NEET SS ಪರೀಕ್ಷೆ: ವೈದ್ಯಕೀಯ ಸೂಪರ್‌ಸ್ಪೆಷಾಲಿಟಿ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ NEET SS ಪರೀಕ್ಷೆ ಬಗ್ಗೆ ಪ್ರಮುಖ ಮಾಹಿತಿ.

NEET SS ಪರೀಕ್ಷೆ: ವೈದ್ಯಕೀಯ ಸೂಪರ್‌ಸ್ಪೆಷಾಲಿಟಿ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ NEET SS ಪರೀಕ್ಷೆ ಬಗ್ಗೆ ಪ್ರಮುಖ ಮಾಹಿತಿ.

NEET SS

NEET SS ಪರೀಕ್ಷೆ:ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ (NBEMS) 总웠다 ರಾಷ್ಟ್ರೀಯ ಅರ್ಹತಾ- ಕಮ್-ಪ್ರವೇಶ ಪರೀಕ್ಷೆಯನ್ನು (NEET SS 2025) ಮುಂದೂಡಿದೆ. ಜೊತೆಗೆ, ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ನವೆಂಬರ್‌ನಲ್ಲಿ ನಡೆಯಬೇಕಾಗಿದ್ದ ಪರೀಕ್ಷೆಯು ಹೊಸ ವೇಳಾಪಟ್ಟಿ ಪ್ರಕಾರ, ಡಿಸೆಂಬರ್‌ನಲ್ಲಿ ನಡೆಯಲಿದೆ.

ಈ ಕುರಿತು NBEMSತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ನವೆಂಬರ್ 7 ಮತ್ತು 8ರಂದು ತಾತ್ಕಾಲಿಕವಾಗಿ ನಿಗದಿಯಾಗಿದ್ದ ಪರೀಕ್ಷೆಯನ್ನು ಈಗ ಡಿಸೆಂಬರ್ 27 ಮತ್ತು 28ರಂದು ನಡೆಸಲಾಗುವುದು. ಇದನ್ನು NMC ಮತ್ತು MoHFW ಅನುಮೋದಿಸಿದೆ.

ಎಷ್ಟು ಶಿಫ್ಟ್‌ಗಳಲ್ಲಿ ನಡೆಯಲಿದೆ ಪರೀಕ್ಷೆ?

ಪರೀಕ್ಷೆಯು ಎರಡು ಶಿಘ್ರಗಳಲ್ಲಿ ನಡೆಯಲಿದೆ. ಮೊದಲ ಶಿಫ್ಟ್ ಬೆಳಗ್ಗೆ 9 ರಿಂದ 11:30 ರವರೆಗೆ ಮತ್ತು ಎರಡನೇ ಶಿಫ್ಟ್ ಮಧ್ಯಾಹ್ನ 2 ರಿಂದ 4:30 ರವರೆಗೆ ಇರುತ್ತದೆ. ಎಲ್ಲಾ ನೋಂದಾಯಿತ ಅರ್ಜಿದಾರರಿಗೆ ನಿಗದಿತ ಸಮಯದಲ್ಲಿ ಹಾಲ್ ಟಿಕೆಟ್‌ಗಳನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು NBEMS ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಪರೀಕ್ಷೆಯ ಮಾದರಿ ಏನು?

NEETSS ಪರೀಕ್ಷೆಯು 150 ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪತ್ರಿಕೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗುವುದು. ಪ್ರತಿಯೊಂದು 50 ಪ್ರಶ್ನೆಗಳನ್ನು ಹೊಂದಿರುತ್ತದೆ. ಒಟ್ಟು ಪರೀಕ್ಷಾ ಸಮಯ 2 ಗಂಟೆ 30 ನಿಮಿಷಗಳು ಮತ್ತು ಪತ್ರಿಕೆಯು ಒಟ್ಟು 600 ಅಂಕಗಳನ್ನು ಹೊಂದಿರುತ್ತದೆ. ಪ್ರತಿ ಸರಿ ಉತ್ತರಕ್ಕೆ ನಾಲ್ಕು ಅಂಕಗಳನ್ನು ನೀಡಲಾಗುತ್ತದೆ ಮತ್ತು ಪ್ರತಿ ತಪ್ಪು ಉತ್ತರಕ್ಕೆ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ. ಯಶಸ್ತಿ ಅಭ್ಯರ್ಥಿಗಳು ವೈದ್ಯಕೀಯ ಸೂಪರ್‌ಸ್ಪೆಷಾಲಿಟಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.

• Read more… ಡಿಸೆಂಬರ್ 13, 2025 ನವೋದಯ ಪ್ರವೇಶ ಪರೀಕ್ಷೆಯ ಬಗ್ಗೆ ಪ್ರಮುಖವಾದ ಮಾಹಿತಿ ಇಲ್ಲಿದೆ.

ಎಷ್ಟು ವಿಷಯಗಳಿಗೆ ಈ ಪರೀಕ್ಷೆ?

NEETSS ಅನ್ನು ಔಷಧಶಾಸ್ತ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಇಎನ್‌ಟಿ, ರೋಗಶಾಸ್ತ್ರ, ಅರಿವಳಿಕೆಶಾಸ್ತ್ರ, ರೇಡಿಯೋ ಡಯಾಗೋಸಿಸ್, ಸೊಕ್ಷ್ಮ ಜೀವವಿಜ್ಞಾನೆ. ಮನೋವೈದ್ಯಶಾಸ್ತ್ರ, ಶಸ್ತ್ರಚಿಕಿತ್ಸೆ, ಮಕ್ಕಳ ವೈದ್ಯಕೀಯ ಶಾಸ್ತ್ರ, ಉಸಿರಾಟದ ಔಷಧ ಮತ್ತು ಮೂಳೆಚಿಕಿತ್ಸೆ ಎಂಬ ಈ ವಿಷಯಗಳಿಗೆ ನಡೆಸಲಾಗುತ್ತದೆ.

WhatsApp Group Join Now
Telegram Group Join Now