KSRTC Addl.Select List:KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ ಇದೀಗ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಿದೆ.

KSRTC Addl.Select List:KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ ಇದೀಗ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಿದೆ.

KSRTC

KSRTC Addl.Select List:KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ (ಜಾಹೀರಾತು ಸಂ.1/2020 ದಿನಾಂಕ:14-02-2020 ರನ್ವಯ) ಸಂಬಂಧಿಸಿದಂತೆ Final Select List ನಲ್ಲಿ ಆಯ್ಕೆಯಾಗಿ ವಿವಿಧ  ವಿಭಾಗಗಳಿಗೆ ನಿಯೋಜಿಸಿದರೂ ಕರ್ತವ್ಯಕ್ಕೆ ಹಾಜರಾಗದ 143 ಅಭ್ಯರ್ಥಿಗಳ ಸ್ಥಾನಗಳಿಗೆ KSRTC ಯು ಇದೀಗ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಿದೆ.

KSRTC Addl.Select List – CLICK HERE

KSRTC ಷರತ್ತು ಮತ್ತು ನಿಬಂಧನೆಗಳು.

•  ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ಕೇವಲ ಹೆಸರು ಇದ್ದ ಮಾತ್ರಕ್ಕೆ ವೇಮಕಾತಿಗೆ ಅಥವಾ ಆಯ್ಕೆಗೆ ಯಾವುದೇ ವಿಧವಾದ ಹಕ್ಕನ್ನು ಹೊಂದಿರುವುದಿಲ್ಲ
• ಅಭ್ಯರ್ಥಿಗಳು ಸಲ್ಲಿಸಿರುವ ದಾಖಲಾತಿಗಳಾರ ಅಂಕಪಟ್ಟಿ/ಜಾತಿ,ಆದಾಯ ಪ್ರಮಾಣ ಪತ್ರ,ಕನ್ನಡ/ಗ್ರಾಮೀಣ/ಯೋಜನಾ ನಿರಾಶ್ರಿತ/ಚಾಲಕ ಮತ್ತು ನಿರ್ವಾಹಕ ಪರವಾನಿಗೆ ಹಾಗೂ ಇನ್ನಿತರ ದಾಖಲಾತಿಗಳು ಸಂಬಂಧಿಸಿದ ಪ್ರಾಧಿಕಾರಗಳಿಂದ ಪರಿಶೀಲನ ವರದಿಗೆ ಒಳಪಟ್ಟಿರುತ್ತದೆ.
•  ಮೇಲ್ಕಂಡ ಅಭ್ಯರ್ಥಿಗಳು ಸುಳ್ಳು ಮಾಹಿತಿ ನೀಡಿ ಅಥವಾ ನಕಲ ಪ್ರಮಾಣ ಪತ್ರ/ ದಾಖಲಾತಿಗಳನ್ನು ಸಲ್ಲಿಸಿ ನೇಮಕಾತಿ ಹೊಂದಿರುವುದು ಕಂಡುಬಂದಲ್ಲಿ ನೇಮಕಾತಿ ಹಕ್ಕನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ ಅಂತಹವರ ವಿರುದ್ಧ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು.

• ಅಭ್ಯರ್ಥಿಗಳು ಸಲ್ಲಿಸಿರುವ ದಾಖಲಾತಿಗಳಲ್ಲಿ ತಂದೆ ಹಾಗು ತಾಯಿಯ ಹೆಸರುಗಳಲ್ಲಿ ಸಣ್ಣ/ಪುಟ್ಟ ಬದಲಾವಣೆ ಅಂದರೆ ಸ್ಥಳ/ಊರು/ಉಪನಾಮ ಹಾಗೂ Initial ಗಳು ಬದಲಾವಣೆಯಿದ್ದಲ್ಲಿ ಸಂಬಂಧಪಟ್ಟ ಪ್ರಾಧಿಕಾರಸ್ಥರಿಂದ ಪರಿಶೀಲನೆಗೊಳಪಡಿಸುವ ಷರತ್ತಿಗೆ ಒಳಪಟ್ಟಿರುತ್ತದೆ.Initial ಗಳು ಬದಲಾವಣೆಯಿದ್ದಲ್ಲಿ ಸಂಬಂಧಪಟ್ಟ ಪ್ರಾಧಿಕಾರಸ್ಥರಿಂದ ಪರಿಶೀಲನೆಗೊಳಪಡಿಸುವ ಷರತ್ತಿಗೆ ಒಳಪಟ್ಟಿರುತ್ತದೆ.
•ಅಭ್ಯರ್ಥಿಗಳ ಆಯ್ಕೆಯು ಚಾಲನಾ ವೃತ್ತಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು/ ಅಧಿಸೂಚನೆ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಮೀಸಲಾತಿ ನಿಯಮಗಳು ಹಾಗೂ ಕರಾ ಸಾ ನಿಗಮದ ಪದವೃಂದ ಮತ್ತು ನೇಮಕಾತಿ ನಿಯಮಾವಳಿ-1982 ರಂತೆ ಜಾಹೀರಾತಿನಲ್ಲಿ ತಿಳಿಸಿದ ಎಲ್ಲಾ ಷರತ್ತು ಮತ್ತು ನಿಬಂಧನೆ ಒಳಪಟ್ಟಿರುತ್ತದೆ.
• ಆಯ್ಕೆಗೊಂಡ ಅಭ್ಯರ್ಥಿಗಳನ್ನು ಕೇಂದ್ರ ಕಚೇರಿ ಮಟ್ಟದಲ್ಲಿ ಗಣಕೀಕೃತ ಕೌನ್ಸೆಲಿಂಗ್ ಮೂಲಕ ಆಯ್ಕೆಯ ಹಕ್ಕನ್ನು ಮುಟ್ಟುಗೋಲು ಹಾಕಿಕೊಂಡ ಅಭ್ಯರ್ಥಿಗಳ ಸ್ಥಾನದಲ್ಲಿ ವಿಭಾಗ/ಘಟಕಗಳಿಗೆ ನೇರವಾಗಿ ಹಂಚಿಕೆ ಮಾಡಲಾಗುವುದು.
• ಆಯ್ಕೆಗೊಂಡ ಹುದ್ದೆಯಲ್ಲಿ ಒಂದು(01) ವರ್ಷದ ಕಾಲ ವೃತ್ತಿ ತರಬೇತಿಗೆ ಒಳಪಡಬೇಕಾಗುತ್ತದೆ.
• ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳು ಎಪ್.ಎಸ್.ಎಲ್.ಸಿ / ತತ್ಸಮಾನ ವಿದ್ಯಾರ್ಹತೆಯಲ್ಲಿ ಕನ್ನಡ ವಿಷಯವನ್ನು ಪ್ರಥಮ ಅಥವಾ ದ್ವೀತಿಯ  ಬಾಷೆಯನ್ನಾಗಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳು ನೇಮಕಾತಿ ಪೂರ್ವದಲ್ಲಿ ನೇಮಕಾತಿ ನಿಯಮಾವಳಿ 4 (8) ರನ್ವಯ ಸಂಸ್ಥೆಯ ವತಿಯಿಂದ ನಡೆಸುವ ಕನ್ನಡ ಭಾಷಾ ಜ್ಞಾನ ಪರೀಕ್ಷೆಯಲ್ಲಿ ಒಂದೇ ಬಾರಿಗೆ ಉತ್ತೀರ್ಣರಾಗಬೇಕಾಗಿರುತ್ತದೆ.
•  ಆಯ್ಕೆಗೊಂಡ ಅಭ್ಯರ್ಥಿಗಳು ಬೆಂ.ಮ.ಸಾ.ಸಂಸ್ಥೆ/ವಾ.ಕ.ರ.ಸಾ ಸಂಸ್ಥೆ ಸ.ಕ.ರಾ.ರ ಸಾರಿಗೆ ನಿಗಮಗಳಿಗೆ ವರ್ಗಾವಣಾ ಸೌಲಭ್ಯಕ್ಕೆ ಅರ್ಹರಿರುವುದಿಲ್ಲ,
• ಆಯ್ಕೆ / ನೇಮಕಾತಿಗೆ ಸಂಬಂಧಿಸಿದಂತೆ ನೇಮಕಾತಿ ಪ್ರಾಧಿಕಾರಸ್ಥರು ತೆಗೆದುಕೊಳ್ಳುವ ನಿರ್ಧಾರಗಳು ಅಂತಿಮವಾಗಿರುತ್ತದೆ.

WhatsApp Group Join Now
Telegram Group Join Now