Post Office: ನಿಮ್ಮ ಮಕ್ಕಳ ಮುಂದಿನ ಶಿಕ್ಷಣಕ್ಕಾಗಿ ಈ Post Office RD ಯೋಜನೆಯಿಂದ 5 ವರ್ಷದ ನಂತರ ನಿಮಗೆ 7 ಲಕ್ಷ ರೂಪಾಯಿ ಸಿಗುತ್ತೆ!
Post Office: ಇದು ಭಾರತ ಸರ್ಕಾರದ ಒಂದು ಭರವಸೆಯ ಉಳಿತಾಯ ಯೋಜನೆ. ನೀವು ಇಲ್ಲಿ ಪ್ರತಿ ತಿಂಗಳು ಒಂದು ನಿಗದಿತ ಮೊತ್ತವನ್ನು ಹಾಕ್ತೀರಿ.
ನಮ್ಮಲ್ಲಿ ಹಲವರಿಗೆ ದೊಡ್ಡ ದೊಡ್ಡ ಆಸೆಗಳಿರುತ್ತವೆ – ಮಕ್ಕಳ ಶಿಕ್ಷಣ, ಸ್ವಂತ ಮನೆ, ಅಥವಾ ನಿವೃತ್ತಿಯ ನಂತರ ಆರಾಮದಾಯಕ ಜೀವನ. ಆದರೆ ಈ ಕನಸುಗಳನ್ನು ನನಸು ಮಾಡಲು ದೊಡ್ಡ ಮಟ್ಟದ ಉಳಿತಾಯ ಮಾಡುವುದು ಹೇಗೆ ಎಂದು ಚಿಂತೆ ಇರುತ್ತೆ. ಇದಕ್ಕೆಲ್ಲಾ ಒಂದೇ ಸರಳ ಮತ್ತು ಸುರಕ್ಷಿತ ಮಾರ್ಗ ಇದೆ – ಅದೇ ಪೋಸ್ಟ್ ಆಫೀಸ್‌ನ ರಿಕರಿಂಗ್ ಡೆಪಾಸಿಟ್ (RD) ಯೋಜನೆ!
ಏನಿದು ಪೋಸ್ಟ್ ಆಫೀಸ್(Post Office) RD?
ಇದು ಭಾರತ ಸರ್ಕಾರದ ಒಂದು ಭರವಸೆಯ ಉಳಿತಾಯ ಯೋಜನೆ. ಇಲ್ಲಿ ನೀವು ಪ್ರತಿ ತಿಂಗಳು ಒಂದು ನಿಗದಿತ ಮೊತ್ತವನ್ನು ಹಾಕ್ತೀರಿ. ಈ ಹಣಕ್ಕೆ ಸರ್ಕಾರ ನಿಗದಿಪಡಿಸಿದ ಬಡ್ಡಿ ಸೇರಿಕೊಂಡು, ಕಾಲಕ್ರಮೇಣ ನಿಮ್ಮ ಠೇವಣಿ ಹಣ ಒಂದು ದೊಡ್ಡ ಮೊತ್ತವಾಗಿ ಬೆಳೆಯುತ್ತದೆ. ಅಂದ್ರೆ, ನೀವು ಕಟ್ಟಿರುವುದು ಕಡಿಮೆ ಇರಬಹುದು, ಆದರೆ ಸಿಗುವ ಮೊತ್ತ ದೊಡ್ಡದಿರುತ್ತದೆ!
ಕೇವಲ ₹100 ರಿಂದ ಶುರು ಮಾಡಿ! “ನನ್ನ ಹತ್ತಿರ ಅಷ್ಟು ಹಣವಿಲ್ಲ” ಅಂತ ಚಿಂತಿಸಬೇಕಿಲ್ಲ. ಪೋಸ್ಟ್ ಆಫೀಸ್ ಆರ್‌ಡಿ (RD) ಖಾತೆಯನ್ನು ನೀವು ಕೇವಲ ತಿಂಗಳಿಗೆ ₹100 ರಿಂದಲೂ ತೆರೆಯಬಹುದು. ಅಚ್ಚರಿಯಾಗಬಹುದು, ಆದರೆ ಇದು ನಿಜ! ನಿಮ್ಮ ಉಳಿತಾಯದ ಪಯಣವನ್ನು ಶುರು ಮಾಡಲು ಇದು ಒಂದು ಉತ್ತಮ ಅವಕಾಶವಾಗಿದೆ. ನೀವೇನು ಠೇವಣಿ ಇಡ್ತೀರ ಅದೆಲ್ಲಾ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತೆ, ಅಷ್ಟೇ ಅಲ್ಲ, ನೀವು ಅದಕ್ಕೆ ಉತ್ತಮ ಬಡ್ಡಿಯನ್ನೂ ಪಡೀತೀರಿ.
Post Office ನ ಈ ಯೋಜನೆಯಿಂದ ಎಷ್ಟು ಬಡ್ಡಿ ಸಿಗುತ್ತೆ?
ಲಾಭದ ಲೆಕ್ಕಾಚಾರ ಇಲ್ಲಿದೆ! ಸದ್ಯಕ್ಕೆ, ಈ ಯೋಜನೆಗೆ ವಾರ್ಷಿಕ 6.7% ಬಡ್ಡಿ ಸಿಗುತ್ತದೆ. ವಿಶೇಷ ಅಂದ್ರೆ, ಈ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಲೆಕ್ಕ ಹಾಕಿ ನಿಮ್ಮ ಖಾತೆಗೆ ಸೇರಿಸಲಾಗುತ್ತದೆ. ಇದರಿಂದ ನಿಮ್ಮ ಬಡ್ಡಿಯೂ ಕೂಡ ಬಡ್ಡಿ ಗಳಿಸುತ್ತಾ ಹೋಗುತ್ತದೆ (ಕಾಂಪೌಂಡಿಂಗ್ ಎಫೆಕ್ಟ್)!
ಉದಾಹರಣೆಗೆ :- ನೀವು ಪ್ರತಿ ತಿಂಗಳು ₹10,000 ಠೇವಣಿ ಇಡ್ತೀರಿ ಅಂದುಕೊಳ್ಳಿ. ಅದು 5 ವರ್ಷಗಳ ನಂತರ, ನಿಮ್ಮ ಕೈಗೆ ಬರೋ ಒಟ್ಟು ಮೊತ್ತ ₹7,13,659! ಇದರಲ್ಲಿ ನೀವು ಠೇವಣಿ ಇಟ್ಟಿದ್ದು ₹6,00,000 ಮಾತ್ರ, ಆದರೆ ನಿಮಗೆ ಸಿಕ್ಕಿರುವ ಬಡ್ಡಿಯೇ ₹1,13,659! ಸಣ್ಣ ಮೊತ್ತದಿಂದಲೂ ದೊಡ್ಡ ನಿಧಿ ಕಟ್ಟಬಹುದು ಅನ್ನೋದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ?
Post Office ಈ ಯೋಜನೆಯಿಂದ ಅಗತ್ಯವಿದ್ದರೆ ಹಣ ತೆಗೆಯಬಹುದಾ?
ಹೌದು ಖಂಡಿತವಾಗಿಯೂ ತುರ್ತು ಪರಿಸ್ಥಿತಿಗಳಲ್ಲಿ ನಿಮಗೆ ಹಣ ಬೇಕಾಗುವುದು ಸಹಜ. ನೀವು ಒಂದು ವರ್ಷದ ಆರ್‌ಡಿ(RD) ಕಂತುಗಳನ್ನು ಪೂರ್ಣಗೊಳಿಸಿದ್ದರೆ, ನಿಮ್ಮ ಠೇವಣಿಯ 50% ವರೆಗೆ ಸಾಲ ಪಡೆಯಬಹುದು. ಈ ಸಾಲದ ಬಡ್ಡಿಯೂ ಕಡಿಮೆಯಿರುತ್ತೆ, ಹಾಗೂ ನೀವು ಇದನ್ನು RD ಮುಕ್ತಾಯವಾಗುವವರೆಗೆ ತೀರಿಸಬಹುದು. ನಿಮ್ಮ ಉಳಿತಾಯಕ್ಕೆ ಧಕ್ಕೆ ಬಾರದಂತೆ ಹಣಕಾಸಿನ ನೆರವು ಪಡೆಯಲು ಇದೊಂದು ಉತ್ತಮ ಆಯ್ಕೆ.
ಈ Post Office ಯೋಜನೆ ಯಾರಿಗೆಲ್ಲಾ ಸೂಕ್ತ?
ಈ Post Office ಯೋಜನೆಯೂ ಎಲ್ಲಾ ವರ್ಗದ ಜನರಿಗೂ ಸೂಕ್ತವಾಗಿದೆ – ಉದ್ಯೋಗದಲ್ಲಿರುವವರು, ಸ್ವಂತ ಉದ್ಯಮ ನಡೆಸುವವರು, ಮಹಿಳೆಯರು, ವಿದ್ಯಾರ್ಥಿಗಳು, ಹಾಗೂ ಗೃಹಿಣಿಯರು – ಎಲ್ಲರೂ ಸುಲಭವಾಗಿ ಈ ಯೋಜನೆಯಲ್ಲಿ ಭಾಗಿಯಾಗಬಹುದು. ಚಿಕ್ಕ ವಯಸ್ಸಿನಿಂದಲೇ ಉಳಿತಾಯದ ಅಭ್ಯಾಸ ಬೆಳೆಸಿಕೊಳ್ಳಲು ಇದು ಒಂದು ಉತ್ತಮ ಮಾರ್ಗ.
- Read more…
ಇನ್ನೂ ಮುಂದೆ ಬಾಪೂಜಿ ಸೇವಾ ಕೇಂದ್ರ(Bapuji Service Kendra) ಗಳಲ್ಲಿ ಇನ್ನೂ 208 ಸೇವೆ ಈ ಬಗ್ಗೆ ಮಾಹಿತಿ ಇಲ್ಲಿದೆ.
Post Office ಈ ಯೋಜನೆ ಖಾತೆ ತೆರೆಯುವುದು ಹೇಗೆ?
Post Office ಈ ಯೋಜನೆ ಖಾತೆ ತೆರೆಯುವ ಸುಲಭ ವಿಧಾನ ಇಲ್ಲಿದೆ! ಪೋಸ್ಟ್ ಆಫೀಸ್ RD ಖಾತೆ ತೆರೆಯುವುದು ತುಂಬಾ ಸುಲಭವಾಗಿದೆ. ನಿಮಗೆ ಬೇಕಾಗಿರುವ ಪ್ರಮುಖ ದಾಖಲೆಗಳು ಆಧಾರ್ ಕಾರ್ಡ್,ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಸೈಜ್ ಫೋಟೋ, ಈಗಂತೂ, ಪೋಸ್ಟ್ ಆಫೀಸ್ ಆರ್‌ಡಿ ಖಾತೆಯನ್ನು ಆನ್‌ಲೈನ್‌ನಲ್ಲಿಯೂ ತೆರೆಯಲು ಅವಕಾಶವಿದೆ. ಖಾತೆ ತೆರೆದ ಮೇಲೆ, ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಠೇವಣಿ ಇಡುವುದು ಮಾತ್ರ ಮುಖ್ಯ, ಆಗ ಮಾತ್ರ ನೀವು ಬಡ್ಡಿಯ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯ.