RDPR Recruitment:ಪಂಚಾಯತ್​ ರಾಜ್​ನಲ್ಲಿ ಪದವಿ ಮಾಡಿದ್ದೀರಾ? ತಿಂಗಳಿಗೆ 60 ಸಾವಿರ ರೂಪಾಯಿ ವೇತನ! – 2024.

RDPR Recruitment:ಪಂಚಾಯತ್​ ರಾಜ್​ನಲ್ಲಿ ಪದವಿ ಮಾಡಿದ್ದೀರಾ? ತಿಂಗಳಿಗೆ 60 ಸಾವಿರ ರೂಪಾಯಿ ವೇತನ! – 2024.

 

RDPR Recruitment:

ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ  ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.

RDPR Recruitment: ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಬರೆಯಲು, ಓದಲು ಮತ್ತು ಮಾತನಾಡಲು ಬರಬೇಕು. ಕಲ್ಯಾಣ ಕರ್ನಾಟಕ ವಿಭಾಗದ ತಾಲೂಕಿನಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಇವಿಷ್ಟು ಈ ಹುದ್ದೆಗೆ ಬೇಕಿರುವ ಪ್ರಮುಖ ಅರ್ಹತೆಗಳು.

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆಯಲ್ಲಿನ ಫೆಲೋಶಿಪ್​ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ನೇಮಕಾತಿ ನಡೆಯಲಿದೆ. ಎರಡು ವರ್ಷದ ಅವಧಿಗೆ ನೇಮಕಾತಿ ನಡೆಯಲಿದೆ.

   ಹುದ್ದೆಗಳ ವಿವರ:

 ರಾಜೀವ್​ ಗಾಂಧಿ ಪಂಚಾಯತ್​ ರಾಜ್​ ಫೆಲೋಶಿಪ್​ನ 7 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳಲ್ಲಿ ಹುದ್ದೆಗಳು ಖಾಲಿ ಇರುವ ತಾಲೂಕಿಗೆ ನೇಮಕಾತಿ ನಡೆಸಲಾಗುವುದು.

   ವಿದ್ಯಾರ್ಹತೆ:


ಸಮಾಜಶಾಸ್ತ್ರ ಅಥವಾ ಅರ್ಥಶಾಸ್ತ್ರ ಅಥವಾ ಗ್ರಾಮೀಣಾಭಿವೃದ್ಧಿ, ಸಾಮಾಜಿಕ ಕಾರ್ಯ ಅಥವಾ ಸಾರ್ವಜನಿಕ ನೀತಿ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ.
ಅಭ್ಯರ್ಥಿಗೆ ಕನ್ನಡವನ್ನು ಸ್ಪಷ್ಟವಾಗಿ ಬರೆಯಲು, ಓದಲು ಮತ್ತು ಮಾತನಾಡಲು ಬರಬೇಕು. ಕಲ್ಯಾಣ ಕರ್ನಾಟಕ ವಿಭಾಗದ ತಾಲೂಕಿನಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

    ವಯೋಮಿತಿ:

ಗರಿಷ್ಠ 32 ವರ್ಷ.

    ವೇತನ:

ಮಾಸಿಕ 60,000 ಶಿಷ್ಯವೇತನ. ಮಾಸಿಕ 1,500 ಪ್ರವಾಸ ಭತ್ಯೆ.

  ಅರ್ಜಿ ಸಲ್ಲಿಕೆ: 

ಅಭ್ಯರ್ಥಿಗಳು ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ನ ಅಧಿಕೃತ ಜಾಲತಾಣದಲ್ಲಿ ನಿಗದಿತ ಅರ್ಜಿಯಲ್ಲಿ ನೋಂದಣಿ ಮಾಡಿ ಮುಂದುವರೆಯಬೇಕು.

ಈ ಹುದ್ದೆಗೆ ಸೆಪ್ಟೆಂಬರ್​ 2ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸೆಪ್ಟೆಂಬರ್​ 9 ಕಡೇಯ ದಿನ.
ಈ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ prcrdpr.karnataka.gov.in ಇಲ್ಲಿಗೆ ಭೇಟಿ ನೀಡಿ.

ಇನ್ನೂ ಹೆಚ್ಚಿನ ಮಾಹಿತಿಗೆ ಕರ್ನಾಟಕ ಪಂಚಾಯತ್​ ರಾಜ್​​ ಆಯುಕ್ತಾಲಯದ ಸಹಾಯಕ ನಿರ್ದೇಶಕ ಜಗದೀಶ್​ ಕೆ.ಎಸ್.​ ಅವರ ಮೊಬೈಲ್​ ಸಂಖ್ಯೆ 9740790530 ಇಲ್ಲಿಗೆ ಸಂಪರ್ಕಿಸಿ.

  ಧನ್ಯವಾದಗಳು……

WhatsApp Group Join Now
Telegram Group Join Now