ಶ್ರೀ ದುರ್ಗಾಂಬಿಕಾದೇವಿ ಜಾತ್ರೆ:ಹಾವೇರಿ ಜಿಲ್ಲಾ, ರಾಣೇಬೆನ್ನೂರು ತಾಲ್ಲೂಕಿನ, ಮಾಳನಾಯಕನಹಳ್ಳಿ ಗ್ರಾಮದ ಗ್ರಾಮದೇವತೆ ಶ್ರೀ ದುರ್ಗಾಂಬಿಕಾದೇವಿ ಜಾತ್ರೆಯ ಆಮಂತ್ರಣ ಪತ್ರಿಕೆ-2025.

ಶ್ರೀ ದುರ್ಗಾಂಬಿಕಾದೇವಿ ಜಾತ್ರೆ:ಹಾವೇರಿ ಜಿಲ್ಲಾ, ರಾಣೇಬೆನ್ನೂರು ತಾಲ್ಲೂಕಿನ, ಮಾಳನಾಯಕನಹಳ್ಳಿ ಗ್ರಾಮದ ಗ್ರಾಮದೇವತೆ ಶ್ರೀ ದುರ್ಗಾಂಬಿಕಾದೇವಿ ಜಾತ್ರೆಯ ಆಮಂತ್ರಣ ಪತ್ರಿಕೆ-2025.

ಶ್ರೀ ದುರ್ಗಾಂಬಿಕಾದೇವಿ ಜಾತ್ರೆ

ಶ್ರೀ ದುರ್ಗಾಂಬಿಕಾದೇವಿ ಜಾತ್ರೆ:ಸರ್ವ ಭಕ್ತಾದಿಗಳೇ,ಪ್ರತಿವರ್ಷದ ಪದ್ಧತಿಯಂತೆ ಈ ವರ್ಷವೂ ಸಹ ಇದೇ ಶ್ರೀಮನೃಪ ಶಾಲಿವಾಹನ ಶಕೆ 1946ನೇ ಕ್ರೋಧಿನಾಮ ಸಂವತ್ಸರದ ಪುಷ್ಯ ಮಾಸ ದಿನಾಂಕ 20-01-2025 ನೇ ಸೋಮವಾರ ದಿವಸ ರಾತ್ರಿ 8-00 ಗಂಟೆಗೆ ಘಂಟೆಯಿಂದ ಶ್ರೀ ದೇವಿಯ ಉತ್ಸವವು ಡೊಳ್ಳು, ಬಾಜಾ, ಭಜನೆ, ಹಲಗೆ, ಕಹಳೆ, ವಾದ್ಯಗಳೊಂದಿಗೆ ಮತ್ತು ಪಟಾಕಿಗಳ ಆರ್ಭಟಗಳ ಮನೋರಂಜನೆಗಳಿಂದ ಬಹು ವಿಜೃಂಭಣೆಯಿಂದ ಪ್ರಾರಂಭವಾಗಿ ಗ್ರಾಮದ ಬೀದಿಗಳಲ್ಲಿ ಸಾಗುತ್ತಾ ದಿನಾಂಕ 21-01-2025 ನೇ ಮಂಗಳವಾರ ಮುಂಜಾನೆ 6-00 ಗಂಟೆಗೆ ಶ್ರೀ ದೇವಿಯ ಮಂದಿರಕ್ಕೆ ಪ್ರವೇಶ ಮಾಡುವಳು ನಂತರ ಅದೇ ದಿವಸ ಮುಂಜಾನೆ 7-00 ಘಂಟೆಗೆ ಶ್ರೀ ದೇವಿಗೆ ಅಭಿಷೇಕಾಚರಣೆಗಳು ನಡೆಯುವವು. ಅಂದು ಮಧ್ಯಾಹ್ನ 3-00 ಘಂಟೆಗೆ ಗಂಡಾರತಿಯೊಂದಿಗೆ ಭಕ್ತರಿಂದ ಶ್ರೀ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗುವುದು ಆದ ಕಾರಣ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.ಭಕ್ತ ಜನತೆಯಲ್ಲಿ ವಿಶೇಷ ಮನವಿ.

ಭಕ್ತ ಜನತೆಯಲ್ಲಿ ವಿಶೇಷ ಮನವಿ.

ನಮ್ಮ ಗ್ರಾಮದೇವತೆಯಾದ ಶ್ರೀ ದುರ್ಗಾಂಬಿಕಾ ದೇವಿಯು ಬಹು ಹಿಂದಿನ ಕಾಲದಿಂದಲೂ ಪವಾಡ ಪ್ರಸಿದ್ದಿಯಾಗಿ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ಬೇಡಿದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಭಕ್ತ ಶಿರೋಮಣಿಯಾಗಿ ಮೆರೆಯುತ್ತಿದ್ದಾಳೆ. ಸದರಿ ದೇವತೆಯ ಮಂದಿರವನ್ನು ಸಂಪೂರ್ಣವಾಗಿ ನಿರ್ಮಾಣವಾಗಿದ್ದು, ಮುಂದಿನ ದ್ವಾರಬಾಗಿಲು ಕಟ್ಟಿಸುವ ಯೋಜನೆ ಇದೆ. ಆದ ಕಾರಣ ಸಕಲಭಕ್ತಾದಿಗಳು ಹೆಚ್ಚಿನ ರೀತಿಯಲ್ಲಿ ಧನ ಸಹಾಯವನ್ನು ನೀಡಿ, ವಿನಂತಿಸಿಕೊಳ್ಳುತ್ತೇವೆ ಈ ಎಲ್ಲ ಕೆಲಸಗಳು ಭಕ್ತರಿಂದಲೇ ನೆರವೇರಿಸಬೇಕಾಗಿ ವಿನಂತಿಸುತ್ತೇವೆ. ಕಾರಣ ಭಕ್ತ ಜನತೆಯು ಹೆಚ್ಚಿನ ರೀತಿಯಿಂದ ದೇಣಿಗೆ ಕೊಟ್ಟು ಶ್ರೀ ದೇವಿಯ ದರ್ಶನ ಮಾಡಿ ಆಶೀರ್ವಾದ ಪಡೆಯಬೇಕೆಂದು ಮತ್ತೊಮ್ಮೆ ಕೇಳಿಕೊಳ್ಳುತ್ತೇವೆ. ಶ್ರೀ ದೇವಿಗೆ ತನು-ಮನ-ಧನಗಳಿಂದ ಸೇವೆ ಸಲ್ಲಿಸಿ, ಶ್ರೀ ದೇವಿಯ ಜಾತ್ರೆಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ವಿಶೇಷವಾಗಿ ಈ ವರ್ಷ ದೇವಿಯ ಹೊಸ ಮೂರ್ತಿಗಳನ್ನು ಮಾಡಿಸಿ. ಪ್ರತಿಷ್ಠಾಪನೆ ಮಾಡಲಾಗುವುದು.

ಶ್ರೀ ದುರ್ಗಾಂಬಿಕಾದೇವಿ ಜಾತ್ರೆ

WhatsApp Group Join Now
Telegram Group Join Now

Leave a Comment