UG NEET 2025:ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಯಿಂದ UGNEET–2025 ಗೆ ಸಂಬಂಧಿಸಿದಂತೆ ಮೆಡಿಕಲ್ ಹಾಗೂ ಡೆಂಟಲ್ ಕೋರ್ಸ್ಗಳ Online Stray Vacancy Round ಕುರಿತು ಮಹತ್ವದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.
ಈ ಅಧಿಸೂಚನೆಯಂತೆ, ವಿದ್ಯಾರ್ಥಿಗಳಿಗೆ ನೀಡಿದ್ದ ಆಯ್ಕೆ ನಮೂದಿಸುವ (Option Entry) ಅವಧಿಯನ್ನು ವಿಸ್ತರಿಸಲಾಗಿದ್ದು, ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಕೂಡ KEA ಸ್ಪಷ್ಟಪಡಿಸಿದೆ.
KEA Option Entry Extension ಅವಧಿ ವಿಸ್ತರಣೆ ವಿವರ
• Stray Vacancy Round Option Entry
• ಕೊನೆಯ ದಿನಾಂಕ: 15-12-2025 ಬೆಳಿಗ್ಗೆ 11:00 ಗಂಟೆ
ಮೊದಲಿಗೆ 13-12-2025 ಬೆಳಿಗ್ಗೆ 10:00ಕ್ಕೆ ಮುಕ್ತಾಯವಾಗಬೇಕಿದ್ದ ಅವಧಿಯನ್ನು ಈಗ ವಿಸ್ತರಿಸಲಾಗಿದೆ.
Karnataka NEET UG Stray Vacancy ಹೈಕೋರ್ಟ್ ಆದೇಶದ ಹಿನ್ನೆಲೆ
ಮಾನ್ಯ ಹೈಕೋರ್ಟ್ ಆದೇಶದಂತೆ,UGNEET 3ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟವಾದ ಬಳಿಕ:
ಫೀಸ್ ಪಾವತಿಸಿ
Seat Confirmation Slip ಡೌನ್ಲೋಡ್ ಮಾಡಿಕೊಂಡು
ಆದರೆ ಕಾಲೇಜಿಗೆ ವರದಿ ಮಾಡದೇ ಇರುವ ಅಭ್ಯರ್ಥಿಗಳ ಪಟ್ಟಿಯನ್ನು KEA ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
👉 ಇಂತಹ ಅಭ್ಯರ್ಥಿಗಳಿಗೆ ಅಂತಿಮ ಅವಕಾಶ ನೀಡಲಾಗಿದೆ ಕಾಲೇಜಿಗೆ ಸೇರುವುದಕ್ಕಾಗಿ.
ಖಾಲಿ ಉಳಿದ ಸೀಟುಗಳು UGN EET 2025 Stray Vacancy Round ಗೆ
ಅಂತಿಮ ಅವಕಾಶದ ಬಳಿಕವೂ ಅಭ್ಯರ್ಥಿಗಳು ಕಾಲೇಜಿಗೆ ಸೇರದಿದ್ದರೆ:
ಆ ಸೀಟುಗಳನ್ನು Stray Vacancy Round ಗೆ ಪರಿಗಣಿಸಲಾಗುತ್ತದೆ.
ಹೀಗಾಗಿ ಇತರ ಅರ್ಹ ಅಭ್ಯರ್ಥಿಗಳಿಗೆ ಈ ಸುತ್ತಿನಲ್ಲಿ ಸೀಟು ಪಡೆಯುವ ಅವಕಾಶ ದೊರೆಯಲಿದೆ.
ಮೆಡಿಕಲ್ ಕೋರ್ಸ್ ಫೀಸ್ ಪಾವತಿ ವಿವರ
ಫೀಸ್ ಇನ್ನೂ ಪಾವತಿಸದೇ ಇರುವ ಅಭ್ಯರ್ಥಿಗಳು ಕೆಳಗಿನ ಖಾತೆಗೆ ಆನ್ಲೈನ್ ಮೂಲಕ ಹಣ ವರ್ಗಾಯಿಸಬಹುದು:
ಖಾತೆ ವಿವರಗಳು:
• Account Name: Karnataka Examinations Authority
• A/C No: 50100493950465
• Bank: HDFC Bank Ltd, ಮಲ್ಲೇಶ್ವರಂ ಶಾಖೆ
• IFSC: HDFC0000041
ಫೀಸ್ ಪಾವತಿ ನಂತರ:
CET ಸಂಖ್ಯೆ ಜೊತೆಗೆ ವಿವರಗಳನ್ನು KEAಗೆ ಸಲ್ಲಿಸಬೇಕು ಅಥವಾ
📧 keavikasana@gmail.com ಗೆ ಮೇಲ್ ಮಾಡಬೇಕುಅನಂತರ ಮಾತ್ರ Stray Vacancy Round Option Entry ಮಾಡಲು ಅವಕಾಶ ಸಿಗುತ್ತದೆ.
Stray Vacancy Round ಫಲಿತಾಂಶ
• ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ
• 🕓 15-12-2025 ಸಂಜೆ 4:00 ಗಂಟೆಯ ನಂತರ ಪ್ರಕಟವಾಗಲಿದೆ.
ಪ್ರಮುಖ ಸೂಚನೆ
ಈ ವಿಷಯಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ👉 10-12-2025ರ ಅಧಿಸೂಚನೆಯನ್ನು ಪರಿಶೀಲಿಸುವಂತೆ KEA ಸೂಚಿಸಿದೆ.
