UPSC MAINS EXAM 2025:ಯುಪಿಎಸ್‌ಸಿ(UPSC) 1129 ಹುದ್ದೆ, ಮುಖ್ಯ ಪರೀಕ್ಷೆ ಈ ಬಗ್ಗೆ ಸಂಪೂರ್ಣ ಮಾಹಿತಿ.

UPSC MAINS EXAM 2025:ಯುಪಿಎಸ್‌ಸಿ(UPSC) 1129 ಹುದ್ದೆ, ಮುಖ್ಯ ಪರೀಕ್ಷೆ ಈ ಬಗ್ಗೆ ಸಂಪೂರ್ಣ ಮಾಹಿತಿ.

UPSC

UPSC MAINS EXAM 2025:ದೇಶದ ಅತ್ಯಂತ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆ ‘ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್’ (UPSC) ಸಿವಿಲ್ ಸರ್ವೀಸಸ್-2025ರ ಮುಖ್ಯ ಪರೀಕ್ಷೆ ಭಾನುವಾರ ಬೆಂಗಳೂರು,ದೆಹಲಿ, ಮುಂಬೈ, ಕೋಲ್ಕತಾ ಸೇರಿದಂತೆ ದೇಶದ ವಿವಿಧ ಕೇಂದ್ರಗಳಲ್ಲಿ ನಡೆದಿದೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 5.30ರವರೆಗೆ ಪರೀಕ್ಷೆ ಜರುಗಿದೆ. ಈ ಪರೀಕ್ಷೆಯೂ ಭಾರತೀಯ ಆಡಳಿತ ಸೇವೆ ( IAS), ಭಾರತೀಯ ಪೊಲೀಸ್ ಸೇವೆ ( IPS), ಭಾರತೀಯ ವಿದೇಶಾಂಗ ಸೇವೆ( IFS) ಮತ್ತಿತರ ನಾಗರಿಕ ಸೇವೆಗಳ ಇಲಾಖೆಗಳಿಗೆ ಸಮರ್ಥ ಅಧಿಕಾರಿಗಳನ್ನು ಆಯ್ಕೆ ಮಾಡುವ ಪರೀಕ್ಷೆಯಲ್ಲಿ 2ನೇ ಹಂತವಾಗಿದೆ. ಒಟ್ಟು 1129 ಹುದ್ದೆಗಳಿಗಾಗಿ ಲಿಖಿತ ಪರೀಕ್ಷೆ ನಡೆದಿದ್ದು, 14,625 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಇದಕ್ಕೂ ಮುನ್ನ ಇದೇ ವರ್ಷ ನಡೆದ ಪೂರ್ವಭಾವಿ ಪರೀಕ್ಷೆಗೆ 13 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. 1129 ಹುದ್ದೆಗಳಲ್ಲಿ 979 ಹುದ್ದೆಗಳು ಸಿವಿಲ್ ಸರ್ವೀಸಸ್‌ಗೆ ಸೇರಿದ್ದಾಗಿವೆ. ಅದರಲ್ಲಿ 38 ಹುದ್ದೆ ವಿಶೇಷ ಚೇತನ ವ್ಯಕ್ತಿಗಳಿಗೆ ಮೀಸಲಾಗಿವೆ.

• Read more…ಗೌರವ ಧನದ ಆಧಾರದ ಮೇಲೆ ಅತಿಥಿ ಶಿಕ್ಷಕರು/ಉಪನ್ಯಾಸಕರ(Guest teachers-lecturers) ಹುದ್ದೆಗಳಿಗೆ ಆಹ್ವಾನ.

WhatsApp Group Join Now
Telegram Group Join Now