Weight Loss Tips: ಈ ಆಹಾರ ತಿಂದ್ರೆ ನಿಮ್ಮ ದೇಹಕ್ಕೆ ತೂಕ(Weight Loss) ಇಳಿಯೋದಷ್ಟೇ ಅಲ್ಲ, ದೇಹಕ್ಕೆ ಬಲವೂ ಸಿಗುತ್ತೆ!
Weight Loss Tips: ಈ ಆಹಾರ ತಿಂದ್ರೆ ನಿಮ್ಮ ದೇಹಕ್ಕೆ ತೂಕ(Weight Loss)ಇಳಿಯೋದಷ್ಟೇ ಅಲ್ಲ, ದೇಹಕ್ಕೆ ಬಲವೂ ಸಿಗುತ್ತೆ! ಪ್ರೋಟೀನ್ ಅಮೈನೋ ಆಮ್ಲಗಳಿಂದ ಕೂಡಿದ ಅತ್ಯಗತ್ಯ ಪೋಷಕಾಂಶವಾಗಿದೆ. ಇದು ದೇಹದ ಒಟ್ಟಾರೆ ಬೆಳವಣಿಗೆಗೆ ಸಹಾಯ ಮಾಡುತ್ತದೆ ಹಾಗೂ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಮತ್ತು ಸಾಕಷ್ಟು ಕ್ಯಾಲೋರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ.
ಬೊಜ್ಜು (Cholesterol) ಒಬ್ಬರ ಸೌಂದರ್ಯವನ್ನು (Beauty) ಕಡಿಮೆ ಮಾಡುವುದಲ್ಲದೇ, ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು (Health Problems) ಉಂಟು ಮಾಡುತ್ತದೆ. ಬೊಜ್ಜು ಜಗತ್ತಿನಾದ್ಯಂತ ಜನರನ್ನು ಹೆಚ್ಚಾಗಿ ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ ಆಗಿದೆ. ಅನೇಕ ಜನರು ತೂಕ ಇಳಿಸಿಕೊಳ್ಳಲು (Weight Loss) ಏನು ಮಾಡಬೇಕೆಂದು ತಿಳಿಯದೇ ಪರದಾಡುತ್ತಿದ್ದಾರೆ. ತೂಕ ಹೆಚ್ಚಿಸಿಕೊಳ್ಳುವುದು ತುಂಬಾ ಸುಲಭ ಆದರೆ ತೂಕ ಇಳಿಸಿಕೊಳ್ಳುವುದು ತುಂಬಾ ಕಷ್ಟಕರವಾದ ಸಂಗತಿಯಾಗಿದೆ.
ಅಂದರೆ ತೂಕ ಇಳಿಸಿಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕಾಗಿ ದೃಢಸಂಕಲ್ಪ ಬೇಕು ಹಾಗೂ ಇಷ್ಠ ಇರುವ ಆಹಾರಗಳನ್ನು ತ್ಯಾಗ ಮಾಡಬೇಕು. ಅಲ್ಲದೇ, ಸಾಕಷ್ಟು ಸವಾಲುಗಳನ್ನೂ ಎದುರಿಸಬೇಕಾಗುತ್ತದೆ. ಆದರೆ ಕೆಲವು ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸುವ ಮೂಲಕವೇ ನೀವು ಸುಲಭವಾಗಿ ನಿಮ್ಮ ತೂಕ ಇಳಿಸಿಕೊಳ್ಳುವುದಲ್ಲದೇ, ದೇಹವನ್ನು ಸದೃಢವಾಗಿರಿಸಿಕೊಳ್ಳಬಹುದು.
ಪ್ರೋಟೀನ್ ಅಮೈನೋ ಆಮ್ಲಗಳಿಂದ ಕೂಡಿದ ಅತ್ಯಗತ್ಯ ಪೋಷಕಾಂಶವಾಗಿದೆ. ಇದು ದೇಹದ ಒಟ್ಟಾರೆ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಹಾಗೂ ಸಾಕಷ್ಟು ಕ್ಯಾಲೋರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ಪ್ರೋಟೀನ್ ಭರಿತ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು. ಹಾಗಾದ್ರೆ ಅವು ಯಾವುವು ಎಂದು ಒಮ್ಮೆ ತಿಳಿಯೋಣ ಬನ್ನಿ ಗೆಳೆಯರೆ.
• ಬೀನ್ಸ್:- ಜೀ ನ್ಯೂಸ್ ವರದಿ ಪ್ರಕಾರ, ಸೋಯಾಬೀನ್ಸ್, ಕಡಲೆ ಹಾಗೂ ಕಿಡ್ನಿ ಬೀನ್ಸ್ ನಂತಹ ಬೀನ್ಸ್ ನಲ್ಲಿ ಪ್ರೋಟೀನ್ ಮಾತ್ರವಲ್ಲದೇ ಫೈಬರ್ ಕೂಡ ಸಮೃದ್ಧವಾಗಿದೆ. ಇವು ನಿಮ್ಮ ತೂಕ ಇಳಿಸುವ ಪ್ರಯತ್ನಗಳಿಗೆ ಮುಖ್ಯವಾದ ಇತರ ಪೋಷಕಾಂಶಗಳನ್ನು ಇದು ಒಂದು ಸಹ ಒದಗಿಸುತ್ತವೆ.
• ಬ್ರೊಕೊಲಿ:- ಬ್ರೊಕೊಲಿಯಲ್ಲಿ ಪ್ರೋಟೀನ್, ವಿಟಮಿನ್ ಸಿ, ವಿಟಮಿನ್ ಕೆ ಹಾಗೂ ಫೈಬರ್ ಸಮೃದ್ಧವಾಗಿದ್ದು, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಇದನ್ನು ಅತಿಯಾಗಿ ಬೇಯಿಸಿ ತಿಂದರೆ, ನಿಮಗೆ ಯಾವುದೇ ಪೋಷಕಾಂಶಗಳು ಸಿಗುವುದಿಲ್ಲ.
• ಬಾದಾಮಿ:- ಪ್ರತಿದಿನ ಬಾದಾಮಿ ಸೇವಿಸುವುದರಿಂದ ದೇಹದ ಕೊಬ್ಬನ್ನು ಕಡಿಮೆ ಮಾಡಬಹುದು. ಅವುಗಳಲ್ಲಿ ಎಲ್-ಅರ್ಜಿನೈನ್ ಎಂಬ ಅಮೈನೋ ಆಮ್ಲವಿದ್ದು, ಇದು ಕೊಲೆಸ್ಟ್ರಾಲ್ ಅನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ.
• ಕ್ವಿನೋವಾ:- ಗ್ಲುಟನ್-ಮುಕ್ತ ಧಾನ್ಯವಾದ ಕ್ವಿನೋವಾ ಪ್ರೋಟೀನ್‌ನ ಸಂಪೂರ್ಣ ಮೂಲವಾಗಿದೆ. ಕ್ವಿನೋವಾ ನಿಮ್ಮ ದೈನಂದಿನ ಪ್ರೋಟೀನ್ ಅಗತ್ಯಗಳನ್ನು ಪೂರೈಸುತ್ತದೆ ಹಾಗೂ ದೀರ್ಘಕಾಲದವರೆಗೆ ನಿಮ್ಮನ್ನು ಹೊಟ್ಟೆ ತುಂಬಿರುವಂತೆ ಮಾಡುತ್ತದೆ.
• ಪಾಲಕ್:- ಪಾಲಕ್ ಬೇಯಿಸಿದ ಮೊಟ್ಟೆಯಲ್ಲಿರುವ ಪ್ರೋಟೀನ್‌ಗೆ ಸಮಾನವಾದ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದರಲ್ಲಿ ಇತರೆ ಪೋಷಕಾಂಶಗಳು ಸಹ ಕೂಡ ಸಮೃದ್ಧವಾಗಿವೆ. ಪಾಲಕ್ನಲ್ಲಿರುವ ಕ್ಯಾಲೋರಿಗಳು ತುಂಬಾ ಕಡಿಮೆ ಇದೆ. ಹಾಗಾಗಿ ಬೇಯಿಸಿದ ಪಾಲಕ್ ಅನ್ನು ಮಿತವಾಗಿ ತಿನ್ನುವುದರಿಂದ ಲೆಕ್ಕವಿಲ್ಲದಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿವೆ.
• ಪನೀರ್:- ಕಾಟೇಜ್ ಚೀಸ್ ಮತ್ತು ಪನೀರ್ ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದರಲ್ಲಿ ಕ್ಯಾಲೋರಿಗಳು ಹಾಗೂ ಕೊಬ್ಬು ತುಂಬಾ ಕಡಿಮೆಯಾಗಿದ್ದು, ವಿಟಮಿನ್ ಬಿ 12, ಕ್ಯಾಲ್ಸಿಯಂ, ರಂಜಕ ಹಾಗೂ ರೈಬೋಫ್ಲಾವಿನ್ ಸೇರಿದಂತೆ ಅನೇಕ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ.