PM Surya Ghar:ಪ್ರಧಾನ ಮಂತ್ರಿ ಸೂರ್ಯ ಘರ್(PM Surya Ghar) ಉಚಿತ ವಿದ್ಯುತ್ ಪಡೆಯುವುದು ಹೇಗೆ?
PM Surya Ghar:ಇದು ಒಂದು ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆ. ಮೇಲ್ಟಾವಣೆ ಸೌರ ವಿದ್ಯುತ್ ಘಟಕ ಸ್ಥಾಪಿಸಲು ಬಯಸುವ 1 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿ ಹೊಂದಿದೆ. ಕೇಂದ್ರ ಸಚಿವ ಸಂಪುಟವು 75,021 3 ರೂ. ವೆಚ್ಚದೊಂದಿಗೆ ಈ ಯೋಜನೆಗೆ ಫೆಬ್ರವರಿ 29ರಂದು ಅನುಮೋದನೆ ನೀಡಿದೆ.ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗಲಿದೆ.
PM Surya Ghar: ಸಹಾಯಧನ ಎಷ್ಟು?
• 1ಕಿ.ವ್ಯಾ. ಸಿಸ್ಟಮ್ಗೆ 30 ಸಾವಿರ ರೂ.
• 2 ಕಿ.ವ್ಯಾ. ಸಿಸ್ಟಮ್ ಗಳಿಗೆ 60 ಸಾವಿರ ರೂ.
• 3 ಕಿ.ವ್ಯಾ. ಅಥವಾ ಹೆಚ್ಚಿನ ಸಾಮರ್ಥ್ಯದ ಸಿಸ್ಟಮ್ಗಳಿಗೆ ₹78 ಸಾವಿರ.
PM Surya Ghar: ಈ ಯೋಜನೆ ಹೇಗೆ ಕೆಲಸ ಮಾಡುತ್ತದೆ?
2 ಕಿ.ವ್ಯಾ ಸಾಮರ್ಥ್ಯದವರೆಗಿನ ಸಿಸ್ಟಮ್ಗಗಳಿಗೆ ಸಿಸ್ಟಮ್ ಗಳಿಗೆ ಸೌರ ಘಟಕ ವೆಚ್ಚದ ಶೇಕಡ 60 ಹಾಗೂ 2 ರಿಂದ 3 ಕಿ.ವ್ಯಾ. ಸಾಮರ್ಥ್ಯದ ನಡುವಿನ ಸಿಸ್ಟಮ್ಗಳಿಗೆ ಹೆಚ್ಚುವರಿ ಸಿಸ್ಟಮ್ ವೆಚ್ಚದ ಶೇ.40ರಷ್ಟು ಸಹಾಯಧನ ನೀಡಲಾಗುತ್ತದೆ. ಸಹಾಯಧನವನ್ನು 3 ಕಿ.ವ್ಯಾ. ಸಾಮರ್ಥ್ಯಕ್ಕೆ ಮಿತಿಗೊಳಿಸಲಾಗಿದೆ.
PM Surya Ghar: ಈ ಯೋಜನೆಯನ್ನು ಏಕೆ ಆರಿಸಿಕೊಳ್ಳಬೇಕು?
• ವಿದ್ಯುತ್ ಬಿಲ್ ಉಳಿಸಲು ಹಾಗೂ ಹೆಚ್ಚುವರಿ ವಿದ್ಯುತ್ ಅನ್ನು DISCOMಗಳಿಗೆ ಮಾರಿ ಹೆಚ್ಚುವರಿ ಆದಾಯ ಗಳಿಸಲು ಸಾಧ್ಯ.
• 3 ಕಿ.ವ್ಯಾ. ಸೌರ ಘಟಕ ಸ್ಥಾಪಿಸುವ ಮೂಲಕ ಪ್ರತಿ ತಿಂಗಳಿಗೆ 300 ಯೂನಿಟ್ ವಿದ್ಯುತ್ ಬಳಸುವ ಕುಟುಂಬಕ್ಕೆ 1 ವರ್ಷದಲ್ಲಿ ಅಂದಾಜು15,000 ರೂ ಉಳಿತಾಯ
• ಸ್ವಂತ ವಿದ್ಯುತ್ ಉತ್ಪಾದಿಸುವ ಮೂಲಕ ತಿಂಗಳಿಗೆ ರೂ. 1,800- ರೂ.1875ರವರೆಗೆ ವಿದ್ಯುತ್ ಬಿಲ್ನಲ್ಲಿ ಉಳಿತಾಯ.
PM Surya Ghar: ಈ ಯೋಜನೆಗೆ ಯಾರು ಅರ್ಹರು?
• ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.
• ಸೌರ ಫಲಕ ಅಳವಡಿಸಲು ಸೂಕ್ತ ಮೇಲಾವಣೆ ಹೊಂದಿರುವ ಮನೆ ಇರಬೇಕು.
• ಮನೆಯು ಮಾನ್ಯವಾದ ವಿದ್ಯುತ್ ಸಂಪರ್ಕ ಹೊಂದಿರಬೇಕು.
• ಮನೆಯವರು ಸೌರ ಫಲಕಗಳಿಗೆ ಬೇರೆ ಯಾವುದೇ ಸಹಾಯಧನ ಪಡೆದಿರಬಾರದು.
PM Surya Ghar: ಈ ಯೋಜನೆಯ ಸಬ್ಸಿಡಿಯನ್ನು ಪಡೆಯಲು ಏನು ಮಾಡಬೇಕು?
• ಹಂತ 1:- www.pmsuryaghar.gov.in ಪೋರ್ಟಲ್ನಲ್ಲಿ ನೋಂದಾಯಿಸಿ. ರಾಜ್ಯ ಮತ್ತು ವಿದ್ಯುತ್ ವಿತರಣಾ ಕಂಪನಿ ಆಯ್ಕೆಮಾಡಿ. ವಿದ್ಯುತ್ ಗ್ರಾಹಕ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ನಮೂದಿಸಿ.
• ಹಂತ 2:- ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ. ಫಾರ್ಮ್ ಪ್ರಕಾರ ಮೇಲ್ಪಾವಣಿ ಸೌರ ಘಟಕಕ್ಕಾಗಿ ಅರ್ಜಿ ಸಲ್ಲಿಸಿ.
• ಹಂತ 3:- ಕಾರ್ಯಸಾಧ್ಯತೆಯ ಅನುಮೋದನೆ ಪಡೆದರೆ, ಯಾವುದೇ ನೋಂದಾಯಿತ ಮಾರಾಟಗಾರರಿಂದ ಘಟಕ ಸ್ಥಾಪಿಸಬಹುದು
• ಹಂತ 4:- ಅನುಸ್ಥಾಪನೆ ಪೂರ್ಣಗೊಂಡ ನಂತರ, ಘಟಕದ ವಿವರಗಳನ್ನು ಸಲ್ಲಿಸಿ ಮತ್ತು ನೆಟ್ ಮೀಟರ್ಗೆ ಅರ್ಜಿ ಸಲ್ಲಿಸಿ.
• ಹಂತ 5:- ನೆಟ್ ಮೀಟರ್ ಸ್ಥಾಪಿಸಿದ ನಂತರ ಮತ್ತು DISCOM ತಪಾಸಣೆಯ ನಂತರ ಕಾರ್ಯಾರಂಭದ ಪ್ರಮಾಣಪತ್ರವನ್ನು ಪೋರ್ಟಲ್ನಲ್ಲಿ ರಚಿಸಲಾಗುತ್ತದೆ.
• ಹಂತ 6:- ಕಾರ್ಯಾರಂಭದ ವರದಿ ಪಡೆದ ನಂತರ, ಪೋರ್ಟಲ್ ಮೂಲಕ ಬ್ಯಾಂಕ್ ಖಾತೆ ವಿವರ ಮತ್ತು ರದ್ದುಗೊಂಡ ಚೆಕ್ ಸಲ್ಲಿಸಿ. 30 ದಿನಗಳಲ್ಲಿ ಬ್ಯಾಂಕ್ ಖಾತೆಗೆ ಸಹಾಯಧನ ಪಡೆಯುತ್ತೀರಿ.