NMMSS Scholarship:ಕೇಂದ್ರ ಸರ್ಕಾರದ ನ್ಯಾಷನಲ್ ಮೀನ್ಸ್ ಕಂ-ಮೆರಿಟ್ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ.
NMMSS Scholarship:ಆರ್ಥಿಕವಾಗಿ ಹಿಂದುಳಿದ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆಂದೇ ರೂಪಿಸಲಾಗಿರುವ ಕೇಂದ್ರ ಪ್ರಾಯೋಜಿತ ಯೋಜನೆಯೇ ನ್ಯಾಷನಲ್ ಮೀನ್ಸ್ ಕಂ-ಮೆರಿಟ್ ಸ್ಕಾಲರ್‌ಶಿಪ್ (NMMSS). ಇದನ್ನು 2008ರಲ್ಲಿ ಪ್ರಾರಂಭಿಸಲಾಯಿತು. ಇದನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಜಾರಿಗೊಳಿಸುತ್ತದೆ
ಆರ್ಥಿಕವಾಗಿ ದುರ್ಬಲ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 8ನೇ ತರಗತಿಯಲ್ಲಿ ಅವರ ಶಾಲೆ ಬಿಡುವುದನ್ನು ಕಡಿಮೆ ಮಾಡಲು ಮತ್ತು ಮಾಧ್ಯಮಿಕ ಹಂತದಲ್ಲಿ ಅಧ್ಯಯನವನ್ನು ಮುಂದುವರಿಸಲು ಪ್ರೋತ್ಸಾಹಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಈ ಸ್ಕಾಲರ್ ಶಿಪ್‌ಗಾಗಿ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ಅರ್ಹತೆ ಪಡೆದಿದ್ದೇ ಆದಲ್ಲಿ ದ್ವಿತೀಯ ಪಿಯು ಪೂರ್ಣಗೊಳಿಸುವವರೆಗೂ ನಿರಂತರವಾಗಿ ಸ್ಕಾಲರ್‌ಶಿಪ್ ↑ ಸ್ಕಾಲರ್‌ಶಿಪ್ ನೀಡಲಾಗುತ್ತದೆ ಇದೀಗ ಈ ಪರೀಕ್ಷೆಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ಅರ್ಜಿ ಆಹ್ವಾನಿಸಿದೆ.
ಕೇಂದ್ರ ಸರ್ಕಾರದ ಸ್ಕಾಲರ್ಶಿಗೆ ಅರ್ಜಿ ಸಲ್ಲಿಸಲು ಆ.15 ಕೊನೇ ದಿನವಾಗಿದೆ. ಪರೀಕ್ಷೆಯು ಡಿ.7ರಂದು ನಿಗದಿಯಾಗಿದ್ದು, 8ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ನಡೆಸಲಾಗುತ್ತದೆ.
ನ್ಯಾಷನಲ್ ಮೀನ್ಸ್ ಕಂ-ಮೆರಿಟ್ ಸ್ಕಾಲರ್‌ಶಿಪ್‌ಗೆ(NMMSS Scholarship) ಅರ್ಜಿ ಸಲ್ಲಿಕೆ ವಿಧಾನ.
ಪರೀಕ್ಷೆಗೆ ಶಾಲಾ ಪ್ರಾಂಶುಪಾಲರು ಆಥವಾ ಮುಖ್ಯ ಶಿಕ್ಷಕರ ಲಾಗಿನ್ ಮೂಲಕವೇ ಆನ್ ಲೈನ್ ಅರ್ಜಿಯನ್ನು ಕೆ ಅದರ ಮುದ್ರಿತ ಪ್ರತಿಯನ್ನು ಆನ್ ಲೈನ್ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಬೇಕಿದೆ. ಅರ್ಜಿ ಪಡೆದುಕೊಳ್ಳಬೇಕು. ಪರೀಕ್ಷೆಗೆ 15 ದಿನ ಮುಂಚೆ ಪ್ರವೇಶಪತ್ರಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದನ್ನೂ ಶಾಲಾ ಮುಖ್ಯಸ್ಥರಿಂದಲೇ ಪಡೆದುಕೊಳ್ಳಬೇಕು. ಶಾರಚನೆ ಮಾಹಿತಿಗಾಗಿ https://bit. Am/5qK5 ಸಂಪರ್ಕಿಸಿರಿ.
ನ್ಯಾಷನಲ್ ಮೀನ್ಸ್ ಕಂ-ಮೆರಿಟ್ ಸ್ಕಾಲರ್‌ಶಿಪ್‌ಗೆ ( NMMSS Scholarship) ಲಿಖಿತ ಪರೀಕ್ಷೆ ಹೇಗಿರುತ್ತೇ?
ಬೌದ್ಧಿಕ ಸಾಮರ್ಥ್ಯ ಪರೀಕ್ಷೆ (Mental Ability Test) ಹಾಗೂ (Scholastic Aptitude Test) ໖໐໙ ಎರಡು ಪತ್ರಿಕೆಗಳ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಬೇಕಾಗುತ್ತದೆ. ಈ ಎರಡೂ ಪತ್ರಿಕೆಗಳಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಮೊದಲ ಪರೀಕ್ಷೆಯಲ್ಲಿ 90 ವಸ್ತುನಿಷ್ಠ ಹಾಗೂ ಬಹು ಆಯ್ಕೆ ಮಾದರಿಯ ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೆ ಒಂದು ಅಂಕದಂತೆ 90 ಅಂಕಗಳು ನಿಗದಿಯಾಗಿರುತ್ತವೆ. ಎರಡನೇ ಪರೀಕ್ಷೆಯಲ್ಲಿ ವಿಜ್ಞಾನ ವಿಷಯಕ್ಕೆ 35, ಸಮಾಜ ವಿಜ್ಞಾನಕ್ಕೆ 35 ಹಾಗೂ ಗಣಿತ ವಿಷಯಕ್ಕೆ 20 ಅಂಕದಂತೆ ಒಟ್ಟು 90 ಪ್ರಶ್ನೆಗಳಿರುತ್ತವೆ. ಪ್ರತಿ ಪರೀಕ್ಷೆಗೆ 90 ನಿಮಿಷ ನೀಡಲಾಗುತ್ತದೆ. ಡಿ. 7ರ ಭಾನುವಾರ ಬೆಳಗ್ಗೆ 10.30ರಿಂದ 12 ಗಂಟೆ ವರೆಗೆ ಮೊದಲ ಪತ್ರಿಕೆ, ಮಧ್ಯಾಹ್ನ 2ರಿಂದ 3.30ರ ವರೆಗೆ 2ನೇ ಪತ್ರಿಕೆಯ ಪರೀಕ್ಷೆ ನಡೆಸಲಾಗುತ್ತದೆ.
ನ್ಯಾಷನಲ್ ಮೀನ್ಸ್ ಕಂ-ಮೆರಿಟ್ (NMMSS Scholarship) ಶಿಷ್ಯವೇತನದ ಮೊತ್ತ.
ಮಾಸಿಕ 1,000 ರೂ.ನಂತೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿವರ್ಷ 12,000 ರೂ. ಗಳನ್ನು ಶಿಷ್ಯವೇತನವಾಗಿ ನೀಡಲಾಗುತ್ತದೆ. 9 ರಿಂದ 12ನೇ ತರಗತಿಯವರೆಗೂ ನಾಲ್ಕು ವರ್ಷಗಳವರೆಗೆ ಶಿಷ್ಯವೇರ್ತ ವರ್ಗಾವಣೆ ಮಾಡಲಾಗುತ್ತದೆ. ಆದರೆ, ವಿದ್ಯಾರ್ಥಿವೇತನ ಮುಂದುವರಿಕೆಗೆ ಕೆಲ ಷರತ್ತುಗಳು ಅನ್ವಯವಾಗುತ್ತವೆ. 9, 10, 11ನೇ ತರಗತಿಯನ್ನು ಒಂದೇ ಯತ್ನದಲ್ಲಿ ಪಾಸು ಮಾಡಿರಬೇಕು. 9, 11ನೇ ತರಗತಿಯಲ್ಲಿ ಶೇ.55 ಹಾಗೂ
ಎಸ್ಸೆಸ್ಸೆಲ್ಸಿಯಲ್ಲಿ ಶೇ. 60ರಷ್ಟು ಅಂಕ ಪಡೆದಿರಬೇಕು.
ನ್ಯಾಷನಲ್ ಮೀನ್ಸ್ ಕಂ-ಮೆರಿಟ್ ಸ್ಕಾಲರ್‌ಶಿಪ್‌ಗೆ (NMMSS Scholarship ) ಆಯ್ಕೆ ಪ್ರಕ್ರಿಯೆ.
ಸಾಮಾನ್ಯ ವರ್ಗದವರು ಶೇ.40. ಪರಿಶಿಷ್ಟರು ಶೇ.32 ಅಂಕಗಳನ್ನು ಪಡೆದರಷ್ಟೇ ಅರ್ಹತೆ ಪಡೆಯುವರು. ಪ್ರತಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ ಮೀಸಲಾತಿ ಹಾಗೂ ಅರ್ಹತಾ ನಿಯಮ ಅನುಸಾರ ಬ್ಯಾಂಕ್ ಆಧರಿಸಿ ಡಿಎಸ್‌ಇಆರ್‌ಟಿ ವತಿಯಿಂದ ಅರ್ಹರನ್ನು ಸ್ಕಾಲರ್‌ಶಿಪ್ ಗೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರು ಸ್ಕಾಲರ್‌ಶಿಪ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ನ್ಯಾಷನಲ್ ಮೀನ್ಸ್ ಕಂ-ಮೆರಿಟ್ ಸ್ಕಾಲರ್‌ಶಿಪ್‌ಗೆ(NMMSS Scholarship) ಅರ್ಹತೆಗಳೇನು?
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಲ್ಲಿಸಲು ಅರ್ಹರಾಗಿರುತ್ತಾರೆ. ಆದರೆ, ಪಾಲಕರ ಆದಾಯ ವಾರ್ಷಿಕ 3.50 ಲಕ್ಷ ರೂ. ಮೀರುವಂತಿಲ್ಲ. ಏಳನೇ ತರಗತಿಯಲ್ಲಿ ಕನಿಷ್ಠ ಶೇ.55 ಅಂಕಗಳನ್ನು ಗಳಿಸಿರಬೇಕು. ಪರಿಶಿಷ್ಟ ವಿದ್ಯಾರ್ಥಿಗಳು ಶೇ.50 ಅಂಕ ಪಡೆದಿರಬೇಕು.
- Read more…
ಖಾಲಿ ಇರುವ ಶಿಕ್ಷಕರ(Teachers) ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ನ್ಯಾಷನಲ್ ಮೀನ್ಸ್ ಕಂ-ಮೆರಿಟ್ NMMSS Scholarship ಯಾರು ಅರ್ಹರಲ್ಲ?
ಕೇಂದ್ರೀಯ ವಿದ್ಯಾಲಯಗಳು ಮತ್ತು ಜವಾಹರ ನವೋದಯ ವಿದ್ಯಾಲಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರಲ್ಲ. ಅದೇ ರೀತಿ, ರಾಜ್ಯ ಸರ್ಕಾರಿ ಸಂಸ್ಥೆಗಳು ನಡೆಸುವ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಅಲ್ಲಿ ಊಟ, ವಸತಿ ಮತ್ತು ಶಿಕ್ಷಣದಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಅಲ್ಲದೆ, ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಸಹ ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರಾಗಿರುವುದಿಲ್ಲ.
NOTIFICATION LINK – CLICK HERE
• ಒಮ್ಮೆ ಪಾಸಾದರೆ ನಾಲ್ಕು ವರ್ಷ ಸಿಗಲಿದೆ ಕೊಡುಗೆ
• 9ರಿಂದ 12ನೇ ತರಗತಿವರೆಗೂ ನಾಲ್ಕು ವರ್ಷಗಳವರೆಗೆ ಶಿಷ್ಯವೇತನ
• ವಾರ್ಷಿಕ 12,000 ಸಹಾಯಧನ
• ಅರ್ಜಿ ಸಲ್ಲಿಕೆಗೆ ಅ.15 ಕೊನೇ ದಿನ