Personal Loans: ವಿಶೇಷ ವೈಯಕ್ತಿಕ ಸಾಲ(Personal Loans)ಯೋಜನೆಗಳು ಟಾಪ್ ಐದು ಪರ್ಸನಲ್ ಲೋನ್ ಲಿಸ್ಟ್ ಇಲ್ಲಿದೆ.
Personal Loans: ನಮ್ಮ ಜೀವನದಲ್ಲಿ ಉಂಟಾಗುವ ಹಲವಾರು ಆರ್ಥಿಕ ಅಗತ್ಯತೆಗಳಿಗೆ ತಕ್ಷಣದ ಪರಿಹಾರವಾಗಿ ವೈಯಕ್ತಿಕ ಸಾಲಗಳು (Personal Loans) ಒಂದು ಅತ್ಯತ್ತಮ ಆಯ್ಕೆಯಾಗಿವೆ. ಬ್ಯಾಂಕುಗಳು (Banks) ಹಾಗೂ ಹಣಕಾಸು ಸಂಸ್ಥೆಗಳು (Financial institutions) ವಿವಿಧ ಉದ್ದೇಶಗಳಿಗಾಗಿ ನಾನಾ ವಿಧದ ವೈಯಕ್ತಿಕ ಸಾಲಗಳನ್ನು ನೀಡುತ್ತವೆ.
ವೈಯಕ್ತಿಕ ಸಾಲ(Personal Loans) ಎಂಬುದು ಖಾತರಿ ಇಲ್ಲದೆ (unsecured) ನೀಡಲಾಗುವ ಸಾಲವಾಗಿದ್ದು; ಇವುಗಳಿಗಾಗಿ ನಾವು ಯಾವುದೇ ಆಸ್ತಿಯನ್ನು ಅಡಮಾನ ಇಡಬೇಕಾಗಿಲ್ಲ. ಬ್ಯಾಂಕುಗಳು ಈ ಸಾಲವನ್ನು ನಿಮ್ಮ ಆರ್ಥಿಕ ಸ್ಥಿತಿ, ಕ್ರೆಡಿಟ್ ಸ್ಕೋರ್ (credit score), ಉದ್ಯೋಗ ಸ್ಥಿರತೆ ಮತ್ತು ಮರುಪಾವತಿ ಸಾಮರ್ಥ್ಯದ ಆಧಾರದಲ್ಲಿ ನೀಡುತ್ತವೆ. ಅಂತಹ ಕೆಲವು ವಿಶೇಷ ವೈಯಕ್ತಿಕ ಸಾಲಗಳ(Personal Loans) ಪಟ್ಟಿ ಇಲ್ಲಿವೆ.
ಕೆಲವು ಪ್ರಮುಖ ವೈಯಕ್ತಿಕ ಸಾಲ(Personal Loans)ಗಳ ವಿಧಗಳು.
• ವಿವಾಹ ಸಾಲ
• ಪ್ರವಾಸ ಸಾಲ
• ಮನೆ ನವೀಕರಣ ಸಾಲ
• ಗ್ರಾಹಕ ಬಾಳಿಕೆ ಉತ್ಪನ್ನಗಳ ಖರೀದಿ ಸಾಲ
• ಪಿಂಚಣಿ ಸಾಲ
ಜನ ಸಾಮಾನ್ಯರಿಗೆ ಲಭ್ಯವಿರುವ ಪ್ರಮುಖ ಐದು ವೈಯಕ್ತಿಕ ಸಾಲ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
1. ವಿವಾಹ ಸಾಲ (Wedding Loan).
ನಮ್ಮ ಜೀವನದ ಪ್ರಮುಖ ಹಂತಗಳಲ್ಲಿ ಒಂದಾದ ಮದುವೆ. ಆದರೆ ಮದುವೆಯ ಖರ್ಚುಗಳು ಜೋರಾಗಿರುವ ಇಂದಿನ ಕಾಲದಲ್ಲಿ, ಎಲ್ಲಾ ವೆಚ್ಚಗಳನ್ನು ತಕ್ಷಣಕ್ಕೆ ಹೊರುವದು ಎಲ್ಲರಿಗೂ ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ವಿವಾಹ ಸಾಲ(Wedding Loan) ನೇರವಾಗುತ್ತದೆ.
ಮಂಟಪ ಬಾಡಿಗೆ, ಚಿನ್ನಾಭರಣ ಖರೀದಿ, ಉಡುಪು, ಉಡುಗೊರೆಗಳು, ಊಟೋಪಚಾರ ವೆಚ್ಚಗಳಿಗಾಗಿ ವಿವಾಹ ಸಾಲ ಪಡೆಯಬಹುದಾಗಿದೆ. ಈ ಸಾಲವು ಬ್ಯಾಂಕುಗಳಲ್ಲಿ 10.65% (ಹೆಚ್ಚು-ಕಡಿಮೆಯಾಗಬಹುದು) ಬಡ್ಡಿದರದಲ್ಲಿ 1 ರಿಂದ 5 ವರ್ಷಗಳ ಅವಧಿಗೆ ಸಿಗುವುದುಂಟು.
2. ಪ್ರಯಾಣ ಸಾಲ(Travel Loan)
ಪ್ರವಾಸ ಮಾಡುವ ಆಸೆ ಎಲ್ಲರಲ್ಲೂ ಇದೆ. ಆದರೆ ಕೆಲವೊಮ್ಮೆ ಉಳಿತಾಯದ ಕೊರತೆ ಮತ್ತು ಅನಾಹುತಗಳ ಕಾರಣದಿಂದಲೇ ತಕ್ಷಣ ಹಣ ಲಭ್ಯವಿಲ್ಲದಿರಬಹುದು. ಅಂಥ ಸಂದರ್ಭದಲ್ಲಿ ನೀವು ಪ್ರವಾಸ ಸಾಲವನ್ನು ಪಡೆಯಬಹುದು.
ದೇಶ ಹಾಗೂ ವಿದೇಶ ಪ್ರವಾಸಕ್ಕೆ ವಿಮಾನ/ ರೈಲು ಟಿಕೆಟ್, ಹೋಟೆಲ್ ಬುಕಿಂಗ್, ಪ್ರವಾಸದಲ್ಲಿ ಶಾಪಿಂಗ್ ಮತ್ತು ಇತರೆ ವೆಚ್ಚಗಳಿಗೆ ಈ ಸಾಲ ಪಡೆಯಬಹುದಾಗಿದೆ. ಹಲವು ಬ್ಯಾಂಕುಗಳಲ್ಲಿ ಈ ಸಾಲವು 10.50% ರಿಂದ 20.40% ಬಡ್ಡಿದರದಲ್ಲಿ ಸಿಗುತ್ತದೆ.
3. ಮನೆ ನವೀಕರಣ ಸಾಲ (Home Renovation Loan).
ನಿಮ್ಮ ಮನೆ ನವೀಕರಣ ವೆಚ್ಚಗಳಿಗೂ ಸಹ ಸಾಲ ಸಿಗುತ್ತದೆ. ವೈಯಕ್ತಿಕ ಸಾಲ(Personal Loans) ವರ್ಗದಲ್ಲಿ ಲೋನ್ ಪಡೆದು ಹಳೆಯ ಮನೆಯನ್ನು ಜೀರ್ಣಾವಸ್ಥೆ ಮಾಡಬಹುದಾಗಿದೆ. ಪೇಂಟಿಂಗ್, ಹೊಸ ಕಿಚನ್, ಪ್ಲಾಸ್ಟರ್ ಕೆಲಸ, ಟೈಲ್ಸ್ ಬದಲಾವಣೆಯಂತಹ ಕಾರ್ಯಗಳಿಗೆ ನೀವು ನಿಮ್ಮ ಮನೆ ನವೀಕರಣ ಸಾಲವನ್ನು ಪಡೆಯಬಹುದು.
ಮನೆ ನವೀಕರಣ ಸಾಲವು ಬಹುತೇಕ ಬ್ಯಾಂಕುಗಳಲ್ಲಿ 10.9% ಬಡ್ಡಿದರದಲ್ಲಿ 6 ವರ್ಷಗಳ ಅವಧಿಯ ವರೆಗೆ ಸಿಗಲಿದೆ. ಈ ಸಾಲ ಕೂಡ ಶೀಘ್ರ ಮಂಜೂರಾಗಲಿದ್ದು, ಹೆಚ್ಚಿನ ದಾಖಲಾತಿಗಳ ಅಗತ್ಯ ಇರುವುದಿಲ್ಲ.
4. ಗ್ರಾಹಕ ಬಳಕೆ ಉತ್ಪನ್ನಗಳ ಖರೀದಿ ಸಾಲ (Consumer Durable Loan).
ಇತ್ತಿಚಿನ ದಿನಗಳಲ್ಲಿ ಹೊಸ ಉಪಕರಣಗಳ ಅವಶ್ಯಕತೆ ಬೆಳೆಯುತ್ತಿದೆ. ಆದರೆ, ಹಣ ಇಲ್ಲದ ಕಾರಣದಿಂದ ಶಾಪಿಂಗ್ ಮಾಡುವ ಆಸೆ ಅದುಮಿಡಬೇಕಾಗುತ್ತದೆ. ಆದರೆ, ಗ್ರಾಹಕ ಬಳಕೆ ಉತ್ಪನ್ನಗಳ ಖರೀದಿ ಸಾಲ ನಿಮಗೆ ನೆರವಾಗುತ್ತದೆ. ಮೊಬೈಲ್ ಫೋನ್, ಫ್ರಿಡ್ಜ್, ಟಿವಿ, ಲ್ಯಾಪ್ಟಾಪ್, ವಾಷಿಂಗ್ ಮಷೀನ್ ಏರಿದಂತೆ ಅನೇಕ ಗೃಹೋಪಯೋಗಿ ಆಧುನಿಕ ಉಪಕರಣಗಳನ್ನು ಗ್ರಾಹಕ ಬಳಕೆ ಉತ್ಪನ್ನಗಳ ಖರೀದಿ ಸಾಲ ವರ್ಗದಲ್ಲಿ ಗೊಳ್ಳಬಹುದಾಗಿದೆ.
ಈ ಸಾಲವನ್ನು ಅತ್ಯಂತ ಸುಲಭವಾಗಿ ಲಭ್ಯವಿದ್ದು; ನೀವು ಖರೀದಿಸಬಯಸುವ ಉಪಕರಣಗಳ ಮಳಿಗೆಯಲ್ಲಿಯೇ ನೇರವಾಗಿ ಸಿಗುತ್ತದೆ. ಈ ಸಾಲದ ಬಡ್ಡಿದರ ಒಂದೊಂದು ಉಪಕರಣಕ್ಕೆ ಒಂದೊಂದು ಮಟ್ಟಗಳಿರುತ್ತದೆ. ಇಎಂಐ (EMI) ಕಂತುಗಳ ರೂಪದಲ್ಲಿ ಈ ಸಾಲ ಮರುಪಾವತಿ ಮಾಡಬೇಕು.
5. ಪಿಂಚಣಿ ಸಾಲ(Pension Loan)
ಪಿಂಚಣಿ ಪಡೆಯುವ ಹಿರಿಯ ನಾಗರಿಕರು ಕೆಲವೊಮ್ಮೆ ತಮಗೆ ತಾತ್ಕಾಲಿಕ ಹಣಕಾಸು ಅಗತ್ಯಕ್ಕೆ ತುತ್ತಾಗುತ್ತಾರೆ. ಈ ಸಂದರ್ಭದಲ್ಲಿ ಪಿಂಚಣಿ ಸಾಲ ಸಹಕಾರಿಯಾಗುತ್ತದೆ.ಆರೋಗ್ಯ ಚಿಕಿತ್ಸೆಗೆ, ಮಕ್ಕಳ ಶಿಕ್ಷಣ, ಮನೆ ಪುನರ್ ನಿರ್ಮಾಣ, ಕುಟುಂಬಕ್ಕೆ ಸಹಾಯ ನೀಡುವ ಉದ್ದೇಶದಿಂದ ಪಿಂಚಣಿ ಸಾಲ ಪಡೆಯಬಹುದಾಗಿದೆ.
ಈ ಸಾಲವು ಪಿಂಚಣಿಯ 7 ರಿಂದ 10 ಪಟ್ಟು ತನಕ ಸಾಲ ಸಿಗುತ್ತದೆ. ಇದರ ಬಡ್ಡಿದರ ಅತ್ಯಂತ ಕಡಿಮೆ ಮಟ್ಟದಲ್ಲಿರುತ್ತದೆ. ಯಾವುದೇ ದಾಖಲೆಗಳ ಅಗತ್ಯವಿಲ್ಲದೇ ದೊರೆಯುವ ಈ ಸಾಲವನ್ನು ನಿಮ್ಮ ಪಿಂಚಣಿ ಬರುವ ಬ್ಯಾಂಕ್‌ಗಳಿಂದಲೇ ಮಾತ್ರ ಪಡೆಯಬಹುದಾಗಿದೆ.
ವೈಯಕ್ತಿಕ ಸಾಲ(Personal )ದ ಪ್ರಮುಖ ಲಾಭಗಳು.
ವೈಯಕ್ತಿಕ ಸಾಲ(Personal Loans)ದ ದೊಡ್ಡ ಪ್ರಯೋಜನವೆಂದರೆ ಇದು ಖಾತರಿ ಇಲ್ಲದೆ ಸಿಗುತ್ತದೆ. ಶೀಘ್ರ ಪ್ರಕ್ರಿಯೆಯಲ್ಲಿ ಲಭ್ಯವಾಗಲಿದೆ ಈ ಸಾಲದವನ್ನು ವಿವಿಧ ಉದ್ದೇಶಗಳಿಗೆ ಉಪಯೋಗ ಮಾಡಿಕೊಳ್ಳಬಹುದು. ಆನ್‌ಲೈನ್ ಮೂಲಕ ಅರ್ಜಿ ಹಾಕುವ ಅವಕಾಶವೂ ಇದ್ದು, EMI ರೂಪದಲ್ಲಿ ಮರುಪಾವತಿ ಮಾಡಬಹುದಾಗಿದೆ.
ಯಾವುದೇ ಸಾಲ ಪಡೆಯಬೇಕಾದರೂ, ಮೊದಲಿಗೆ ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ತಿಳಿಯಿರಿ. ಕ್ರೆಡಿಟ್ ಸ್ಕೋರ್ ಉತ್ತಮವಾಗಿಟ್ಟುಕೊಳ್ಳಿ ಸಾಲದ ಅವಧಿ ಕಡಿಮೆಯಾಗಿದ್ದರೆ ಬಡ್ಡಿ ದರ ಕಡಿಮೆ. EMI ಲೆಕ್ಕ ಹಾಕಿ ಒಂದು ಉತ್ತಮ ಯೋಜನೆ ಆಯ್ಕೆ ಮಾಡಿ.
ಹೀಗೆ, ನಿಮ್ಮ ಜೀವನದ ಪ್ರತಿಯೊಂದು ಪ್ರಮುಖ ಹಂತಕ್ಕೂ ಸಾಲ ಸೌಲಭ್ಯಗಳಿವೆ. ನಿಮಗೇನು ಅಗತ್ಯವೋ ಅದಕ್ಕೆ ತಕ್ಕಂತೆ ನಿಮ್ಮ ಸಾಲ ಯೋಜನೆ ನಿಮಗೆ ಸಿಗುತ್ತದೆ. ಸ್ಥಳೀಯ ಬ್ಯಾಂಕ್ ಹಾಗೂ ಆಧಿಕೃತ ಹಣಕಾಸು ಸಂಸ್ಥೆಯೊಂದಿಗೆ ಸಂಪರ್ಕಿಸಿ ನಿಮ್ಮ ಅಗತ್ಯಕ್ಕೆ ತಕ್ಕ ಸಾಲ ಯೋಜನೆ ಆರಿಸಿ.