Tesla India Recruitment: ಭಾರತದಲ್ಲಿ ‘ಟೆಸ್ಲಾ'(Tesla) ಕಂಪನಿಯ ಭರ್ಜರಿ ಉದ್ಯೋಗ ನೇಮಕಾತಿ-2025.

Tesla India Recruitment: ಭಾರತದಲ್ಲಿ ‘ಟೆಸ್ಲಾ'(Tesla) ಕಂಪನಿಯ ಭರ್ಜರಿ ಉದ್ಯೋಗ ನೇಮಕಾತಿ-2025.

Tesla

Tesla India Recruitment: ಪ್ರಪಂಚದ ಖ್ಯಾತ ಉದ್ಯಮಿ, ಬಿಲಿಯನೇರ್ ಎಲೋನ್ ಮಸ್ಕ್ ಒಡೆತನದ ದೈತ್ಯ ಕಂಪನಿ ಎಲೆಕ್ಟ್ರಿಕ್ ವೆಹಿಕಲ್ (ಇವಿ) ದೈತ್ಯ ಟೆಸ್ಲಾ(Tesla) ಇಂಕ್ ಕಂಪನಿಯು ಭಾರತದಲ್ಲಿ ಉದ್ಯೋಗ ನೇಮಕಾತಿ ಪ್ರಾರಂಭಿಸಿದೆ. ವಾಹನ ಮಾರಾಟ, ಸರ್ವಿಸ್, ಗ್ರಾಹಕ ಬೆಂಬಲ, ಕಾರ್ಯಾಚರಣೆ, ವ್ಯವಹಾರ ಸೇರಿದಂತೆ ಹಲವಾರು ವಿವಿಧ ವರ್ಗಗಳಲ್ಲಿ ಟೆಸ್ಲಾ ಇಂಕ್ ಭಾರತೀಯರ ನೇಮಕಕ್ಕೆ ಮುಂದಾಗಿದೆ. ಆಸಕ್ತರ ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರತಿಷ್ಠಿತ ಟೆಸ್ಲಾ(Tesla) ಕಾರು ಕಂಪನಿಯಲ್ಲಿ ಉದ್ಯೋಗ ಮಾಡಲು  ಆಸಕ್ತಿ ಹೊಂದಿದವರು ಭಾರತೀಯರಿಗೆ ಈ ಕೆಳಗಿನ ಒಂದಿಷ್ಟು ಉದ್ಯೋಗಗಳನ್ನು ನೀಡಿದೆ. ನೀವು ಹೇಗೆ ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆ ಸಂಪೂರ್ಣವಿವರಗಳನ್ನು ಇಲ್ಲಿ ತಿಳಿದುಕೊಳ್ಳಬಹುದು.

ಟೆಸ್ಲಾ ಕಂಪನಿಯು ಮಹಾರಾಷ್ಟ್ರದ ಮುಂಬೈ ಸಬರ್ಬನ್ ನಲ್ಲಿ ಉದ್ಯೋಗ ಅವಕಾಶ ನೀಡುತ್ತಿದೆ. ಸೇವಾ ವ್ಯವಸ್ಥಾಪಕ, ಟೆಸ್ಲಾ ಸಲಹೆಗಾರ, ಅಂಗಡಿ ವ್ಯವಸ್ಥಾಪಕ, ಸೇವಾ ಸಲಹೆಗಾರ, ಭಾಗ ಸಲಹೆಗಾರ, ವಿತರಣಾ ಕಾರ್ಯಾಚರಣೆ ತಜ್ಞರು, ಸೇವಾ ತಂತ್ರಜ್ಞ, ವ್ಯವಹಾರ ಕಾರ್ಯಾಚರಣೆ ವಿಶ್ಲೇಷಕ, ಗ್ರಾಹಕ ಬೆಂಬಲ ಮೇಲ್ವಿಚಾರಕ, ಗ್ರಾಹಕ ವಲಯದಲ್ಲಿ ತಜ್ಞರು, ಆರ್ಡರ್ ಕಾರ್ಯಾಚರಣೆ ತಜ್ಞರು, ಒಳಗಿನ ಮಾರಾಟ ಸಲಹೆಗಾರ ಸೇರಿದಂತೆ ವಿವಿದ ವಲಯಗಳಲ್ಲಿ ನೀವು ಕಾರ್ಯ ನಿರ್ವಹಣೆ ಮಾಡಬಹುದಾಗಿದೆ.

Tesla India Recruitment:ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ, ವಿಧಾನ.

ಆಸಕ್ತ ಅಭ್ಯರ್ಥಿಗಳೂ ಮೊದಲು ಟೆಸ್ಲಾ ಇಂಡಿಯಾದ ಅಧಿಕೃತ ವೆಬ್‌ಸೈಟ್ tesla.com ಗೆ ಭೇಟಿ ನೀಡಬೇಕು.
ಆ ವೆಬ್‌ಸೈಟ್‌ನ ಮುಖಪುಟದಲ್ಲಿ ಲಭ್ಯವಿರುವ ವೃತ್ತಿ ಲಿಂಕ್ ಅನ್ನು ಕ್ಲಿಕ್ ಮಾಡಿ.
• ಅಭ್ಯರ್ಥಿಗಳು ದೇಶದಲ್ಲಿ ಉದ್ಯೋಗ ಸ್ಥಳವನ್ನು ನಮೂದಿಸಬೇಕಾದ ಹೊಸ ಪುಟ ತೆರೆದುಕೊಳ್ಳುತ್ತದೆ.
• ಆ ನಂತರ ನಿಮಗೆ ಎಲ್ಲಾ ವಿಧದ ಉದ್ಯೋಗ ಪ್ರೊಫೈಲ್‌ಗಳನ್ನು ಹೊಂದಿರುವ ಪುಟ ಕಾಣಿಸುತ್ತದೆ.
ಉದ್ಯೋಗ ಪ್ರೊಫೈಲ್ ಅನ್ನು ಕ್ಲಿಕ್ ಮಾಡಿ  ಹಾಗೂ ವಿವರಗಳನ್ನು ಸರಿಯಾಗಿ  ನೋಡಿಕೊಳ್ಳಬೇಕು.
• ನೀವು ಯಾವ ಹುದ್ದೆಗೆ ಅರ್ಹರೆಂದು ಪರಿಶೀಲಿಸಿ ಅಲ್ಲಿರುವ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
• ಕೇಳಲಾದ ವಿವರಗಳನ್ನು ನಮೂದಿಸಿ ಮತ್ತು ಅರ್ಜಿ ಸಲ್ಲಿಸಬಹುದು.
• ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣವಾದ ಬಳಿಕ ದೃಢೀಕರಣ ಪುಟ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಹೆಚ್ಚಿನ ಅಗತ್ಯಕ್ಕಾಗಿ ಅದರ ಹಾರ್ಡ್ ಪ್ರತಿಯನ್ನು ಇಟ್ಟುಕೊಳ್ಳಿ.

Tesla India Recruitment:ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕದಲ್ಲಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರೊಂದಿಗೆ USA ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ್ದರು. ಇದಾದ ಬಳಿಕವೇ ಭಾರದಲ್ಲಿ ಟೆಸ್ಲಾ ಕಂಪನಿ ಸ್ಥಾಪಿಸುವ ಕ್ರಮಕ್ಕೆ ಮುಂದಾಗಿದೆ. ಅದಕ್ಕೆ ಪೂರಕವಾಗಿ ಭಾರತದಲ್ಲಿ ಟೆಸ್ಲಾ ಉದ್ಯೋಗ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಟೆಸ್ಲಾ ಅಧಿಕೃತ https://www.tesla.com/ ಗೆ ಭೇಟಿ ನೀಡಬಹುದು.

WEBSITE LINK – CLICK HERE 

WhatsApp Group Join Now
Telegram Group Join Now

Leave a Comment