* ಇತಿಹಾಸವನ್ನು ಇಂಗ್ಲಿಷ್ ನಲ್ಲಿ ” ಹಿಸ್ಟರಿ” ಎಂದು ಕರೆಯುತ್ತಾರೆ ಇದು ಗ್ರೀಕ್ ಪದವಾದ ” ಹಿಸ್ಟೋರಿಯಾ ” ಎಂಬ ಮೂಲದಿಂದ ಬಂದಿದ್ದು ಇದರ ಅರ್ಥ ‘ ವಿಚಾರಣೆ/ತನಿಖೆ’.
* ಇತಿಹಾಸದ ಪಿತಾಮಹ – ಹೆರೋಡೋಟಸ್.
* ಭಾರತದ ಇತಿಹಾಸದ ಪಿತಾಮಹ – ಕಲ್ಹಣ ( ಕೃತಿ- ರಾಜತರಂಗಿಣಿ).
-: ಇತಿಹಾಸದ ವ್ಯಾಖ್ಯೆಗಳು :-
ಇತಿಹಾಸಕಾರರು ಮತ್ತು ಪ್ರಮುಖ ಹೇಳಿಕೆಗಳು.
* ಹೆರೋಡೋಟಸ್
‘ ಮುಂದಿನ ಪೀಳಿಗೆಯು ನೆನಪಿಡಬೇಕಾದ ಮಹಾನ್ ವೀರರ ಅಥವಾ ಮಹತ್ವಪೂರ್ಣವಾದ ಘಟನೆಗಳ ದಾಖಲೆಯೇ ಇತಿಹಾಸ ‘.
( ಕೃತಿ- ದಿ ಹಿಸ್ಟರಿ ಆಫ್ ಪರ್ಸಿಯನ್ ವಾರ್ಸ್ )
* ಸಂತ ಆಗಸ್ಟೈನ
‘ ಇತಿಹಾಸವು ದೇವರು ಮತ್ತು ಸೈತಾನನ ನಡುವಿನ ಸಂಘರ್ಷದ ಕಥೆ’.
(ಕೃತಿ-ದ ಸಿಟಿ ಆಫ್ ಗಾಡ್ )
* ಕಾರ್ಲ್ ಮಾರ್ಕ್ಸ್
‘ ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷ
( ಕೃತಿಗಳು – ದಾಸ್ ಕ್ಯಾಪಿಟಲ್ ಮತ್ತು ಕಮ್ಯುನಿಸ್ಟ್ ಮ್ಯಾನಿಫೆಸ್ಟೋ )
* ಡಾ.ಬಿ.ಆರ್.ಅಂಬೇಡ್ಕರ್
‘ ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು.’
* ಜೆ.ಬಿ. ಬ್ಯೂರಿ
‘ ಇತಿಹಾಸವು ಒಂದು ವಿಜ್ಞಾನ, ಹೆಚ್ಚು ಅಲ್ಲ. ಕಡಿಮೆಯೂ ಅಲ್ಲ.
* ಅರ್ನಾಲ್ಡ್ ಟಾಯ್ನ್ ಬಿ
‘ ಇತಿಹಾಸವು ನಾಗರಿಕತೆಗಳ ಏಳುಬೀಳಿನ ಕಥೆ ‘.
( ಕೃತಿ – ಎ ಸ್ಟಡಿ ಆಫ್ ಹಿಸ್ಟರಿ )
* ಪಂಡಿತ ಜವಾಹರ್ ಲಾಲ್ ನೆಹರು.
‘ ಅನಾಗರಿಕತೆಯಿಂದ ಸಾಗರಿಕತೆಗೆ ಸಾಗಿದ ಮಾನವನ ಕಥೆ.’
( ಕೃತಿ – ಡಿಸ್ಕವರಿ ಆಫ್ ಇಂಡಿಯಾ, ದಿ ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ.)
* ಮಾನವ ಸಮಾಜ ಹಿಂದೆ ಬದುಕನ್ನು ಕಟ್ಟಿಕೊಳ್ಳಲು ಮಾಡಿಕೊಂಡಿರುವ ವಿವಿಧ ಅನುಕೂಲಗಳು, ವಸ್ತುಗಳು ಇಂದಿಗೂ ಉಳಿದುಕೊಂಡಿದ್ದು ಇವುಗಳನ್ನು ಇತಿಹಾಸ ರಚನೆಗೆ ಬೇಕಾಗುವ ಆಧಾರಗಳೆಂದು ಪರಿಗಣಿಸಲಾಗಿದೆ.
-: ಗಮನಿಸಿ :-
ಉತ್ಖನನ ಎಂದರೆ – ಮಾನವನ ಪ್ರಾಚೀನ ಅವಶೇಷಗಳನ್ನು ಹೊರತೆಗೆಯಲು ನಡೆಸುವ ವೈಜ್ಞಾನಿಕವಾದ ಭೂ ಅಗೆತ.
-: ವಿಶೇಷ ಮಾಹಿತಿ :-
* ಹೆನ್ರಿಚ್ ರೋಥ್
ಸಂಸ್ಕೃತ ಪ್ಯಾಕರಣವನ್ನು ಮೊದಲ ಬಾರಿಗೆ ಲ್ಯಾಟಿನ್ ಭಾಷೆಯಲ್ಲಿ ಬರೆದರು.
* ಫಾದರ್ ಕಾರ್ ಡಾರ್ಕ್ಸ್
ಸಂಸ್ಕೃತ ಮತ್ತು ಯುರೋಪಿನ ಭಾಷೆಗಳ ನಡುವೆ ಸಂಬಂಧವಿದೆ ಎಂದು ಮೊದಲ ಬಾರಿಗೆ ಗುರುತಿಸಿದನು.
* ವಿಲಿಯ್ಂ ಜೋನ್ಸ್
ಇಂಡಾಲಜಿ( ಭಾರತೀಯ ಶಾಸ್ತ್ರ) – ಈ ವಿಷಯದ ಅಧ್ಯಯನಕ್ಕೆ ಮಹತ್ವದ ಹೆಜ್ಜೆ ಇಟ್ಟು ಇಂಗ್ಲಿಷ್ ಅಧಿಕಾರಿ. ಸಾ.ಶ 1784ರಲ್ಲಿ ” ದಿ ಏಷ್ಯಾಟಿಕ್ ಸೊಸೈಟಿ ” ಎಂಬ ಸಂಸ್ಥೆಯ ಸ್ಥಾಪನೆ. ಗೀತಗೋವಿಂದ, ಮಾನವ ಧರ್ಮಶಾಸ್ತ್ರ ಮತ್ತು ಕಾಳಿದಾಸನ ಶಾಕುಂತಲ ಕೃತಿಯನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದರು.
* ಮ್ಯಾಕ್ಸ್ ಮುಲ್ಲರ್
ಪ್ರಮುಖ ಪೌರಾತ್ಯ ವಾದಿ ಹಾಗೂ ಭಾರತೀಯ ಶಾಸ್ತ್ರಜ್ಞ – ಸೇಕ್ರೆಡ್ ಬುಕ್ ಆಫ್ ದಿ ಈಸ್ಟ್ ಹೆಸರಿನಲ್ಲಿ 50 ಸಂಪುಟಗಳನ್ನು ಇಂಗ್ಲಿಷ್ ಭಾಷೆಗೆ ತಂದರು.
* ಜೇಮ್ಸ ಮಿಲ್
ಹಿಸ್ಟರಿ ಆಫ್ ಇಂಡಿಯಾ ( ಕೃತಿ)
* ಅಬೆ ಡುಬಾಯ್ಸ್
ದೊಡ್ಡ ಸ್ವಾಮಿ ಎಂದು ಹೆಸರುವಾಸಿ.( ಕೃತಿ- ಹಿಂದೂ ಮ್ಯಾನರ್ಸ ಕಸ್ಟಮ್ಸ್ ಅಂಡ್ ಸರೆಮನಿಸ್)
* ಇಗ್ನೇಶಿಯಸ್ ಲಯೋಲ
1534 ರಲ್ಲಿ ಪ್ಯಾರಿಸ್ ನಲ್ಲಿ ಜೀಸಸ್ ಸಂಘವನ್ನು ಕಟ್ಟಿದರು.
* ಇಂಡಾಲಜಿ
ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕುರಿತು ಅಧ್ಯಯನ ನಡೆಸುವ ಶಾಸ್ತ್ರ.
I ಸಾಹಿತ್ಯಿಕ ಆಧಾರಗಳು.
* ದೇಶಿಯ ಸಾಹಿತ್ಯ
ಭಾರತೀಯರಿಂದ ರಚಿತವಾದ ಸಾಹಿತ್ಯವನ್ನು ದೇಶಿಯ ಸಾಹಿತ್ಯ ಎನ್ನುವರು.
* ವಿದೇಶಿಯ ಸಾಹಿತ್ಯ
ವಿದೇಶಿ ಬರಹಗಾರರು, ಪ್ರವಾಸಿಗರು, ವಿದ್ವಾಂಸರಿಂದ ರಚಿತವಾದ ಸಾಹಿತ್ಯವನ್ನು ವಿದೇಶಿ ಸಾಹಿತ್ಯ ಎನ್ನುವರು.
-: ದೇಶಿಯ ಸಾಹಿತ್ಯ – ಲಿಖಿತ ಸಾಹಿತ್ಯ :-
ಕೃತಿಗಳು ಮತ್ತು ಕರ್ತೃ
* ರಾಜತರಂಗಿಣಿ – ಕಲ್ಹಣ
* ಮುದ್ರಾರಾಕ್ಷಸ, ದೇವಿ ಚಂದ್ರಗುಪ್ತಂ – ವಿಶಾಖದತ್ತ
* ಬುದ್ಧಚರಿತ – ಅಶ್ವಘೋಷ
* ಅರ್ಥಶಾಸ್ತ್ರ – ಕೌಟಿಲ್ಯ
* ಶೂದ್ರಕ – ಮೃ ಚ್ಛಕಟಿಕ
* ಪಾಣಿನಿ – ಅಷ್ಟಾಧ್ಯಾಯಿ
* ಗಾಥಾಸಪ್ತಶತಿ – ಹಾಲ
* ಹರ್ಷಚರಿತೆ,ಕಾದಂಬರಿ – ಬಾಣಭಟ್ಟ
* ವೃಥ್ವಿರಾಜ್ ರಾಸೋ – ಚಾಂದ್ ಬರ್ದಾಯಿ
* ವಿಕ್ರಮಾರ್ಜುನ ವಿಜಯ – ಪಂಪ
-: ವಿದೇಶಿಯ ಸಾಹಿತ್ಯ – ಲಿಖಿತ ಸಾಹಿತ್ಯ :-
ಕೃತಿಗಳು ಮತ್ತು ಕರ್ತೃ
* ಇಂಡಿಕಾ – ಮೆಗಸ್ತನೀಸ್
* ಘೋ – ಕೋ- ಕಿ – ಫಾಹಿಯಾನ್
* ಸಿ-ಯು ಕಿ- ಹ್ಯೂಯೆನ್ ತ್ಸಾಂಗ್
* ಜಿಯೋಗ್ರಾಫಿ – ಟಾಲೆಮಿ
* ತಾರೀಖ್-ಫಿರೋಜ್ ಷಾಹಿ – ಬರೌನಿ
* ತಾರೀಖ್ – ಎ-ಫರಿಶ್ತಾ – ಫರಿಶ್ತಾ
* ತುಜ್-ಕಿ-ಬಾಬರಿ – ಬಾಬರ್
* ಮೌಖಿಕ ಸಾಹಿತ್ಯ ಒಬ್ಬರಿಂದ ಒಬ್ಬರಿಗೆ ಬಾಯಿ ಮಾತಿನ ಮೂಲಕ ಹರಿದು ಬಂದ ಲಾವಣಿ, ಐತಿಹ್ಯ, ಜಾನಪದ ಗೀತೆ ಮುಂತಾದವುಗಳನ್ನು ಒಳಗೊಂಡಿದೆ.
II ಪ್ರಾಕ್ತನ ಆಧಾರಗಳು – ಸೂತ್ರ- ಸ್ಮಶಾನ
1. ಸ್ಮಾರಕಗಳು
ಇತಿಹಾಸ ರಚನೆಗೆ ಬೇಕಾಗುವ ಮಹತ್ವಪೂರ್ಣ ಆಧಾರಗಳು.
ಉದಾಹರಣೆ:- ಅರಮನೆಗಳು,ದೇವಾಲಯಗಳು, ಕೋಟೆ ಕೊತ್ತಲಗಳು, ಸ್ತಂಭಗಳು.
2. ಶಾಸನಗಳು
ಶಾಸನ ಎಂದರೆ ಕೊರೆಯಲ್ಪಟ್ಟಿರುವ ಎಂದರ್ಥ ಇವು ಹೆಚ್ಚು ವಿಶ್ವಾಸಾರ್ಹ ಆಧಾರಗಳು.
ಉದಾಹರಣೆ:- ಅಶೋಕನ ಶಾಸನಗಳು,ಅಲಹಾಬಾದ್ ಸ್ತಂಭ ಶಾಸನ, ಪುಲಕೇಶಿ ಐಹೊಳೆ ಶಾಸನ, ಖಾರವೇಲನ ಹಾಥಿ ಗುಂಪ ಶಾಸನ,ಚೋಳರ ಗ್ರಾಮ ಆಡಳಿತ ತಿಳಿಸುವ ಉತ್ತರ ಮೇರೂರು ಶಾಸನ.
3. ನಾಣ್ಯಗಳು
ನಾಣ್ಯಗಳ ಅಧ್ಯಯನವನ್ನು ನ್ಯೂಮಿಸ್ ಮ್ಯಾಟ್ರಿಕ್ಸ್ ಎನ್ನುವರು ಇವುಗಳು ರಾಜನ ಅಧೀನದಲ್ಲಿರುವ ಪ್ರದೇಶದ ವ್ಯಾಪ್ತಿ,ಆಡಳಿತ ಭಾಷೆ, ರಾಜನ ಬಿರುದು ಮತ್ತು ಸಾಧನೆ, ರಾಜನ ಮತ ಧರ್ಮ, ರಾಜ್ಯದ ಆರ್ಥಿಕ ಸ್ಥಿತಿಗತಿ, ಲೋಹತಂತ್ರ ಜ್ಞಾನ ಮುಂತಾದವುಗಳ ಕುರಿತು ತಿಳಿಸುತ್ತದೆ.
4. ಇತರೆ ಅವಶೇಷಗಳು
ಮಡಿಕೆ ಚೂರು,ಮಣಿ, ಮುದ್ರೆ ಮತ್ತು ಲೋಹದ ತುಣುಕುಗಳು.
-: ವಿಶೇಷ ಮಾಹಿತಿ:-
( ಸಿ-14- Radio Active Carbon/ವಿಕಿರಣಶೀಲ ಇಂಗಾಲ)
* ಕಾಲ ನಿಷ್ಕರ್ಷೆಯ ಒಂದು ವೈಜ್ಞಾನಿಕ ವಿಧಾನ.ಪ್ರತಿಯೊಂದು ಜೀವಿಯಲ್ಲಿ ಇಂಗಾಲ – 14, ಇಂಗಾಲ-12 ಸಮ ಪ್ರಮಾಣದಲ್ಲಿದ್ದು ಜೀವಿ ಸತ್ತ ನಂತರ ಇಂಗಾಲ -14 ಕ್ರಮೇಣ ಕ್ಷೀಣಿಸುತ್ತದೆ ಆದರೆ ಇಂಗಾಲ -12 ಅದೇ ಪ್ರಮಾಣದಲ್ಲಿ ಇರುತ್ತದೆ ಇದರ ವ್ಯತ್ಯಾಸದಿಂದ 10.000 ವರ್ಷಗಳಷ್ಟು ಹಳೆಯ ಪಳೆಯುಳಿಕೆಗಳ ಕಾಲವನ್ನು ಪತ್ತೆ ಹಚ್ಚಬಹುದು.