Personal Loan: ತಮ್ಮ ಸಂಬಳದ ಮೇಲೆ ಎಷ್ಟು ವೈಯಕ್ತಿಕ ಸಾಲ(Personal Loan) ಪಡೆಯಬಹುದು?
Personal Loan:ನಿಮಗೆ ಹಣದ ಅಗತ್ಯವಿದ್ದಾಗ, ವೈಯಕ್ತಿಕ ಸಾಲಗಳು ಅತ್ಯುತ್ತಮ ಆಯ್ಕೆಯಾಗಿದೆ. ಸಂಬಳ ಪಡೆಯುವ ಗ್ರಾಹಕರಿಗೆ ಬ್ಯಾಂಕುಗಳು ಸುಲಭವಾಗಿ ವೈಯಕ್ತಿಕ ಸಾಲ(Personal Loan)ಗಳನ್ನು ನೀಡುತ್ತವೆ. ಈ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರವು ವಾರ್ಷಿಕ 12 ರಿಂದ 24 ಪ್ರತಿಶತದವರೆಗೆ ಇರುತ್ತದೆ. ತಮ್ಮ ಸಂಬಳಕ್ಕೆ ಬ್ಯಾಂಕುಗಳು ಎಷ್ಟು ವೈಯಕ್ತಿಕ ಸಾಲವನ್ನು ನೀಡಬಹುದು ಎಂಬ ಪ್ರಶ್ನೆ ಅನೇಕ ಜನರಿಗೆ ಇರುತ್ತದೆ.
ಕೆಲವು ಬ್ಯಾಂಕುಗಳು ನಿಮ್ಮ ಮಾಸಿಕ ಆದಾಯದ 20 ಪಟ್ಟುವರೆಗೆ ಸಾಲವನ್ನು ಒದಗಿಸುತ್ತವೆ. ಅಂದರೆ ನಿಮ್ಮ ಮಾಸಿಕ ಆದಾಯ 1 ಲಕ್ಷ ರೂ. ಆಗಿದ್ದರೆ, ಸಹ ಬ್ಯಾಂಕುಗಳು ನಿಮಗೆ 20 ಲಕ್ಷ ರೂ ವರೆಗೆ. (20ರ ಗುಣಕ) ಹಾಗೂ 30 ಲಕ್ಷ ರೂ.ವರೆಗೆ ವೈಯಕ್ತಿಕ ಸಾಲವನ್ನು ನೀಡಬಹುದು.
ನಿಮ್ಮ ಮಾಸಿಕ ವೇತನ 25 ಸಾವಿರ ರೂ. ಇದ್ದರೆ 5 ಲಕ್ಷ ರೂ., 50 ಸಾವಿರ ರೂ. ಇದ್ದರೆ 10 ಲಕ್ಷ ರೂ., 75 ಸಾವಿರ ರೂ. ಇದ್ದರೆ 15 ಲಕ್ಷ ರೂ., 1 ಲಕ್ಷ ರೂ. ಇದ್ದರೆ 20 ಲಕ್ಷ ರೂ., 1.25 ಲಕ್ಷ ರೂ. ಇದ್ದರೆ 25 ಲಕ್ಷ ರೂ., 1.5 ಲಕ್ಷ ರೂ. ಇದ್ದರೆ 30 ಲಕ್ಷ ರೂ., 1.75 ಲಕ್ಷ ರೂ. ಇದ್ದರೆ 35 ಲಕ್ಷ ರೂ. ಹಾಗೂ 2 ಲಕ್ಷ ರೂ. ಇದ್ದರೆ 40 ಲಕ್ಷ ರೂ.ವರೆಗೆ ಪರ್ಸನಲ್ ಲೋನ್(Personal Loan) ನೀಡುತ್ತವೆ.
ವೈಯಕ್ತಿಕ ಸಾಲ(Personal Loan)ದ ಮಿತಿಯು ಬ್ಯಾಂಕ್ ನಿಗದಿಪಡಿಸಿದ ಮಿತಿಗೆ ಒಳಪಟ್ಟಿರುತ್ತದೆ ಎಂಬುದನ್ನು ನಾವು ಇಲ್ಲಿ ಗಮನಿಸಬೇಕಾವುದು ಬಹು ಮುಖ್ಯ. ಕೆಲವು ಬ್ಯಾಂಕುಗಳು 25 ಲಕ್ಷಕ್ಕಿಂತ ಹೆಚ್ಚಿನ ವೈಯಕ್ತಿಕ ಸಾಲ(Personal Loan)ಗಳನ್ನು ಅನುಮೋದಿಸುವುದಿಲ್ಲ. ಇತರರು 40 ಲಕ್ಷದವರೆಗಿನ ಸಾಲಗಳನ್ನು ಅನುಮೋದಿಸಬಹುದು. ಉದಾಹರಣೆಗೆ ಆಕ್ಸಿಸ್(Axis )ಬ್ಯಾಂಕ್ 40 ಲಕ್ಷದವರೆಗಿನ ವೈಯಕ್ತಿಕ ಸಾಲ(Personal Loan)ಗಳನ್ನು ನೀಡುತ್ತದೆ. ಐಸಿಐಸಿಐ(ICICI) ಬ್ಯಾಂಕ್ 50 ಲಕ್ಷದವರೆಗಿನ ಸಾಲಗಳನ್ನು ಒದಗಿಸುತ್ತವೆ.
ಸಾಲಗಾರರು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಲ ಪಡೆಯುವುದನ್ನು ತಡೆಯಲು ಹಲವಾರು ಬ್ಯಾಂಕುಗಳು ಈ ರೀತಿ ನಿಯಮವನ್ನು ಪಾಲಿಸುತ್ತವೆ. ದೊಡ್ಡ ಮೊತ್ತದ ಸಾಲವನ್ನು ಪಡೆಯಲು ಬಯಸುವ ವ್ಯಕ್ತಿಯೂ ಸಾಲವನ್ನು ಮರುಪಾವತಿಸುವಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸದಂತೆ ತನ್ನ ಆದಾಯದ ಬಗ್ಗೆ ಜಾಗರೂಕರಾಗಿರಬೇಕು.
1.ಮಾಸಿಕ ಆದಾಯ:- ಗರಿಷ್ಠ ಸಾಲದ ಮೊತ್ತವು ನಿಮ್ಮ ಮಾಸಿಕ ಆದಾಯವನ್ನು ಅವಲಂಬಿಸಿರುತ್ತದೆ.ಈ ಮೊದಲೇ ಹೇಳಿದಂತೆ ನಿಮ್ಮ ಆದಾಯ ಹೆಚ್ಚಾದಷ್ಟೂ ವೈಯಕ್ತಿಕ ಸಾಲ(Personal Loan)ದ ಮೊತ್ತವೂ ಹೆಚ್ಚಾಗುತ್ತದೆ.
2.ಕ್ರೆಡಿಟ್ ಸ್ಕೋರ್:- ವೈಯಕ್ತಿಕ ಸಾಲ(Personal Loan) ಪಡೆಯುವ ನಿಮ್ಮ ಸಾಮರ್ಥ್ಯವನ್ನು ನಿರ್ಧರಿಸುವ ಮತ್ತೊಂದು ಅಂಶವೆಂನೆದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್(CRIDT SCORE). ಇದರರ್ಥ ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ಈ ಬ್ಯಾಂಕುಗಳು ಹೆಚ್ಚಿನ ವೈಯಕ್ತಿಕ ಸಾಲ(Personal Loan)ಗಳನ್ನು ನೀಡಲು ಸಾಧ್ಯವಾಗುತ್ತದೆ.
3.ಸಾಲದ ಇಎಂಐ (EMI):- ನಿಮ್ಮ ವೈಯಕ್ತಿಕ ಸಾಲ(Personal Loan)ದ ಮಿತಿಯನ್ನು ನಿರ್ಧರಿಸುವ ಪ್ರಮುಖ ಅಂಶವೆಂದರೆ ಪ್ರಸ್ತುತ ಸಾಲದ ಇಎಂಐ. ಉದಾಹರಣೆಗೆ ನೀವು ಈಗಾಗಲೇ 5 ಲಕ್ಷ ರೂ. ಸಾಲವನ್ನು ಪಡೆದಿದ್ದರೆ ಹಾಗೂ ಇಗ ನೀವು ಮತ್ತೆ 15 ಲಕ್ಷ ರೂ. ಸಾಲವನ್ನು ಪಡೆಯಲು ನಿರ್ಧರಿಸಿದರೆ, ನಿಮ್ಮ ಗರಿಷ್ಠ ಅರ್ಹತೆ 17 ಲಕ್ಷ ರೂ. ಆಗಿರುತ್ತದೆ. ಹಾಗ ನೀವು ಈಗ ಕೇವಲ 12 ಲಕ್ಷ ರೂ. (17 ಲಕ್ಷ – 5 ಲಕ್ಷ) ಪಡೆಯಲು ಅರ್ಹರಾಗುತ್ತೀರಿ.
5.ಸಾಲದ ಮೇಲಿನ ಮಿತಿ:- ಅನೇಕ ಬ್ಯಾಂಕುಗಳು ಗರಿಷ್ಠ ಮಿತಿಯನ್ನು ನಿಗದಿಪಡಿಸಿವೆ. ಆನಂತರ ಅವು ವೈಯಕ್ತಿಕ ಸಾಲ(Personal loan ) ನೀಡುವುದಿಲ್ಲ. ಉದಾಹರಣೆಗೆ ಕೆಲವು ಬ್ಯಾಂಕುಗಳು ಈ ಮಿತಿಯನ್ನು 20 ಲಕ್ಷಕ್ಕೆ ನಿಗದಿಪಡಿಸಿದರೆ, ಇನ್ನೂ ಕೆಲವು ಬ್ಯಾಂಕುಗಳು 40 ಲಕ್ಷದವರೆಗೆ ನಿಗದಿಪಡಿಸಿವೆ.