ನಕಲಿ ಹಾವಳಿ ತಡೆ ಅಭ್ಯರ್ಥಿಗಳಿಗೆ ಸುಲಭ, ತುರ್ತಾಗಿ ಸರ್ಟಿಫಿಕೆಟ್.
ನಕಲಿ ಪ್ರಮಾಣ ಪತ್ರಗಳ ಹಾವಳಿಗೆ ಕಡಿವಾಣ ಹಾಕಲು ಮತ್ತು ದಾಖಲೆಗಳ ಪರಿಶೀಲನೆ ಸುಲಭಗೊಳಿಸಲು. ಮೊದಲ ಬಾರಿಗೆ ” ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)” ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲಿ ( ಕೆ-ಸೆಟ್) ಅರ್ಹತೆ ಪಡೆದವರಿಗೆ ‘ ಇ-ಪ್ರಮಾಣ ಪತ್ರ ‘ ವಿತರಿಸಲು ನಿರ್ಧರಿಸಿದೆ.ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಲು ಕೆ – ಸೆಟ್ ಅರ್ಹತೆಯನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಅಭ್ಯರ್ಥಿಗಳು ಪ್ರಮಾಣ ಪತ್ರಕ್ಕಾಗಿ ಕೆಇಎ ಕಚೇರಿಗೆ ಅಲೆದಾಡುವ ಬದಲು ಕೆಇಎ ವೆಬ್ ಸೈಟ್ ಮೂಲಕ ಇ-ಪ್ರಮಾಣ ಪಾತ್ರವನ್ನು ಡೌನ್ ಲೋಡ್ ಮಾಡಿಕೋಳ್ಳಬಹುದು.
-: ವಂಚನೆಗೆ ಬ್ರೇಕ್ :-
ಕೆ -ಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆಯದಿದ್ದರೂ ಕೆಲವು ಅಭ್ಯರ್ಥಿಗಳು ಉದ್ಯೋಗ ಪಡೆಯಲು ನಕಲಿ ಪ್ರಮಾಣ ಪತ್ರಗಳನ್ನು ತೋರಿಸಿ ಕೆಲಸ ಗಿಟ್ಟಿಸಿಕೊಳ್ಳಲುತ್ತಿದ್ದರು. ಅಂತಹ ಘಟನೆಗಳನ್ನು ಸಂಪೂರ್ಣವಾಗಿ ತಡೆಗಟ್ಟುವ ಇ-ಪ್ರಮಾಣಪತ್ರಗಳನ್ನು ನೀಡಲು ನಿರ್ಧರಿಸಿದೆ.
-: ಯೂನಿಕ್ ಕೋಡ್ ವಿತರಣೆ :-
ಅಭ್ಯರ್ಥಿಗಳಿಗೆ ಇ-ಪ್ರಮಾಣ ಪತ್ರದ ಜತೆಗೆ ‘ ಯೂನಿಕ್ ಕೋಡ್ ‘ ನೀಡಲಾಗುವುದು. ಉದ್ಯೋಗಕ್ಕಾಗಿ ಆನ್ ಲೈನ್ ಮೂಲಕ ದಾಖಲೆ ಪರಿಸಿಲಿಸುವಾಗ ಯೂನಿಕ್ ಕೋಡ್ ನಮೂದಿಸಿದರೆ , ಅಭ್ಯರ್ಥಿಯ ಫೋಟೋ ಸಹಿತ ಹೆಸರು ,ವಿದ್ಯಾರ್ಹತೆ ಇ- ಪ್ರಮಾಣ ಪತ್ರ ನೀಡಿದ ದಿನಾಂಕ ಸೇರಿ ಇತರೆ ವಿವರಗಳು ತಕ್ಷಣವೇ ಲಭ್ಯವಿರುತ್ತದೆ.ಕೆಲವರು ಕೆ-ಸೆಟ್ ಉತ್ತೀರ್ಣರಾಗಿ 5-6 ವರ್ಷಗಳವರೆಗೆ ಪ್ರಮಾಣ ಪತ್ರ ಪಡೆಯುವುದಿಲ್ಲ. ನಂತರ , ಅವರು ಭೌತಿಕ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದರೆ ಅವರ ಪ್ರಮಾಣ ಪತ್ರ ಹುಡುಕುವುದು ಸಹ ಕಷ್ಟ. ಹೀಗಾಗಿ ಇ- ಪ್ರಮಾಣ ಪತ್ರ ನೀಡಿದರೆ ಯಾವಾಗ ಬೇಕಾದರೂ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವಿವರಿಸಿದ್ದಾರೆ.
” ಕೆಸೆಟ್ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಈ ವರ್ಷದಿಂದ ಭೌತಿಕ ಪ್ರಮಾಣ ಪತ್ರಗಳ ಬದಲಿಗೆ ಇ- ಪ್ರಮಾಣ ಪತ್ರಗಳನ್ನು ನೀಡಲು ನಿರ್ಧರಿಸಿದ್ದೇವೆ.ಅಭ್ಯರ್ಥಿಗಳು ಕೆಇಎ ವೆಬ್ ಸೈಟ್ ನಲ್ಲಿ ತಮ್ಮ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಬಳಸಿ ಇ- ಪ್ರಮಾಣ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.