ನವೋದಯ ಪ್ರವೇಶ ಪರೀಕ್ಷೆ:ಡಿಸೆಂಬರ್ 13, 2025 ನವೋದಯ ಪ್ರವೇಶ ಪರೀಕ್ಷೆಯ ಬಗ್ಗೆ ಪ್ರಮುಖವಾದ ಮಾಹಿತಿ ಇಲ್ಲಿದೆ.

ನವೋದಯ ಪ್ರವೇಶ ಪರೀಕ್ಷೆ:ಡಿಸೆಂಬರ್ 13, 2025 ನವೋದಯ ಪ್ರವೇಶ ಪರೀಕ್ಷೆಯ ಬಗ್ಗೆ ಪ್ರಮುಖವಾದ ಮಾಹಿತಿ ಇಲ್ಲಿದೆ.

ನವೋದಯ ಪ್ರವೇಶ ಪರೀಕ್ಷೆ

ನವೋದಯ ಪ್ರವೇಶ ಪರೀಕ್ಷೆ:ನವೋದಯ ವಿದ್ಯಾಲಯಗಳು ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳಾಗಿದ್ದು, ಗ್ರಾಮೀಣ ಮತ್ತು ನಗರ ಭಾಗದಲ್ಲಿ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆಮಾಡಿ 6ನೇ ತರಗತಿಯಿಂದ 12ನೇ ತರಗತಿಯವರೆಗೆ ಉಚಿತವಾಗಿ ವಸತಿ, ಊಟ, ಬಟ್ಟೆ ಮತ್ತು ಇತರ ಸವಲತ್ತುಗಳನ್ನು ಒದಗಿಸಿ ಉತ್ತಮ ಶಿಕ್ಷಣವನ್ನು ನೀಡುವ ಕಾರ್ಯವನ್ನು ನಿರ್ವಹಿಸುತ್ತದೆ.

ಪ್ರತಿ ವರ್ಷ ಈ ಪ್ರವೇಶ ಪರೀಕ್ಷೆಗಳಿಗೆ ಅರ್ಜಿಗಳನ್ನು ಆಹ್ವಾನಿಸುವುದರ ಮೂಲಕ 5ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಪರೀಕ್ಷೆಗೆ ಅರ್ಜಿಸಲ್ಲಿಸುವ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಮಾಹಿತಿಯನ್ನು ನೀಡುವ ಮೂಲಕ ಅವರಿಗೆ ಮಾರ್ಗದರ್ಶನವನ್ನು ನೀಡಲು ಈ ಸಂಚಿಕೆಯನ್ನು ಪ್ರಾರಂಭಿಸಲಾಗುತ್ತಿದೆ.

ರಾಷ್ಟ್ರೀಯ ಶಿಕ್ಷಣ ನೀತಿ-1986 ಗೆ ಅನುಗುಣವಾಗಿ ಭಾರತ ಸರ್ಕಾರವು ಜವಾಹರ ನವೋದಯ ವಿದ್ಯಾಲಯ (Jawahar Navodaya Vidyalayas (JNVs) ಗಳನ್ನು ಪ್ರಾರಂಭಿಸಿತು. ಇವು ಸಹ-ಶಿಕ್ಷಣ ವಸತಿ ಶಾಲೆಗಳಾಗಿದ್ದು, ಸ್ವಾಯತ್ತ ಸಂಸ್ಥೆಯಾದ ನವೋದಯ ವಿದ್ಯಾಲಯ ಸಮಿತಿಯ ಮೂಲಕ ಭಾರತ ಸರ್ಕಾರದಿಂದ ಸಂಪೂರ್ಣವಾಗಿ ಹಣಕಾಸು ಒದಗಿಸಲ್ಪಟ್ಟಿವೆ ಮತ್ತು ನಿರ್ವಹಿಸಲ್ಪಡುತ್ತವೆ.

ನವೋದಯ ವಿದ್ಯಾಲಯ ಯೋಜನೆಯನ್ವಯ ಪ್ರತಿ ಜಿಲ್ಲೆಗೆ ಒಂದರಂತೆ ಜವಾಹರ ನವೋದಯ ವಿದ್ಯಾಲಯಗಳನ್ನು ಹಂತ ಹಂತವಾಗಿ ಸ್ಥಾಪಿಸಲಾಗಿದೆ. ಪ್ರಸ್ತುತ 27 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 654 ವಿದ್ಯಾಲಯಗಳು (ಕರ್ನಾಟಕದಲ್ಲಿ ಒಟ್ಟು 31 ವಿದ್ಯಾಲಯಗಳು) ಕಾರ್ಯನಿರ್ವಹಿಸುತ್ತಿವೆ.

• Read more…ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ-2025 ನವೆಂಬರ್-02 ರಂದು ನಡೆಯುವ ಪರೀಕ್ಷೆಗೆ ಸಂಬಂಧಿಸಿದ ಪ್ರವೇಶ ಪತ್ರ ಇದೀಗ ಪ್ರಕಟಗೊಂಡಿದೆ.

ಪ್ರಸ್ತುತ 2026-2027ನೇ ಸಾಲಿನ ನವೋದಯ ದಾಖಲಾತಿ ಪ್ರವೇಶ ಪರೀಕ್ಷೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಜಿಯನ್ನು ಸಲ್ಲಿಸಲು ಜುಲೈ 29, 2025 ಕೊನೆಯ ದಿನಾಂಕವಾಗಿತ್ತುಸ. ಪ್ರವೇಶ ಪರೀಕ್ಷೆಯನ್ನು ಎರಡು ಹಂತದಲ್ಲಿ (ಮೊದಲನೆ ಹಂತ -ಡಿಸೆಂಬರ್ 13, 2025, ಎರಡನೇ ಹಂತ – ಏಪ್ರಿಲ್ 11, 2026) ದೇಶದಾದ್ಯಂತ ನಡೆಸಲು ನಿರ್ಧಾರಿಸಲಾಗಿದೆ. ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಡಿಸೆಂಬರ್ 13, 2025ರಂದು ಬೆಳಗ್ಗೆ 11.30ಕ್ಕೆ ನಿಗದಿಪಡಿಸಲಾಗಿದೆ

WhatsApp Group Join Now
Telegram Group Join Now