RBI Rules for Gold In bank Locker:ಬ್ಯಾಂಕ್‌ ಲಾಕರ್‌ನಲ್ಲಿ ನಿಮ್ಮ ಚಿನ್ನವನ್ನ ಇಡೋದು ಸೇಫಾ…! RBIನ ನಿಯಮಗಳೇನು ಗೋತ್ತಾ?

RBI Rules for Gold In bank Locker:ಬ್ಯಾಂಕ್‌ ಲಾಕರ್‌ನಲ್ಲಿ ನಿಮ್ಮ ಚಿನ್ನವನ್ನ ಇಡೋದು ಸೇಫಾ…! RBIನ ನಿಯಮಗಳೇನು ಗೋತ್ತಾ?

RBI Rules for Gold In bank Locker

RBI Rules for Gold in Bank Locker: ನಿಸ್ಸಂದೇಹವಾಗಿ ಚಿನ್ನ ಕೂಡ ಸಹ ಆಸ್ತಿಯೇ. ಬಡವರಿಗೆ ಕಷ್ಟ ಕಾಲದಲ್ಲಿ ಕೈ ಹಿಡಿಯುವ ಏಕೈಕ ಆಪತ್ಪಾಂದವನಂತೆ ಕಾಪಾಡುವ ಚಿನ್ನವನ್ನು ಸುರಕ್ಷತೆಯ ದೃಷ್ಟಿಯಿಂದ ಬ್ಯಾಂಕಿ ಲಾಕರ್ನಲ್ಲಿ ಇಡಲಾಗುತ್ತದೆ. ಆದರೆ, ಚಿನ್ನವನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡುವುದು ನಿಜಕ್ಕೂ ಸುರಕ್ಷಿತವೇ….? ಎಂಬುದರ ಬಗ್ಗೆ ಈ ಕೆಳಗೆ ಕೊಟ್ಟಿರುವ ಮಾಹಿತಿಯಲ್ಲಿ ತಿಳಿದುಕೋಳ್ಳಿ.

ಬ್ಯಾಂಕ್ ಲಾಕರ್‌ನಲ್ಲಿ ನಿಮ್ಮ ಚಿನ್ನವನ್ನು ಇಡುವ ನಿಯಮಗಳು: 3 ದಿನಗಳ ಹಿಂದೆ ಬೇಡಿಕೆ ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ದಾಖಲೆಯ ಮಟ್ಟ ಮುಟ್ಟುತ್ತಿದ್ದರೂ ಸಹ ಚಿನ್ನ ಕೊಳ್ಳುವವರ ಜನಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಜೊತೆ ಚಿನ್ನವನ್ನು ಸುರಕ್ಷಿತವಾಗಿರಿಸುವ ಬಗ್ಗೆಯೂ ಸಹ ಜನ  ಚಿಂತಿತರಾಗಿರುತ್ತಾರೆ. ಮನೆಯಲ್ಲಿದ್ದರೆ ಚಿನ್ನ ಕಳ್ಳತನವಾಗಬಹುದು ಎಂಬ ಭಯದಿಂದಾಗಿ ಬಹುತೇಕ ಮಂದಿ ತಮ್ಮ ಚಿನ್ನ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್‌ಗಳಲ್ಲಿ ಇಡುತ್ತಾರೆ. ಆದರೆ, ಬ್ಯಾಂಕ್ ಲಾಕರ್‌ಗಳಲ್ಲಿ ಚಿನ್ನ ಇಡುವುದು ಸೇಫಾ…. ಈ ಬಗ್ಗೆ ಆರ್‌ಬಿಐ(RBI) ಮಾರ್ಗಸೂಚಿಗಳು ಏನು ಹೇಳುತ್ತೇದೆ ಗೊತ್ತಾ…

ಚಿನ್ನವನ್ನು ಸುರಕ್ಷಿತವಾಗಿಡಲು ಜನ ಬ್ಯಾಂಕ್‌ ಲಾಕರ್‌ಗಳ ಮೊರೆ ಹೋಗುತ್ತಾರೆ. ಮತ್ತು ಬ್ಯಾಂಕ್ ಲಾಕರ್‌ನಲ್ಲಿದ್ದರೆ ಚಿನ್ನ ಸೇಫ್ ಎಂದು ಭಾವಿಸುತ್ತಾರೆ. ಆದರೆ, ಚಿನ್ನವನ್ನು ಲಾಕರ್‌ನಲ್ಲಿ ಇಡುವ ಮೊದಲು ಇದಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ತಿಳಿಯುವುದು ಅತ್ಯಂತ ಅವಶ್ಯಕವಾಗಿದೆ.

ಗಮನಾರ್ಹವಾಗಿ, ಈ ಹಿಂದೆ ಬ್ಯಾಂಕ್ ಲಾಕರ್‌ಗಳಲ್ಲಿ ಇರಿಸಿದ್ದ ವಸ್ತುಗಳು ಹಾಗೂ ಇತರ ವಸ್ತುಗಲಿಗೆ ಹಾನಿ ಸಂಭವಿಸಿದಲ್ಲಿ ಬ್ಯಾಂಕುಗಳು ಹೊಣೆಗಾರಿಕೆ ಹೊಂದಿರುವುದಿಲ್ಲ ಎಂಬ ನಿಯಮವಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ- ಆರ್‌ಬಿಐ(RBI) ಈ ನಿಯಮವನ್ನು ಬದಲಾವಣೆ ಮಾಡಲಾಗಿದೆ.

ಬ್ಯಾಂಕ್‌ ಲಾಕರ್‌ಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕುಗಳು ಅಗತ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಗ್ರಾಹಕರ ಲಾಕರ್‌ಗಳಲ್ಲಿ ಇಟ್ಟಿರುವ ವಸ್ತುಗಳಿಗೆ ನಿರ್ಲಕ್ಷ್ಯದಿಂದ ಉಂಟಾಗುವ ಯಾವುದೇ ನಷ್ಟಕ್ಕೆ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು RBI ಮಾರ್ಗಸೂಚಿಯನ್ನು ಹೊರಡಿಸಿದೆ.

ಆರ್‌ಬಿಐ(RBI) ನಿಯಮಗಳ ಪ್ರಕಾರ, ಬ್ಯಾಂಕ್ ಸಿಬ್ಬಂದಿಗಳ ನಿರ್ಲಕ್ಷದಿಂದ ಗ್ರಾಹಕರಿಗೆ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿರುವ ಬೆಲೆಬಾಳುವ ವಸ್ತುಗಳು ನಷ್ಟವಾದರೆ ಬ್ಯಾಂಕ್ ಲಾಕರ್‌ನ ವಾರ್ಷಿಕ ಬಾಡಿಗೆಯ 100 ಪಟ್ಟು ಪರಿಹಾರವನ್ನು ಗ್ರಾಹಕರಿಗೆ ಪಾವತಿಸಬೇಕು ಎಂದು ಆರ್‌ಬಿಐ(RBI) ತಿಳಿಸಿದೆ.

ಇಂತಹ ಸಂದರ್ಭಗಳಲ್ಲಿ ಸಿಗಲ್ಲ ಯಾವುದೇ ಪರಿಹಾರ: ಆದಾಗ್ಯೂ, ಭೂಕಂಪ, ಪ್ರವಾಹದಂತಹ ನೈಸರ್ಗಿಕ ವಿಕೋಪಗಳಿಂದಾಗಿ ಗ್ರಾಹಕರ ತಮ್ಮಚಿನ್ನದ ನಷ್ಟಕ್ಕೆ ಬ್ಯಾಂಕ್‌ ಜವಾಬ್ದಾರರಾಗಿರುವುದಿಲ್ಲ ಎಂದು ಆರ್‌ಬಿಐ(RBI) ಸ್ಪಷ್ಟವಾಗಿ ತಿಳಿಸಿದೆ.

WhatsApp Group Join Now
Telegram Group Join Now