Lecturers 2025: ಖಾಲಿ ಇರುವ ಉಪನ್ಯಾಸಕರ(Lecturers) ಹುದ್ದೆಗಳಿಗೆ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ ಇಲ್ಲದೆ.
Lecturers 2025:ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ದೇವರಕೊಟ್ಟ ಗ್ರಾಮದಲ್ಲಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಪಿ ಯು ಕಾಲೇಜು (ಹಿಂ.ವರ್ಗ -35) ದೇವರಕೊಟ್ಟ, ಹಿರಿಯೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆ ಇಲ್ಲಿಗೆ 2025-26 ನೇ ಸಾಲಿನಲ್ಲಿ ಖಾಲಿ ಇರುವ ಆರು ವಿಷಯಗಳ (ಕನ್ನಡ ಭಾಷಾ , ಆಂಗ್ಲ ಭಾಷಾ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ) ಗೌರವ ಧನದ ಆಧಾರಾದ ಮೇಲೆ ಅತಿಥಿ ಉಪನ್ಯಾಸಕರ(Lecturers) ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- Read more…
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(CBSE) ಮುಕ್ತ ಪುಸ್ತಕ ಪರೀಕ್ಷೆಗೆ ಅನುಮೋದನೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಭ್ಯರ್ಥಿಗಳು ಮೇಲೆ ಸೂಚಿಸಿದ ಆರು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಯೊಂದಿಗೆ ಬಿ.ಇಡಿ ಪದವಿ ಪಡೆದಿರಬೇಕು. ಅತಿಥಿ ಉಪನ್ಯಾಸಕರಿ(Lecturers)ಗೆ ಗೌರವಧನ 18,150 ರೂ.ಗಳು ನಿಗದಿಪಡಿಸಲಾಗಿದೆ. ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಯನ್ನು ದಿನಾಂಕ: 15-08-2025ರ ಒಳಗಾಗಿ ಗುರುಸ್ವಾಮಿ ಎನ್. ಪ್ರಾಂಶುಪಾಲರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಪಿಯು ಕಾಲೇಜು (ಹಿಂ. ವರ್ಗ – 35) ದೇವರಕೊಟ್ಟ, ಹಿರಿಯೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆ ಇಲ್ಲಿಗೆ ಸಲ್ಲಿಸಲು ಸೂಚಿಸಿದೆ.