Shilpagurukula 2026: ಕರ್ನಾಟಕದಲ್ಲಿ 10ನೇ ತರಗತಿ ಪಾಸಾದವರಿಗೆ ಭರ್ಜರಿ ಅವಕಾಶ 18 ತಿಂಗಳ ಶಿಲ್ಪಗುರುಕುಲ(Shilpagurukula) ಕೋರ್ಸ್‌ಗೆ ಅರ್ಜಿ ಆಹ್ವಾನ

Shilpagurukula 2026: ಕರ್ನಾಟಕದಲ್ಲಿ 10ನೇ ತರಗತಿ ಪಾಸಾದವರಿಗೆ ಭರ್ಜರಿ ಅವಕಾಶ 18 ತಿಂಗಳ ಶಿಲ್ಪಗುರುಕುಲ(Shilpagurukula) ಕೋರ್ಸ್‌ಗೆ ಅರ್ಜಿ ಆಹ್ವಾನ

Shilpagurukula 2026: ಕರ್ನಾಟಕ ರಾಜ್ಯದ ಕರಕುಶಲ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವಂತಹ ಯುವಜನರಿಗಾಗಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮವು ಮಹತ್ವವಾಹ ಅವಕಾಶವನ್ನು ನೀಡಿದೆ. “ಶಿಲ್ಪಗುರುಕುಲ” ಹೆಸರಿನ 18 ತಿಂಗಳ ಸರ್ಟಿಫಿಕೇಟ್ ಕೋರ್ಸ್‌ಗೆ 2026–27ನೇ ಶೈಕ್ಷಣಿಕ ಸಾಲಿನಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ತರಬೇತಿಯ ಮೂಲಕವೆ ಕರಕುಶಲ ಕ್ಷೇತ್ರದಲ್ಲಿ ವಿವಿಧ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಯಲು ಅವಕಾಶ ದೊರೆಯಲಿದ್ದು, ಈ ತರಬೇತಿ ಅವಧಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ತಿಂಗಳಿಗೆ ₹1,500 ಶಿಷ್ಯವೇತನ ನೀಡಲಾಗುತ್ತದೆ. ಒಟ್ಟಾರೆ 22 ಅಭ್ಯರ್ಥಿಗಳನ್ನು ಈ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ.

Shilpagurukula(ಶಿಲ್ಪಗುರುಕುಲ) ತರಬೇತಿ ಎಂದರೇನು?

ನಮ್ಮ ಕರ್ನಾಟಕ ರಾಜ್ಯದಲ್ಲಿ ಕರಕುಶಲ ಅಭಿವೃದ್ಧಿ ನಿಗಮದ ವತಿಯಿಂದ ಕರಕುಶಲ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವಂತಹ ಯುವಕರಿಗೆ ಕೌಶಲ್ಯಾಧಾರಿತ ತರಬೇತಿ ನೀಡುವ ಉದ್ದೇಶದಿಂದ ಈ ಶಿಲ್ಪಗುರುಕುಲ 18 ತಿಂಗಳ ಸರ್ಟಿಫಿಕೇಟ್ ಕೋರ್ಸ್ ನಡೆಸಲಾಗುತ್ತಿದೆ.

ವಿವಿಧ ಕರಕುಶಲ ಚಟುವಟಿಕೆಗಳಲ್ಲಿ ಪ್ರಾಯೋಗಿಕ ಜ್ಞಾನ ಹಾಗೂ ಕೌಶಲ್ಯವನ್ನು ಬೆಳೆಸಿಕೊಳ್ಳಲು ಈ ತರಬೇತಿ ಸಹಕಾರಿಯಾಗಲಿದೆ.

ಪ್ರಮುಖ ಮಾಹಿತಿ(Shilpagurukula)

  ವಿವರ – ಮಾಹಿತಿ

  • ತರಬೇತಿ ಹೆಸರು – ಶಿಲ್ಪಗುರುಕುಲ
  • ಕೋರ್ಸ್ ಅವಧಿ – 18 ತಿಂಗಳು
  • ಶೈಕ್ಷಣಿಕ ವರ್ಷ – 2026–27
  • ಆಯ್ಕೆ ಸಂಖ್ಯೆ – 22 ಅಭ್ಯರ್ಥಿಗಳು
  • ವಯೋಮಿತಿ -16 ರಿಂದ 35 ವರ್ಷ
  • ಶಿಷ್ಯವೇತನ – ತಿಂಗಳಿಗೆ ₹1,500
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 16-10-2026
  • ಸಂಸ್ಥೆ – ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ
  • ಅಧಿಕೃತ ವೆಬ್‌ಸೈಟ್ – cauverycrafts.com

ಮೇಲಿನ ಮಾಹಿತಿಯು ಪ್ರಕಟಣೆಯಲ್ಲಿ ನೀಡಿರುವ ವಿವರಗಳನ್ನು ಆಧರಿಸಿದೆ.

ವಿದ್ಯಾರ್ಹತೆ ಏನು?

ಶಿಲ್ಪಗುರುಕುಲ ತರಬೇತಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ಅದರ ಜೊತೆಗೆ ಕರಕುಶಲ ಕ್ಷೇತ್ರದ ಚಟುವಟಿಕೆಗಳಲ್ಲಿ ಅಭಿರುಚಿ ಹಾಗೂ ಆಸಕ್ತಿಯನ್ನು ಹೊಂದಿರುವುದು ಅಗತ್ಯವಾಗಿದೆ.

ವಯೋಮಿತಿ

  • ಅರ್ಜಿದಾರರ ವಯಸ್ಸು – 16 ವರ್ಷದಿಂದ 35 ವರ್ಷದೊಳಗಿರಬೇಕು.

ಅಂದರೆ, ಪ್ರಕಟಣೆಯಲ್ಲಿ ಸೂಚಿಸಿರುವ ವಯೋಮಿತಿಗೆ ಒಳಪಡುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ತರಬೇತಿಯ ಅವಧಿ ಎಷ್ಟು ದಿನಗಳು?

ಶಿಲ್ಪಗುರುಕುಲ ತರಬೇತಿಯನ್ನು ಒಟ್ಟು ಅವಧಿ 18 ತಿಂಗಳು.

2026–27ನೇ ಶೈಕ್ಷಣಿಕ ಸಾಲಿನಲ್ಲಿ ನಿಗದಿಪಡಿಸಿರುವ ಈ ತರಬೇತಿಯಲ್ಲಿ ಆಯ್ಕೆಯಾಗುವಂತಹ ಅಭ್ಯರ್ಥಿಗಳಿಗೆ ಕರಕುಶಲ ಕ್ಷೇತ್ರದ ವಿವಿಧ ಚಟುವಟಿಕೆಗಳಲ್ಲಿ ತರಬೇತಿ ನೀಡಲಾಗುತ್ತದೆ.

ಪ್ರತಿ ತಿಂಗಳಿಗೆ ₹1,500 ಶಿಷ್ಯವೇತನ

ಈ ತರಬೇತಿಯಲ್ಲಿ ಪ್ರಮುಖವಾದ ಆಕರ್ಷಣೆ ಎಂದರೆ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ತಿಂಗಳಿಗೆ ₹1,500 ಶಿಷ್ಯವೇತನ ನೀಡಲಾಗುವುದು.

ಕರಕುಶಲ ಕೌಶಲ್ಯವನ್ನು ಕಲಿಯುವುದರ ಜೊತೆ ಜೊತೆಗೆ ತರಬೇತಿ ಅವಧಿಯಲ್ಲಿ ಶಿಷ್ಯವೇತನ ಪಡೆಯುವ ಅವಕಾಶ ಅಭ್ಯರ್ಥಿಗಳಿಗೆ ದೊರೆಯಲಿದೆ.

ಈ ತರಬೇತಿಗೆ ಒಟ್ಟು ಎಷ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ?

ಈ ವರ್ಷದ ಅಂದರೆ 2026–27ನೇ ಸಾಲಿನಲ್ಲಿ 18 ತಿಂಗಳ ಸರ್ಟಿಫಿಕೇಟ್ ಕೋರ್ಸ್‌ಗೆ ಒಟ್ಟು 22 ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುತ್ತದೆ.

ಆದ್ದರಿಂದ ಆಸಕ್ತಿ ಹೊಂದಿರುವವರು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಇಂದೆ ಅರ್ಜಿ ಸಲ್ಲಿಸುವುದು ಸೂಕ್ತ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?

  • ಇಂದೆ ತಿಂಗಳ 16 ಅಕ್ಟೋಬರ್ 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

ತಮ್ಮ ಅರ್ಜಿಗಳನ್ನು ಸಹ ಪ್ರಕಟಣೆಯಲ್ಲಿ ತಿಳಿಸಿರುವ ವಿಧಾನದಲ್ಲಿ ಭರ್ತಿ ಮಾಡಿ ಸಂಬಂಧಪಟ್ಟ ಕಚೇರಿಗೆ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು.

ಈ ಅರ್ಜಿ ನಮೂನೆಗಳು ಎಲ್ಲಿ ಸಿಗುತ್ತದೆ?

ಅರ್ಜಿದಾರರು ಪ್ರಕಟಣೆಯಲ್ಲಿ ತಿಳಿಸಿರುವಂತೆ ಕರ್ನಾಟಕ ರಾಜ್ಯದ ಕರಕುಶಲ ಅಭಿವೃದ್ಧಿ ನಿಗಮದ ಅಧಿಕೃತ ವೆಬ್‌ಸೈಟ್ ಮೂಲಕವೆ ಅರ್ಜಿ ನಮೂನೆ ಮತ್ತು ಸಂಬಂಧಿತ ಮಾಹಿತಿಯನ್ನು ಪಡೆಯಬಹುದು.

ಅಧಿಕೃತ ವೆಬ್‌ಸೈಟ್ – www.cauverycrafts.com

ಈ ಅರ್ಜಿಯನ್ನು ಭರ್ತಿ ಮಾಡುವ ಮೊದಲು ನೀವು ಅಧಿಕೃತ ಪ್ರಕಟಣೆಯಲ್ಲಿರುವಂತಹ ಸೂಚನೆಗಳನ್ನು ಒಮ್ಮೆ ಸಂಪೂರ್ಣವಾಗಿ ಓದಿಕೊಳ್ಳುವುದು ಅತ್ಯ ಅಗತ್ಯ.

ಅರ್ಜಿ ಸಲ್ಲಿಸುವಾಗ ನೀವು ಪ್ರಮುಖ ಗಮನಿಸಬೇಕಾದ ಅಂಶಗಳು

ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು:

  • ಅರ್ಜಿ ಸಲ್ಲಿಸುವ ಮೊದಲು ನೀವು ವಯೋಮಿತಿಯನ್ನು ಪರಿಶೀಲಿಸಿಕೊಳ್ಳಿ.
  • ಕನಿಷ್ಠ 10ನೇ ತರಗತಿಯನ್ನು ವಿದ್ಯಾರ್ಹತೆ ಹೊಂದಿರಲೇಬೇಕು.
  • ಈ ಕರಕುಶಲ ಕ್ಷೇತ್ರದಲ್ಲಿ ತರಬೇತಿಯಲ್ಲಿ ಆಸಕ್ತಿಯನ್ನು ಹೊಂದಿರಬೇಕು.
  • ಅರ್ಜಿಯಲ್ಲಿ ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಸರಿಯಾಗಿ ನಮೂದಿಸಬೇಕು.
  • ಅಗತ್ಯವಾದ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
  • ನೀವು ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ 16-10-2026.
  • ಅಧಿಕೃತ ಪ್ರಕಟಣೆಯಲ್ಲಿ ನೀಡಿರುವಂತದ ವಿಳಾಸ/ಸಲ್ಲಿಕೆ ವಿಧಾನವನ್ನು ಮಾತ್ರವೆ ಅನುಸರಿಸಬೇಕು.
  • ಅಂತಿಮವಾಗಿ ನೀವು ಅರ್ಜಿ ಸಲ್ಲಿಸುವ ಮೊದಲು ಈ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಪರಿಗಣಿಸಬಹುದು:

  • 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು
  • ವಯಸ್ಸು 16ರಿಂದ 35 ವರ್ಷದೊಳಗಿನವರಾಬೇಕು
  • ಕರಕುಶಲ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರಬೇಕು
  • 18 ತಿಂಗಳ ಈ ತರಬೇತಿಗೆ ಹಾಜರಾಗಲು ಸಿದ್ಧರಾಗಿರಬೇಕು
  • ತರಬೇತಿ ಅವಧಿಯಲ್ಲಿ ನಿಯಮಗಳನ್ನು ತಪ್ಪದೆ ಪಾಲಿಸಬೇಕು

ಶಿಲ್ಪಗುರುಕುಲ ತರಬೇತಿಯ ವಿಶೇಷತೆಗಳು ಏನು?

18 ತಿಂಗಳ ತರಬೇತಿ + ಸರ್ಟಿಫಿಕೇಟ್ ಕೋರ್ಸ್ + ಪ್ರಾಯೋಗಿಕ ಕರಕುಶಲ ತರಬೇತಿ + ತಿಂಗಳಿಗೆ ₹1,500 ಶಿಷ್ಯವೇತನ ಎಂಬುದು ಈ ಯೋಜನೆಯ ಪ್ರಮುಖವಾದ ಅಂಶಗಳಾಗಿವೆ.

ಈ ಕರಕುಶಲ ಕ್ಷೇತ್ರದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಲು ಆಸಕ್ತಿ ಹೊಂದಿರುವಂತಹ ಯುವಜನರಿಗೆ ಈ ರೀತಿಯಲ್ಲಿ ಕೌಶಲ್ಯಾಧಾರಿತ ತರಬೇತಿಯೂ ಉಪಯುಕ್ತವಾಗಬಹುದು.

ಅರ್ಜಿ ಸಲ್ಲಿಸುವ ಮುನ್ನ ಒಂದು ಬಾರಿ ಈ ವಿಷಯಗಳನ್ನು ಪರಿಶೀಲಿಸಿ

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ:

  1. ಅಧಿಕೃತ ಅಧಿಸೂಚನೆಯನ್ನು ಓದಿ.
  2. ನಿಮ್ಮ ವಯಸ್ಸು ಅರ್ಹತೆಯೊಳಗಿದೆಯೇ ಎಂದು ಒಂದು ಸಾರಿ ಪರಿಶೀಲಿಸಿ.
  3. 10ನೇ ತರಗತಿಯಲ್ಲಿ ವಿದ್ಯಾರ್ಹತೆಯ ದಾಖಲೆ ಸಿದ್ಧವಾಗಿಟ್ಟುಕೊಳ್ಳಿ.
  4. ಅಗತ್ಯವಿರುವಂತಹ ಇತರೆ ದಾಖಲೆಗಳನ್ನು ಸಿದ್ಧಪಡಿಸಿ.
  5. ಅರ್ಜಿ ನಮೂನೆಯನ್ನು ತಪ್ಪಿಲ್ಲದೆ ಭರ್ತಿ ಮಾಡಬೇಕು.
  6. ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.
ಸಂಪರ್ಕ ಮಾಹಿತಿ

ಪ್ರಕಟಣೆಯಲ್ಲಿ ನೀಡಿರುವ ಸಂಪರ್ಕ ಸಂಖ್ಯೆಗಳು:

  • 9945458941
  • 9071529038
  • 080-71204445 / 46

ನಿಮ್ಮ ಅರ್ಜಿಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗಾಗಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧಿಕೃತ ಪ್ರಕಟಣೆ ಮತ್ತು ವೆಬ್‌ಸೈಟ್ ಪರಿಶೀಲಿಸುವುದು ಸೂಕ್ತ.

ಪ್ರಮುಖ ದಿನಾಂಕ
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 16-10-2026

ಅರ್ಹತೆಯನ್ನು ಹೊಂದಿರುವಂತಹ ಅಭ್ಯರ್ಥಿಗಳು ಕೊನೆಯ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಕೊನೆಯ ಮಾತು

ಈ ಕರಕುಶಲ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವಂತಹ 16ರಿಂದ 35 ವರ್ಷದೊಳಗಿನ 10ನೇ ತರಗತಿ ಉತ್ತೀರ್ಣ ಅಭ್ಯರ್ಥಿಗಳಿಗೆ “ಶಿಲ್ಪಗುರುಕುಲ” 18 ತಿಂಗಳ ತರಬೇತಿ ಒಂದು ಕೌಶಲ್ಯಾಭಿವೃದ್ಧಿ ಅವಕಾಶವಾಗಿದೆ. 2026–27ನೇ ಸಾಲಿಗೆ 22 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ತರಬೇತಿ ಅವಧಿಯಲ್ಲಿ ತಿಂಗಳಿಗೆ ₹1,500 ಶಿಷ್ಯವೇತನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16 ಅಕ್ಟೋಬರ್ 2026 ಆಗಿರುವುದರಿಂದ, ಅರ್ಹ ಅಭ್ಯರ್ಥಿಗಳು ಅಧಿಕೃತ ಮಾಹಿತಿಯನ್ನು ಒಮ್ಮೆ ಪರಿಶೀಲಿಸಿ ನಿಗದಿತ ವಿಧಾನದಲ್ಲಿ ಅರ್ಜಿ ಸಲ್ಲಿಸಬಹುದು.

Shilpagurukula 2026

👉 CLICK HERE TO DOWNLOAD MORE INFORMATION
WhatsApp Group Join Now
Telegram Group Join Now