Muskaan Scholarship 2.0 2026-27: ಮುಸ್ಕಾನ್ ವಿದ್ಯಾರ್ಥಿವೇತನ ಕಾರ್ಯಕ್ರಮ 2.0, 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ₹12,000 ವರೆಗೆ ವಿದ್ಯಾರ್ಥಿವೇತನ
Muskaan Scholarship Program 2.0 (2026-27): ಶಾಲಾ ಶಿಕ್ಷಣ ಮುಂದುವರಿಸುವ ಸಲುವಾಗಿ ಆರ್ಥಿಕ ನೆರವು ಅಗತ್ಯವ ಇರುವ ವಿದ್ಯಾರ್ಥಿಗಳಿಗೆ ಉತ್ತಮವಾದ ಅವಕಾಶವೊಂದು ಲಭ್ಯವಾಗಿದೆ. ಕಮಿನ್ಸ್ ಪ್ರೈವೇಟ್ ಲಿಮಿಟೆಡ್ (VCPL) ಅವರ ಉಪಕ್ರಮವಾದ ಮುಸ್ಕಾನ್ ವಿದ್ಯಾರ್ಥಿವೇತನ ಕಾರ್ಯಕ್ರಮ 2.0 ಮೂಲಕ 9ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.
ಈ ವಿದ್ಯಾರ್ಥಿವೇತನದ ಕಾರ್ಯಕ್ರಮದ ಮುಖ್ಯ ಉದ್ದೇಶವು ವಾಣಿಜ್ಯ ವಾಹನ ಚಾಲಕರು, ಮೆಕ್ಯಾನಿಕ್‌ಗಳ ಮಕ್ಕಳು ಹಾಗೂ ಆರ್ಥಿಕವಾಗಿ ದುರ್ಬಲ ವರ್ಗ (EWS)ಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ಸಹಾಯ ಒದಗಿಸುವುದಾಗಿದೆ.
ಮುಸ್ಕಾನ್ ವಿದ್ಯಾರ್ಥಿವೇತನ 2026-27(Muskaan Scholarship Program 2.0 (2026-27)
Muskaan Scholarship Program 2.0 (2026-27) ಅಡಿಯಲ್ಲಿ ದಕ್ಷಿಣ, ಪೂರ್ವ ಹಾಗೂ ಈಶಾನ್ಯ ಭಾರತದ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 9ರಿಂದ 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಕರ್ನಾಟಕ ಸೇರಿದಂತೆ ಕೆಳಗಿನ ರಾಜ್ಯಗಳ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನದ ಅವಕಾಶವಿದೆ:
- ಆಂಧ್ರಪ್ರದೇಶ
- ಅರುಣಾಚಲ ಪ್ರದೇಶ
- ಅಸ್ಸಾಂ
- ಬಿಹಾರ
- ಛತ್ತೀಸ್‌ಗಢ
- ಜಾರ್ಖಂಡ್
- ಕರ್ನಾಟಕ
- ಕೇರಳ
- ಮಣಿಪುರ
- ಮೇಘಾಲಯ
- ಮಿಜೋರಾಂ
- ನಾಗಾಲ್ಯಾಂಡ್
- ಒಡಿಶಾ
- ತ್ರಿಪುರ
- ಪುದುಚೇರಿ
- ಸಿಕ್ಕಿಂ
- ತಮಿಳುನಾಡು
- ತೆಲಂಗಾಣ
ಯಾರು ಯಾರು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು?
ಮುಸ್ಕಾನ್ ವಿದ್ಯಾರ್ಥಿವೇತನಕ್ಕೆ ಮುಖ್ಯವಾಗಿ ಈ ಕೆಳಗಿನ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು:
- ವಾಣಿಜ್ಯ ವಾಹನ ಚಾಲಕರ ಮಕ್ಕಳಿಗೆ
- LMV/HMV ಚಾಲಕರ ಮಕ್ಕಳಿಗೆ
- ಮೆಕ್ಯಾನಿಕ್‌ಗಳ ಮಕ್ಕಳಿಗೆ
- ಆರ್ಥಿಕವಾಗಿ ದುರ್ಬಲ ವರ್ಗ (EWS)ದ ವಿದ್ಯಾರ್ಥಿಗಳಿಗೆ
ಅಂದರೆ, ಈ ಮೇಲಿನ ಅರ್ಹತಾ ವರ್ಗಗಳಲ್ಲಿ ಒಂದಕ್ಕೆ ಸೇರಿದ ಮತ್ತು ನಿಗದಿತ ಶೈಕ್ಷಣಿಕ ಮತ್ತು ಕುಟುಂಬ ಆದಾಯದ ಮಾನದಂಡಗಳನ್ನು ಪೂರೈಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಶೈಕ್ಷಣಿಕ ಅರ್ಹತೆ
ಅರ್ಜಿದಾರರು ಪ್ರಸ್ತುತವಾಗಿ 9ನೇ ತರಗತಿಯಿಂದ 12ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರಬೇಕು.
ಅಲ್ಲದೆ, ವಿದ್ಯಾರ್ಥಿಯು ಹಿಂದಿನ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ 60% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು.
ಕುಟುಂಬದ ಆದಾಯದ ಮಿತಿ
ವಿದ್ಯಾರ್ಥಿಯ ಕುಟುಂಬದ ಎಲ್ಲಾ ಮೂಲಗಳಿಂದಲು ಬರುವ ಒಟ್ಟು ವಾರ್ಷಿಕ ಆದಾಯವು ₹8 ಲಕ್ಷವನ್ನು ಮೀರಬಾರದು.
ಆದಾಯದ ಮಾನದಂಡವನ್ನು ಪೂರೈಸುವ ವಿದ್ಯಾರ್ಥಿಗಳು ಮಾತ್ರ ಈ ವಿದ್ಯಾರ್ಥಿವೇತನಕ್ಕೆ ಅರ್ಹರಾಗುತ್ತಾರೆ.
ವಿದ್ಯಾರ್ಥಿವೇತನದ ಮೊತ್ತ ಎಷ್ಟು?
ಆಯ್ಕೆಯಾದ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳಿಗೆ ಅವರ ವಾಸ್ತವಿಕ ಶೈಕ್ಷಣಿಕ ವೆಚ್ಚಗಳ ಆಧಾರದ ಮೇಲೆ ಗರಿಷ್ಠ ₹12,000 ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಈ ನೆರವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಬಂಧಿಸಿದ ಅಗತ್ಯ ವೆಚ್ಚಗಳನ್ನು ಪೂರೈಸಲು ಸಹಕಾರಿಯಾಗಲಿದೆ.
ಯಾರಿಗೆಲ್ಲ ಅರ್ಜಿ ಸಲ್ಲಿಸಲು ಅವಕಾಶವಿಲ್ಲ?
ಕೆಳಗಿನವರ ಮಕ್ಕಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ:
- ಕಮಿನ್ಸ್ ಪ್ರೈವೇಟ್ ಲಿಮಿಟೆಡ್ (VCPL) ಉದ್ಯೋಗಿಗಳ ಮಕ್ಕಳು
- Buddy4Study ಉದ್ಯೋಗಿಗಳ ಮಕ್ಕಳು
ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ಈ ನಿಯಮವನ್ನು ಗಮನಿಸುವುದು ಅಗತ್ಯ.
ಮುಸ್ಕಾನ್ ವಿದ್ಯಾರ್ಥಿವೇತನದ ಪ್ರಮುಖವಾದ ವಿವರಗಳು
ವಿವರ – ಮಾಹಿತಿ
- ವಿದ್ಯಾರ್ಥಿವೇತನ – Muskaan Scholarship Program 2.0
- ಶೈಕ್ಷಣಿಕ ವರ್ಷ – 2026-27
- ತರಗತಿ – 9ರಿಂದ 12ನೇ ತರಗತಿ
- ಕನಿಷ್ಠ ಅಂಕ – 60%
- ಕುಟುಂಬದ ವಾರ್ಷಿಕ ಆದಾಯ – ಗರಿಷ್ಠ ₹8 ಲಕ್ಷ
- ವಿದ್ಯಾರ್ಥಿವೇತನ – ವಾಸ್ತವಿಕ ವೆಚ್ಚದ ಆಧಾರದ ಮೇಲೆ ₹12,000 ವರೆಗೆ
- ಅರ್ಹ ಪ್ರದೇಶ – ದಕ್ಷಿಣ, ಪೂರ್ವ ಮತ್ತು ಈಶಾನ್ಯ ಭಾರತದ ಆಯ್ದ ರಾಜ್ಯಗಳು/UT
- ಕರ್ನಾಟಕ – ಅರ್ಹ ರಾಜ್ಯಗಳಲ್ಲಿ ಒಂದು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
30 ಸೆಪ್ಟೆಂಬರ್ 2026
ಅರ್ಜಿ ಸಲ್ಲಿಸುವ ಮುನ್ನ ಈ ಅಂಶಗಳನ್ನು ಗಮನಿಸಿ
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ, ಕುಟುಂಬದ ಆದಾಯ ಮತ್ತು ತಮ್ಮ ಅರ್ಹತಾ ವರ್ಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಸೂಕ್ತ.
ವಿದ್ಯಾರ್ಥಿವೇತನದ ಅರ್ಜಿ ಸಲ್ಲಿಸುವಾಗ ನೀಡುವ ಮಾಹಿತಿಯು ಸರಿಯಾಗಿರಬೇಕು. ತಪ್ಪು ಅಥವಾ ಅಪೂರ್ಣ ಮಾಹಿತಿ ನೀಡಿದಲ್ಲಿ ಅರ್ಜಿಯ ಪರಿಶೀಲನೆ ಸಂದರ್ಭದಲ್ಲಿ ಸಮಸ್ಯೆಯಾಗಬಹುದು.
ಸೆಪ್ಟೆಂಬರ್ 30 ಕೊನೆಯ ದಿನಾಂಕ
ಮುಸ್ಕಾನ್ ವಿದ್ಯಾರ್ಥಿವೇತನ ಕಾರ್ಯಕ್ರಮ 2.0 (2026-27)ಕ್ಕೆ ಅರ್ಜಿ ಸಲ್ಲಿಸಲು 30-09-2026 ಕೊನೆಯ ದಿನಾಂಕವಾಗಿದೆ.
ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ. ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಅಧಿಕೃತ ಅರ್ಜಿ ಪೋರ್ಟಲ್‌ನಲ್ಲಿ ಲಭ್ಯವಿರುವ ಇತ್ತೀಚಿನ ಸೂಚನೆಗಳನ್ನು ಪರಿಶೀಲಿಸಿ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ
9ರಿಂದ 12ನೇ ತರಗತಿಯಲ್ಲಿ ಓದುತ್ತಿರುವ, 60% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಹಾಗೂ ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷದೊಳಗಿರುವ ಅರ್ಹ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನವು ಶಿಕ್ಷಣ ಮುಂದುವರಿಸಲು ಆರ್ಥಿಕ ನೆರವು ಒದಗಿಸುವ ಅವಕಾಶವಾಗಿದೆ.
ವಿಶೇಷವಾಗಿ ವಾಣಿಜ್ಯ ವಾಹನ ಚಾಲಕರು ಹಾಗೂ ಮೆಕ್ಯಾನಿಕ್‌ಗಳ ಮಕ್ಕಳಿಗೆ ಮತ್ತು EWS ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ಅರ್ಹತಾ ನಿಯಮಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸುವುದು ಮುಖ್ಯ.
ಕೊನೆಯ ದಿನಾಂಕ: 30 ಸೆಪ್ಟೆಂಬರ್ 2026
ಸೂಚನೆ: ವಿದ್ಯಾರ್ಥಿವೇತನದ ಅರ್ಹತೆ, ದಾಖಲೆಗಳು, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನದಲ್ಲಿ ಬದಲಾವಣೆಗಳಿದ್ದರೆ ಅಧಿಕೃತ ಅರ್ಜಿ ಪೋರ್ಟಲ್‌ನಲ್ಲಿರುವ ಇತ್ತೀಚಿನ ಮಾಹಿತಿಯನ್ನೇ ಅಂತಿಮವಾಗಿ ಪರಿಗಣಿಸಿ.
