂಚೆ ವಿಳಾಸ, ಮೊಬೈಲ್ ನಂಬರ್ ಮತ್ತು ಇ-ಮೇಲ್ ಐ.ಡಿ.ಗಳ ಮೂಲಕವೇ ಸಂಪರ್ಕಿಸಲಾಗುವುದು.
9. ಸಂಸ್ಥೆಯು ಅಭ್ಯರ್ಥಿಯೊಂದಿಗೆ ಯಾವುದೇ ಪತ್ರ ವ್ಯವಹಾರ ನಡೆಸುವುದಿಲ್ಲ.
10. ನಿಗದಿತ ಶುಲ್ಕ ಸಂದಾಯ ಮಾಡದಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಮತ್ತು ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕು ವಾಪಸ್ಸು ನೀಡಲಾಗುವುದಿಲ್ಲ.
6) ಅಭ್ಯರ್ಥಿಗಳು ಆನ್-ಲೈನ್ (ON-LINE) ಮೂಲಕ ಅರ್ಜಿ ಭರ್ತಿ ಮಾಡುವ ಮೊದಲು ಈ ಕೆಳಕಂಡ ಅಂಶಗಳನ್ನು ತಿಳಿದುಕೊಂಡಿರತಕ್ಕದ್ದು.
(1) ಅಭ್ಯರ್ಥಿಗಳು ಮಹಾಮಂಡಳದ ಅಧಿಕೃತ WEB SITE https://virtualofficeerp.com/ksccf2025 ನ್ನು ಒತ್ತಿದ ಕೂಡಲೇ ಕಂಪ್ಯೂಟರ್ ಪರದೆಯ ಮೇಲೆ CONSUMERS FEDERATION RECURITMENT 2025 2 ಅಧಿಸೂಚನೆ / ಸೂಚನೆಗಳನ್ನು ಕಡ್ಡಾಯವಾಗಿ ಓದತಕ್ಕದ್ದು ಮತ್ತು ಅಂತಿಮವಾಗಿ ನಿಯಮ ಮತ್ತು ಷರತ್ತುಗಳನ್ನು ಕೆಳಗಿನ ಚೆಕ್ ಬಾಕ್ಸ್ ಅನ್ನು ಒತ್ತುವ ಮೂಲಕ ಒಪ್ಪಿಕೊಳ್ಳತಕ್ಕದ್ದು ಹಾಗೂ NEW REGISTRATION ಗುಂಡಿಯನ್ನು ಒತ್ತಿ ಮುಂದುವರಿಯುವುದು.
(ii) ಸಂಬಂಧಪಟ್ಟ ಹುದ್ದೆಯನ್ನು ಆಯ್ಕೆ ಮಾಡಿ APPLY ಗುಂಡಿಯನ್ನು ಒತ್ತಿ ಅರ್ಜಿಗಳನ್ನು ಭರ್ತಿ ಮಾಡತಕ್ಕದ್ದು, ಅರ್ಜಿಯನ್ನು ಭರ್ತಿ ಮಾಡಿದ ನಂತರ ನಮೂದಿಸಿದ ವಿವರಗಳನ್ನು ಮತ್ತೊಮ್ಮೆ ಕೂಲಂಕುಷವಾಗಿ ಪರಿಶೀಲಿಸಿಕೊಂಡು, ಎಲ್ಲಾ ವಿವರಗಳು ಸರಿಯಾಗಿರುತ್ತವೆ ಎಂದು ಖಚಿತ ಪಡಿಸಿಕೊಂಡ ನಂತರವೇ PREVIEW ಗುಂಡಿಯನ್ನು ಒತ್ತಿ ಮುಂದುವರಿಯುವುದು.
(iii) ಅರ್ಜಿಯ ಯಾವುದೇ ವಿವರಗಳ ಬದಲಾವಣೆ ಅಗತ್ಯವಿದ್ದರೆ ಪೂರ್ವದರ್ಶನ ಪುಟದಲ್ಲಿ EDIT ಗುಂಡಿಯನ್ನು ಒತ್ತಿ ನಿಮ್ಮ ಅರ್ಜಿಯಲ್ಲಿನ ಮಾಹಿತಿಗಳನ್ನು ಸರಿಪಡಿಸಿಕೊಂಡು ವಿವರಗಳು ಸರಿ ಇರುವುದನ್ನು ಖಚಿತಪಡಿಸಿಕೊಂಡು, ನಿಮ್ಮ ಸಹಿಯೊಂದಿಗಿನ ಪಾಸ್ ಪೋರ್ಟ್ ಗಾತ್ರದ ಸ್ಕ್ಯಾನ್ ಮಾಡಿದ ಭಾವ ಚಿತ್ರವನ್ನು ಅಪ್ ಲೋಡ್ ಮಾಡುವ ಬಗ್ಗೆ NEXT ಗುಂಡಿಯನ್ನು ಒತ್ತುವುದು.
NOTE :- ಈ ಹಂತದಲ್ಲಿ ಅಭ್ಯರ್ಥಿಯು ಕಂಪ್ಯೂಟರ್ ಪರದೆಯ ಮೇಲೆ ಮೂಡಲಾದ REGISTRATION ID ಯನ್ನು ತಪ್ಪದೇ ಬರೆದಿಟ್ಟುಕೊಳ್ಳಬೇಕು. ಅಭ್ಯರ್ಥಿಯು ನೋಂದಾಯಿಸಿದ E-MAIL / MOBILE ವಿಳಾಸಕ್ಕೆ ಒಂದು ಸ್ವಯಂ ಚಾಲಿತ E-MAIL / MOBILE ಮೂಲಕ REGISTRATION ID & PASSWORD ಅನ್ನು ಕಳುಹಿಸಲಾಗುವುದು.
ಅಭ್ಯರ್ಥಿಯು EDIT APPLICATION ಗುಂಡಿಯನ್ನು ಒತ್ತಿ, ಅವರ REGISTRATION ID ಮತ್ತು NEXT PASSWORD ಅನ್ನು ಬಳಸಿ ತಮ್ಮ ವಿವರಗಳನ್ನು ಅಪ್ ಲೋಡ್ ಮಾಡಬಹುದು ಅಥವಾ ಅಪ್ ಲೋಡ್ ಮಾಡಿದ ಮಾಹಿತಿಯನ್ನು ಬದಲಾಯಿಸಬಹುದು. ಅಭ್ಯರ್ಥಿಯು ತಾನು ಅಪ್ ಲೋಡ್ ಮಾಡಿದ ಎಲ್ಲಾ ಮಾಹಿತಿಗಳನ್ನು ಖಚಿತ ಪಡಿಸಿಕೊಂಡ ನಂತರವೇ. NEXT ಗುಂಡಿಯನ್ನು ಒತ್ತುವುದು.