-: ವಿಷಯ :-
ಇತ್ತೀಚಿಗೆ ಭಾರತದ ಪ್ರಧಾನ ಮಂತ್ರಿಯವರು ದಕ್ಷಿಣ ರೈಲ್ವೆಯ 205 ರೈಲು ನಿಲ್ದಾಣಗಳಲ್ಲಿ ” ಒಂದು ನಿಲ್ದಾಣ ಒಂದು ಉತ್ಪನ್ನ ” (OSOP ) ಮಳಿಗೆಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು.
-: ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯ ಬಗ್ಗೆ ತಿಳಿಯಿರಿ :-
* ‘ ವೋಕಲ್ ಫಾರ್ ಲೋಕಲ್’ ( ಸ್ಥಳೀಯ ಉತ್ಪನ್ನಗಳಿಗೆ ನಾವು ದನಿಯಾಗಬೇಕು) ಎಂಬ ಪರಿಕಲ್ಪನೆಯನ್ನು ಉತ್ತೇಜಿಸುವ ದೃಷ್ಟಿಕೋನದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.
* ಸ್ಥಳೀಯ ಕರಕುಶಲ ಕರ್ಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಈ ಮೂಲಕ ಸಾಧ್ಯವಿದ್ದು ಸಮಾಜದ ಹಿಂದುಳಿದ ವರ್ಗಗಳಿಗೆ ಹೆಚ್ಚುವರಿ ಆದಾಯವನ್ನು ಗಳಿಸುವ ಅವಕಾಶಗಳನ್ನು ಈ ಯೋಜನೆ ಸೃಷ್ಟಿಸುತ್ತದೆ.
* ಸ್ವಸಹಾಯ ಸಂಘಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ರೈಲ್ವೆ ನಿಲ್ದಾಣದಲ್ಲಿ ಮಾರುಕಟ್ಟೆಯನ್ನು ರಚಿಸಲಾಗುತ್ತದೆ.
* ಈ ಯೋಜನೆಯ ಕಲಾವಿದರು,ಕುಂಬಾರರು,ನೇಕಾರರು,ಕೈಮಗ್ಗ ನೇಕಾರರು ಹಾಗೂ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಪ್ರಮುಖವಾಗಿ ಆದ್ಯತೆ ನೀಡುತ್ತದೆ.
* ಮಾರ್ಚ್ 25 2022ರಂದು ಮೊದಲ ಬಾರಿಗೆ ಈ ಯೋಜನೆಯನ್ನು ಪ್ರಾರಂಭಿಸಲಾಯಿತು.
* ಸಚಿವಾಲಯ :- ರೈಲ್ವೆ ಸಚಿವಾಲಯ
* ಈ ಯೋಜನೆಯನ್ನು ಅಹಮದಾಬಾದ್ ನಲ್ಲಿರುವ ರಾಷ್ಟ್ರೀಯ ವಿನ್ಯಾಸ ಸಂಸ್ಥೆಯು ವಿನ್ಯಾಸಗೊಳಿಸಿದೆ.
* ರೈಲ್ವೆ ನಿಲ್ದಾಣಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳ ಹಂಚಿಕೆಯನ್ನು ಟೆಂಡರ್ ಪ್ರಕ್ರಿಯೆ ಮೂಲಕ ಕೈಗೊಳ್ಳಲಾಗುತ್ತದೆ.ಯೋಜನೆಯ ನಿಯಮಗಳನ್ನು ಪಾಲಿಸುವ ಯಾವುದೇ ಅರ್ಜಿದಾರರಿಗೆ ಅವಕಾಶಗಳನ್ನು ನೀಡುವ ಮೂಲಕ ನ್ಯಾಯಯುತ ವಿತರಣೆಯನ್ನು ಖಚಿತಪಡಿಸಲಾಗುತ್ತದೆ.
* ಅರ್ಹ ಉತ್ಪನ್ನಗಳು ಮತ್ತು ಮಾರಾಟಗಾರರನ್ನು ವಲಯ ರೈಲ್ವೆ ನಿಲ್ದಾಣಗಳು ಗುರುತಿಸುತ್ತದೆ.
* ಈ ಯೋಜನೆಯ ಅಡಿಯಲ್ಲಿ ಅಂಗಡಿಗಳು ತಮಿಳುನಾಡು,ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳಲ್ಲಿ ಹೆಚ್ಚಾಗಿವೆ.