Scholorship:ಕೇಂದ್ರೀಯ ವಿದ್ಯಾರ್ಥಿವೇತನ(Scholorship) ಯೋಜನೆಗೆ ಅರ್ಜಿ ಆಹ್ವಾನ.
Scholorship:ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಕೇಂದ್ರ ವಲಯದ ವಿದ್ಯಾರ್ಥಿವೇತನ ಯೋಜನೆ (CSSS) 2025ರ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.ವಿದ್ಯಾರ್ಥಿವೇತನ(Scholorship) ಉಪಕ್ರಮಕ್ಕಾಗಿ ಹೊಸ ಹಾಗೂ ನವೀಕರಣ ಅರ್ಜಿಗಳನ್ನು ಅಕ್ಟೋಬರ್ 31ರ ವರೆಗೆ ಸ್ವೀಕರಿಸಲಾಗುತ್ತದೆ. 2025-26ನೇ ಸಾಲಿಗೆ ‘ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೇಂದ್ರ ವಲಯದ ವಿದ್ಯಾರ್ಥಿವೇತನ ಯೋಜನೆ”, 2024ನೇ ಸಾಲಿಗೆ 1ನೇ ನವೀಕರಣೆ, 2023ನೇ ಸಾಲಿಗೆ 2ನೇ ನವೀಕರಣ, 2022ನೇ ಸಾಲಿಗೆ 3ನೇ ನವೀಕರಣ ಮತ್ತು 2011ನೇ ಸಾಲಿಗೆ 4ನೇ ನವೀಕರಣಕ್ಕಾಗಿ ಆನ್‌ಲೈನ್ ಅರ್ಜಿಗಳು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ನಲ್ಲಿ (http://scholarships.gov.in) ಲಭ್ಯವಿದೆ. ವಿದ್ಯಾರ್ಥಿಗಳು ಹೊಸ ಮತ್ತು ವಿದ್ಯಾರ್ಥಿವೇತನ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಲು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ಗೆ ಭೇಟಿ ನೀಡಬಹುದು.
ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಗಳನ್ನು ಗಡುವಿನೊಳಗೆ ಸಲ್ಲಿಸಲು ಸೂಚಿಸಲಾಗಿದೆ. ಕೊನೆಯ ದಿನಾಂಕದ ನಂತರ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅರ್ಜಿ ನಮೂನೆಗಳನ್ನು ಸಂಸ್ಥೆಗಳು ಪರಿಶೀಲಿಸುತ್ತವೆ. ಪರಿಶೀಲನೆಯ ಸಮಯದಲ್ಲಿ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳನ್ನು ಸಹ ತೋರಿಸಬೇಕಾಗಬಹುದು. ಇಲ್ಲದಿದ್ದರೆ, ಅವರ ಉಮೇದುವಾರಿಕೆಯನ್ನು ತಿರಸ್ಕರಿಸಲಾಗುತ್ತದೆ ಅಥವಾ ಆಮಾನ್ಯವೆಂದು ಪರಿಗಣಿಸಲಾಗುತ್ತದೆ. ವಿದ್ಯಾರ್ಥಿವೇತನಕ್ಕಾಗಿ, ವಿದ್ಯಾರ್ಥಿಗಳು ತಮ್ಮ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 80 ಪ್ರತಿಶತ ಅಂಕಿಗಳನ್ನು ಗಳಿಸಿರಬೇಕು.