Pension increase:ಪಿಂಚಣಿದಾರರಿಗೆ ಪಿಂಚಣಿ ಹೆಚ್ಚಳ(Pension increase) ಬಗ್ಗೆ ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿ ಸಂಪೂರ್ಣ ವಿವರ ಇಲ್ಲಿದೆ.

Pension increase:ಪಿಂಚಣಿದಾರರಿಗೆ ಪಿಂಚಣಿ ಹೆಚ್ಚಳ(Pension increase) ಬಗ್ಗೆ ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿ ಸಂಪೂರ್ಣ ವಿವರ ಇಲ್ಲಿದೆ.

Pension increase

Pension increase: ಕೇಂದ್ರ ಸರ್ಕಾರಿ ನಾಗರಿಕ ಸೇವಾ ನೌಕರರಿಗೆ ಹೆಚ್ಚುವರಿ ಪಿಂಚಣಿ ಬಗ್ಗೆ ಪಿಂಚಣಿ ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿ ಅನ್ವಯ ಯಾರಿಗೆ ಎಷ್ಟು ಪಿಂಚಣಿ ಹೆಚ್ಚಾಗಲಿದೆ ಎನ್ನುವದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಕೇಂದ್ರ ಸರ್ಕಾರವು ಪಿಂಚಣಿದಾರರಿಗೆ ಹೆಚ್ಚುವರಿ(Pension increase) ಪಿಂಚಣಿ ಘೋಷಿಸಿದೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಹಾಗೂ ಪಿಂಚಣಿ ಸಚಿವಾಲಯ ಈ ಕುರಿತಂತೆ ಅಧಿಸೂಚನೆ ಹೊರಡಿಸಿದೆ.

• ಪಿಂಚಣಿ ಸಚಿವಾಲಯವು ನಿವೃತ್ತ ಕೇಂದ್ರ ಸರ್ಕಾರಿ ನಾಗರಿಕ ಸೇವಾ ನೌಕರರಿಗೆ ಪಿಂಚಣಿ ಕುರಿತು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

• SCCS (ಪಿಂಚಣಿ) ನಿಯಮಗಳು 44 ರ ಉಪ-ನಿಯಮ 6 ರ ನಿಬಂಧನೆಗಳ ಪ್ರಕಾರ, ನಿವೃತ್ತ ಸರ್ಕಾರಿ ನೌಕರರು 80 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸನ್ನು ತಲುಪಿದ ನಂತರ ಪಿಂಚಣಿ ಮತ್ತು ಅನುಕಂಪದ ಭತ್ಯೆಗೆ ಅರ್ಹರಾಗಿರುತ್ತಾರೆ.

• 80 ರಿಂದ 85 ವರ್ಷ ವಯಸ್ಸಿನ ಹಿರಿಯ ನಾಗರಿಕರು ಮೂಲ ಪಿಂಚಣಿಯ 20 ಪ್ರತಿಶತದಷ್ಟು ಹೆಚ್ಚುವರಿ ಪಿಂಚಣಿ ಪಡೆಯುತ್ತಾರೆ. 85 ರಿಂದ 90 ವರ್ಷ ವಯಸ್ಸಿನ ಪಿಂಚಣಿದಾರರು ಮೂಲ ಪಿಂಚಣಿಯ ಶೇಕಡಾ 30 ರಷ್ಟು ಹೆಚ್ಚುವರಿ ಪಿಂಚಣಿ ಪಡೆಯುತ್ತಾರೆ.

• 90 ರಿಂದ 95 ವರ್ಷ ವಯಸ್ಸಿನ ಹಿರಿಯ ನಾಗರಿಕರು ತಮ್ಮ ಮೂಲ ಪಿಂಚಣಿಯ 40 ಪ್ರತಿಶತದಷ್ಟು ಹೆಚ್ಚುವರಿ ಪಿಂಚಣಿ ಪಡೆಯುತ್ತಾರೆ. 95 ರಿಂದ 100 ವರ್ಷ ವಯಸ್ಸಿನ ಹಿರಿಯ ನಾಗರಿಕರು 50 ಪ್ರತಿಶತ ಹೆಚ್ಚುವರಿ ಪಿಂಚಣಿ ಪಡೆಯುತ್ತಾರೆ. 100 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪಿಂಚಣಿದಾರರು ಮೂಲ ಪಿಂಚಣಿಯ 100 ಪ್ರತಿ ಶತ ಹೆಚ್ಚುವರಿ ಪಿಂಚಣಿ ಪಡೆಯುತ್ತಾರೆ.

• ಪಿಂಚಣಿದಾರರು ತಮ್ಮ ನಿಗದಿತ ವಯಸ್ಸನ್ನು ತಲುಪಿದ ದಿನದಿಂದಲೇ ಹೆಚ್ಚುವರಿ ಪಿಂಚಣಿ(Pension increase) ಮತ್ತು ಅನುಕಂಪ ಭತ್ಯೆ ಜಾರಿಗೆ ಬರಲಿದೆ ಎಂದು ಪಿಂಚಣಿ ಹಾಗೂ ಪಿಂಚಣಿದಾರರ ಕಲ್ಯಾಣ ಇಲಾಖೆಯು ಅಧಿಸೂಚನೆ ತಿಳಿಸಿದೆ.

• ಪಿಂಚಣಿ ಹಾಗೂ ಪಿಂಚಣಿ ಪೂರೈಕೆಯಲ್ಲಿ ತೊಡಗಿರುವ ಎಲ್ಲಾ ಇಲಾಖೆಗಳು ಮತ್ತು ಬ್ಯಾಂಕ್‌ಗಳು ಹೊಸ ಪಿಂಚಣಿ ಮಾರ್ಗಸೂಚಿಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸಲು ಸೂಚಿಸಲಾಗಿದೆ.

WhatsApp Group Join Now
Telegram Group Join Now