ರಾಜ್ಯದ ನೌಕರರಿಗೆ ಆಧಾರ್‌ ಹಾಜರಾತಿ ಹೊಸ ನಿಯಮ: ಆಧಾರ್‌ ಹಾಜರಾತಿ ಕಡ್ಡಾಯ! ನೀವು ತಡವಾಗಿ ಬಂದರೆ ಏನಾಗುತ್ತದೆ ಗೊತ್ತಾ?

ರಾಜ್ಯದ ನೌಕರರಿಗೆ ಆಧಾರ್‌ ಹಾಜರಾತಿ ಹೊಸ ನಿಯಮ: ಆಧಾರ್‌ ಹಾಜರಾತಿ ಕಡ್ಡಾಯ! ನೀವು ತಡವಾಗಿ ಬಂದರೆ ಏನಾಗುತ್ತದೆ ಗೊತ್ತಾ?

ಆಧಾರ್‌ ಹಾಜರಾತಿ

ರಾಜ್ಯದ ನೌಕರರಿಗೆ ಆಧಾರ್‌ ಹಾಜರಾತಿ ಹೊಸ ನಿಯಮ : ಇನ್ನು ಮುಂದೆ ಕಾಲೇಜುಗಳಲ್ಲಿ “ಇಷ್ಟ ಬಂದಾಗ ಬಂದು ಹೋಗುವುದು” ಎಂಬ ದಿನಗಳು ಇದೀಗ ಮುಗಿದಂತೆ.ಕಾಲೇಜು ಶಿಕ್ಷಣ ಇಲಾಖೆಯೂ ಈಗ ಎಲ್ಲಾ ಅಧ್ಯಾಪಕರು ಮತ್ತು ಸಿಬ್ಬಂದಿಗೆ ‘ಆಧಾರ್‌ ಆಧಾರಿತ ಮೊಬೈಲ್‌ ಹಾಜರಾತಿ’ ವ್ಯವಸ್ಥೆ ಜಾರಿಗೊಳಿಸಿದೆ.ಅಂದರೆ, ಕಾಲೇಜಿಗೆ ಹೋಗಿಯೇ ಹಾಜರಾತಿ ಹಾಕಬೇಕು. ಮನೆಯಿಂದ ಅಥವಾ ಬೇರೆಡೆ ಕುಳಿತು ಹಾಕಲು ಸಾಧ್ಯವಿಲ್ಲ.

ಈ ಹೊಸ ನಿಯಮ ವ್ಯವಸ್ಥೆ ಹೇಗೆ?

ಸಿಬ್ಬಂದಿಯ ಮೊಬೈಲ್‌ನಲ್ಲಿ  AadhaarBAS ಮತ್ತು AadhaarFaceRD ಆಪ್ಸ್ ಇನ್‌ಸ್ಟಾಲ್ ಮಾಡಬೇಕು.
• ಆಧಾರ್‌ನ ಕೊನೆಯ 6 ಅಂಕಿಗಳು ನೀಡಿ ಮೊದಲನೇ ಬಾರಿ ರಿಜಿಸ್ಟರ್ ಮಾಡಬೇಕು.
• ನಂತರ ಲಾಗಿನ್ ಮತ್ತು ಲಾಗ್‌ಔಟ್ ದಿನವೂ ಮೊಬೈಲ್ ಮುಖಾಂತರವೇ.

ಪ್ರಮುಖ ಸೂಚನೆಯನ್ನು ಗಮನಿಸಿ:

ಕಾಲೇಜು ಆವರಣದ 100 ಮೀಟರ್ ಒಳಗೆ ಇದ್ದಾಗ ಮಾತ್ರ ಹಾಜರಾತಿ ಹಾಕಲು ಸಾಧ್ಯ.ಹೊರಗಿದ್ದರೆ ಆಪ್ ತೆರೆಯುವುದೇ ಇಲ್ಲ.ಇದು ನಕಲಿ ಹಾಜರಾತಿಗೆ ಪೂರ್ಣ ಬ್ರೇಕ್.

ಹಾಗಾದರೆ ಈ ಲಾಭ ಯಾರಿಗೆ?

• ಪ್ರಾಂಶುಪಾಲರು – ಸಿಬ್ಬಂದಿ ಹಾಜರಾತಿ, ಸಮಯ ನಿಯಂತ್ರಣ ಸುಲಭ.
• ಸರ್ಕಾರ – ಎಲ್ಲಾ ಕಾಲೇಜುಗಳ ಹಾಜರಾತಿ ಆನ್‌ಲೈನ್ ಮೂಲಕಲೇ ನೋಡಬಹುದು.
• ವಿದ್ಯಾರ್ಥಿಗಳು – ಉಪನ್ಯಾಸಕರು ಸಮಯಕ್ಕೆ ಬರುವ ಸಾಧ್ಯತೆ ಹೆಚ್ಚಾಗುತ್ತದೆ.
• ಕರ್ತವ್ಯನಿಷ್ಠ ಸಿಬ್ಬಂದಿ – ಅವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ.

• Read more… ಗ್ರಾಮ ಪಂಚಾಯಿತಿಯಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ₹10,000 Scholarship ಹಣ! ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನೀವು ತಡವಾಗಿ ಬರುತ್ತೀರಾ? ಹಾಗಾದರೆ…

ಹೌದು ಇನ್ನು ಮುಂದೆ ಪ್ರತಿ ದಿನ 7 ಗಂಟೆ ಕಚೇರಿಯಲ್ಲಿ ಇರಬೇಕು. ಗಂಟೆಗಟ್ಟಲೆ ಕ್ಲಾಸ್‌ಗಳು, ಪಾಠ ಸಿದ್ಧತೆ, ಕಚೇರಿ ಕೆಲಸ — ಎಲ್ಲವೂ ನಿಯಮಬದ್ಧ.

ವಿಭಾಗದ ಉತ್ತರ ಏನು?

ಕಾಲೇಜು ಶಿಕ್ಷಣ ಇಲಾಖೆಯೂ ಆಯುಕ್ತೆ ಎನ್. ಮಂಜುಶ್ರೀ ಹೇಳಿದ್ದೇನೇಂದರೆ:

“ಗೈರು ಹಾಜರಿ ಹಾಗೂ ತಡವಾಗಿ ಬರುವವರ ಬಗ್ಗೆ ನಿಖರ ಮಾಹಿತಿಯನ್ನು ಕೇಂದ್ರ ಕಚೇರಿಯಿಂದಲೇ ನೋಡಬಹುದು.ಕೆಲ ದಿನಗಳಲ್ಲಿ ಎಲ್ಲ ತಾಂತ್ರಿಕ ತೊಂದರೆಗಳು ಪರಿಹಾರವಾಗುತ್ತವೆ.”

WhatsApp Group Join Now
Telegram Group Join Now