PMSYM: ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ ಯೋಜನೆ (PMSYM) ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ-2025.

PMSYM: ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ ಯೋಜನೆ (PMSYM) ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ-2025.

PMSYM

PMSYM:ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ (PMSYM) ಯೋಜನೆ ಎಂಬುದು ಅಸಂಘಟಿತ ಕಾರ್ಮಿಕರ (UW) ವೃದ್ದಾಪ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಗಾಗಿ ಮಾಡಲಾಗಿರುವ ಸರ್ಕಾರಿ ಯೋಜನೆಯಾಗಿದೆ.

ಅಸಂಘಟಿತ ಕಾರ್ಮಿಕರು (UW) ಹೆಚ್ಚಾಗಿ ಗೃಹಾಧಾರಿತ ಕೆಲಸಗಾರರು, ಬೀದಿ ವ್ಯಾಪಾರಿಗಳು, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡುವ ಕೆಲಸಗಾರರು, ಕಟ್ಟಿಂಗ್ ಅಂಗಡಿಯವರು, ಇಟ್ಟಿಗೆ ಗೂಡು ಕೆಲಸಗಾರರು, ಚಮ್ಮಾರರು, ಚಿಂದಿ ಆಯುವವರು, ಮನೆಗೆಲಸದವರು. ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಸ್ವಂತ ಖಾತೆ ಕೆಲಸಗಾರರು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮದ ಕೆಲಸಗಾರರು, ಶ್ರವಣ-ದೃಶ್ಯ ಕೆಲಸಗಾರರು ಅಥವಾ ಇದೇ ರೀತಿಯ ಇತರ ಉದ್ಯೋಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ದೇಶದಲ್ಲಿ ಸುಮಾರು 42 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ.

PMSYM: ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ ಯೋಜನೆಯ ಪ್ರಯೋಜನಗಳು.

ಇದು ಸ್ವಯಂಪ್ರೇರಿತ ಮತ್ತು ಕೊಡುಗೆಯ ಪಿಂಚಣಿ ಯೋಜನೆಯಾಗಿದ್ದು, ಚಂದಾದಾರರು 60 ವರ್ಷ ವಯಸ್ಸನ್ನು ತಲುಪಿದ ನಂತರ ತಿಂಗಳಿಗೆ ರೂ 3,000/- ರ ಕನಿಷ್ಠ ಖಚಿತವಾದ ಪಿಂಚಣಿಯನ್ನು ಪಡೆಯುತ್ತಾರೆ ಮತ್ತು ಚಂದಾದಾರರು ಮರಣಹೊಂದಿದರೆ, ಫಲಾನುಭವಿಯ ಸಂಗಾತಿಯು ಪಿಂಚಣಿಯ 50% ಅನ್ನು ಅಂದರೆ ರೂ. 1,500/- ನ್ನು ಕುಟುಂಬ ಪಿಂಚಣಿಯಾಗಿ ಪಡೆಯಲು ಅರ್ಹರಾಗಿರುತ್ತಾರೆ. ಪಿಂಚಣಿಯನ್ನು ಕುಟುಂಬ ಪಿಂಚಣಿಯಾಗಿ, ಕುಟುಂಬ ಪಿಂಚಣಿ ಸಂಗಾತಿಗೆ ಮಾತ್ರ ಅನ್ವಯಿಸುತ್ತದೆ.

ಈ ಯೋಜನೆಯು ರಾಷ್ಟ್ರದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಸುಮಾರು 50% ದಷ್ಟು ಕೊಡುಗೆ ನೀಡುವ ಅಸಂಘಟಿತ ವಲಯಗಳಲ್ಲಿನ ಕಾರ್ಮಿಕರಿಗೆ ಗೌರವವಾಗಿದೆ.
18 ರಿಂದ 40 ವರ್ಷದೊಳಗಿನ ಅರ್ಜಿದಾರರು 60 ವರ್ಷ ವಯಸ್ಸಿನವರೆಗೆ ಮಾಸಿಕ ಕೊಡುಗೆಗಳನ್ನು ವಯಸ್ಸಿಗೆ ಅನುಗುಣವಾಗಿ ತಿಂಗಳಿಗೆ 55 ರಿಂದ 200 ರೂ. ವರೆಗೆ ಮಾಸಿಕ ವಂತಿಗೆಯನ್ನು ಪಾವತಿಸಬೇಕಾಗುತ್ತದೆ.
ಅರ್ಜಿದಾರರು 60 ವರ್ಷ ವಯಸ್ಸನ್ನು ತಲುಪಿದ ನಂತರ, ಅವನು/ಅವಳು ಪಿಂಚಣಿ ಮೊತ್ತವನ್ನು ಕೈಮ್‌ನ್ನು ಮಾಡಬಹುದು.
ಪ್ರತಿ ತಿಂಗಳು ನಿಗದಿತ ಪಿಂಚಣಿ ಮೊತ್ತವನ್ನು ಆಯಾ ವ್ಯಕ್ತಿಯ ಪಿಂಚಣಿ ಖಾತೆಗೆ ಜಮಾ ಮಾಡಲಾಗುತ್ತದೆ.

PMSYM: ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ ಯೋಜನೆ  ಅರ್ಹತೆಯ ಮಾನದಂಡಗಳು.

1. ಅಸಂಘಟಿತ ಕಾರ್ಮಿಕ (UW)ರಾಗಿರಬೇಕು.

2. 18 ರಿಂದ 40 ವರ್ಷಗಳ ನಡುವಿನ ಪ್ರವೇಶ ವಯಸ್ಸು ಇರಬೇಕು.

3. ಮಾಸಿಕ ಆದಾಯ ರೂ. 15.000/- ಅಥವಾ ಅದಕ್ಕಿಂತ ಕಡಿಮೆ ಇರಬೇಕು.

4. ಸಂಘಟಿತ ವಲಯದಲ್ಲಿ ತೊಡಗಿಸಿಕೊಂಡಿರಬಾರದು (EPFO/NPS/ ESIC ಸದಸ್ಯನಾಗಿರಬಾರದು).

5. ಆದಾಯ ತೆರಿಗೆ ಪಾವತಿದಾರರಾಗಿರಬಾರದು.

ಗ್ರಾಹಕರು ಹೊಂದಿರಬೇಕಾದ ದಾಖಲಾತಿಗಳು (PMSYM).

1. ಆಧಾರ್ ಕಾರ್ಡ್

2. ಉಳಿತಾಯ ಬ್ಯಾಂಕ್ ಖಾತೆ / IFSC ಯೊಂದಿಗೆ ಜನ್ ಧನ್ ಖಾತೆ ಸಂಖ್ಯೆ

ಸೂಚನೆ: ಆಧಾರ್ ಕಾರ್ಡ್ ಹಾಗೂ ಉಳಿತಾಯ ಬ್ಯಾಂಕ್ ಖಾತೆ ಪಾಸ್‌ಬುಕ್ ನಲ್ಲಿರುವ ಹೆಸರು ಒಂದೆ ತರನಾಗಿ ಇರಬೇಕು. ಬದಲಾವಣೆಯು ಇದ್ದಲ್ಲಿ ಪ್ರತಿ ತಿಂಗಳ ವಂತಿಕೆಯು ಕಡಿತವಾಗುವುದಿಲ್ಲ.

ಸೇವಾ ಶುಲ್ಕ (PMSYM).

ಈ ಯೋಜನೆಯನ್ನು ಮಾಡಬಯಸುವ ಫಲಾನುಭವಿಯು ಅವರ ವಯೋಮಿತಿ ಆಧಾರದಲ್ಲಿ ಮೊದಲನೇ ಮಾಕ ವಂತಿಕೆಯನ್ನು ಸಿ.ಎಸ್.ಸಿ ಕೇಂದ್ರದಲ್ಲಿ ನಗದಾಗಿ ಪಾವತಿಸಬೇಕಾಗುತ್ತದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ.

PMSYM: ಕೇಂದ್ರ ಸರ್ಕಾರದ ವಂತಿಕೆ ಪಾವತಿ ಬಗ್ಗೆ.

ಸದ್ರಿ ಯೋಜನೆಯಡಿ ಫಲಾನುಭವಿಯು ಭರಿಸುವ ಮಾಸಿಕ ವಂತಿಕೆಯ ಪ್ರಮಾಣದಷ್ಟು ವಂತಿಕೆಯನ್ನು ಅಂಬರೆ ಒಟ್ಟು ವಂತಿಕೆಯ ಶೇ.50 ರಷ್ಟು ವಂತಿಕೆಯನ್ನು ಕೇಂದ್ರ ಸರ್ಕಾರವು ಫಲಾನುಭವಿಗಳ ಖಾತೆಗೆ ಭರಿಸುತ್ತದೆ. ಈ ಮೊತ್ತವನ್ನು ಫಲಾನುಭವಿಗೆ 60 ವರ್ಷ ಪೂರೈಸುವವರೆಗೆ ಭರಿಸುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಮಾನ್‌ಧನ್ ಯೋಜನೆ (PMKMY), ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ ಯೋಜನೆ (PMSYM) ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ (ವ್ಯಾಪಾರಿಗಳು ಹಾಗೂ ಸ್ವ-ಉದ್ಯೋಗೊಗಳಿಗೆ) (NPS for Traders and Self-Employed Persons Yojana) ಗಳಿಗೆ ಸಂಬಂಧಿಸಿದಂತೆ ವಯಸ್ಸಿಗೆ ಅನುಗುಣವಾಗಿ ಮಾಸಿಕ ವಂತಿಕೆ ಹಾಗೂ ಸರ್ಕಾರದ ವಂತಿಕೆಯ ವಿವರದ ಪಟ್ಟಿ ಈ ಕೆಳಗಿನಂತಿರುತ್ತದೆ.

ವಯೋಮಿತಿಗೆ ಅನುಗುಣವಾಗಿ ಪಾವತಿಸಬೇಕಾದ ಮಾಸಿಕ ವಂತಿಕೆಯ ವಿವರ.

PDF DOWNLOAD CLICK HERE 

WhatsApp Group Join Now
Telegram Group Join Now

Leave a Comment