* ಮೆಸಪಟೋಮಿಯ ನಾಗರಿಕತೆ – ಯುಪ್ರಿಟಿಸ್ ಮತ್ತು ಟೈಗ್ರಿಸ್
* ಚೀನಾ ನಾಗರಿಕತೆ – ಸಿಕಿಯಾಂಗ್ ಮತ್ತು ಹ್ವಾಂಗೋ ಹೋ
* ಹರಪ್ಪ ನಾಗರಿಕತೆ – ಸಿಂಧೂ ಮತ್ತು ಅದರ ಉಪ ನದಿಗಳು
-: ಈಜಿಪ್ಟ್ ನಾಗರಿಕತೆ :-
* ಪ್ರಾಚೀನ ಜಗತ್ತಿನ ಮೊದಲ ನಾಗರಿಕತೆ – ಈ ಜಿಪ್ಟ್ ( ನೈಲ್ ನದಿಯ ದಂಡಲ್ಲಿ)
* ನೈಲ್ ನದಿಯು ಆಫ್ರಿಕಾ ಖಂಡದಲ್ಲಿ ಉತ್ತರಾಭಿಮುಖವಾಗಿ ಹರಿದು ಮೆಡಿಟರೇನಿಯನ್ ಸಮುದ್ರವನ್ನು ಸೇರುತ್ತದೆ. ಹೀಗ ಹರಿಯುವ ಮಾರ್ಗ ದಲ್ಲಿ ಈ ಜಿಪ್ಪನ್ನ ಹಾದು ಹೋಗುತ್ತದೆ. ನೈಲ್ ನದಿಯು ಇಲ್ಲದೇ ಹೋಗಿದ್ದರೆ. ಈಜಿಪ್ಟ್ ಸಂಪೂರ್ಣ ಮರಭೂಮಿಯಾಗುತ್ತಿತ್ತು. ಆದ್ದರಿಂದ ‘ಈ ಜಿಪ್ಟನ್ನು ನೈಲ್ ನದಿಯ ವರಪ್ರಸಾದ’ ( Egypt tha gift of Nile) ಎನ್ನುವರು.
* 5400 ವರ್ಷಗಳ ಹಿಂದೆ ಈ ಜಿಪ್ಟ್ ನಲ್ಲಿ ರಾಜವಂಶಗಳ ಆಳ್ವಿಕೆಯು ಆರಂಭವಾಯಿತು.
* ಈ ಜಿಪ್ಟನ ರಾಜರನ್ನು ‘ಫೇರೋ’ ಎಂದು ಕರೆಯುತ್ತಿದ್ದರು.
* ಮೊದಲ ಫೇರೋ – ‘ಮೆನಸ್’ ( ಮೆಂಫಿಸ್ ಇವನ ರಾಜಧಾನಿ)
* ಮೆನಸ್‌ನ ನಂತರ ಖುಫು, ಅಮೇನ್ ಹೋಟೆಫ್, ಥಟ್ಮೋಸ್ ಮುಂತಾದವರು ಆಳಿದರು.
* ಜಗತ್ತಿನ ಅತಿ ದೊಡ್ಡ ಪಿರಮಿಡ್- ಗಿಜಿಹ ಪಿರಮಿಡ್
* ನಿರ್ಮಿಸಿದವನು – ಖುಫು/ ಖುಪ್ರೆ
* ಈಜಿಪ್ಟ್ನಲ್ಲಿ ಅಮೇನ್ ಹೋಟೆಪ್ ದಿಗ್ವಿಜಯದ ಮೂಲಕ ರಾಜ್ಯವನ್ನು ವಿಸ್ತರಿಸಿದನು.
* ಜಗತ್ತಿನ ಮೊದಲ ಮಹಿಳಾ ಸಾಮ್ರಾಜ್ಯ – ಹ್ಯಾಷೆಪ್ಸುಟ್
(Hathepsut)
* ಅಂತಿಮವಾಗಿ ಸುಮಾರು 2,300 ವರ್ಷಗಳ ಹಿಂದೆ,ಈಜಿಪ್ಟ್ ಅನ್ನು ಗ್ರೀಸ್ ನ ದೊರೆ ಅಲೆಕ್ಸಾಂಡರ್ ಗೆದ್ದುಕೊಂಡನು.
* ಅಲೆಕ್ಸಾಂಡರ್ ಈಜಿಪ್ಟ್ ಅನ್ನು ಗೆದ್ದುಕೊಂಡು ಅಲ್ಲಿ ತನ್ನ ಪ್ರತಿನಿಧಿಯನ್ನು ನೇಮಿಸುವ ಮೂಲಕ ಯಾವ ಮನೆತನದ ಆರಂಭಕ್ಕೆ ಕಾರಣನಾದನು?
-> ಟಾಲೆಮಿ ಮನೆತನ
* ಟಾಲೆಮಿ ಮನೆತನದ ಕೊನೆಯ ಆಡಳಿತಗಾರ್ತಿ – ಕ್ಲಿಯೋಪಾತ್ರ.
* ಕ್ಲಿಯೋಪಾತ್ರ ಕಾಲದಲ್ಲಿ ಈಜಿಪ್ಟ್ ಯಾವುದರ ಆಡಳಿತಕ್ಕೆ ಒಳಪಟ್ಟಿತ್ತು?
-> ರೋಮ್ ಆಡಳಿತಕ್ಕೆ
* ಈಜಿಪ್ಟ್ ನಲ್ಲಿ ಶವಗಳನ್ನು ಸಂರಕ್ಷಿಸುವುದು ‘ ಮಮ್ಮಿ ಪರಣ’ಎನ್ನುತ್ತಾರೆ.
* ಪ್ರಾಚೀನ ಈಜಿಪ್ಟ್ನಲ್ಲಿ ಪ್ರತಿ ನಗರಕೊಂದು ನಗರ ದೇವತೆಗಳಿದ್ದವು.
* ಸೂರ್ಯ ಮತ್ತು ನದಿಯನ್ನು ದೇವರೆಂದು ಪರಿಗಣಿಸಿದ್ದರು.
* ಈಜಿಪ್ಟಿಯನ್ನರ ಬರವಣಿಗೆಗಳನ್ನು ‘ ಹೈರೋಗ್ಲೋಪ’ ಎಂದು ಕರೆಯುತ್ತಿದ್ದರು.
* ಹೈರೋಗ್ಲೋಪ್ ಎಂದರೆ ಪವಿತ್ರ ಲಿಪಿ.
* ನೈಲ್ ನದಿಯಲ್ಲಿ ಬೆಳೆಯುತ್ತಿದ್ದ ಯಾವ ಹುಲ್ಲಿನ ಮೇಲೆ ಮಸಿಯಿಂದ ಬರೆಯುತ್ತಿದ್ದರು?
-> ಪ್ಯಾಪಿರಸ್ ಎಂಬ ಜೊಂಡು ಹುಲ್ಲಿನ ಮೇಲೆ
* ಈಜಿಪ್ಟಿಯನ್ನರಿಗೆ ರೇಖಾಗಣಿತದಲ್ಲಿ ಅಪಾರಜ್ಞಾನವಿತ್ತು ಎಂದು ತಿಳಿದಿದೆ ಈ ಜ್ಞಾನದಿಂದಲೇ ಬೃಹತ್ ಪಿರಮಿಡ್ಗಳ ರಚನೆ ಸಾಧ್ಯವಾಗಿದೆ.
* ಈಜಿಪ್ಟ್ನ ಶಿಲ್ಪಿಗಳಲ್ಲಿ ‘ ಸ್ಪಿಂಕ್ಸ್’ ಎಂಬ ಪ್ರತಿಮೆಯು ಆಕರ್ಷಕವಾಗಿದೆ ಇದು ಸಿಂಹದ ದೇಹ ಮತ್ತು ಮನುಷ್ಯನ ಮುಖವನ್ನು ಹೊಂದಿದೆ.
-: ಮೆಸಪಟೊಮಿಯ ನಾಗರಿಕತೆ:-
* ಇಂದಿನ ಇರಾಕ್ ದೇಶದ ಟೈಗ್ರಿಸ್ ಮತ್ತು ಯುಪ್ರೈಟಿಸ್ ನದಿಗಳ ನಡುವಿನ ಬಯಲಿನಲ್ಲಿ ಹುಟ್ಟಿದ ನಾಗರಿಕತೆಯ ಮೆಸಪೋಟಮಿಯ ನಾಗರಿಕತೆ.
* ಗ್ರೀಕ್ ಭಾಷೆಯಲ್ಲಿ ಮೆಸಪಟಮಿಯ ಎಂದರೆ ‘ ಎರಡು ನದಿಗಳ ನಡುವಿನ ಪ್ರದೇಶ’
* ಸುಮೆರರು ಬ್ಯಾಬಿಲೋನಿಯರು, ಹಿಟ್ಟ್ರೆಟರು, ಅಸ್ಸಿರಿಯನ್ನು ಮತ್ತು ನವಾ ಬ್ಯಾಬಿಲೋನಿಯನ್ನರು ನಸಪೋಟಮಿಯವನ್ನು ಆಳಿದರು.
-: ರಾಜಕೀಯ ಇತಿಹಾಸ:-
* ಸುಮೇರಿಯನ್ನರಿಂದ ಮೊಟ್ಟಮೊದಲ ನಾಗರಿಕತೆಯೆಂದು ಎಳಿಗೆಗೆ ಬಂದಿತ್ತು. ಉರ್( ಗಡಿಕಿಶ್(Kish), ಲಗಾಶ್(Lagash) ಮೊದಲಾದ ನಗರಗಳು ಆರಂಭವಾದವು.
* ಸುಮೇರಿಯನ್ನರು ಹಸಿ ಜೇಡಿಮಣ್ಣಿನ ಫಲಕಗಳ ಮೇಲೆ ಬರೆಯುತ್ತಿದ್ದ ಲಿಪಿ ಯಾವುದು?
-> ಕ್ಯೂನಿಫಾರಂ (Cuneiform)
* ಮೆಸೊಫೋಟೋಮಿಯನ್ನರು ಭಾರತದೊಂದಿಗೆ ಸಂಬಂಧವನ್ನು ಹೊಂದಿದ್ದರು.
* ಸುಮೇರಿಯನ್ನರ ನಂತರ ಅಧಿಕಾರಕ್ಕೆ ಬಂದವರು- ಅಕ್ಕಾಡೆಯನ್ನರು.
* ಅಕಾಡೆಯನ್ನರ ಸಾಮ್ರಾಜ್ಯವು ಅನಾಗರಿಕ ದಾಳಿಗೆ ತುತ್ತಾಗಿ ಪತನಗೊಂಡಿತು ನಂತರ ‘ಅಮೋರೈಟರು’ ಎಂಬ ಮತ್ತೊಂದು ಜನಾಂಗವು ಬ್ಯಾಬಿಲೋನ್ ಎಂಬ ಪಟ್ಟಣದಿಂದ ಆಳುತ್ತಿದ್ದರು ಇವರು ಅಕಾಡೆಯನ್ ರಾಜ್ಯವನ್ನು ತಮ್ಮ ನಿಯಂತ್ರಣಕ್ಕೆ ಪಡೆದು ವಿಶಾಲರಾಜ್ಯ ಸ್ಥಾಪಿಸಿದರು.
* ಬ್ಯಾಬಿಲೋನಿಯನ್ನರಲ್ಲಿ ಪ್ರಸಿದ್ಧನಾದ ರಾಜ -” ಹಮ್ಮುರಬಿ”
* ಈತನು ತನ್ನ ಕಾನೂನು ಸಂಹಿತೆಗಳ ಮೂಲಕ ಜಗತ್ಪ್ರಸಿದ್ಧನಾಗಿದ್ದನು.’ ಮುಯ್ಯಿಗೆ ಮುಯ್ಯಿ’ ಎಂಬ ತತ್ವದ ಮೇಲೆ ಕಾನೂನುಗಳಿವೆ.
* ಬ್ಯಾಬಿಲೋನಿಯನ್ನರ ನಂತರ ‘ಕೌಸೈಟ್’ ಮತ್ತು ‘ ಹೆಟ್ಟೈಟ್’ ಎಂಬ ಜನಾಂಗಗಳು ಕೆಲವು ಕಾಲ ಮೆಸಪೋಟಮಿಯವನ್ನು ಆಳಿದರು.
* ಹಿಟ್ಟೈಟ್ ರ ನಂತರ ಮೆಸೊಪೊಟೋಮಿಯಾವನ್ನು ‘ ಅಸ್ಸೀರಿಯನ್ನರು ‘ .ಆಳಿದರು.
* ಅಸರಿಯನ್ನರ ಪ್ರಮುಖ ಚಕ್ರವರ್ತಿ – ‘ಅಸುರ್ ಬನ್ನಿಪಾಲ್’ ಇವನು ಮಹಾನ್ ಕಲಿಯು ಮತ್ತು ಕವಿಯು ಆಗಿದ್ದನು.
* ಅಸುರ್ ಬನಿಪಾಲ್ ಯಾವ ನಗರದಲ್ಲಿ ಉತ್ತಮ ಗ್ರಂಥಾಲಯವನ್ನು ನಿರ್ಮಿಸಿದನು?
-> ನಿನೆವ್ಹ ನಗರದಲ್ಲಿ
* ಅಸ್ಸೀರಿಯನ್ನರ ನಂತರ ಚಾಲ್ಡಿಯನ್ನರು ಆಡಳಿತವನ್ನು ನಡೆಸಿದರು.
* ಚಾಲ್ಡಿಯನ್ನರ ಪ್ರಸಿದ್ಧ ದೊರೆ – ನೆಬುಖಡ್ನೆಜರ್(Nebuchadnezzar)
* ಪ್ರಾಚೀನ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ತೂಗು ಉದ್ಯಾನವನ (Hanging Garden) ಬ್ಯಾಬಿಲೋನ್ ನಗರದಲ್ಲಿ ಯಾರು ನಿರ್ಮಿಸಿದರು?
-> ನೆಬುಖಡ್ನೆಜರ್
* ಅಂತಿಮವಾಗಿ 2500 ವರ್ಷಗಳ ಹಿಂದೆ ಪರಿಚಯದ ಚಕ್ರವರ್ತಿ ಸೈರಸನು ಬ್ಯಾಬಿಲೋನ್ ನಗರವನ್ನು ಗೆಲ್ಲುವ ಮೂಲಕ ಪ್ರಾಚೀನ ಮೆಸೊಪೋಟೋಮಿಯ ನಾಗರಿಕತೆಯು ಅಂತ್ಯಗೊಂಡಿತು.
-:ಕೊಡುಗೆಗಳು :-
* ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಕಾನೂನು ಸಂಹಿತೆಗಳುನ್ನು ಅಳವಡಿಸಿಕೊಂಡವರು?
-> ಮೆಸೊಪೋಟಮಿಯನ್ನರು
* ಹಮ್ಮು ರಬಿಯು ಜಗತ್ತಿನಲ್ಲೇ ಮೊದಲ ಬಾರಿಗೆ ಕಾನೂನು ಸಂಹಿತೆಗಳನ್ನು ಜಾರಿಗೆ ತಂದನು ಇವನ ಕಾನೂನುಗಳಲ್ಲಿ ಗುಲಾಮರ ಮೇಲಿನ ದೌರ್ಜನ್ಯವನ್ನು ನಿಷೇಧಿಸಿದನು.
* ಮೆಸೊಫೋಟೋಮಿಯನ್ನರು ಹರಪ್ಪ ಮತ್ತು ಈಜಿಪ್ಟ್ ನಾಗರಿಕತೆಗಳ ಜೊತೆಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದರು.
* ಮೆಸೊಪೋಟಮಿಯನ್ನರು ಎತ್ತರವಾದ ದೇವಾಲಯಗಳನ್ನು ‘ಜಿಗ್ಗುರಾತ್’ ಎಂದು ಕರೆಯುತ್ತಿದ್ದರು.
* ಕೋನಲಿಪಿ ( ಕ್ಯೂನಿಫಾರ್ಮ್) ಬರಹಗಳನ್ನು ಈ ಜನರು ಬಳಸುತ್ತಿದ್ದರು.
* ಮೆಸೊಪೋಟಮಿಯನ್ನರ ಒಂದು ಮಹಾ ಕಾವ್ಯ – ‘ ಗಿಲ್ಗ್ ಮೆಶ್’
-: ಚೀನಾ ನಾಗರಿಕತೆ:-
* ಭಾರತದ ಈಶಾನ್ಯ ದಿಕ್ಕಿನಲ್ಲಿರುವ ದೇಶವೇ ಚೀನಾ ಇಲ್ಲಿನ ಜನರು ಮಂಗೋಲಿಯನ್ ಎಂಬ ಹಳದಿ ಮೈಬಣ್ಣದ ಬುಡಕಟ್ಟಿಗೆ ಸೇರಿದವರು.
* ಯಾಂಗ್ ತ್ಸೆ ಮತ್ತು ಹ್ವಾಂಗ್ ಹೋ( ಹಳದಿ ನದಿ) ಇಲ್ಲಿನ ಪ್ರಮುಖ ನದಿಗಳು.
* ಮೊದಲು ಹಳದಿ ನದಿ ತೀರದಲ್ಲಿ ಚೀನಾ ನಾಗರಿಕತೆ ಹುಟ್ಟಿತು, ಆದ್ದರಿಂದ ಅದನ್ನು ” ಚೀನಾ ನಾಗರಿಕತೆ ತೊಟ್ಟಿಲು” ಎಂದು ಕರೆಯುತ್ತಾರೆ.
-: ರಾಜಕೀಯ ಇತಿಹಾಸ:-
* ಚೀನಾದ ಮೊದಲ ಮನೆತನ – ಷಾಂಗ್
* ಈ ಮನೆತನವು ಹಿಂದೆ 3600- 3000 ವರ್ಷಗಳವರೆಗೂ ಆಳಿತು.ಇವರು ಕೃಷಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದರು.
* ಷಾಂಗ್ ಮನೆತನದ ನಂತರ ಚೌಮನೆತನ ಹೆಚ್ಚು ಕಾಲ ಆಳಿತು.
* ಚೌ ಮನೆತನದ ಪ್ರಸಿದ್ಧ ರಾಜನ – ಹೂವಾಂಗ್
* ಪ್ರಸಿದ್ಧ ಚೀನಿ ತತ್ವಜ್ಞಾನಿಗಳಾದ ಕನ್ಫ್ಯೂಶಿಯಸ್ , ಲಾವೋತ್ಸೆ (Laotze) ಅವರು ಚೌ ಮನೆತನದ ಕಾಲದಲ್ಲೇ ಇದ್ದರು.
* ಚೌ ಮನೆತನದ ಆಳ್ವಿಕೆಯನ್ನು ಕೊನೆಗೊಳಿಸಿ ಯಾವ ಮನೆತನ ಅಧಿಕಾರಕ್ಕೆ ಬಂದಿತು?
-> ‘ಚಿನ್’
* ಈ ಮನೆತನದಿಂದಲೇ ಆ ದೇಶಕ್ಕೆ ಚೀನಾ ಎಂಬ ಹೆಸರು ಬಂದಿತು.ಸೂತ್ರ ಸಿದ್ಧ ರಾಜ – ಷಿ – ಹ್ವಾಂಗ್- ತಿ
* ಷಿ – ಹ್ವಾಂಗ್ – ತಿ ಚೀನಾವನ್ನು ಒಗ್ಗೂಡಿಸಿ ಒಂದೇ ರೀತಿಯ ಕಾನೂನು ಜಾರಿಗೆ ತಂದನು ಆದ್ದರಿಂದ ಇವನನ್ನು ‘ಚೀನಾದ ಮೊದಲ ರಾಜನೆಂದು’ಕರೆಯುತ್ತಾರೆ.
* ಶತ್ರುಗಳ ದಾಳಿಯನ್ನು ತಡೆಯಲು ಷಿ – ಹ್ವಾಂಗ್ – ತಿ 13170 ಮೈಲಿ (21,196,18 ಕಿಲೋಮೀಟರ್)ಉದ್ದದ ಚೀನಾ ಮಹಾಗೋಡೆಯನ್ನು ನಿರ್ಮಿಸಿದ
* ಷಿ – ಹ್ವಾಂಗ್ – ತಿ ನಿಧನದ ನಂತರ ಚೀನಾವು ಯಾರ ಆಳ್ವಿಕೆಗೆ ಒಳಪಟ್ಟಿತು?
-> ಹಾನ್ ವಂಶ
* ಚಿನ್ ಮನೆತನದ ಕಾಲವನ್ನು’ ಚೀನಾದ ಸುವರ್ಣ ಯುಗವೆಂದು’ಕರೆಯುತ್ತಾರೆ.
* ಹಾನ್ ವಂಶದ ಪ್ರಸಿದ್ಧ ದೊರೆ – ವು-ತಿ(Wu-Ti)
* ರೋಮ್ ನ ಸಾಮ್ರಾಜ್ಯದಲ್ಲಿ ಚೀನಾದ ರೇಷ್ಮೆಗೆ ಅಪಾರ ಬೇಡಿಕೆ ಇತ್ತು ಪರಿಣಾಮವಾಗಿ ಚೀನಾ ಮತ್ತು ರೋಮ್ ನಡುವಿನ ವ್ಯಾಪಾರ ಮಾರ್ಗವೇ’ರೇಷ್ಮೆ ಮಾರ್ಗ’ ಎಂದು ಪ್ರಸಿದ್ಧಿ ಹೊಂದಿತ್ತು.
* ಹಾನ್ ವಂಶದ ಕಾಲದಲ್ಲಿ ಕಲೆ ಮತ್ತು ಸಾಹಿತ್ಯಕ್ಕೂ ಹೆಚ್ಚಿನ ಪ್ರೋತ್ಸಾಹ ದೊರಕಿತು.ಆದ್ದರಿಂದ ಈ ವಂಶದ ಕಾಲವು ಚೀನಾದ ಚರಿತ್ರೆಯಲ್ಲಿ ಸುವರ್ಣ ಯುಗ ಎಂದೇ ಪ್ರಸಿದ್ಧಿ ಪಡೆದಿದೆ.
* ಹಾನ್ ವಂಶದ ಕಾಲದಲ್ಲಿ ಚೀನಾವನ್ನು ಪ್ರವೇಶಿಸಿದ ಧರ್ಮ?
-> ಬೌದ್ಧ ಧರ್ಮ
* ಹಾನ್ ವಂಶದ ನಂತರ ಸುಂಗ್ ಮನೆತನ ಚೀನಾವನ್ನು ಆಳಿತು.
* ಮರದ ಮುದ್ರಣ ಯಂತ್ರ ಹಾಗೂ ಪಿಂಗಾಣಿ ತಯಾರಿಕೆ ಆರಂಭವಾಗಿದ್ದು ?
-> ಸುಂಗ್ ಮನೆತನದ ಕಾಲದಲ್ಲಿ
* ಸುಂಗರ್ ರಾಜಧಾನಿ – ಪೀಕಿಂಗ್( ಇಂದಿನ ಚೀನಾದ ರಾಜಧಾನಿ ಬೀಚಿಂಗ್)
* ಮಂಗೋಲರು ಸುಂಗರ ರಾಜಧಾನಿ ಬೀಜಿಂಗ್ನ್ನು ಗೆಲ್ಲುವ ಮೂಲಕ ಸುಂಗರ ಆಳ್ವಿಕೆಯನ್ನು ಅಂತ್ಯಗೊಳಿಸಿದರು.
-:ಚೀನಾ ನಾಗರಿಕತೆಯ ಕೊಡುಗೆಗಳು:-
* ಚಹಾ (Tea) ಮತ್ತು ರೇಷ್ಮೆ ವಸ್ತುವನ್ನು ಪರಿಚಯಿಸಿದರು.
* ಬಿದಿರಿನಿಂದ ಮಾಡಿದ ಕಾಗದ,ಚಿತ್ರಕುಂಚ, ಸಿಡಿಮದ್ದು, ಪಿಂಗಾಣಿ, ದಿಕ್ಸೂಚಿ ಮೊದಲಾದವುಗಳನ್ನು ಕಂಡುಹಿಡಿದಿದ್ದಾರೆ.
* ಚೀನಿಯರು ಬಿದಿರಿನ ಬೊಂಬೆನ ಮೇಲೆ ಮೇಲಿನಿಂದ ಕೆಳ ಮುಖವಾಗಿ ಬರೆಯುತ್ತಿದ್ದರು.
* ಚೀನಾದ ತತ್ವ ಜ್ಞಾನ ಕ್ಷೇತ್ರವನ್ನು ಲಾವೋತ್ಸೆ ಮತ್ತು ಕನಷ್ಯೂಶಿಯಸ್ ರು ಶ್ರೀಮಂತ ಗೊಳಿಸಿದ್ದಾರೆ.
* ಲಾವೋತ್ಸೆ ಚೀನಿಯರಿಗೆ ಸರಳ ಜೀವನ ತ್ಯಾಗ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬಾಳುವುದನ್ನು ಬೋಧಿಸಿದನು.
* ಕನಷ್ಯೂಶಿಯಸ್ ಸಮಾಜದಲ್ಲಿ ಕಳೆದು ಹೋಗಿದ್ದ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಸ್ಥಾಪಿಸುವ ಕೆಲಸ ಮಾಡಿದನು.