KSOU:ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ 2024-25ರ ಶೈಕ್ಷಣಿಕ ಸಾಲಿನ ಜುಲೈ ಹಾಗೂ ಜನವರಿ ಆವೃತ್ತಿಯ ಪ್ರವೇಶಾತಿಗೆ ವಿವಿಧ ಶೈಕ್ಷಣಿಕ ಕೋರ್ಸುಗಳ ಪ್ರವೇಶಾತಿ ಶುಲ್ಕವನ್ನು ನಿಗದಿಪಡಿಸಿರುವ ಬಗ್ಗೆ.
KSOU:ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ದೂರ ಶಿಕ್ಷಣ ಪಡೆಯುವ ವಿದ್ಯಾರ್ಥಿ ಗಳಿಗೆ ವಿಧಿಸಬಹುದಾದ ಶುಲ್ಕಗಳನ್ನು ರೂಪಿಸಿ ಸಂಬಂಧಿಸಿದ ಅಧ್ಯಾದೇಶಗಳಿಗೆ ಕ್ರಮವಾಗಿ ದಿನಾಂಕ: 19.012023 ಮತ್ತು 21.01.2023ರಲ್ಲಿ ನಡೆದ ಶಾಸನಬದ್ಧ ಸಭೆಗಳಲ್ಲಿ ಅನುಮೋದನೆ ಪಡೆಯ ಲಾಗಿರುತ್ತದೆ.
2023-24ರ ಜುಲೈ ಹಾಗೂ ಜನವರಿ ಆವೃತ್ತಿಗಳ ಪ್ರವೇಶಾತಿಗೆ ನಿಗದಿಪಡಿಸಲಾಗಿದ್ದ ಉಲ್ಲೇಖ()ರ ಆದೇಶದಲ್ಲಿನ ಶುಲ್ಕಗಳ ಪರಿಷ್ಕರಣೆ ಬಗ್ಗೆ ಮಾನ್ಯ ಕುಲಪತಿಗಳ ಅಧ್ಯಕ್ಷತೆಯಲ್ಲಿ ಇತರ ಶಾಸನಬದ್ಧ ಅಧಿಕಾರಿಗಳೊಂದಿಗೆ ದಿನಾಂಕ.07.2024ರಂದು ನಡೆದ ಸಭೆಯಲ್ಲಿ (1) ವಿವರಣಾ ಪುಸ್ತಕದ ವೆಚ್ಚವಾಗಿ ಬಿ.ಇಡಿ ಮತ್ತು ಎಂಬಿ.ಎ ಶಿಕ್ಷಣಕ್ರಮಗಳಿಗೆ ರೂ.500/- ಹಾಗೂ ಇತರೆ ಶಿಕ್ಷಣಕ್ರಮಗಳಿಗೆ ರೂ:300/- ನಿಗದಿಪಡಿಸಲು (ಇದನ್ನು Admission Processing Fee ಶುಲ್ಕದಲ್ಲಿ ಸೇರಿಸಲು), (2), ಹಾಲಿಯಿರುವ ಪ್ರವೇಶಾತಿಯ ಒಟ್ಟು ಶುಲ್ಕಕ್ಕೆ ಶೇಕಡ 5% ಹೆಚ್ಚಿಸಲು (ಲೆಕ್ಕಾಚಾರದಲ್ಲಿ ರೂ:50/-ಕ್ಕಿಂತ ಕಡಿಮೆ ಬಂದಲ್ಲಿ ಮಾನ್ಯ ಮಾಡದಿರಲು ಹಾಗೂ ರೂ:50/-ಕ್ಕಿಂತ ಹೆಚ್ಚು ಬಂದಲ್ಲ ಅದನ್ನು ರೂ.100/-ಗಳೆಂದು ಪರಿಗಣಿಸುವುದು) ಹಾಗೂ (ಡಿ) ವಿವಿಧ ವರ್ಗಗಳಿಗೆ ಬೋಧನಾ ಶುಲ್ಕದಲ್ಲಿ ನೀಡಲಾಗುತ್ತಿದ್ದ ರಿಯಾಯಿತಿ (ಶೇಕಡ 15% / 25%) ಯನ್ನು ಬೋಧನಾ ಶುಲ್ಕದಲ್ಲಿ ಶೇಕಡ 10% ಏಕರೂಪದ ರಿಯಾಯಿತಿ ನಿಗದಿಪಡಿಸಿ ಹಾಗೂ ಕರಾಮುವಿ ನೌಕರರಿಗೆ ನೀಡಲಾಗುತ್ತಿರುವ ರಿಯಾಯಿತಿಯನ್ನು ಸಹ ಒಟ್ಟಾರೆ ಶುಲ್ಕದಲ್ಲಿ ಶೇ10%ಕ್ಕೆ ರಿಯಾಯಿತಿಯನ್ನು ಪರಿಷ್ಕರಿಸಿ ಪ್ರವೇಶಾತಿ ಮಾಡಲು ತೀರ್ಮಾನವಾಗಿರುತ್ತದೆ.
ಅದರಂತೆ, ಉಲ್ಲೇಖ (1) ಮತ್ತು (2)ರ ಅಂಶಗಳನ್ನು ಒಳಗೊಂಡಂತೆ 2024-25ರ ಜುಲೈ ಹಾಗೂ ಜನವರಿ ಆವೃತ್ತಿಯ ವಿವಿಧ ಶಿಕ್ಷಣಕ್ರಮಗಳಿಗೆ ಪ್ರವೇಶಾತಿ ಶುಲ್ಕವನ್ನು ನಿಗದಿಪಡಿಸಿ ಆದೇಶವನ್ನು ಹೊರಡಿಸಲು ಮಾನ್ಯ ಕುಲಪತಿಗಳು ಅನುಮೋದನೆ ನೀಡಿರುವ ಹಿನ್ನಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ.
ದಿನಾಂಕ:20.07.2024ಪ್ರಸ್ತಾವನೆಗೊಳಪಟ್ಟು ಹಾಗೂ ಮಾನ್ಯ ಕುಲಪತಿಗಳ ಅನುಮೋದನೆಯ ಮೇರೆಗೆ, 2024-25 ರ ಶೈಕ್ಷಣಿಕ ಸಾಲಿನ ಜುಲೈ ಹಾಗೂ ಜನವರಿ ಆವೃತ್ತಿಯ ಪ್ರವೇಶಾತಿಗಳಿಗೆ ವಿವಿಧ ಶೈಕ್ಷಣಿಕ ಕೋರ್ಸುಗಳ ಪ್ರವೇಶಾತಿ ಶುಲ್ಕಗಳನ್ನು ಈ ಆದೇಶದೊಂದಿಗಿರುವ ಅನುಬಂಧದಲ್ಲಿರುವಂತೆ ನಿಗದಿಪಡಿಸಿ ಆದೇಶ.
Wow, wonderful blog layout! How long have you been blogging for? you made blogging look easy. The overall look of your website is magnificent, let alone the content!
https://storm-service.ru/