Pension: Significant change in Government Employees Pension Rules 2024-25.
Pension: There is a significant change in the pension rules of government employees. The nodal agency’s Department of Pension and Pensioners’ Welfare has issued a new order in this regard to formulate policies related to pension and other retirement benefits of the Central Government. A change in rules has been made to recognize the importance of girl children in government pension schemes.
According to a new directive issued by the Department of Pensions and Pensioners’ Welfare, government employees should retain the names of daughters in family records after retirement, whether they are eligible for family pension or not.
A daughter should be considered as a member of the family. Only when the government employee submits the daughter’s name in Application 4 is she officially considered a member of the family. This rule applies whether the daughter is eligible for family pension or not.
Under this new directive, it will be ensured that names of daughters are saved in family details submitted by government employees. It said that this would strengthen the position of his family members.
When any person joins government service, details of entire family including all children are required to be given in application 4. This information should be updated before retirement. Many earlier confusions regarding removal of daughters’ names from family records after retirement have been resolved.
Family Pension Eligibility:
Only after the death of the pensioner or family pensioner, the rules for entitlement to family pension have to be seen. After adding the name of the daughter of a Government servant, whether she is married, unmarried or widowed, she is also eligible after adding her name in the prescribed form. Eligibility for family pension will be determined after the death of the pensioner.
The new rule makes it clear that a government employee must submit family details for family pension, which should include the daughter’s name, before retirement. If the daughter is unmarried, widowed or divorced she can get family pension even after 25 years. If the daughter gets married or starts earning, the family loses the pension entitlement. It said that pension is available if there are exceptions like disability.
If there is a disabled child in the family then he/she has the first right to get pension over everyone else in the family. Family Pension under NPS and OPS is calculated on the basis of last drawn salary of the employee.
Pension: ಸರ್ಕಾರಿ ನೌಕರರ ಪಿಂಚಣಿ ನಿಯಮದಲ್ಲಿ ಮಹತ್ವದ ಬದಲಾವಣೆ 2024-25.
Pension:ಸರ್ಕಾರಿ ನೌಕರರ ಪಿಂಚಣಿ ನಿಯಮದಲ್ಲಿ ಮಹತ್ವದ ಬದಲಾವಣೆಯಾಗಿದೆ. ಕೇಂದ್ರ ಸರ್ಕಾರದ ಪಿಂಚಣಿ ಮತ್ತು ಇತರ ನಿವೃತ್ತಿ ಪ್ರಯೋಜನಗಳಿಗೆ ಸಂಬಂಧಿಸಿದ ನೀತಿಗಳನ್ನು ರೂಪಿಸಲು ನೋಡಲ್ ಎಜೆನ್ಸಿಯಾದ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಈ ಕುರಿತು ಹೊಸ ಆದೇಶವನ್ನು ಹೊರಡಿಸಿದೆ. ಸರ್ಕಾರಿ ಪಿಂಚಣಿ ಯೋಜನೆಗಳಲ್ಲಿ ಹೆಣ್ಣು ಮಕ್ಕಳ ಮಹತ್ವವನ್ನು ಗುರುತಿಸಲು ನಿಯಮಗಳಲ್ಲಿ ಬದಲಾವಣೆಯನ್ನು ಮಾಡಲಾಗಿದೆ.
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಹೊರಡಿಸಿರುವ ಹೊಸ ನಿರ್ದೇಶನದ ಅನ್ವಯ ಸರ್ಕಾರಿ ನೌಕರರು ನಿವೃತ್ತಿಯಾದ ನಂತರ ಕುಟುಂಬ ದಾಖಲೆಗಳಲ್ಲಿ ಪುತ್ರಿಯರ ಹೆಸರುಗಳನ್ನು ಉಳಿಸಬೇಕು, ಅವರು ಕುಟುಂಬ ಪಿಂಚಣಿಗೆ ಅರ್ಹರಾಗಿದ್ದರೂ ಅಥವಾ ಇಲ್ಲದಿದ್ದರೂ ಅವರ ಹೆಸರನ್ನು ಉಳಿಸಬೇಕು ಎಂದು ಹೇಳಿದೆ.
ಪುತ್ರಿಯನ್ನು ಕುಟುಂಬದ ಸದಸ್ಯರು ಎಂದು ಪರಿಗಣಿಸಬೇಕು. ಸರ್ಕಾರಿ ನೌಕರರು ಅರ್ಜಿ 4ರಲ್ಲಿ ಪುತ್ರಿಯ ಹೆಸರನ್ನು ಸಲ್ಲಿಸಿದಾಗಲೇ ಆಕೆಯನ್ನು ಅಧಿಕೃತವಾಗಿ ಕುಟುಂಬದ ಸದಸ್ಯೆ ಎಂದು ಪರಿಗಣಿಸಲಾಗುತ್ತದೆ. ಪುತ್ರಿಯು ಕುಟುಂಬ ಪಿಂಚಣಿಗೆ ಅರ್ಹಳಾಗಿದ್ದರೂ ಅಥವಾ ಇಲ್ಲದಿದ್ದರೂ ಈ ನಿಯಮ ಅನ್ವಯಿಸುತ್ತದೆ ಎಂದು ತಿಳಿಸಿದೆ.
ಈ ಹೊಸ ನಿರ್ದೇಶನದ ಅನ್ವಯ ಸರ್ಕಾರಿ ನೌಕರರಿಂದ ಸಲ್ಲಿಸಲಾದ ಕುಟುಂಬದ ವಿವರಗಳಲ್ಲಿ ಪುತ್ರಿಯರ ಹೆಸರುಗಳನ್ನು ಉಳಿಸುವಂತೆ ನೋಡಿಕೊಳ್ಳಲಾಗುತ್ತದೆ. ಇದರಿಂದ ಅವರ ಕುಟುಂಬ ಸದಸ್ಯರ ಸ್ಥಾನವನ್ನು ಬಲಪಡಿಸುತ್ತದೆ ಎಂದು ಹೇಳಿದೆ.
ಯಾವುದೇ ವ್ಯಕ್ತಿ ಸರ್ಕಾರಿ ಸೇವೆಗೆ ಸೇರುವಾಗ ಎಲ್ಲಾ ಮಕ್ಕಳನ್ನು ಒಳಗೊಂಡಂತೆ ಸಂಪೂರ್ಣ ಕುಟುಂಬದ ವಿವರಗಳನ್ನು ಅರ್ಜಿ 4ರಲ್ಲಿ ನೀಡಬೇಕಾಗುತ್ತದೆ. ನಿವೃತ್ತಿಗೆ ಮುನ್ನ ಈ ಮಾಹಿತಿಯನ್ನು ನವೀಕರಿಸಬೇಕು. ನಿವೃತ್ತಿ ನಂತರ ಕುಟುಂಬ ದಾಖಲೆಗಳಿಂದ ಪುತ್ರಿಯರ ಹೆಸರುಗಳನ್ನು ತೆಗೆದುಹಾಕುವ ಬಗ್ಗೆ ಈ ಹಿಂದೆ ಇದ್ದ ಹಲವು ಗೊಂದಲಗಳನ್ನು ಬಗೆಹರಿಸಲಾಗಿದೆ.
ಕುಟುಂಬ ಪಿಂಚಣಿ(Pension)ಅರ್ಹತೆ:
ಪಿಂಚಣಿದಾರರ ಅಥವಾ ಕುಟುಂಬ ಪಿಂಚಣಿದಾರರ ಮರಣಾನಂತರ ಮಾತ್ರ ಕುಟುಂಬ ಪಿಂಚಣಿಯ ಅರ್ಹತೆಗೆ ಇರುವ ನಿಯಮಾವಳಿಗಳನ್ನು ನೋಡಬೇಕಾಗುತ್ತದೆ. ಸರ್ಕಾರಿ ನೌಕರ ಪುತ್ರಿಯ ಹೆಸರನ್ನು ಸೇರಿಸಿದ ಬಳಿಕ ಆಕೆ ವಿವಾಹಿತಳಾಗಿರಲಿ, ಅವಿವಾಹಿತಳಾಗಿರಲಿ, ವಿಧವೆಯಾಗಿರಲಿ ಸೂಚಿಸಿದ ನಮೂನೆಯಲ್ಲಿ ಆಕೆಯ ಹೆಸರು ಸೇರಿಸಿದ ಬಳಿಕ ಆಕೆಯೂ ಅರ್ಹಳಾಗುತ್ತಾಳೆ. ಪಿಂಚಣಿದಾರನ ಮರಣದ ನಂತರ ಕುಟುಂಬ ಪಿಂಚಣಿಗೆ ಅರ್ಹತೆಯನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದೆ.
ಸರ್ಕಾರಿ ನೌಕರ ನಿವೃತ್ತನಾಗುವ ಮೊದಲು ಕುಟುಂಬ ಪಿಂಚಣಿಗಾಗಿ ಕುಟುಂಬವ ವಿವರಗಳನ್ನು ಸಲ್ಲಿಸಬೇಕು, ಇದರಲ್ಲಿ ಪುತ್ರಿಯ ಹೆಸರು ಇರಬೇಕು ಎಂದು ಹೊಸ ನಿಯಮ ಸ್ಪಷ್ಟಪಡಿಸಿದೆ. ಪುತ್ರಿ ಅವಿವಾಹಿತಳಾಗಿದ್ದರೆ, ವಿಧವೆಯಾಗಿದ್ದರೆ ಅಥವ ವಿಚ್ಛೇದಿತಳಾಗಿದ್ದರೆ ಆಕೆ 25 ವರ್ಷದ ನಂತರವೂ ಕುಟಂಬ ಪಿಂಚಣಿಯನ್ನು ಪಡೆಯಬಹುದು. ಪುತ್ರಿ ವಿವಾಹವಾದರೆ ಅಥವ ಸಂಪಾದಿಸಲು ಪ್ರಾರಂಭಿಸಿದರೆ ಕುಟುಂಬವು ಪಿಂಚಣಿ ಅರ್ಹತೆಯನ್ನು ಕಳೆದುಕೊಳ್ಳುತ್ತದೆ. ಅಂಗವೈಕಲ್ಯದಂತಹ ವಿನಾಯಿತಿಗಳು ಇದ್ದರೆ ಪಿಂಚಣಿ ಲಭ್ಯವಿರುತ್ತದೆ ಎಂದು ಹೇಳಿದೆ.
ಒಂದು ವೇಳೆ ಕುಟುಂಬದಲ್ಲಿ ಅಂಗವೈಕಲ್ಯ ಹೊಂದಿರುವ ಮಗುವಿದ್ದರೆ ಕುಟುಂಬದ ಎಲ್ಲರಿಗಿಂತ ಆತ/ ಆಕೆಗೆ ಪಿಂಚಣಿ ಪಡೆಯುವ ಮೊದಲ ಹಕ್ಕಿದೆ. ಉದ್ಯೋಗಿ ಕೊನೆಯದಾಗಿ ತೆಗೆದುಕೊಂಡ ವೇತನದ ಆಧಾರದ ಮೇಲೆ ಎನ್‌ಪಿಎಸ್ ಮತ್ತು ಒಪಿಎಸ್ ಅಡಿ ಕುಟುಂಬ ಪಿಂಚಣಿಯನ್ನು ಲೆಕ್ಕಾಚಾರ ಹಾಕಲಾಗುತ್ತದೆ.
Click here… Mahitikannada.com
Your point of view caught my eye and was very interesting. Thanks. I have a question for you.