Post Office Savings Scheme 2025 Interest Rate:ಅಂಚೆ ಕಚೇರಿ ಉಳಿತಾಯ ಯೋಜನೆಗಳ(Post Office Savings Scheme 2025 Interest Rate) ಪ್ರಸ್ತುತ ಬಡ್ಡಿದರ ಎಷ್ಟು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Post Office Savings Scheme 2025 Interest Rate:ಭಾರತೀಯ ರಿಸರ್ವ್ ಬ್ಯಾಂಕ್(RBI) ರೆಪೋ ದರವನ್ನು ಕಡಿತದಿಂದ ಬ್ಯಾಂಕುಗಳು ಉಳಿತಾಯ ಯೋಜನೆಗಳ ಬಡ್ಡಿದರ ಪರಿಷ್ಕರಿಸುವ ಸಾಧ್ಯತೆ ಇದೆ. ಆದರೆ,ಈ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಜೂನ್‌ನಿಂದ ಸೆಪ್ಟೆಂಬರ್ 2025ರ ವರೆಗೆ ಬದಲಾಗುವುದಿಲ್ಲ ಎಂದು ಸರ್ಕಾರ ಹೇಳಿಕೆ ಕೊಟ್ಟಿದೆ. ಸಾರ್ವಜನಿಕ ಭವಿಷ್ಯ ನಿಧಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳ ಬಡ್ಡಿದರಗಳು ಪ್ರಸ್ತುತ ದರಗಳಲ್ಲೇ ಮುಂದುವರೆಯಲಿವೆ. ಸೆಪ್ಟೆಂಬರ್ ಅನಂತರ ಬಡ್ಡಿ ದರಗಳು ಪರಿಷ್ಕರಣೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಇತ್ತೀಚಿಗೆ ಭಾರತೀಯ ರಿಸರ್ವ್ ಬ್ಯಾಂಕ್(RBI) ತನ್ನ ರೆಪೋ ದರಗಳನ್ನು ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳು ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಪರಿಷ್ಕರಿಸುವ ಸಾಧ್ಯತೆಗಳಿವೆ. ಆದರೆ, ಸರ್ಕಾರದ ಇತ್ತೀಚಿನ ಅಧಿಸೂಚನೆಯ ಪ್ರಕಾರ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಜೂನ್ ನಿಂದ ಸೆಪ್ಟೆಂಬರ್ 2025 ರವರೆಗೆ ತ್ರೈಮಾಸಿಕದಲ್ಲಿ ಯಾವುದೇ ತರಹದ ಬದಲಾವಣೆ ಇಲ್ಲ. “2025ರ ಜುಲೈ 1ರಿಂದ ಪ್ರಾರಂಭವಾಗಿ 2025ರ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದ 2ನೇ ತ್ರೈಮಾಸಿಕದ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (2025ರ ಏಪ್ರಿಲ್ 1ರಿಂದ 2025ರ ಜೂನ್ 30ರವರೆಗೆ) ಅಧಿಸೂಚಿತವಾದ ಬಡ್ಡಿ ದರಗಳಿಂದ ಬದಲಾವಣೆಯಾಗುವುದಿಲ್ಲ” ಎಂದು ಹಣಕಾಸು ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೀಗಾಗಿ ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಬದಲಾಣೆಯನ್ನು ಮಾಡಲಾಗಿಲ್ಲ. ಸೆಪ್ಟೆಂಬರ್ ಬಳಿಕದ ತ್ರೈಮಾಸಿಕದಲ್ಲಿ ಬಡ್ಡಿದರಗಳು ಪರಿಷ್ಕರಣೆ ಆಗುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ .
Post Office Savings Scheme 2025 Interest Rate:ಯಾವ ಯಾವ ಯೋಜನೆಯ ಪ್ರಸ್ತುತ ಬಡ್ಡಿದರ ಎಷ್ಟಿದೆ?
ಅಂಚೆ ಕಚೇರಿ ಉಳಿತಾಯ ಯೋಜನೆಗಳಿಗೆ ನವೀಕರಿಸಿದ ಬಡ್ಡಿದರಗಳು (ಜುಲೈ ನಿಂದ ಸೆಪ್ಟೆಂಬರ್ 2025) ಈ ಕೆಳಗಿನಂತಿವೆ.
1. ಸಾರ್ವಜನಿಕ ಭವಿಷ್ಯ ನಿಧಿ (PPF).
• ಪ್ರಸ್ತುತ ಬಡ್ಡಿ ದರ: 7.1%
• ಲಾಕ್-ಇನ್ ಅವಧಿ: 15 ವರ್ಷಗಳು
• ಗರಿಷ್ಠ ಹೂಡಿಕೆ: 1ವರ್ಷಕ್ಕೆ 1.5 ಲಕ್ಷ ರೂ
• ತೆರಿಗೆ ರಹಿತ: ಹೌದು (ವಿಭಾಗ 80C ಅಡಿಯಲ್ಲಿ ತೆರಿಗೆ ಕಡಿತಕ್ಕೆ ಒಳಪಟ್ಟಿದೆ)
2. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC).
• ಪ್ರಸ್ತುತ ದರ: 7.7%
• ಅವಧಿ: ಐದು ವರ್ಷಗಳು
• ಕನಿಷ್ಠ ಹೂಡಿಕೆ: 1,000 ರೂ. (ಇದರ ನಂತರ ₹100 ರ ಗುಣಾಕಾರದಲ್ಲಿ)
• ಗರಿಷ್ಠ ಮಿತಿ: ಇಲ್ಲ
3. ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS).
• ಪ್ರಸ್ತುತ ಬಡ್ಡಿ ದರ: 8.2%
• ಅವಧಿ: ಐದು ವರ್ಷಗಳು
• ಗರಿಷ್ಠ ಠೇವಣಿ: ಕನಿಷ್ಠ ₹1,000 ಗರಿಷ್ಠ 30 ಲಕ್ಷ ರೂ
• ಲಾಕ್-ಇನ್ ಅವಧಿ: ಎರಡು ವರ್ಷಗಳು
4. ಸುಕನ್ಯಾ ಸಮೃದ್ಧಿ ಯೋಜನೆ (SSY).
• ಪ್ರಸ್ತುತ ದರ: 8.2%
• ಫಲಾನುಭವಿಗಳು: ಹತ್ತು ವರ್ಷದೊಳಗಿನ ಹೆಣ್ಣು ಮಗು
• ಅವಧಿ: ಇಪ್ಪತ್ತೋಂದು ವರ್ಷಗಳು ಅಥವಾ 18 ವರ್ಷದ ನಂತರ ಮದುವೆಯಾಗುವವರೆಗೆ
5. ಪೋಸ್ಟ್ ಆಫೀಸ್ ಅವಧಿ ಠೇವಣಿ (TD).
• ಒಂದು-ವರ್ಷ: 6.9% ಬಡ್ಡಿ
• ಎರಡು-ವರ್ಷ: 7.0% ಬಡ್ಡಿ
• ಮೂರು-ವರ್ಷ: 7.1% ಬಡ್ಡಿ
• ಐದು-ವರ್ಷ: 7.5% ಬಡ್ಡಿ
6. ಅಂಚೆ ಕಚೇರಿ ಮರುಕಳಿಸುವ ಠೇವಣಿ (RD).
• ಪ್ರಸ್ತುತ ದರ: 6.7%
• ಅವಧಿ: ಐದು ವರ್ಷಗಳು
• ಸಂಯುಕ್ತ ಬಡ್ಡಿ ದರ: ತ್ರೈಮಾಸಿಕ ಪಾವತಿ
7. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS).
• ಬಡ್ಡಿ ದರ: 7.4%
• ಬಡ್ಡಿ: ಮಾಸಿಕ ಪಾವತಿಸಲಾಗುತ್ತದೆ
• ಅವಧಿ: ಐದು ವರ್ಷಗಳು
• ಗರಿಷ್ಠ ಹೂಡಿಕೆ: 4.5 ಲಕ್ಷ ರೂ. (ಏಕ), 9 ಲಕ್ಷ ರೂ.(ಜಂಟಿ)
8. ಕಿಸಾನ್ ವಿಕಾಸ್ ಪತ್ರ.
• ಪ್ರಸ್ತುತ ದರ: 7.5%
• ಅವಧಿ: ಒಂಬತ್ತು ವರ್ಷಗಳು ಮತ್ತು 7 ತಿಂಗಳು
• ಗರಿಷ್ಠ ಠೇವಣಿ: ಕನಿಷ್ಠ: 1,000 ರೂ., ಗರಿಷ್ಠ ಮಿತಿ ಇಲ್ಲ
Post Office Savings Scheme 2025 Interest Rate: ಈ ಉಳಿತಾಯ ಯೋಜನೆಗಳ ಬಡ್ಡಿ ದರಗಳ ಪರಿಷ್ಕರಣೆ ಏಕೆ?
ಅಂಚೆ ಕಚೇರಿಯ ಉಳಿತಾಯ ಯೋಜನೆಯ(Post Office Savings Scheme 2025 Interest Rate) ಬಡ್ಡಿದರಗಳು ಸರ್ಕಾರಿ ಬಾಂಡ್ ಗಳಿಕೆಗೆ ಸಂಬಂಧಿಸಿವೆ. ಹತ್ತು ವರ್ಷಗಳ ಗೌವರ್ನಮೆಂಟ್ ಸೆಕ್ಯೂರಿಟಿ ಬಡ್ಡಿದರ ಶೇಕಡಾ 6.3ಕ್ಕಿಂತ ಕಡಿಮೆಯಾಗುವುದರೊಂದಿಗೆ, ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರಗಳನ್ನು ಅದಕ್ಕೆ ಅನುಗುಣವಾಗಿ ಮರುಹೊಂದಿಸಲಾಗುತ್ತದೆ. ಇದು ಠೇವಣಿದಾರರಿಗೆ ಅಪಾಯ-ಮುಕ್ತ ಆದಾಯವನ್ನು ನೀಡುವಾಗ ಮಾರುಕಟ್ಟೆಯ ಪರಿಸ್ಥಿತಿಗಳೊಂದಿಗೆ ಹೊಂದಾಣಿಕೆಯನ್ನು ಖಾತ್ರಿಪಡಿಸುತ್ತದೆ. ಹೀಗಾಗಿ ತ್ರೈಮಾಸಿಕ ಅವಧಿಗೆ ಬಡ್ಡಿದರಗಳನ್ನು ಪರಿಷ್ಕರಿಸಲಾಗುತ್ತದೆ.