TEACHERS: ಶಿಕ್ಷಣ ಇಲಾಖೆಯ 18.000 ಶಿಕ್ಷಕರ(TEACHERS) ನೇಮಕಾತಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
TEACHERS:ಪರಿಶಿಷ್ಟ ಜಾತಿಗಳ ಒಳ ಮೀಸಲು ವರ್ಗೀಕರಣದ ಬಳಿಕ ಖಾಲಿ ಹುದ್ದೆಗಳ ನೇಮಕ ಪ್ರಕ್ರಿಯೆಗೆ ತ್ವರಿತವಾಗಿ ಚಾಲನೆ ನೀಡುವುದಾಗಿ ಸರಕಾರ ಘೋಷಿಸಿತ್ತು. ಆದರೆ ವಾಸ್ತವದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಂದರೆ ಮುಂದಿನ ಮಾರ್ಚ್‌ನೊಳಗೆ ಒಂದು ಹುದ್ದೆಗೂ ನೇಮಕಾತಿ ಆದೇಶ ನೀಡುವ ಲಕ್ಷಣ ಕಾಣುತ್ತಿಲ್ಲ.
ಈ ಹಿಂದೆ ಅನುಮೋದನೆ ಗೊಂಡಿದ್ದರೂ ಸ್ಥಗಿತಗೊಂಡಿದ್ದ 80,000 ಹುದ್ದೆ ನೇಮಕಾತಿಗೆ ಸಂಬಂಧಪಟ್ಟ ಇಲಾಖೆಗಳು ಆರ್ಥಿಕ ಇಲಾಖೆ ಅನುಮೋದನೆ ಪಡೆದು ಅಧಿಸೂಚನೆ ಹೊರಡಿಸಿ ಮುಂದಿನ ಪ್ರಕ್ರಿಯೆ ನಡೆಯಬೇಕಿದೆ. ಆದರೆ ಯಾವುದೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಆರು ತಿಂಗಳ ಕಾಲಾವಕಾಶ ಆಗತ್ಯವಿದೆ. ಖಾಲಿ ಹುದ್ದೆ ನೇಮಕಕ್ಕೆ ಆಯಾ ಇಲಾಖೆಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನವೂ ಹಂಚಿಕೆಯಾಗಿರದ ಕಾರಣ ಮುಂದಿನ ಆರು ತಿಂಗಳಲ್ಲಿ ಯಾರೊಬ್ಬರಿಗೂ ನೇಮಕಾತಿ ಆದೇಶ ಪತ್ರ ನೀಡುವುದು ಅಸಾಧ್ಯ ಎಂದು ಆರ್ಥಿಕ ಇಲಾಖೆ ಮೂಲಗಳೇ ಹೇಳುತ್ತಿವೆ.
ಖಾಲಿಯಿರುವ ಸರಕಾರಿ ಹುದ್ದೆ ಭರ್ತಿ ಮಾಡುವುದಾಗಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ನಾನಾ ಇಲಾಖೆ, ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳಲ್ಲಿ 2.73 ಲಕ್ಷ ಹುದ್ದೆ ಖಾಲಿಯಿದ್ದು, ಈ ಪೈಕಿ ಅನುಮೋದನೆಗೊಂಡಿದ್ದ80 ಸಾವಿರ ಹುದ್ದೆಗಳ ಭರ್ತಿ ಪ್ರಕ್ರಿಯೆಯೂ ಸ್ಥಗಿತ ಗೊಂಡಿತ್ತು. ಅಂತಿಮ ಹಂತದಲ್ಲಿದ್ದ ಕೆಲ ನೇಮಕ ಹೊರತುಪಡಿಸಿದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಯಾವುದೇ ಹೊಸ ನೇಮಕಾತಿ ನಡೆದಿಲ್ಲ.
ಒಳ ಮೀಸಲು ವರ್ಗೀಕರಣ ವಿಚಾರದ ಹಿನ್ನೆಲೆಯಲ್ಲಿ 2024ರ ಅ.28ರಂದು ಎಲ್ಲ ನೇರ ನೇಮಕಾತಿಯನ್ನು ಸರಕಾರ ಸ್ಥಗಿತಗೊಳಿಸಿದೆ. ಅ.28ಕ್ಕೆ ಮೊದಲು ಚಾಲನೆ ಪಡೆದುಕೊಂಡಿದ್ದ ಹಲವು ನೇರೆ ನೇಮಕ ಪ್ರಕ್ರಿಯೆಗಳನ್ನೂ ರದ್ದುಪಡಿಸಿದೆ. ಈಗ ಪರಿಶಿಷ್ಟರ ಒಳ ಮೀಸಲು ವಗೀರ್ಕರಣದ ಬಳಿಕ ಅನುಮೋದಿತ ಹುದ್ದೆಗಳ ನೇರ ನೇಮಕಕ್ಕೆ ಅಧಿಸೂಚನೆ ಹೊರಡಿಸಿ ಕಾಲಮಿತಿಯಲ್ಲಿ ಪ್ರಕ್ರಿಯೆ ಪೂರ್ಣ ಗೊಳಿಸುವಂತೆ ಸರಕಾರ ಎಲ್ಲ ನೇಮಕಾತಿ ಪ್ರಾಧಿ ಕಾರಗಳಿಗೆ ಸೂಚಿಸಿದೆ. ಅದರಂತೆ ಪೊಲೀಸ್, ಶಿಕ್ಷಣ, ಪಶುಸಂಗೋಪನೆ, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಆರೋಗ್ಯ ಸೇರಿದಂತೆ ನಾನಾ ಇಲಾಖೆಗಳಲ್ಲಿನ 80,000ಕ್ಕೂ ಹೆಚ್ಚು ಅನುಮೋದಿತ ಖಾಲಿ ಹುದ್ದೆಗಳ ಭರ್ತಿ ಸಂಬಂಧ ನೇಮಕಕ್ಕೆ ಅಧಿಸೂಚನೆ ಹೊರಡಿಸಬೇಕಾದೆ.
ಹುದ್ದೆ ಭರ್ತಿಗೆ ಸಿಎಂ ಭರವಸೆ.
ಕೆಕೆಆರ್‌ಡಿಬಿ ವ್ಯಾಪ್ತಿಯಲ್ಲಿ ಖಾಲಿಯಿರುವ 5,267 ಶಿಕ್ಷಕರ ಹುದ್ದೆ ಭರ್ತಿ ಜತೆಗೆ ಇಲಾಖೆಯಲ್ಲಿ ಖಾಲಿಯಿರುವ ಇನ್ನೂ 5,000 ಹುದ್ದೆ ನೇಮಕಾತಿ ಮಾಡಿಕೊಳ್ಳುವುದಾಗಿ 2025-26ನೇ ಸಾಲಿನ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಕೆಪಿಟಿಸಿಎಲ್‌ನಲ್ಲಿ ಖಾಲಿ ಹುದ್ದೆ ಭರ್ತಿಗೆ ಕ್ರಮ ವಹಿಸುವುದಾಗಿ ಕಳೆದ ಜುಲೈನಲ್ಲಿ ಭರವಸೆ ನೀಡಿದ್ದರು. ಸೆ.17ರಂದು ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಕೆಆರ್ ಡಿಬಿ ವ್ಯಾಪ್ತಿಯಲ್ಲಿ ಖಾಲಿಯಿರುವ 5,267 ಶಿಕ್ಷಕರ ಹುದ್ದೆ ನೇಮಕಕ್ಕೆ ಸೂಚಿಸಿರುವುದಾಗಿ ಸಿಎಂ. ಘೋಷಿಸಿದ್ದರು. ಖಾಲಿ ಹುದ್ದೆಗಳ ಭರ್ತಿನೆ ಕನ ಕೈಗೊಳ್ಳುವುದಾಗಿ ಸಿದ್ದರಾಮಯ್ಯನವರು ಹೇಳುತ್ತಲೇ ಇದ್ದಾರೆ.
ವಿಳಂಬ ಏಕೆ?
ಅಧಿಸೂಚನೆ ಹೊರಡಿಸಿ ಅರ್ಜಿ ಏಕೆ? ಆಹ್ವಾನ, ಪರಿಶೀಲನೆ, ಲಿಖಿತ ಪರೀಕ್ಷೆ, ಅಗತ್ಯವಿರುವ ಕಡೆ ದೈಹಿಕ ಸಾಮರ್ಥ ಪರೀಕ್ಷೆ, ಫಲಿತಾಂಶ ಪ್ರಕಟಣೆ, ಆಯ್ಕೆ ಪ್ರಕ್ರಿಯೆ, ಅಂತಿಮ ನೇಮಕಾತಿ ಪೂರ್ಣ ಗೊಳಿಸಲು ಕನಿಷ್ಠ ಆರು ತಿಂಗಳು ಅಗತ್ಯವಿರುತ್ತದೆ.ಹಾಗಾಗಿ ಪ್ರಸಕ್ತ ವರ್ಷದಲ್ಲಿ ಹೊಸ ನೇಮಕಾತಿ ಅಸಾಧ್ಯ ಎಂದು ಆರ್ಥಿಕ ಇಲಾಖೆ ಮೂಲಗಳು ಖಚಿತಪಡಿಸಿವೆ. ಬಜೆಟ್‌ನಲ್ಲಿ ಇಲಾಖಾವಾರು ಖಾಲಿ ಹುದ್ದೆ ಭರ್ತಿಗೆ ಅನುದಾನ ಹಂಚಿಕೆ ಮಾಡುವುದು ಕಡಿಮೆ. ಹಾಗೆಂದು ನೇಮಕಾತಿ ಪ್ರಕ್ರಿಯೆ ಆರಂಭಿಸಲು ಯಾವುದೇ ಅಡ್ಡಿಯಿಲ್ಲ. 2026-27ನೇ ಸಾಲಿನ ಬಜೆಟ್ ಸಿದ್ಧತಾ ಕಾರ್ಯ ಜನವರಿಯಿಂದಲೇ ಶುರುವಾಗಲಿದ್ದು, ಮುಖ್ಯ ಮಂತ್ರಿಗಳು ಇಲಾಖಾವಾರು ಬೇಡಿಕೆ ಪ್ರಸ್ತಾವ ಗಳನ್ನು ಪರಿಶೀಲಿಸಲಿದ್ದಾರೆ. ಹಾಗಾಗಿ ಮುಂದಿನ ಬಜೆಟ್‌ನಲ್ಲಿ ಖಾಲಿ ಹುದ್ದೆ ಭರ್ತಿಗೆ ಒಂದಿಷ್ಟು ಅನುದಾನ ಕಾಯ್ದಿರುವ ಸಾಧ್ಯತೆ ಇದೆ.