psshankar-pratistan Scholarship: ಡಾ.ಪಿ.ಎಸ್. ಶಂಕರ ಪ್ರತಿಷ್ಠಾನ(psshankar-pratistan Scholarship)2025-30ರ ಅವಧಿಯ ವೈದ್ಯ ವಿದ್ಯಾರ್ಥಿ ವೇತನಕ್ಕೆ ಆಹ್ವಾನ.

psshankar-pratistan Scholarship: ಡಾ.ಪಿ.ಎಸ್. ಶಂಕರ ಪ್ರತಿಷ್ಠಾನ(psshankar-pratistan Scholarship)2025-30ರ ಅವಧಿಯ ವೈದ್ಯ ವಿದ್ಯಾರ್ಥಿ ವೇತನಕ್ಕೆ ಆಹ್ವಾನ.

psshankar-pratistan Scholarship

psshankar-pratistan Scholarship:ಡಾ.ಪಿ.ಎಸ್. ಶಂಕರ ಪ್ರತಿಷ್ಠಾನ(psshankar-pratistan Scholarship) 2025-30ರ ಅವಧಿಯ ವೈದ್ಯ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ.ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ ಸ್ನೇಹಿತರೆ.

ಆಗಸ್ಟ್ ಹಾಗೂ ಹಾಗೂ ಸೆಪ್ಟೆಂಬರ್-2025ರಲ್ಲಿ ಎಂಬಿಬಿಎಸ್ ಪ್ರಥಮ ವರ್ಷ ತರಗತಿಯಲ್ಲಿ ಪ್ರವೇಶ ಪಡೆದ ಕರ್ನಾಟಕದ ಯಾವುದೇ ಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಅರ್ಹ ಪ್ರತಿಭಾವಂತ ಯಾವುದೇ ಸಮುದಾಯಕ್ಕೆ ಸೇರಿದ ಬಡ ವಿದ್ಯಾರ್ಥಿ ಗಳು ಅರ್ಜಿ ಸಲ್ಲಿಸಬಹುದು. ಡಾ.ಪಿ.ಎಸ್ ಶಂಕರ ಪ್ರತಿಷ್ಠಾನದ ವೆಬ್‌ಸೈಟ್: www.psshankar-pratistan.in ನಿಂದ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಭರ್ತಿಮಾಡಿ. ಬಡತನದ ಹಿನ್ನೆಲೆಯನ್ನು ಸ್ವ-ಬರವಣಿಗೆಯಲ್ಲಿ ಒಂದು ಪುಟದಲ್ಲಿ ಬರೆದು, ಅ.10ರೊಳಗೆ ಅರ್ಜಿಯನ್ನು ಪೋಸ್ಟ್ ಮುಖಾಂತರ ಸಲ್ಲಿಸಲು ಸೂಚಿಸ ಲಾಗಿದೆ. ಗ್ರಾಮೀಣ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಎಂಬಿಬಿಎಸ್(MBBS) ಶಿಕ್ಷಣದ ನಾಲ್ಕೂವರೆ ವರ್ಷಗಳವರೆಗೆ ನಿರಂತರವಾಗಿ 54 ತಿಂಗಳಗಳವರೆಗೆ ಪ್ರತಿ ತಿಂಗಳು ರೂ. 1500ರಂತೆ ಒಟ್ಟು ರೂ. 81,000 ರೂ.ಗಳನ್ನು ಆಯ್ಕೆಯಾದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಪಿಯುಸಿ ಹಾಗೂ ನೀಟ್ ಪರೀಕ್ಷೆಗಳ ಅಂಕಪಟ್ಟಿಗಳ ಜಿರಾಕ್ಸ್ ಪ್ರತಿಗಳನ್ನು ಲಗತ್ತಿಸಿದ ಅರ್ಜಿಗಳನ್ನು ಆಯಾ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರ ಮುಖಾಂತರ ಅಥವಾ ನೇರವಾಗಿ ನರೇಂದ್ರ ಬಡಶೇಷಿ, ಕಾರ್ಯದರ್ಶಿ, ಡಾ.ಪಿ.ಎಸ್.ಶಂಕರ ಪ್ರತಿಷ್ಠಾನ, ಮನೆ ಸಂ: 1-11-21-ಇ. ಖೂಬಾ ಪ್ಲಾಟ್, ಕಲಬುರಗಿ-585102 ವಿಳಾಸಕ್ಕೆ ಸಲ್ಲಿಸಬಹುದು.

WhatsApp Group Join Now
Telegram Group Join Now