UPSC Recruitment: ಕೇಂದ್ರ ಲೋಕಸೇವಾ ಆಯೋಗ (UPSC)ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮೆ 15 ಕೊನೆ ದಿನ..
UPSC Recruitment:ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಕೇಂದ್ರ ಲೋಕಸೇವಾ ಆಯೋಗ (UPSC) ಹಿರಿಯ ಪಶುವೈದ್ಯಾಧಿಕಾರಿ ಸೇರಿದಂತೆ ಹಲವಾರು ಹುದ್ದೆಗಳಿಗೆ ನೇಮಕಾತಿ ಪ್ರಾರಂಭಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆಯನ್ನು ಹೊರಡಿಸಿದೆ. ಆಸಕ್ತರು ಕೂಡಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ.
ಕೇಂದ್ರ ಲೋಕಸೇವಾ ಆಯೋಗ (UPSC) ಆಸಕ್ತ ಅಭ್ಯರ್ಥಿಗಳಿಗೆ ಖಾಲಿ ಇರುವ ಹಿರಿಯ ಪಶುವೈದ್ಯಾಧಿಕಾರಿ ಸೇರಿದಂತೆ ಹಲವಾರು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿದೆ. ಮುಂದಿನ ತಿಂಗಳು ಮೇ 15ರೊಳಗಾಗಿ UPSC ಅಧಿಕೃತ ವೆಬ್‌ಸೈಟ್ www.upsc.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಕೊನೆಯ ದಿನದವರೆಗೆ ಕಾಯದೇ ಈ ಕೂಡಲೇ ಅರ್ಜಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ. ವಿದ್ಯಾರ್ಹತೆ, ವಯೋಮಿತಿ, ಖಾಲಿ ಹುದ್ದೆಗಳೆಷ್ಟು ಹಾಗೂ ಇತರ ಮಾಹಿತಿ ಇಲ್ಲಿದೆ.
ಕೇಂದ್ರ ಲೋಕಸೇವಾ ಆಯೋಗ (UPSC)ನೇಮಕಾತಿ ಸಂಪೂರ್ಣ ವಿವರ.
• ನೇಮಕಾತಿ ಸಂಸ್ಥೆ:- ಕೇಂದ್ರ ಲೋಕಸೇವಾ ಆಯೋಗ (UPSC)
• ಹುದ್ದೆಗಳ ಹೆಸರು:- ಹಿರಿಯ ಪಶು ವೈಧ್ಯಾಧಿಕಾರಿ ಮತ್ತು ಇತರ
• ಒಟ್ಟು ಹುದ್ದೆಗಳ ಸಂಖ್ಯೆ:- 40
• ಅರ್ಜಿ ಸಲ್ಲಿಕೆ ವಿಧಾನ:- Online
• ಅರ್ಜಿ ಸಲ್ಲಿಕೆ ವಿಳಾಸ:- www.upsc.gov.in
• ಅರ್ಜಿ ಸಲ್ಲಿಕೆ ಕೊನೆ ದಿನ:- ಮೇ 15
• ಮಾಸಿಕ ವೇತನ:- ನಿಯಮಾನುಸಾರ
• ಗರಿಷ್ಠ ವಯೋಮಿತಿ:- ಹುದ್ದೆಗೆ ಅನುಗುಣವಾಗಿ 30 ರಿಂದ 38
ವಿದ್ಯಾರ್ಹತೆ.
ಈ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರಿ ಎಂಬುದರ ಮೇಲೆ ವಿದ್ಯಾರ್ಹತೆ ಭಿನ್ನವಾಗಿರುತ್ತದೆ. ವಿಜ್ಞಾನಿ-ಬಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಪ್ರಯೋಗಾಲಯ, ಇತರ ಸಂಸ್ಥೆ ವಿದ್ಯುತ್ ಅಂಗಡಿಗಳು/ವಸ್ತುಗಳು/ಅಳತೆ ಉಪಕರಣಗಳ ಪರೀಕ್ಷೆ/ಮಾಪನಾಂಕ ನಿರ್ಣಯ ಮತ್ತು ಮೌಲ್ಯಮಾಪನದಲ್ಲಿ ಒಂದು ವರ್ಷದ ಅನುಭವ ಇರಬೇಕು. ಇನ್ನು ಬೇರೆ ಬೇರೆ ಹುದ್ದೆಗಳ ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಪದವಿ ಹೊಂದಿರುವುದು ಕಡ್ಡಾಯಾಗಿದೆ ಎಂದು ಆಯೋಗ ತಿಳಿಸಿದೆ.
ವಯೋಮಿತಿ.
ಇಲ್ಲಿ ಒಂದೇ ತರನಾದ ಹುದ್ದೆಗಳ ನೇಮಕಾತಿಗೆ ಬದಲಾಗಿ ಬೇರೆ ಬೇರೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾಗಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಭಿನ್ನತೆ ಇದೆ. ವಿಜ್ಞಾನಿ-ಬಿ ಹುದ್ದೆಗೆ OBC ಅಭ್ಯರ್ಥಿಗಳ ವಯಸ್ಸು 38 ವರ್ಷ ನಿಗದಿ ಮಾಡಲಾಗಿದೆ. ವೈಜ್ಞಾನಿಕ ಅಧಿಕಾರಿ ಹುದ್ದೆಗೆ ಸಾಮಾನ್ಯ ವರ್ಗಕ್ಕೆ 30, SC ಅಭ್ಯರ್ಥಿಗಳಿಗೆ 35 ವರ್ಷಗಳು ವಯೋಮಿತಿ ಹೊಂದಿರಬೇಕು. ಬೇರೆ ಬೇರೆ ಹುದ್ದೆಗಳಿಗೂ ಗರಿಷ್ಠ ವಯಸ್ಸು ನಿಗದಿ ಮಾಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸಬೇಕು.
ಅರ್ಜಿ ಶುಲ್ಕ.
ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ(SC)-ಪಂಗಡ(ST) ಮತ್ತು ವಿಶೇಷ ಚೇತನರಿಗೆ ಅರ್ಜಿ ಶುಲ್ಕ ಇಲ್ಲ. ಇತರ ವರ್ಗಗಳ ಅಭ್ಯರ್ಥಿಗಳು 25 ರೂಪಾಯಿ ಮಾಸಿಕ ಶುಲ್ಕ ನಿಗದಿ ಪಡಿಸಲಾಗುತ್ತದೆ. SBIನ ಯಾವುದೇ ಶಾಖೆಯಲ್ಲಿ ನಗದು ಠೇವಣಿ ಇಲ್ಲವೇ ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ನೀವು ಶುಲ್ಕ ಪಾವತಿಸಬಹುದಾಗಿದೆ.