KSMCL Recruitment 2026: ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್‌ನಲ್ಲಿ 50 ಹುದ್ದೆಗಳು | ₹50,000 ಸಂಬಳ, ನೇರ ಸಂದರ್ಶನ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

KSMCL Recruitment 2026: ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್‌ನಲ್ಲಿ 50 ಹುದ್ದೆಗಳು | ₹50,000 ಸಂಬಳ, ನೇರ ಸಂದರ್ಶನ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

KSMCL Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಅವಕಾಶ

KSMCL Recruitment 2026: ಕರ್ನಾಟಕ ಸರ್ಕಾರದ ಸಾರ್ವಜನಿಕ ಉದ್ದಿಮೆಯಾದ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ (KSMCL) ವಿವಿಧ ತಾಂತ್ರಿಕ ಮತ್ತು ಗಣಿಗಾರಿಕೆ ವಿಭಾಗಗಳಲ್ಲಿ ಒಟ್ಟು 50 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿಯನ್ನು 11 ತಿಂಗಳ ಗುತ್ತಿಗೆ ಆಧಾರದ ಮೇಲೆ ಅಥವಾ ನಿಯಮಿತ ನೇಮಕಾತಿ ಆಗುವವರೆಗೆ ನಡೆಯಲಿದೆ.

ಆಸಕ್ತ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲ. ನೇರ ಸಂದರ್ಶನದ (Walk-in Interview) ಮೂಲಕವೇ ಆಯ್ಕೆ  ಮಾಡಲ್ಲಿದ್ದು, ಅರ್ಹ ಅಭ್ಯರ್ಥಿಗಳಿಂದ ನಿಗದಿತ ದಿನಾಂಕದಂದು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು.

ನೇಮಕಾತಿ ಮುಖ್ಯಾಂಶಗಳು

  • ಸಂಸ್ಥೆ: ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ (KSMCL)
  • ಒಟ್ಟು ಹುದ್ದೆಗಳು: 50
  • ಉದ್ಯೋಗ ಸ್ಥಳ: ಕರ್ನಾಟಕ
  • ನೇಮಕಾತಿಯ ವಿಧಾನ: ನೇರ ಸಂದರ್ಶನ
  • ಉದ್ಯೋಗದ ಸ್ವರೂಪ: 11 ತಿಂಗಳ ಗುತ್ತಿಗೆ
  • ಗರಿಷ್ಠ ಮಾಸಿಕ ವೇತನ: ₹50,000

ಹುದ್ದೆಗಳ ವಿವರ

ಹುದ್ದೆ – ಹುದ್ದೆಗಳ ಸಂಖ್ಯೆ – ಮಾಸಿಕ ವೇತನ

  • ಸಹಾಯಕ ವ್ಯವಸ್ಥಾಪಕರು (ಉತ್ಪಾದನೆ) – 03 – ₹50,000
  • ಸಹಾಯಕ ವ್ಯವಸ್ಥಾಪಕರು (ಲೀಸ್ & ಎಕ್ಸ್‌ಪ್ಲೋರೇಷನ್) – 02 – ₹47,000
  • ಅಭಿಯಂತರರು (ಪರಿಸರ) – 01 – ₹45,000
  • ಸಹಾಯಕ ಅಭಿಯಂತರು (ಮೆಕ್ಯಾನಿಕಲ್) – 03 – ₹45,000
  • ಸಹಾಯಕ ಅಭಿಯಂತರು (ಎಲೆಕ್ಟ್ರಿಕಲ್) – 02 – ₹45,000
  • ಸಹಾಯಕ ಅಭಿಯಂತರು (ಸಿವಿಲ್) – 01 – ₹45,000
  • ಸಹಾಯಕ ವ್ಯವಸ್ಥಾಪಕರು (ಸರ್ವೆ) – 01 – ₹40,000
  • ಕಿರಿಯ ಅಭಿಯಂತರರು (ಎಲೆಕ್ಟ್ರಿಕಲ್) – 01 – ₹28,000
  • ಗಣಿ ಮುಂದಾಳು – 08 – ₹28,000
  • ಗಣಿ ಸಂಗಾತಿ – 12 – ₹25,000
  • ಬ್ಲಾಸ್ಟರ್ – 08 – ₹22,000
  • ಸರ್ವೆ ಅಸಿಸ್ಟೆಂಟ್ – 01 – ₹21,400
  • ಟೆಕ್ನಿಷಿಯನ್ ಗ್ರೇಡ್-II – 02 – ₹21,000
  • ಬ್ಲಾಸ್ಟಿಂಗ್ ಹೆಲ್ಪರ್ – 05 – ₹18,350

ಒಟ್ಟು ಹುದ್ದೆಗಳು: 50

• KSMCL Recruitment 2026 Notification Link – Click Here Download

ಸಂದರ್ಶನ ದಿನಾಂಕ

29 ಜುಲೈ 2026

  • ಸಹಾಯಕ ವ್ಯವಸ್ಥಾಪಕರು
  • ವಿವಿಧ ಸಹಾಯಕ ಅಭಿಯಂತರರು
  • ಪರಿಸರ ಅಭಿಯಂತರ
  • ಸರ್ವೆ ವಿಭಾಗ
  • ಕಿರಿಯ ಅಭಿಯಂತರ

30 ಜುಲೈ 2026

  • ಗಣಿ ಮುಂದಾಳು
  • ಗಣಿ ಸಂಗಾತಿ

31 ಜುಲೈ 2026

  • ಬ್ಲಾಸ್ಟರ್
  • ಸರ್ವೆ ಅಸಿಸ್ಟೆಂಟ್
  • ಟೆಕ್ನಿಷಿಯನ್ ಗ್ರೇಡ್-II
  • ಬ್ಲಾಸ್ಟಿಂಗ್ ಹೆಲ್ಪರ್

ಸಮಯ: ಬೆಳಿಗ್ಗೆ 10:30

ಅಗತ್ಯ ವಿದ್ಯಾರ್ಹತೆ

ಪ್ರತಿ ಹುದ್ದೆಗೆ ಅಗತ್ಯವಿರುವ ವಿದ್ಯಾರ್ಹತೆ, ಅನುಭವ, ವಯೋಮಿತಿ ಮತ್ತು ಇತರ ಅರ್ಹತೆಗಳು ಹುದ್ದೆವಾರು ಭಿನ್ನವಾಗಿವೆ. ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸುವುದು ಸೂಕ್ತ.

ಆಯ್ಕೆ ವಿಧಾನ(Selection teyps)
  • ನೇರ ಸಂದರ್ಶನ (Walk-in Interview)
  • ಮೂಲ ದಾಖಲೆಗಳ ಪರಿಶೀಲನೆ
  • ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಅಂತಿಮ ಆಯ್ಕೆ
ಸಂದರ್ಶನಕ್ಕೆ ತೆಗೆದುಕೊಂಡು ಹೋಗಬೇಕಾದ ದಾಖಲೆಗಳು
  • ಭರ್ತಿ ಮಾಡಿದ ಅರ್ಜಿ ನಮೂನೆ
  • SSLC / PUC ಅಂಕಪಟ್ಟಿ
  • ಪದವಿ / ಡಿಪ್ಲೊಮಾ ಪ್ರಮಾಣಪತ್ರ
  • ಅನುಭವ ಪ್ರಮಾಣಪತ್ರ (ಅಗತ್ಯವಿದ್ದರೆ)
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
  • ಎಲ್ಲಾ ದಾಖಲೆಗಳ ಸ್ವಯಂ ದೃಢೀಕರಿಸಿದ ನಕಲುಗಳು
  • ಮೂಲ ದಾಖಲೆಗಳು
ಸಂದರ್ಶನ ನಡೆಯುವ ಸ್ಥಳ

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ (KSMCL)
5ನೇ ಮಹಡಿ, ಟಿ.ಟಿ.ಎಂ.ಸಿ ‘A’ ಬ್ಲಾಕ್,
BMTC ಕಟ್ಟಡ, ಕೆ.ಹೆಚ್. ರಸ್ತೆ,
ಶಾಂತಿನಗರ, ಬೆಂಗಳೂರು – 560027.

ಪ್ರಮುಖ ಮಾಹಿತಿ
  • ಯಾವುದೇ ಆನ್‌ಲೈನ್ ಅರ್ಜಿ ಇಲ್ಲ.
  • ನಿಗದಿತ ದಿನಾಂಕ ಮತ್ತು ಸಮಯಕ್ಕೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬೇಕು.
  • ಗುತ್ತಿಗೆ ಅವಧಿ 11 ತಿಂಗಳು.
  • ದಾಖಲೆಗಳ ಪರಿಶೀಲನೆಯ ನಂತರವೇ ಆಯ್ಕೆ.
ಏಕೆ ಈ ಉದ್ಯೋಗ ವಿಶೇಷ?
  • ಕರ್ನಾಟಕ ಸರ್ಕಾರದ ಸಾರ್ವಜನಿಕ ಉದ್ದಿಮೆಯಲ್ಲಿ ಕೆಲಸ ಮಾಡುವ ಅವಕಾಶ
  • ಗರಿಷ್ಠ ₹50,000 ಮಾಸಿಕ ವೇತನ
  • ಲಿಖಿತ ಪರೀಕ್ಷೆ ಇಲ್ಲ
  • ನೇರ ಸಂದರ್ಶನದ ಮೂಲಕ ಆಯ್ಕೆ
  • ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ
Frequently Asked Questions (FAQ)

1. KSMCL Recruitment 2026 ನಲ್ಲಿ ಎಷ್ಟು ಹುದ್ದೆಗಳಿವೆ?
ಒಟ್ಟು 50 ಹುದ್ದೆಗಳು.

2. ಆಯ್ಕೆ ಹೇಗೆ ನಡೆಯುತ್ತದೆ?
ನೇರ ಸಂದರ್ಶನದ ಮೂಲಕ.

3. ಗರಿಷ್ಠ ಸಂಬಳ ಎಷ್ಟು?
ತಿಂಗಳಿಗೆ ₹50,000.

4. ಸಂದರ್ಶನ ಯಾವಾಗ?
29, 30 ಮತ್ತು 31 ಜುಲೈ 2026.

5. ಉದ್ಯೋಗದ ಅವಧಿ ಎಷ್ಟು?
11 ತಿಂಗಳ ಗುತ್ತಿಗೆ ಆಧಾರ.

WhatsApp Group Join Now
Telegram Group Join Now