Old pension scheme: ಈ ಇಲಾಖೆಯ 104 ನೌಕರರನ್ನು NPS ನಿಂದ OPS(Old pension scheme) ಗೆ ಒಳಪಡಿಸಿ ಆದೇಶ ಹೊರಡಿಸಲಾಗಿದೆ.
Old pension scheme:ಕರ್ನಾಟಕ ರಾಜ್ಯ ಸರ್ಕಾರವು ಉಲ್ಲೇಖ (2) ಮತ್ತು (4) ರ ಆದೇಶದಲ್ಲಿ ದಿನಾಂಕ: 01.04.2006 ಮತ್ತು ತರನಂತರ ಸೇವೆಗೆ ಸೇರಿದ ನೌಕರರಿಗೆ ನೂತನ ಅಂಶದಾಯಿ ಕೊಡುಗೆ ಯೋಜನೆಗಳನ್ನು (ರಾಷ್ಟ್ರೀಯ ಪಿಂಚಣಿ ಯೋಜನೆ-ಎನ್.ಪಿ.ಎಸ್) ಜಾರಿಗೊಳಿಸಿರುತ್ತದೆ. ಈ ಯೋಜನೆಯಲ್ಲಿ ಒಳಪಡುವ ನೌಕರರ ವೇತನದಲ್ಲಿ ಪ್ರತಿ ತಿಂಗಳು ಮೂಲ ವೇತನ ಮತ್ತು ತುಟ್ಟಿಭತ್ಯೆಯ ಮೇಲೆ ಶೇಕಡ 10 ರಷ್ಟು ವಂತಿಗೆಯನ್ನು ಕಟಾವಣೆಗೊಳಿಸಿ, ಸದರಿ ಮೊತ್ತಕ್ಕೆ ಸರ್ಕಾರದ ವತಿಯಿಂದ ವೇತನ ಮತ್ತು ತುಟ್ಟಿದತ್ಯೆಯ ಮೇಲೆ ಶೇಕಡ 14 ರಷ್ಟು ವಂತಿಗೆಯನ್ನು ಕೊಡುಗೆಯಾಗಿ ನೀಡಿ ಈ ಕ್ರೋಢೀಕೃತ ನಿಧಿಯನ್ನು (Employee & Govt Contribution) ಫೆನ ಷ್ನ್ ಫಂಡ್ ರೆಗ್ಯುಲೇಟರ್ ಅಂಡ್ ಡೆವಲಪ್ಮೆಂಟ್ ಅಥಾರಿಟಿಯ (PFRDA) ಅಧೀನದಲ್ಲಿರುವ NPS ಟ್ರಸ್ಟ್ ಮುಂಬೈ, ರವರ ಮುಖಾಂತರ ಸಂಬಂಧಿಸಿದ ನೌಕರರ ಪ್ರಾನ್ ಖಾತೆಗಳಿಗೆ (ಪರ್ಮನೆಂಟ್ ರಿಟೈರ್ ಮೆಂಟ್ ಅಕೌಂಟ್ ನಂಬರ್) ಸರ್ಕಾರವು ಜಮೆ ಮಾಡಲಾಗುತ್ತಿದೆ.
ಈ ಸಂಬಂಧ, ರಾಜ್ಯ ಸರ್ಕಾರದ ಮಾದರಿಯಂತೆ ಮೇಲಿನ ಎನ್.ಪಿ.ಎಸ್ ಯೋಜನೆಯನ್ನು ಉಲ್ಲೇಖ (3) ಮತ್ತು (3) ರಲ್ಲಿ ಮಂಡಳಿಯಲ್ಲಿಯೂ ಸಹಾ ಯಥಾವತ್ತಾಗಿ ಆಳವಡಿಸಿಕೊಳ್ಳಲಾಗಿತ್ತು.
ಹಾಗೂ ಉಲ್ಲೇಖ-43)ರಲ್ಲಿ ಎನ್.ಪಿ.ಎಸ್ ಯೋಜನೆಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರವು ಕಾಲಕಾಲಕ್ಕೆ ನೀಡುವ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಮಂಡಳಿಯಲ್ಲಿ ಅಳವಡಿಸಿಕೊಳ್ಳಲು ಆದೇಶವಾಗಿರುತ್ತದೆ.
ಮುಂದುವರೆದು, ರಾಜ್ಯ ಸರ್ಕಾರವು ಉಲ್ಲೇಖ (6)ರ ಆದೇಶದಲ್ಲಿ ದಿನಾಂಕ: 01.04.2006ರ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗಾಗಿ ಹೊರಡಿಸಿದ ನೇಮಕಾತಿ ಅಧಿಸೂಚನೆಗಳ ಮೇರೆಗೆ ಆಯ್ಕೆ ಹೊಂದಿ ದಿನಾಂಕ: 01.04.2006 ರಂದು ಅಥವಾ ಆ ದಿನಾಂಕದ ನಂತರ ಸೇವೆಗೆ ಸೇರಿರುವ
ಕಾರಣದಿಂದ ಎನ್.ಪಿ.ಎಸ್ ಯೋಜನೆಗೆ ವ್ಯಾಪ್ತಿಗೊಳಪಟ್ಟಿರುವ ನೌಕರರನ್ನು ಸರ್ಕಾರವು ಅವರ ಅಭಿಮತದ ಮೇರೆಗೆ ಕೆಲವು ಷರತ್ತುಗಳಿಗೊಳಪಟ್ಟು ಒಂದು ಬಾರಿಯ ಕ್ರಮವಾಗಿ ಹಿಂದಿನ ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಗೆ (ಓ.ಪಿ.ಎಸ್-Old pension scheme) ವ್ಯಾಪ್ತಿಗೊಳಪಡಿಸಲು ಒಪ್ಪಿಗೆ ನೀಡಿ ಆದೇಶಿಸಲಾಗಿರುತ್ತದೆ. ತತ್ಸಂಬಂಧದಲ್ಲಿ, ಮಂಡಳಿಯಲ್ಲಿ ಸದರಿ ಆದೇಶವನ್ನು ಯಥಾವತ್ತಾಗಿ ಉಲ್ಲೇಖ (7) ರಲ್ಲಿ ಅಳವಡಿಸಿಕೊಳ್ಳಲಾಗಿರುತ್ತದೆ.
ದಿನಾಂಕ: 01.04.2006ರ ಪೂರ್ವದಲ್ಲಿ ಮಂಡಳಿಯಲ್ಲಿ ಉಲ್ಲೇಖ (2)ರ ಬ್ಯಾಕ್ಲಾಗ್ ನೇಮಕಾತಿ ಅಧಿಸೂಚನೆ ಮೂಲಕ 204 ನೌಕರರು ಆಯ್ಕೆ ಹೊಂದಿ ದಿನಾಂಕ: 01.04.2006ರ ನಂತರದಲ್ಲಿ ಮಂಡಳಿಯ ಸೇವೆಗೆ ಸೇರಿದವರಾಗಿರುತ್ತಾರೆ. ಸದರಿ 104 ನೌಕರರ ಪೈಕಿ 102 ನೌಕರರು ಮಾತ್ರ ಮಂಡಳಿಯ ಸೇವೆಯಲ್ಲಿರುತ್ತಾರೆ. ಉಳಿದ 02 ನೌಕರರು ಮಂಡಳಿಯ ಸೇವೆಯಿಂದ ವಯೋಮಿತಿ ಮೇರೆಗೆ ನಿವೃತ್ತಿ ಹೊಂದಿರುತ್ತಾರೆ (ಶ್ರೀ ಹೆಚ್ ತಿಮ್ಮಪ್ಪ, ರವರ ನಿವೃತ್ತಿ ದಿನಾಂಕ: 31.05.2022 ಮತ್ತು ಶ್ರೀ ಬರಡ್ಡಿ ಶಿವಪ್ಪ ರವರ ನಿವೃತ್ತಿ ದಿನಾಂಕ: 31.01.2023). ಈ ಸಂಬಂಧ, ಉಲ್ಲೇಖ 46) ಮತ್ತು (73ರ ಆದೇಶಗಳನ್ವಯ ಎನ್.ಪಿ.ಎಸ್ ಅಭಿಮತವನ್ನು ಪಡೆಯಲಾಗಿತ್ತು.
ಒಳಪಡುವ ನೌಕರರ ಮಾಹಿತಿಗೊಳಗೊಂಡಂತೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ನಿರ್ದೇಶಿಸಿತ್ತು. ಅದರಂತೆ ಮಂಡಳಿಯ 104 ನೌಕರರನ್ನು ಎನ್.ಪಿ.ಎಸ್ ನಿಂದ ಓ.ಪಿ.ಎಸ್(Old pension scheme) ಗೆ ಒಳಪಡಿಸುವ ಬಗ್ಗೆ ಪ್ರಸ್ತಾವನೆಯನ್ನು
ತತ್ಸಂಬಂಧ, ಉಲ್ಲೇಖ-(9)ರ ಪ್ರಸ್ತಾವನೆಗೆ ಪ್ರತ್ಯುತ್ತರವಾಗಿ ನಗರಾಭಿವೃದ್ಧಿ ಇಲಾಖೆಯು ಉಲ್ಲೇಖ-(13) (14) 5 soda ಖಾತೆಯಲ್ಲಿರುವ ಎನ್.ಪಿ.ಎಸ್ ವಂತಿಗೆಗಳನ್ನು ಹಿಂಪಡೆದು ಇತ್ಯರ್ಥಪಡಿಸಲು ಸರ್ಕಾರದ ಉಲ್ಲೇಖ (10)ರಲ್ಲಿನ ಅಂತಗಳನ್ನು ಪರಿಶೀಲಿಸಿ ನಿಯಮಾನುಸಾರ ಮಂಡಳಿಯ ಹಂತದಲ್ಲಿಯೇ ಅಗತ್ಯ ಕ್ರಮ ಕೈಗೊಳ್ಳುವಂತೆ ನಿದೇರ್ಶನ ನೀಡಿರುತ್ತದೆ.
ಈ ಬಗ್ಗೆ ಮಂಡಳಿಯ ನೌಕರರ ಸಂಘ ಹಾಗೂ ಎನ್.ಪಿ.ಎಸ್ ನೌಕರರ ಸಂಘದವರು ಉಲ್ಲೇಖ-(11) ಮತ್ತು (12) ರಲ್ಲಿ ಪ್ರತ್ಯೇಕೆ ಮನವಿಗಳನ್ನು ಸಲ್ಲಿಸಿ ಸರ್ಕಾರದ ಆದೇಶಗಳಂತೆ ಮಂಡಳಿಯ ಅರ್ಹ ನೌಕರರಿಗೂ ಎನ್.ಪಿ.ಎಸ್ ನಿಂದ ಓ.ಪಿ.ಎಸ್(Old pension scheme) ಯೋಜನೆಗೆ ಒಳಪಡಿಸಲು ಕೋರಿರುತ್ತಾರೆ.
ಈ ಹಿನ್ನೆಲೆಯಲ್ಲಿ ದಿನಾಂಕ: 01.04.2006ರ ಪೂರ್ವದಲ್ಲಿ ಉಲ್ಲೇಖ (1)ರ ಬ್ಯಾಕ್ ಲಾಗ್ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆ ಹೊಂದಿ ದಿನಾಂಕ: 01.04.2006ರ ನಂತರದಲ್ಲಿ ಮಂಡಳಿಯ ಸೇವೆಗೆ ಸೇರಿರುವ ಮಂಡಳಿಯ ಒಟ್ಟು 104 ನೌಕರರನ್ನು ಉಲ್ಲೇಖ (6ನ ಸರ್ಕಾರದ ಆದೇಶದನ್ವಯ ಓ.ಪಿ.ಎಸ್ ಯೋಜನೆಗೆ ವ್ಯಾಪ್ತಿಗೊಳಪಡಿಸಲು ಹಾಗೂ ಸದರಿ ನೌಕರರ ಪ್ರಾನ್ ಖಾತೆಯಲ್ಲಿರುವ ಎನ್.ಪಿ.ಎಸ್ ವಂತಿಗೆಗಳನ್ನು ಹಿಂಪಡೆದು ಇತ್ಯರ್ಥಪಡಿಸಲು ಉಲ್ಲೇಖ (10)ರ ಸರ್ಕಾರದ ಆದೇಶದಲ್ಲಿನ ಮಾರ್ಗಸೂಚಿಗಳನ್ನು ಯಥಾವತ್ತಾಗಿ ನಿರ್ಣಯವಾಗಿರುತ್ತದೆ. ಆದ್ದರಿಂದ. ಈ ಕೆಳಕಂಡಂತೆ ಆದೇಶಿಸಲಾಗಿದೆ.