ಕೋಳಿ ಸಾಕಾಣಿಕೆ ಉಚಿತ ತರಬೇತಿ ಪ್ರಾರಂಭ ಜುಲೈ 02 ಕೊನೆಯ ದಿನಾಂಕ ಇಂದೇ ಅರ್ಜಿ ಸಲ್ಲಿಸಿ.

poultry farming : ಕೋಳಿ ಸಾಕಾಣಿಕೆ ಉಚಿತ ತರಬೇತಿ ಪ್ರಾರಂಭ ಜುಲೈ 02 ಕೊನೆಯ ದಿನಾಂಕ ಇಂದೇ ಅರ್ಜಿ ಸಲ್ಲಿಸಿ .

 

poultry farming:- ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ತುಂಬಾ ಜನರಿಗೆ ಸ್ವಂತ ಉದ್ಯೋಗ ಮಾಡಬೇಕು ಎಂಬ ಆಸೆ ಇರುತ್ತದೆ ಅಂತವರಿಗೆ ಸಿಹಿ ಸುದ್ದಿ ಎಂದು ಹೇಳಬಹುದು ಏಕೆಂದರೆ ಕೋಳಿ ಸಾಕಾಣಿಕೆ ತರಬೇತಿ ಪ್ರಾರಂಭ ಮಾಡಲಾಗಿದ್ದು ಈ ತರಬೇತಿಗೆ ಅರ್ಜಿ ಸಲ್ಲಿಸುವುದರ ಮೂಲಕ ನೀವು ಕೋಳಿ ಸಾಕಾಣಿಕೆ ಯಾವ ರೀತಿ ಮಾಡಬೇಕು ಹಾಗೂ ಇದರಿಂದ ಯಾವ ರೀತಿ ಆದಾಯ ಹೊಂದಬೇಕು ಎಂಬ ಮಾಹಿತಿಯನ್ನು ನೀಡಲಾಗುತ್ತದೆ ಹಾಗಾಗಿ ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು  ತಿಳಿದುಕೊಳ್ಳೋಣ.

ಕೋಳಿ ಸಾಕಾಣಿಕೆ ತರಬೇತಿ (poultry farming)..?

 

ಹೌದು ಸ್ನೇಹಿತರೆ ಪ್ರಸ್ತುತ ದಿನದಲ್ಲಿ ನಮ್ಮ ಭಾರತ ಹಾಗೂ ಕರ್ನಾಟಕದಲ್ಲಿ ಸೇರಿದಂತೆ ತುಂಬಾ ನಿರುದ್ಯೋಗಿ ಸಮಸ್ಯೆ ಕಾಡುತ್ತಿದೆ ಹಾಗೂ ತುಂಬಾ ನಿರುದ್ಯೋಗಿ ಯುವಕ ಯುವತಿಯರು ತಮ್ಮದೇ ಆದ ಸ್ವಂತ ಉದ್ಯೋಗ ಪ್ರಾರಂಭ ಮಾಡಬೇಕು ಎಂಬ ಬಯಕೆ ಇರುತ್ತದೆ ಅಂತವರಿಗೆ ಸಿಹಿ ಸುದ್ದಿ ಎಂದು ಹೇಳಬಹುದು ಏಕೆಂದರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಹಾಗೂ ಕೆನರಾ ಬ್ಯಾಂಕ್ ಸಯೋಗದೊಂದಿಗೆ ನಿರುದ್ಯೋಗಿ ಯುವಕ ಮತ್ತು ಯುವತಿರಿಗೆ ತಮ್ಮ ಸ್ವಂತ ಉದ್ಯೋಗವನ್ನು ಯಾವ ರೀತಿ ಪ್ರಾರಂಭ ಮಾಡಬೇಕು ಹಾಗೂ ಕೋಳಿ ಸಾಕಾಣಿಕೆಯ ಬಗ್ಗೆ ತರಬೇತಿಯನ್ನು ನೀಡಲು ಈ ಎರಡು ಸಂಸ್ಥೆಗಳಿಂದ ಹಮ್ಮಿಕೊಳ್ಳಲಾಗಿದೆ ಹಾಗಾಗಿ ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಬಹುದು.
ಸ್ನೇಹಿತರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಹಾಗೂ ಕೆನರಾ ಬ್ಯಾಂಕ್ ಸಹಯೋಗದೊಂದಿಗೆ 10 ದಿನಗಳ ಕಾಲ ಯುವಕ ಮತ್ತು ಯುವತಿಯರಿಗೆ ಉಚಿತ ಕೋಳಿ ಸಾಕಾಣಿಕೆ ತರಬೇತಿ ನೀಡಲಾಗುತ್ತಿದ್ದು ಆಸಕ್ತಿ ಉಳ್ಳವರು ಈ ತರಬೇತಿಗೆ ಅರ್ಜಿ ಹಾಕಬಹುದು ಜೊತೆಗೆ ಈ ತರಬೇತಿಯಲ್ಲಿ ನಿಮಗೆ ಯಾವ ರೀತಿ ಕೋಳಿ ಸಾಕಾಣಿಕೆ ಮಾಡಬೇಕು ಮತ್ತು ಇದರಿಂದ ಪ್ರತಿ ತಿಂಗಳು ಯಾವ ರೀತಿ ಆದಾಯ ಪಡೆದುಕೊಳ್ಳಬೇಕು ಎಂಬ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ.
ಕೋಳಿ ಸಾಕಾಣಿಕೆಯ ತರಬೇತಿ (poultry farming) ಎಲ್ಲಿ ನಡೆಯುತ್ತದೆ..?

    ಸ್ನೇಹಿತರೆ ಈ ಕೋಳಿ ಸಾಕಾಣಿಕೆ ತರಬೇತಿಯನ್ನು ನೆಲಮಂಗಲ ತಾಲೂಕಿನ ಹರಿಶಿಣ ಕುಂಟೆಯ ಹತ್ತಿರದ ಸ್ಥಳಗಳಲ್ಲಿ ಕೋಳಿ ಸಾಕಾಣಿಕೆ ತರಬೇತಿ ನಡೆಯಲಾಗುತ್ತಿದ್ದು ಯಾರು ಸ್ವಂತ ಉದ್ಯೋಗ ಪ್ರಾರಂಭ ಮಾಡಬೇಕು ಎಂಬ ಆಸೆ ಇರುತ್ತದೆ ಅಂತವರು ಈ ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ ಸಲ್ಲಿಸಬಹುದು ಈ ತರಬೇತಿಗೆ ಅರ್ಜಿ ಸಲ್ಲಿಸಲು ಜುಲೈ 2 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.

   ಸ್ನೇಹಿತರೆ 02/07/2024 ಕೊನೆಯ ದಿನಾಂಕವಾಗಿದ್ದು ಈ ದಿನಾಂಕದೊಳಗಡೆ ಸ್ವಂತ ಉದ್ಯೋಗ ಮಾಡಲು ಆಸೆ ಇರುವವರು ಕೋಳಿ ಸಾಕಾಣಿಕೆ ತರಬೇತಿ ಅರ್ಜಿ ಸಲ್ಲಿಸಬಹುದು. ಈ ತರಬೇತಿ ಪಡೆಯಲು ಬೆಂಗಳೂರು ನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸುತ್ತಮುತ್ತಲಿನ ಗ್ರಾಮೀಣ ಯುವಕರು ಮತ್ತು ಯುವತಿಯರು ಈ ತರಗತಿಗೆ ಅರ್ಜಿ ಸಲ್ಲಿಸಬಹುದು .

ಕೋಳಿ ಸಾಕಾಣಿಕೆ ತರಬೇತಿ (poultry farming) ಅರ್ಜಿ ಸಲ್ಲಿಸಿದರೆ ಏನು ಲಾಭ…?

ಈ ಕೋಳಿ ಸಾಕಾಣಿಕೆ ಅರ್ಜಿ ಸಲ್ಲಿಸುವುದರಿಂದ ನೀವು ಕೋಳಿ ಸಾಕಾಣಿಕೆಯ ಮೂಲಕ ಯಾವ ರೀತಿ ಸ್ವಂತ ಉದ್ಯೋಗ ಪ್ರಾರಂಭ ಮಾಡಬೇಕು ಎಂಬ ಮಾಹಿತಿ ಮತ್ತು ತರಬೇತಿ ಸಿಗುತ್ತದೆ .

ಈ ತರಬೇತಿ 10 ದಿನಗಳ ಕಾಲ ನಡೆಯಲಿದ್ದು ಈ ತರಬೇತಿಗೆ ಹಾಜರಿದ್ದಂತ ಯುವಕ ಯುವತಿಯರಿಗೆ ಉಚಿತವಾಗಿ ಊಟ ಮತ್ತು ವಸತಿ ವ್ಯವಸ್ಥೆ ಇರಲಾಗುತ್ತದೆ

ಈ ತರಬೇತಿ ಹಾಜರಾದಂತ ವ್ಯಕ್ತಿಗಳಿಗೆ ಕೋಳಿ ಸಾಕಾಣಿಕೆಯ ಟ್ರೈನಿಂಗ್ ಸರ್ಟಿಫಿಕೇಟ್ ಅನ್ನು ನೀಡಲಾಗುತ್ತದೆ.

ಈ ಟ್ರೈನಿಂಗ್ ಸರ್ಟಿಫಿಕೇಟ್ ನಿಂದ ಇತರ ಬ್ಯಾಂಕ್ ಗಳಿಂದ ಸ್ವಂತ ಉದ್ಯೋಗ ಪ್ರಾರಂಭಕ್ಕಾಗಿ ಲೋನ್ ಸಹಾಯ ಪಡೆಯಬಹುದು.

ಈ ಮೇಲೆ ನೀಡಿದಂತಹ ಎಲ್ಲಾ ಲಾಭವನ್ನು ಕೋಳಿ ಸಾಕಾಣಿಕೆ ತರಬೇತಿ ಅರ್ಜಿ ಹಾಕಿದಂತ ಯುವಕ ಯುವತಿಯರು ಪಡೆದುಕೊಳ್ಳಬಹುದು ಮತ್ತು ಇತರಬೇತಿಗೆ ಅರ್ಜಿ ಸಲ್ಲಿಸಲು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ.

ಕೋಳಿ ಸಾಕಾಣಿಕೆ (poultry farming) ತರಬೇತಿ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು…?

ಈ ಕೋಳಿ ಸಾಕಾಣಿಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ವಯಸ್ಸು 18 ರಿಂದ 45 ವರ್ಷ ಒಳಗಡೆ ಇರಬೇಕು.

ಈ ಕೋಳಿ ಸಾಕಾಣಿಕೆಗೆ ಅರ್ಜಿ ಹಾಕಲು ಅಭ್ಯರ್ಥಿಯು ಕನ್ನಡ ಓದಲು ಮತ್ತು ಬರೆಯಲು ಹಾಗೂ ಮಾತನಾಡಲು ಬರಬೇಕು.

ಈ ತರಬೇತಿಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಯು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿರಬೇಕು ಹಾಗೂ BPL ರೇಷನ್ ಕಾರ್ಡ್ ಹೊಂದಿರಬೇಕು.

ಕೋಳಿ ಸಾಕಾಣಿಕೆ ತರಬೇತಿಗೆ (poultry farming) ಅರ್ಜಿ ಸಲ್ಲಿಸುವುದು ಹೇಗೆ ….?

   ಸ್ನೇಹಿತರೆ, ನೀವು ಈ ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ ಸಲ್ಲಿಸಬೇಕು ಅಂದರೆ ರೂಡ್ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲೂಕು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಭೇಟಿ ನೀಡಿ ನೀವು ಈ ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ ಸಲ್ಲಿಸಬಹುದು ಈ ಕೋಳಿ ಸಾಕಾಣಿಕೆ ತರಬೇತಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಗಡೆ ನೀಡಿದಂತಹ ಮೊಬೈಲ್ ಸಂಖ್ಯೆಗೆ ಸಂಪರ್ಕ ಮಾಡಿ.

ಮೊಬೈಲ್ ನಂಬರ್:- 9380162042

ಮೊಬೈಲ್ ನಂಬರ್ :- 9740982585

WhatsApp Group Join Now
Telegram Group Join Now