SSLC-2025 EXAM-3 Valuation Camp:2025 ಎಸ್.ಎಸ್.ಎಲ್.ಸಿ. ಪರೀಕ್ಷೆ-3ಕ್ಕೆ (SSLC-2025 EXAM-3 Valuation Camp)ವಿಷಯವಾರು ಮೌಲ್ಯಮಾಪನ ಕೇಂದ್ರಗಳ ಬಗ್ಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

SSLC-2025 EXAM-3 Valuation Camp:2025 ಎಸ್.ಎಸ್.ಎಲ್.ಸಿ. ಪರೀಕ್ಷೆ-3ಕ್ಕೆ (SSLC-2025 EXAM-3 Valuation Camp)ವಿಷಯವಾರು ಮೌಲ್ಯಮಾಪನ ಕೇಂದ್ರಗಳ ಬಗ್ಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

SSLC-2025 EXAM-3 Valuation Camp

SSLC-2025 EXAM-3 Valuation Camp:2025ರ ಎಸ್.ಎಸ್.ಎಲ್.ಸಿ. ಪರೀಕ್ಷೆ-3ನ್ನು(SSLC-2025 EXAM-3 Valuation Camp) ದಿನಾಂಕ: 05-07-2025 ರಿಂದ ದಿನಾಂಕ:12-07-2025 ರವರೆಗೆ ನಡೆಸಲಾಗುತ್ತಿದೆ. ಪರೀಕ್ಷೆ ಮುಗಿದ ನಂತರ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವಿಷಯವಾರು ಮೌಲ್ಯಮಾಪನ ಕೇಂದ್ರಗಳನ್ನು ರಚಿಸಿ ಮೌಲ್ಯಮಾಪನವನ್ನು ಪ್ರಾರಂಭಿಸಲಾಗುತ್ತದೆ. ಮೌಲ್ಯಮಾಪನ ಕೇಂದ್ರಗಳನ್ನು ಗುರುತಿಸುವ ಸಂಬಂಧ ಜಿಲ್ಲಾ ಉಪನಿರ್ದೇಶಕರು ಹಾಗೂ ಜಿಲ್ಲಾ ಎಸ್.ಎಸ್.ಎಲ್.ಸಿ.ನೋಡಲ್ ಅಧಿಕಾರಿಗಳು ಖುದ್ದಾಗಿ ಮೌಲ್ಯಮಾಪನಕ್ಕೆ ಗುರುತಿಸುವ ಶಾಲೆಗಳಿಗೆ ಭೇಟಿ ನೀಡಿ ಮೌಲ್ಯಮಾಪನ ಮಾಡಲು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಶಾಲೆಯು ಹೊಂದಿರುವ ಹಾಗೂ ಅಂದಾಜು 400 ಮೌಲ್ಯಮಾಪಕರಿಗೆ (ಆಯಾ ಜಿಲ್ಲೆಗೆ ನಿಗದಿಪಡಿಸಿರುವ ವಿಷಯದ ಶಿಕ್ಷಕರು/ಮೌಲ್ಯಮಾಪಕರ ಸಂಖ್ಯೆಗೆ ಅನುಗುಣವಾಗಿ) ಆಸನದ ವ್ಯವಸ್ಥೆಯಿರುವ ಶಾಲೆಗಳನ್ನು ಗುರುತಿಸಿ ಮೌಲ್ಯಮಾಪನ ಕೇಂದ್ರಗಳನ್ನು ರಚಿಸಬೇಕಿರುತ್ತದೆ. ಜಿಲ್ಲಾ ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ಕಾರ್ಯವು ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ನಡೆಯುವುದರಿಂದ, ಜಿಲ್ಲಾ ಉಪನಿರ್ದೇಶಕರು(ಆಡಳಿತ)ರವರು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಮೌಲ್ಯಮಾಪನ ಕಾರ್ಯದ ಸಂಬಂಧ ಯಾವುದೇ ಲೋಪದೋಷಕ್ಕೆ ಅವಕಾಶ ನೀಡದೇ ಯಶಸ್ವಿಯಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಈ ಪತ್ರದೊಂದಿಗೆ ಅಡಕಗೊಳಿಸಿರುವ ಅನುಬಂಧ-1ರ ನಮೂನೆಯಂತೆ ಮೌಲ್ಯಮಾಪನ ಕೇಂದ್ರಗಳ ಪಟ್ಟಿಯನ್ನು ಸಲ್ಲಿಸುವುದು.

GOVT ORDER LINK – CLICK HERE

  ಜಿಲ್ಲಾ ಕೇಂದ್ರದಲ್ಲಿ ರಚಿಸುವ ವಿಷಯವಾರು ಮೌಲ್ಯಮಾಪನ ಕೇಂದ್ರಗಳು ಸುಭದ್ರವಾದ ಹಾಗೂ ಸುರಕ್ಷಿತ ಮೇಲ್ಪಾವಣಿ ಹೊಂದಿರುವ ಶಾಲಾ ಕಟ್ಟಡ ಹೊಂದಿರಬೇಕು. ಅಗತ್ಯಕ್ಕೆ ತಕ್ಕಷ್ಟು ತರಗತಿ ಕೊಠಡಿಗಳಿರಬೇಕು, ಮೌಲ್ಯಮಾಪಕರಿಗೆ ಕೊರತೆಯಾಗದಂತೆ ಸಾಕಷ್ಟು ಡೆಸ್ಕುಗಳು, ಶೌಚಾಲಯ, ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಗಾಳಿ/ಬೆಳಕು ಹೊಂದಿರುವ ಮೌಲ್ಯಮಾಪನ ಕೇಂದ್ರಗಳನ್ನು ಗುರುತಿಸುವುದು. ಮೈನರ್ ವಿಷಯಗಳ ಮೌಲ್ಯಮಾಪನ ಕಾರ್ಯಕ್ಕೆ ಸಮೀಪದ ಜಿಲ್ಲೆಗಳಿಂದ ವಿಷಯವಾರು ಶಿಕ್ಷಕರನ್ನು ನೇಮಕಮಾಡಿ ಮಂಡಲಿಯಿಂದ ಆದೇಶ ಹೊರಡಿಸಲಾಗುವುದು.

  2025ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರ ಮೌಲ್ಯಮಾಪನ ಕಾರ್ಯವನ್ನು ಎಲ್ಲಾ ಜಿಲ್ಲೆಗಳಲ್ಲಿ ಮಾಡಲಾಗಿದ್ದು, ಸದರಿ ಜಿಲ್ಲೆಗಳ ವಿಷಯವಾರು ಮೌಲ್ಯಮಾಪನ ಕೇಂದ್ರಗಳಲ್ಲಿ ಇಂಟರ್ನೆಟ್, ಲ್ಯಾನ್ ಸಂಪರ್ಕ ಕಲ್ಪಿಸಿರುವುದರಿಂದ ಸದರಿ ಮೌಲ್ಯಮಾಪನ ಕೇಂದ್ರಗಳನ್ನು 2025ರ ಎಸ್.ಎಸ್.ಎಲ್.ಸಿ ಪರೀಕ್ಷೆ-3ರ ಮೌಲ್ಯಮಾಪನಕ್ಕೆ ಉಪಯೋಗಿಸುವುದು ಕಡ್ಡಾಯವಾಗಿದೆ. ಮೌಲ್ಯಮಾಪನವಾದ ನಂತರ ವಿದ್ಯಾರ್ಥಿ ನೋಂದಣಿ, ಸಂಖ್ಯೆವಾರು ಹಾಜರಾತಿ-ಸಹಿತ-ಅಂಕಪಟ್ಟಿಯಲ್ಲಿ (AML) ನಮೂದಿಸಿರುವ ಅಂಕಗಳನ್ನು ಸಹಾಯಕ ಮೌಲ್ಯಮಾಪಕರು ಹಾಗೂ ಉಪಮುಖ್ಯ ಮೌಲ್ಯಮಾಪಕರು ಮೌಲ್ಯಮಾಪನ ಕೇಂದ್ರದಿಂದ ಆನ್‌ಲೈನ್‌ನಲ್ಲಿ ಎಂಟ್ರಿ ಮಾಡಬೇಕಾಗಿರುವುದರಿಂದ, ಗಣಕಯಂತ್ರ, ಅಂತರ್ಜಾಲ ಹಾಗೂ ಲ್ಯಾನ್ ಸಂಪರ್ಕವಿರುವ ಶಾಲಾ ಕಟ್ಟಡವನ್ನು ಮೌಲ್ಯಮಾಪನ ಕೇಂದ್ರವನ್ನಾಗಿ ರಚಿಸಲು ಆಗತ್ಯಕ್ರಮ ತೆಗೆದುಕೊಳ್ಳುವುದು,

ವಿಷಯವಾರು ಮೌಲ್ಯಮಾಪನ ಕೇಂದ್ರಗಳಲ್ಲಿ, ಮೌಲ್ಯಮಾಪನ ಮಾಡುವ ಉತ್ತರ ಪತ್ರಿಕೆಗಳನ್ನು ಸ್ವೀಕರಿಸಿ, ಭದ್ರತಾ ಕೊಠಡಿಯಲ್ಲಿ ಸಂರಕ್ಷಿಸಬೇಕಾಗಿರುತ್ತದೆ. ಉತ್ತರ ಪತ್ರಿಕೆಗಳನ್ನು ಶೇಖರಿಸಿಡುವ ಭದ್ರತಾ ಕೊಠಡಿಯನ್ನು ಜಿಲ್ಲಾ ಉಪನಿರ್ದೇಶಕರು ಖುದ್ದು ಪರಿಶೀಲಿಸಿ ಕೆಳಕಂಡ ಅಂಶಗಳ ಬಗ್ಗೆ ಜಾಗೃತಿ ವಹಿಸಲು ತಿಳಿಸಿದೆ.

1. ಮೌಲ್ಯಮಾಪನ ಕೇಂದ್ರದಲ್ಲಿ ಉತ್ತರ ಪತ್ರಿಕೆಗಳನ್ನು ಶೇಖರಿಸಿಡುವ ಭದ್ರತಾ ಕೊಠಡಿಯು ಸುರಕ್ಷತೆಯಿಂದ ಇರಬೇಕು.
2. ಉತ್ತರ ಪತ್ರಿಕೆಯನ್ನು ಶೇಖರಿಸಿಡುವ ಕೊಠಡಿಯು ಟೆರಸ್ ಬಿಲ್ಡಿಂಗ್ ಆಗಿರಬೇಕು. ಮೇಲ್ಪಾವಣಿಯಿಂದ ನೀರು ಸೋರಿಕೆಯಾಗಬಾರದು, ಹೆಂಚು ಅಥವಾ ಶೀಟಿನಿಂದ ಕೂಡಿದ ಮೇಲಾವಣಿ ಇರಬಾರದು.
3. ಗುರುತಿಸುವ ಮೌಲ್ಯಮಾಪನ ಕೇಂದ್ರಗಳಲ್ಲಿ ಪ್ರೌಢಶಾಲಾ/ಕಾಲೇಜು ವಿದ್ಯಾರ್ಥಿಗಳು ಕುಳಿತುಕೊಳ್ಳುವ ಸಾಕಷ್ಟು ಡೆಸ್ತುಗಳು ಇರುವುದು ಅತ್ಯವಶ್ಯಕ. ಯಾವುದೇ ಕಾರಣಕ್ಕೂ ನರ್ಸರಿ ಶಾಲಾ ವಿದ್ಯಾರ್ಥಿಗಳು ಕುಳಿತುಕೊಳ್ಳುವ ಡೆಸ್ತುಗಳನ್ನು ಮೌಲ್ಯಮಾಪನಕ್ಕೆ ಉಪಯೋಗಿಸಬಾರದು. ನರ್ಸರಿ ಶಾಲಾ ಡೆಸ್ಕುಗಳನ್ನು ಹೊಂದಿರುವ ಶಾಲೆಗಳನ್ನು ಮೌಲ್ಯಮಾಪನ ಕೇಂದ್ರಗಳನ್ನಾಗಿ ಗುರುತಿಸಬಾರದು.
4. ಗುರುತಿಸುವ ಮೌಲ್ಯಮಾಪನಕೇಂದ್ರವು ಪ್ರಾಥಮಿಕ ಶಾಲೆಯಾಗಿದ್ದಲ್ಲಿ, ಪ್ರೌಢಶಾಲಾ/ಕಾಲೇಜು ವಿದ್ಯಾರ್ಥಿಗಳು ಕುಳಿತುಕೊಳ್ಳುವ ಡೆಸ್ಟ್‌ಗಳನ್ನು ಉಪಯೋಗಿಸುವುದು ಕಡ್ಡಾಯ
5. ಮೌಲ್ಯಮಾಪನಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳಾದ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇರಬೇಕು. ಮೌಲ್ಯಮಾಪನ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೌಚಾಲಯಗಳಿರಬೇಕು ಹಾಗೂ ಶೌಚಾಲಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಪೂರೈಸುವ ಸೌಲಭ್ಯ ಹೊಂದಿರುವುದು ಕಡ್ಡಾಯ.
6. ಉತ್ತರ ಪತ್ರಿಕೆಗಳನ್ನು ಶೇಖರಿಸಿಡುವ ಕೊಠಡಿಯಲ್ಲಿ ಯಾವುದೇ ರದ್ದಿಕಾಗದ, ಹಳೆಯ ಮುರಿದ ಮರಮುಟ್ಟುಗಳು, ಇತ್ಯಾದಿ ದಹನಕ್ರಿಯೆಗೆ ಸಹಕರಿಸುವಂತಹ ಯಾವುದೇ ಸಾಮಗ್ರಿಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು,
7. ಮೌಲ್ಯಮಾಪನ ಕೇಂದ್ರವು ತಗ್ಗು ಪ್ರದೇಶದಲ್ಲಿ ಇದ್ದಲ್ಲಿ ಹೊರಗಡೆಯಿಂದ ನೀರು ನುಗ್ಗಿ ಉತ್ತರ ಪತ್ರಿಕೆಗಳಿಗೆ ಹಾನಿಯಾಗುವ ಸಂಭವವಿರುವುದರಿಂದ ನೆಲಮಹಡಿಯಲ್ಲಿ ಉತ್ತರ ಪತ್ರಿಕೆಯ ಭದ್ರತಾ ಕೊಠಡಿಯನ್ನು ಗುರುತಿಸದೇ ಮೊದಲ ಮಹಡಿಯಲ್ಲಿ ಉತ್ತರಪತ್ರಿಕೆಗಳನ್ನಿಡುವ ಭದ್ರತಾ ಕೊಠಡಿಯನ್ನು ಗುರುತಿಸಲು ಅಗತ್ಯಕ್ರಮ ಕೈಗೊಳ್ಳುವುದು.
8. ಉತ್ತರಪತ್ರಿಕೆಗಳಿರುವ ಭದ್ರತಾಕೊಠಡಿಯ ಕಿಟಕಿ ಹಾಗೂ ಬಾಗಿಲುಗಳು ಭದ್ರವಾಗಿರುವ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು.
9. ಕಿಟಕಿ ಬಾಗಿಲುಗಳಿಂದ ಮಳೆ ನೀರು ಯಾವುದೇ ಕಾರಣಕ್ಕೂ ಕೊಠಡಿಯ ಒಳಗೆ ಬರದಂತೆ ಮುಂಜಾಗ್ರತೆ ವಹಿಸುವುದು.
10. ಉತ್ತರ ಪತ್ರಿಕೆಗಳಿರುವ ಭದ್ರತಾ ಕೊಠಡಿಯಲ್ಲಿ ವಿದ್ಯುತ್ ಕಡಿತಗೊಳಿಸಿ, ಯಾವುದೇ ರೀತಿಯ ಬೆಂಕಿ ಅನಾಹುತವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.
11. ಕಿಟಕಿಯ ಎರಡೂ ಕಡೆ ಕಾರ್ಡ್‌ ಬೋರ್ಡ್ನ ಶೀಟುಗಳನ್ನು ಹೊಡೆದು ಉತ್ತರ ಪತ್ರಿಕೆಗಳನ್ನು ಶೇಖರಿಸಿಡುವ ಮುನ್ನ ಭದ್ರಪಡಿಸಿಕೊಳ್ಳಬೇಕು.
12. ಬೆಂಕಿ ನಂದಿಸುವ ಉಪಕರಣಗಳನ್ನು ಕಡ್ಡಾಯವಾಗಿಟ್ಟಿರಬೇಕು. ಉಪಕರಣಗಳು ಇಲ್ಲದಿದ್ದ ಪಕ್ಷದಲ್ಲಿ ಕಾರ್ಯನಿರ್ವಹಿಸುವ ಉಪಕರಣಗಳನ್ನು ಮೌಲ್ಯಮಾಪನ ಕೇಂದ್ರಗಳಲ್ಲಿ ಆಳವಡಿಸಿಕೊಳ್ಳಲು ಆಡಳಿತ ಮಂಡಲಿಗೆ ಸೂಚಿಸಿ ಕಡ್ಡಾಯವಾಗಿ ಅಳವಡಿಸಬೇಕು.
13. ಮೌಲ್ಯಮಾಪನ ಕೇಂದ್ರದ ಸುತ್ತಾ ಕಾಂಪೌಂಡ್ ಇರಬೇಕು.
14. ಮೌಲ್ಯಮಾಪನ ಕೇಂದ್ರಕ್ಕೆ ಆಯ್ಕೆ ಮಾಡುವ ಶಾಲೆಯ ಸುತ್ತಾ ಕಸಾಯಿಖಾನೆ, ಮಾಂಸದ ಅಂಗಡಿ, ಮೀನು ಮಾರಾಟದ ಅಂಗಡಿ ಇಲ್ಲದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
15. ಮೌಲ್ಯಮಾಪನ ಕೇಂದ್ರದಲ್ಲಿ ಮೌಲ್ಯಮಾಪಕರಿಗೆ ಮೌಲ್ಯಮಾಪನ ಮಾಡಲು ಸಾಕಷ್ಟು ಪೀಠೋಪಕರಣಗಳು ಇರಬೇಕು.
16. ಭದ್ರತಾ ಕೊಠಡಿಯು ಖಜಾನೆ ಮಾದರಿಯಲ್ಲಿ ಹಾಗೂ ಮತದಾನದ ಬ್ಯಾಲೆಟ್ ಪೇಪರ್‌ಗಳನ್ನು ಸಂರಕ್ಷಿಸಿಡುವ ರೀತಿಯಲ್ಲಿದ್ದು ಪರೀಕ್ಷಾ ಗೌಪ್ಯ ಸಾಮಾಗ್ರಿಗಳನ್ನು ಸಂರಕ್ಷಿಸುವಂತಿರಬೇಕು.
17. ಉತ್ತರ ಪತ್ರಿಕೆಗಳನ್ನು ಶೇಖರಿಸಿಡುವ ಭದ್ರತಾಕೊಠಡಿಯಲ್ಲಿ ಹಾಗೂ ಅಂಕಗಳನ್ನು ಆನ್‌ಲೈನ್ ನಲ್ಲಿ ಪೋರ್ಟಿಂಗ್ ಮಾಡುವ ಕೊಠಡಿಯಲ್ಲಿ ಮತ್ತು ಶಾಲೆಯ ವರಾಂಡ/ಕಾರಿಡಾರ್‌ನಲ್ಲಿ ಸಿಸಿಟಿವಿ ಕ್ಯಾಮರಾ ಆಳವಡಿಸಿರಬೇಕು.ಎಲ್ಲಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಲ್ಲಿ ಸ್ವಾಗತಾರ್ಹ.

ಪತ್ರಕ್ಕೆ ಲಗತ್ತಿಸಿರುವ ಅನುಬಂಧದಂತೆ ಮೌಲ್ಯಮಾಪನ ಕೇಂದ್ರಗಳ ಮಾಹಿತಿಯನ್ನು ದಿನಾಂಕ – 25-06-2025 ಸಂಜೆ 5.00 ಗಂಟೆಯೊಳಗೆ ಸಾಫ್ಟ್ ಪ್ರತಿಯನ್ನು ಈ ಮೇಲ್ ವಿಳಾಸ sadpi.csec.kseeb@gmail.comಗೆ ಹಾಗೂ ಹಾರ್ಡ್ ಪ್ರತಿಯನ್ನು ಸಹಾಯಕ ನಿರ್ದೇಶಕರು, ಸಿ-ವಿಭಾಗ, ಕನಾ೯ಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, 6ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003, ಇವರ ವಿಳಾಸಕ್ಕೆ ಕಳುಹಿಸಲು ಆದೇಶಿಸಿದೆ.

WhatsApp Group Join Now
Telegram Group Join Now