Teachers: ಖಾಲಿ ಇರುವ ಶಿಕ್ಷಕರ(Teachers) ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Teachers: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.), ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ ಈ ಸಂಸ್ಥೆ ವತಿಯಿಂದ ನಡೆಯುತ್ತಿರುವ ಈ ಕೆಳಕಂಡ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ವಿದ್ಯಾರ್ಹತೆ ಮತ್ತು ಅರ್ಹ ವಯೋಮಾನ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
NOTIFICATION PDF – CLICK HERE
ಶಿಕ್ಷಕರ(Teachers) ನೇಮಕಾತಿಗೆ ಸೂಚನೆ:-
1. ಸರ್ಕಾರಿ ಆದೇಶದ ಸಂಖ್ಯೆ ಇಡಿ 291 ಎಲ್.ಬಿ.ಪಿ 2015 ಬೆಂಗಳೂರು, ದಿನಾಂಕ 29.09.2016ರ ಆದೇಶದಂತೆ ವಿದ್ಯಾರ್ಹತೆ ಹೊಂದಿರಬೇಕು ಮತ್ತು ನಿಗದಿತ ವಯೋಮಾನದಲ್ಲಿರಬೇಕು ಎಂಬ ಷರತ್ತಿಗೆ ಒಳಪಟ್ಟಿದೆ.
2. ಪತ್ರಿಕಾ ಪ್ರಕಟಣೆಗೊಂಡ 21 ದಿನದೊಳಗಾಗಿ ಅರ್ಜಿ ಸಲ್ಲಿಸತಕ್ಕದ್ದು.
3. ಅರ್ಜಿಯನ್ನು ಆಡಳಿತಾಧಿಕಾರಿಗಳ ಕಛೇರಿ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.) ಶ್ರೀ ಕಾಲಭೈರವೇಶ್ವರ ಸಂಸ್ಕೃತ ಮಹಾವಿದ್ಯಾಲಯದ ಕಟ್ಟಡ, ಶ್ರೀ ಆದಿಚುಂಚನಗಿರಿ ಕ್ಷೇತ್ರ, ನಾಗಮಂಗಲ ತಾ।।, ಮಂಡ್ಯ ಜಿಲ್ಲೆ ಈ ವಿಳಾಸಕ್ಕೆ ನೋಂದಣಿ ಅಂಚೆ ಮುಖೇನ ಸ್ವಯಂ ದೃಢೀಕೃತ ಅಂಕಪಟ್ಟಿಯ ದಾಖಲೆಗಳೊಂದಿಗೆ ಸಲ್ಲಿಸುವುದು.
4. ಅರ್ಜಿಯ ಒಂದು ಪ್ರತಿಯನ್ನು ಸಂಬಂಧಿಸಿದ ಉಪನಿರ್ದೇಶಕರು (ಆ) ಶಾ.ಶಿ. ಇಲಾಖೆ, ಮಂಡ್ಯ ಜಿಲ್ಲೆ. ಮಂಡ್ಯ ಇವರಿಗೆ ಮಾಹಿತಿಗಾಗಿ ಸಲ್ಲಿಸುವುದು.
5. ಅರ್ಜಿಯ ಜೊತೆಯಲ್ಲಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿಗಳು, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ), ಶ್ರೀ ಆದಿಚುಂಚನಗಿರಿ ಕ್ಷೇತ್ರ, ನಾಗಮಂಗಲ ತಾII, ಮಂಡ್ಯ ಜಿಲ್ಲೆ, ಇವರ ಪದನಾಮದಲ್ಲಿ GM ಅಭ್ಯರ್ಥಿಗಳು ರೂ. 1,000/- ಗಳ ಡಿ.ಡಿ ಮತ್ತು ಎಸ್.ಸಿ (ಬ್ಯಾಕ್‌ಲಾಗ್ ಹುದ್ದೆಗೆ) ಅಭ್ಯರ್ಥಿಗಳು ರೂ. 500/- ಗಳ ಡಿ.ಡಿ ಯನ್ನು ತೆಗೆದು ಲಗತ್ತಿಸಬೇಕು. (ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಾತ್ರ ಡಿ.ಡಿ. ತೆಗೆಯುವುದು.
6. ರೂ. 50/- ಅರ್ಜಿ ಶುಲ್ಕ ಪಾವತಿ ಮಾಡಿ ಆಡಳಿತಾಧಿಕಾರಿಗಳವರ ಕಛೇರಿ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ), ಶ್ರೀ ಆದಿಚುಂಚನಗಿರಿ ಕ್ಷೇತ್ರ, ನಾಗಮಂಗಲ ತಾ।।, ಮಂಡ್ಯ ಜಿಲ್ಲೆ, ಇಲ್ಲಿ ಅರ್ಜಿಯನ್ನು ಪಡೆಯುವುದು.
7. ಪರಿಶಿಷ್ಟ ಜಾತಿ (S.C.) ಅಭ್ಯರ್ಥಿಗಳು ಸಂಬಂಧಿಸಿದ ತಹಶಿಲ್ದಾರ್‌ರವರಿಂದ / ಪ್ರಾಧಿಕಾರದಿಂದ ನಿಗಧಿತ ನಮೂನೆಯಲ್ಲಿ ಜಾತಿ / ಪ್ರಮಾಣ ಪತ್ರವನ್ನು ಪಡೆದು ಸ್ವಯಂ ದೃಢೀಕೃತ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.
8. ಅರ್ಜಿಯ ಜೊತೆಯಲ್ಲಿ ವಿದ್ಯಾರ್ಹತೆಯ ಬಗ್ಗೆ ಹಿಂದಿ ಭಾಷಾ ಶಿಕ್ಷಕರ ಹುದ್ದೆಗೆ ಎಸ್.ಎಸ್.ಎಲ್.ಸಿ. ಪಿಯುಸಿ ಪದವಿ, ಬಿ.ಇಡಿಯ ಮತ್ತು ದೈಹಿಕ ಶಿಕ್ಷಕರ ಹುದ್ದೆಗೆ ಪದವಿ. ಬಿ.ಪಿ ಇಡಿ ಅಂಕಪಟ್ಟಿಗಳು ಮತ್ತು ಘಟಿಕೋತ್ಸವದ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಗಳನ್ನು ಸ್ವಯಂ ದೃಢೀಕರಣದೊಂದಿಗೆ ಸಲ್ಲಿಸುವುದು.
9. ಅರ್ಜಿಯನ್ನು ನೋಂದಣಿ ಅಂಚೆ ಮೂಲಕ ಸಲ್ಲಿಸತಕ್ಕದ್ದು (ನೇರವಾಗಿ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ).
10. ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಪದವಿ, ಬಿ.ಇಡಿ. ಬಿ.ಪಿ ಇಡಿಯಲ್ಲಿ ಅಭ್ಯಾಸ ಮಾಡಿರಬೇಕು.