NPS Vatsalya Scheme: ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಈ ಎನ್.ಪಿ.ಎಸ್. ವಾತ್ಸಲ್ಯ ಯೋಜನೆ(NPS Vatsalya Scheme) ಯ ಬಗ್ಗೆ ತಿಳಿದುಕೊಳ್ಳಲೆಬೇಕು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
NPS Vatsalya Scheme:ಕೇಂದ್ರ ಸರಕಾರವು ಅಪ್ರಾಪ್ತ ಮಕ್ಕಳಿಗಾಗಿ ‘ಎನ್.ಪಿ.ಎಸ್. ವಾತ್ಸಲ್ಯ’ (NPS Vatsalya Scheme) ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಇಲ್ಲಿ ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಎನ್.ಪಿ.ಎಸ್.(NPS) ಖಾತೆಯನ್ನು ತೆರೆದು ಹೂಡಿಕೆ ಮಾಡಿ ನಂತರ ಎನ್.ಪಿ.ಎಸ್. ಸಾಮಾನ್ಯ ಖಾತೆಯಾಗಿ ಪರಿವರ್ತಿಸಬಹುದಾಗಿದೆ.
ಎನ್.ಪಿ.ಎಸ್. ವಾತ್ಸಲ್ಯ ಯೋಜನೆ(NPS Vatsalya Scheme) ಯ ಪ್ರಯೋಜನ .
ಪೋಷಕರು ತಮ್ಮ ಮಗುವಿಗೆ ಹದಿನೆಂಟು(18) ವರ್ಷ ತುಂಬುವವರೆಗೆ ಪ್ರತಿ ತಿಂಗಳು. ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಮೊತ್ತವನ್ನು ಎನ್.ಪಿ.ಎಸ್. ಖಾತೆ ಅಡಿಯಲ್ಲಿ ಹೂಡಿಕೆ ಮಾಡಬಹುದಾಗಿದೆ. ವರ್ಷಕ್ಕೆ ಕನಿಷ್ಠ ರೂ. 1000 ರೂ ಹೂಡಿಕೆ ಮಾಡಬೇಕು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. 18 ವರ್ಷ ತುಂಬಿದಾಗ 2.50 ಲಕ್ಷಕ್ಕಿಂತ ಹೆಚ್ಚು ಮೊತ್ತ ಎನ್.ಪಿ.ಎಸ್ (NPS). ಖಾತೆಯಲ್ಲಿದ್ದಾಗ ಮಾತ್ರ ಆ ಖಾತೆಯನ್ನು ಎನ್.ಪಿ.ಎಸ್. ಸಾಮಾನ್ಯ ಖಾತೆಯಾಗಿ ಬದಲಾಯಿಸಬಹುದಾಗಿದೆ. ಇಲ್ಲದೆ ಹೋದರೆ ಮೊತ್ತವನ್ನು ಒಂದೇ ಬಾರಿಗೆ ಹಿಂಪಡೆಯಬಹುದು. ಹೂಡಿಕೆ ಮಾಡಲು ಆರಂಭಿಸಿದ 3 ವರ್ಷಗಳ ನಂತರ ಶಿಕ್ಷಣ ಖರ್ಚು ವೆಚ್ಚಕ್ಕಾಗಿ ಶೇ. 25. ಅನಾರೋಗ್ಯ ಸಂದರ್ಭದಲ್ಲಿ ಶೇ. 25ರಷ್ಟು, ಅಂಗವೈಕಲ್ಯ ಸಂದರ್ಭದಲ್ಲಿ ಶೇ. 25ರಷ್ಟು ಹೀಗೆ ಕಟ್ಟಿದ ಮೊತ್ತದಲ್ಲಿ ಆಯ್ದ ಶೇ. 75ರಷ್ಟು ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ. ಮಗುವಿಗೆ 18 ವರ್ಷ ತುಂಬುವವರೆಗೆ ಒಟ್ಟು ಮೂರು ಬಾರಿ ಮಾತ್ರ ಅಗತ್ಯ ಸಂದರ್ಭಗಳಲ್ಲಿ ಕಟ್ಟಿದ ಮೊತ್ತವನ್ನು ಹಿಂಪಡೆಯಬಹುದು.
ಮಗುವಿಗೆ 18 ವರ್ಷ ತುಂಬಿದ ಮೂರು(3) ತಿಂಗಳ ನಂತರ ಮಗುವಿನ ಹೆಸರಿನ ಕೆವೈಸಿ (e-keyc)ದಾಖಲೆಗಳನ್ನು ಸಲ್ಲಿಸಿ ಇದನ್ನು ಎನ್.ಪಿ.ಎಸ್. ಖಾತೆಯಾಗಿ ಬದಲಾಯಿಸಿಕೊಳ್ಳಬೇಕು. ನಂತರ ಸಾಮಾನ್ಯ ಎನ್.ಪಿ.ಎಸ್. ಖಾತೆಗಳಿಗೆ ಹಣ ಜಮೆಗೊಳಿಸಿದಂತೆ ಇಲ್ಲಿಯೂ ಹಣ ಜಮೆಗೊಳಿಸಬಹುದಾಗಿದೆ. ಮಕ್ಕಳಿಗೆ 60 ವರ್ಷಗಳು ತುಂಬಿದ ನಂತರ ಅವರು ಹೂಡಿದ ಮೊತ್ತಕ್ಕನುಗುಣವಾಗಿ ಪ್ರತಿ ತಿಂಗಳು ಪಿಂಚಣಿ ಅವರ ಕೈ ಸೇರುತ್ತದೆ. ಇನ್ನು 60 ವರ್ಷ ತುಂಬಿದ ನಂತರ ಎನ್.ಪಿ.ಎಸ್. ಖಾತೆಯಲ್ಲಿರುವ ಮೊತ್ತದ ಗರಿಷ್ಠ ಶೇ. 60ರಷ್ಟು ಮೊತ್ತವನ್ನು ಹಿಂಪಡೆಯುವ ಆಯ್ಕೆಯೂ ಈ ಯೋಜನೆಯಲ್ಲಿದೆ.
NPS Vatsalya Scheme ಗೆ ಬೇಕಾಗುವ ದಾಖಲಾತಿಗಳು.
• ಪೋಷಕರ ಆಧಾರ್ ಕಾರ್ಡ್.
• ಮತದಾರರ ಗುರುತಿನ ಚೀಟಿ.
• ಮಗುವಿನ ಜನನ ಪ್ರಮಾಣ ಪತ್ರ.
• ಪಾನ್ ಕಾರ್ಡ್.
• ಮೊಬೈಲ್ ನಂಬರ್.
• ಇಮೇಲ್ ಐಡಿ.
• ಪೋಷಕರ ಸಹಿ.
ಒಂದು ವೇಳೆ ಮಗು ಮರಣ ಹೊಂದಿದ್ದಲ್ಲಿ ಹೂಡಿಕೆಯಾದ ಮೊತ್ತವನ್ನು ಪೋಷಕರು ಹಿಂಪಡೆಯಬಹುದಾಗಿದೆ. ಒಟ್ಟಿನಲ್ಲಿ ಈ ಯೋಜನೆ ಮಕ್ಕಳಲ್ಲಿ ಉಳಿತಾಯದ ಮನೋಭಾವವನ್ನು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದುವರೆಗೆ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಎಸ್.ಸಿ. ಕೇಂದ್ರದ ಮೂಲಕ 1674 ಮಂದಿಗೆ ಈ ಸೌಲಭ್ಯವನ್ನು ಒದಗಿಸಲಾಗಿದೆ. ಆಸಕ್ತರು ನಿಮ್ಮ ಊರಿನಲ್ಲಿರುವ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಎಸ್.ಸಿ. ಕೇಂದ್ರವನ್ನು ಸಂಪರ್ಕಿಸಿ.