ಗ್ರೀಕ್ ನಾಗರಿಕತೆ [CET,TET,GPSTR,HSTR,FDA,SDA.COMPETATIVE EXAM NOTES]

* ಗ್ರೀಕ್ – ಮೆಡಿಟರೇನಿಯನ್ ಸಮುದ್ರದಲ್ಲಿರುವ ಒಂದು ಪರ್ಯಾಯ ದ್ವೀಪ.

* ಗ್ರೀಕರು ಇಂಡೋ- ಯುರೋಪಿಯನ್ ಜನಾಂಗಕ್ಕೆ ಸೇರಿದವರು.

* ಪ್ರಾಚೀನ ಗ್ರೀಕ್ ನಲ್ಲಿದ್ದ ಪಂಗಡಗಳು

-> ಆಯೋಲಿಯನ್

-> ಅಯೋನಿಯನ್

-> ಡೋರಿಯನ್

* 3000 ವರ್ಷಗಳ ಹಿಂದೆ ಗ್ರೀಕಿನ ಪ್ರತಿ ಪಂಗಡಕ್ಕೂ ಒಬ್ಬ ರಾಜ ಇದ್ದ. ಅವನಿಗೆ ಹಿರಿಯರ ಸಲಹಾಮಂಡಳಿ ಇರುತಿತ್ತು.

    -: ರಾಜಕೀಯ ಇತಿಹಾಸ:-

* ಅಥೆನ್ಸ್ ಗ್ರೀಸ್ ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ ಆದರ್ಶ ನಗರ ರಾಜ್ಯ

* ಅಥೆನ್ಸ್ ನಲ್ಲಿದ್ದ ರಾಜಪ್ರಭುತ್ವವನ್ನು ತೊಲಗಿಸಿ 2500 ವರ್ಷಗಳ ಹಿಂದೆ ಪ್ರಜಾಪ್ರಭುತ್ವ ವನ್ನು ನೆಲೆಗೊಳಿಸಿದವನು ಯಾರು?

-> ಕ್ಲೈಸ್ತನೀಸ್

* ನಂತರ ಅಥೆನ್ಸ್ ನಲ್ಲಿ ಪೆರಿಕ್ಲಿಸ್ ನ ಕಾಲ ಆರಂಭವಾಯಿತು. ಇವನ ಕಾಲವನ್ನು ಗ್ರೀಸ್ ನ ಸುವರ್ಣಯುಗವೆಂದು ಕರೆಯಲಾಗುತ್ತದೆ.

* ಪೆರಿಕ್ಲಿಸ್ ನ ಕಾಲದಲ್ಲಿ ಗ್ರೀಸ್ ನಲ್ಲಿ ಕಲೆ ,ಸಾಹಿತ್ಯ, ವಿಜ್ಞಾನ,ತತ್ವ ಜ್ಞಾನ, ಮುಂತಾದ ಕ್ಷೇತ್ರಗಳು ಅಸಾಧಾರಣ ಪ್ರಗತಿಯನ್ನು ಕಂಡವು ಆದ್ದರಿಂದ ಅಥೆನ್ಸ್ ನು ಏನೆಂದು ಪೆರಿಕ್ಲಿಸ್ ಕರೆದನು?

-> ಹೆಲ್ಲಾಸನ ಶಾಲೆ (school of Hellas)

* ಸ್ಟಾರ್ಟಾ:- ಡೋರಿಯನ್ ಪಂಗಡದ ನಗರ ರಾಜ್ಯವಾದ ಸ್ಪಾರ್ಟಾವು ಗ್ರೀಸಿನ ಸೈನಿಕ ರಾಜ್ಯವಾಗಿತ್ತು.ಪರ್ಷಿಯಾದ ಸಾಮ್ರಾಟನಾದ ಡೇರಿಯಸ್ಸ್ ನು ಗ್ರೀಸಿನ ಮೇಲೆ ದಾಳಿ ಮಾಡಿದಾಗ ಅಥೆನ್ಸ್ ಮತ್ತು ಸ್ಪಾರ್ಟಾ ನಗರ ರಾಜ್ಯವನ್ನು ಒಗ್ಗೂಡಿಸಿ ಪರ್ಶಿಯಾವನ್ನು ಮ್ಯಾರಥಾನ್ ಕದನದಲ್ಲಿ ಮಣಿಸಿದವು.

* ಮುಂದೆ ಅಥೆನ್ಸ ಸ್ಟಾರ್ಟಾಗಳ ನಡುವೆ ಸಂಘರ್ಷ ಏರ್ಪಟ್ಟಿತು ಅಂತಿಮವಾಗಿ ಅಥೆನ್ಸ್ ಸೋತು ಸ್ಪಾರ್ಟ ಅಧೀನವಾಯಿತು.

* ಅಥೆನ್ಸ್ ನಗರದ ಅಧಿದೇವತೆ – ಅಥೆನಾ

* ಒಲಂಪಿಯಾದಲ್ಲಿ ಯಾವ ದೇವರ ದೇವಾಲಯವಿದೆ?

-> ಜ್ಯೂಸ್

* ಗ್ರೀಕ್ನ ಶ್ರೇಷ್ಠ ತತ್ವಜ್ಞಾನಿಗಳು

-> ಸಾಕ್ರೆಟಿಸ್->ಪ್ಲೇಟೋ->ಅರಿಸ್ಟಾಟಲ್->ಅಲೆಕ್ಸಾಂಡರ್

* ಗ್ರೀಕ್ ನಲ್ಲಿ ಪ್ಲೇಟೋ ಸ್ಥಾಪಿಸಿದ ಸಾಂಸ್ಕೃತಿಕ ಸಂಸ್ಥೆ – ಅಕಾಡೆಮಿ

* ಗ್ರೀಕ್ ನ ಅತ್ಯುತ್ತಮ ಭಾಷಣಕಾರ -> ಡೆಮೊಸ್ತನಿಸ್

* ಹೋಮರ್ ಎಂಬ ಕಣ್ಣಿಲ್ಲದ ಕವಿಯು ಬರೆದ ಎರಡು ಮಹಾಕಾವ್ಯಗಳು?

-> ಇಲಿಯಾಡ್ ಮತ್ತು ಒಡಿಸ್ಸಿ

* ಗ್ರೀಕ್ನ ಪ್ರಮುಖ ನಾಟಕಕಾರರು – ಈಸ್ಕಿಲಸ್, ಸೋಪೋಕ್ಲಿಸ್, ಯೂರಿಪಿಡಿಸ್

* ಪೆರಿಕ್ಲಿನ್ ಅಥೆನ್ಸ್ ನಲ್ಲಿ ಕಟ್ಟಿಸಿದ ಸುಂದರವಾದ ದೇವಾಲಯ ->  ಪಾರ್ಥೆ ನಾನ್ ದೇವಾಲಯ

* ಗ್ರೀಕರ ಕಾಲದ ಪ್ರಮುಖ ಶಿಲ್ಪಿ -> ಮೈರಾನ್

* ಗ್ರೀಕರ ಕಾಲದ ಅಂದಿನ ಚಿತ್ರಕಾರ -> ಪಾಲಿಗ್ನಾಟಸ್

* ಥೆಲ್ಸ್,ಪೈಥಾಗೊರಸ್ ಗಣಿತ ಕ್ಷೇತ್ರದ ದಿಗ್ಗಜರು.

* ವೈದ್ಯಶಾಸ್ತ್ರದ ಪಿತಾಮಹ -> ಹಿಪ್ರಾಕ್ರಿಟಿಸ್ (ಗ್ರೀಕ್ ನವನು)

* ಗ್ರೀಕರಿಗೂ ಪರಿಶಿಯನ್ನರಿಗೂ 2500 ವರ್ಷಗಳ ಹಿಂದೆ ನಡೆದ ಮ್ಯಾರಥಾನ್ ಕದನದಲ್ಲಿ ಗ್ರೀಕರು ಜಯಗಳಿಸಿದರು ಇದ್ದ ಭೂಮಿಯಿಂದ 24 ಮೈಲಿ ದೂರದಲ್ಲಿದ್ದ ಅಥೆನ್ಸ್ ಗೆ ಈ ಸಂತೋಷದ ಸುದ್ದಿಯನ್ನು ಮುಟ್ಟಿಸಲು ಪಿಲಿಪ್ಪಿಡೆಸ್ ಎಂಬ ಸೈನಿಕ ಓಡಿದ ಅವನ ಸ್ಮರಣಾರ್ಥಕ ಒಲಂಪಿಕ್ ಕ್ರೀಡೆಗಳಲ್ಲಿ ಮ್ಯಾರಥಾನ್ ಓಟ ಸೇರಿಸಿದರು.

* ಗ್ರೀಕ್ನ ಪ್ರಜಾಪ್ರಭುತ್ವವ ವ್ಯವಸ್ಥೆಯನ್ನು ನಾಶಪಡಿಸಿದವನು ಯಾರು?

-> ಮ್ಯಾಸಿಡೋನಿಯಾದ ಫಿಲಿಪ್

-> ಫಿಲಿಪನ ಮಗನೇ- ಅಲೆಕ್ಸಾಂಡರ್

* ಅಲೆಗ್ಸಾಂಡರ್ ಈಜಿಪ್ಟ್ ನಲ್ಲಿ ಅಲೆಕ್ಸಾಂಡ್ರಿಯಾ ಎಂಬ ನಗರವನ್ನು ಕಟ್ಟಿಸಿದನು.

    -:ರೋಮನ್ ನಾಗರಿಕತೆ:-

* ಯುರೋಪಿನ ದಕ್ಷಿಣಕ್ಕೆ ಮೆಡಿಟರೇನಿಯನ್ ಸಮುದ್ರದಲ್ಲಿ ಉದ್ದವಾಗಿ ಚಾಚಿಕೊಂಡಿರುವ ಪರ್ಯಾಯ ದ್ವೀಪವೇ – ಇಟಲಿ

* ಇಲ್ಲಿ ಲ್ಯಾಟಿನರು ಎಂಬ ಬುಡಕಟ್ಟು ಜನಾಂಗ ವಾಸಿಸುತ್ತಿತ್ತು.

* 2700 ವರ್ಷಗಳ ಹಿಂದೆ ಯಾವ ನದಿಯ ದಡದಲ್ಲಿ ಹುಟ್ಟಿಕೊಂಡಿತು?

-> ಟೈಬರ್ ನದಿ ದಡದ ಮೇಲೆ

* ರೋಮನ್ನರು ಮೂಲಪುರುಷ -> ರೋಮುಲಸ್ ಮತ್ತು ರೀಮಸ್

* ರೋಮನ್ ರಾಜಕೀಯ ಇತಿಹಾಸದಲ್ಲಿ ಪ್ರಮುಖರಾದವರು.

-> ಜೂಲಿಯಸ್ ಸೀಸರ್

-> ಆಗಸ್ಟಸ್ ಸೀಸರ್

-> ಕ್ರಾಕಸ್, ಪಾಂಪೆ, ಜೂಲಿಯಸ್ ( ಇವರನ್ನು ಒಳಗೊಂಡ ಮೊದಲ ತ್ರಿಮೂರ್ತಿಗಳ ಆಡಳಿತ ಆರಂಭವಾಯಿತು.)

   -: ಜೂಲಿಯಸ್ ಸೀಸರ್:-

* ಕ್ರಾಕಸ್ ಮರಣದ ನಂತರ ಅಧಿಕಾರಕ್ಕಾಗಿ ಪಾಂಪೆ ಮತ್ತು ಜೂಲಿಯಸ್ ಸೀಸರ್ ನಡುವೆ ಸ್ಪರ್ಧೆ ಏರ್ಪಟ್ಟಿತು ಅಂತಿಮವಾಗಿ ಪಾಂಪೆಯನ್ನು ಜೂಲಿಯಸ್ ಸೀಸರ್ ಕೊಂದನು ನಂತರ ಜೂಲಿಯಸ್ಸನ್ನು ಈಜಿಪ್ಟ್ ಅನ್ನು ಗೆದ್ದು ಅಲ್ಲಿನ ರಾಣಿ ಕ್ಲಿಯೋಪಾತ್ರಳ ಪ್ರೀತಿಗಳಿಸಿದನು.

* ಜೂಲಿಯಸ್ ಸೀಸರ್ ಸರ್ವಾಧಿಕಾರಿಯಾಗುವ ಮೂಲಕ ರೋಮ್ ನ ಗಣರಾಜ್ಯ ವ್ಯವಸ್ಥೆಯನ್ನು  ನಾಶಪಡಿಸಿದನು ಇದನ್ನ ನೇಪಾ ಮಾಡಿಕೊಂಡು ಜೂಲಿಯಸ್ ಸೀಸರ್ ನ ವಿರೋಧಿಗಳು ( ಬ್ರೂಟಸ್) ಹತ್ಯೆಗೈದರು.

    -:ಆಗಸ್ಟ್ಸ್ ಸಿಸರ್ :-

* ಮೊದಲ ಹೆಸರು -> ಆಕ್ಟೇವಿಯಸ್

* ರೋಮನ ಎರಡನೇ ತ್ರಿಮೂರ್ತಿಗಳು – ಆಗಸ್ಟ್ ಸೀಸರ್,ಮಾರ್ಕೊ ಆಂಟೋನಿ, ಲೆಪಿಡಸ್

* ಮೂರು ಜನ ತ್ರಿಮೂರ್ತಿಗಳು ಆಡಳಿತವನ್ನು ಆರಂಭಿಸಿದರು. ಲೆಪಿಡಸನನ್ನು ಓಡಿಸಿ ಆಂಟೋನಿಯ ಜೊತೆಗೆ ರಾಜ್ಯವನ್ನು ಹಂಚಿಕೊಂಡನು ನಂತರ ಆಂಟೋನಿಯನ್ನು ಆಗಸ್ಟ ಸ್ ಸೋಲಿಸಿದನು ಆನಂತರ ಎಲ್ಲಾ ಅಧಿಕಾರಗಳು ತನ್ನಲ್ಲೇ ಕೇಂದ್ರೀಕರಿಸಿಕೊಂಡು ಆಳ್ವಿಕೆ ನಡೆಸಿದನು.

* ಆಗಸ್ಟ್ ಸೀಸರ್ ನ ಕಾಲವನ್ನು ‘ ರೂಮಿನ ಕಾಲದ ಸುವರ್ಣಗವೆಂದು’ ಕರೆಯುವರು.

* ಏಸುಕ್ರಿಸ್ತ ಯಾವ ರೋಮಿನ ಸಾಮ್ರಾಟನ ಸಮಕಾಲಿನಲ್ಲಿದ್ದ ಬದುಕಿದನು?

-> ಆಗಸ್ಟ್ ಸ್ ಸಿಸರ್

* ಇವನ ಕಾಲದಲ್ಲಿ ರೂಮ್ನ ಶಾಂತಿಯ ಕಾಲವೆಂದು ಕರೆಯುವರು.

* ಆಗಸ್ಟ್ ಸೀಸರ್ ನ ನಂತರದ ದೊರೆಗಳು ಅಸಮರ್ಥರಾಗಿದ್ದರು. ಮುಂದೆ ಬುಡಕಟ್ಟು ಜನಾಂಗದ ದಾಳಿಗೆ ತುತ್ತಾಗಿ ಪ್ರಾಚೀನ ರೂಮ್ನ ಸಾಮ್ರಾಜ್ಯ ಕಣ್ಮರೆಯಾಯಿತು.

* ರೋಮನ ಶ್ರೇಷ್ಠ ಕವಿ  -> ವರ್ಜಿಲ್

* ವರ್ಜಿಲ್ ನ ಮಹಾಕಾವ್ಯ -> ಈನಿಯಡ್

* ಒವಿಡ್ ಮತ್ತೊಬ್ಬ ರೂಮನ ಶ್ರೇಷ್ಠ ಕವಿತ

* ಸಿಸಿರೋ, ಪ್ಲಾೌಟಸ್ ಮೊದಲಾದವರು ಪ್ರಸಿದ್ಧ ಸಾಹಿತಿಗಳು.

* ಜೂಲಿಯಸ್ ಸೀಸರ್ ಕೂಡ ಒಳ್ಳೆಯ ಇತಿಹಾಸಕಾರನಾಗಿದ್ದನು.

* ರೋಮಿನ ಶ್ರೇಷ್ಠ ವಾಸ್ತು ಶಿಲ್ಪಕ್ಕೆ ಕಲೊಸಿಯಂ ಮತ್ತು ಎಂಪಿಥಿಯೇಟರ್ ಉತ್ತಮ ಉದಾಹರಣೆಯಾಗಿದೆ.

* ಕ್ಯೂಪಿಡ್ ನ ಪ್ರತಿಮೆ, ಅರಾಪೆಸಿಸ್ ಶಿಲ್ಪಗಳು ರೋಮಿನ ಶಿಲ್ಪಕಲೆಗೆ ಉದಾಹರಣೆಗಳಾಗಿವೆ.

* ರೋಮನ್ನರಿಗೆ ವಿಜ್ಞಾನ ಮತ್ತು ಗಣಿತದಲ್ಲಿ ಆಳವಾದ ಜ್ಞಾನವಿತ್ತು.

* ರೋಮನ್ನರ ಕಾಲದ ಪ್ಲೀನಿಯ ಗ್ರಂಥ -> Natural History

* ರೂಮಿನ ಪ್ರಸಿದ್ಧ ತಜ್ಞ -> ಗ್ಯಾಲನ್

* ಸ್ಟ್ರಾಬೋ, ಟಾಲೆಮಿ ಅಂದಿನ ಕಾಲದ ಖ್ಯಾತ ಭೂಗೋಳ ತಜ್ಞರಾಗಿದ್ದರು.

* ರೋಮ್ನ ಸಾಮ್ರಾಜ್ಯದ ಭಾಷೆ -> ಲ್ಯಾಟಿನ್

* ರೋಮನ ಮೊದಲ ತ್ರಿಮೂರ್ತಿಗಳು

-> ಕ್ರಾಕಸ್, ಪಾಂಪೆ, ಜೂಲಿಯಸ್ ಸಿಸರ್

* ರೋಮನ ಎರಡನೇ ತ್ರಿಮೂರ್ತಿಗಳು

-> ಆಕ್ಟೇವಿಯಸ್ ( ಅಗಸ್ಟಸ್ ಸಿಸರ್)

    -: ಹರಪ್ಪ ನಾಗರಿಕತೆ:-

* ಹರಪ್ಪ ನಾಗರಿಕತೆ -ದಯಾರಾಮ್ ಸಹಾನಿ (1921)

* ಮೆಹೆಂಜೋದಾರೋ – ರಖಲ್ ದಾಸ್ ಬ್ಯಾನರ್ಜಿ (1922)

* ಹದಿಮೂರು ಲಕ್ಷ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಪ್ಪ ನಾಗರಿಕತೆಯು ಹರಡಿದೆ.ಇದರ ವ್ಯಾಪ್ತಿಯು ಎತ್ತರದ ಕೊನೆಯ ನೆಲೆ -ಕಾಶ್ಮೀರದ ಮಾಂಡ್ರ.

* ಪಶ್ಚಿಮದ ಕೊನೆಯ ನೆಲೆ – ಬಲೂಚಿಸ್ತಾನ್ , ಸುಕ್ತಜೆ0ಡರ್

* ಪೂರ್ವದ ನೆಲೆಯು – ಉತ್ತರ ಪ್ರದೇಶದ ಆಲಂಗಿಪುರ್

* ದಕ್ಷಿಣ ನೆಲೆ -ಮಹಾರಾಷ್ಟ್ರದ ದೈಮಾಬಾದ್ ಗೀಳಾಗಿವೆ.

* ಇತ್ತೀಚಿಗೆ ಈ ನಾಗರಿಕತೆಯನ್ನು ಸಿಂಧೂ ಬಯನ ನಾಗರಿಕತೆ ಎನ್ನುವ ಬದಲು ಮೊದಲ ನೆಲೆಯಾದ ಹರಪ್ಪ ಹೆಸರಿನಿಂದ “ಹರಪ್ಪ ನಾಗರಿಕತೆ”ಎಂದು ಗುರುತಿಸಲಾಗಿದೆ.

* ಹರಪ್ಪ ನಾಗರಿಕತೆಯ ಪ್ರಮುಖ ನೆಲೆಗಳು

-> ಪಾಕಿಸ್ತಾನದಲ್ಲಿರುವ ಹರಪ್ಪ ಮತ್ತು ಮೆಹೆಂಜೋದಾರೊ

* ಭಾರತದಲ್ಲಿರುವ ಕಾಲಿಬಂಗನ್ (ರಾಜಸ್ಥಾನ್), ದೋಲವಿರಾ,ಲೋಥಾಲ್(ಗುಜರಾತ್) ರಾಖಿಘರಿ(ಹರಿಯಾಣ) ಭಾರತದಲ್ಲಿರುವ ಪ್ರಮುಖ ನೆಲೆಗಳು.

* ಜಗತ್ತಿನಲ್ಲಿ ಮೊದಲ ಬಾರಿಗೆ ಹತ್ತಿಯನ್ನು ಬೆಳೆದ ಕೀರ್ತಿ -> ಭಾರತಕ್ಕೆ ಸಲ್ಲುತ್ತದೆ.

* ಹತ್ತಿಯನ್ನು ಗ್ರೀಕ್ ಭಾಷೆಯಲ್ಲಿ ” ಸಿಂಧೂನ್ ” ಎಂದು ಕರೆಯಲಾಗುತ್ತಿತ್ತು.

* ಮೆಸೊಪೊಟಾಮಿಯನ್ನರು ಹರಪ್ಪ ನಾಗರಿಕತೆಯನ್ನು ಏನೆಂದು ಕರೆಯುತ್ತಿದ್ದರು?

-> ಮೆಲುಹ

* ಹರಪ್ಪನವರು ಪಶುಪತಿ( ಶಿವ) ಮಾತೃದೇವತೆಯನ್ನು ಪೂಜಿಸುತ್ತಿದ್ದರು.

* ಕಾಲಿ ಬಂಗನ್,ಲೋಥಾಲ್ – ಬೆಂಕಿಯ ಕುಂಡಗಳು

* ಋಗ್ವೇದದಲ್ಲಿ ಹೆಚ್ಚು ಬಾರಿ ಉಲ್ಲೇಖ ಗೊಂಡಿರುವ ನದಿ – “ಸರಸ್ವತಿ ನದಿ”

    -:ವೇದಕಾಲದ ನಾಗರಿಕತೆ:-

* ಮಧ್ಯ ಏಷ್ಯಾ ಮೂಲದ ಆರ್ಯ ಜನಾಂಗದ ಆಗ ಮನದೊಂದಿಗೆ ಭಾರತದಲ್ಲಿ ಹೊಸ ಸಂಸ್ಕೃತಿಯೊಂದು ಆರಂಭವಾಯಿತು ಅದನ್ನು ‘ ವೇದಕಾಲ’ವೆಂದು ಕರೆಯುತ್ತಾರೆ.

* ಋಗ್ವೇದದಲ್ಲಿ ಹೆಚ್ಚು ಬಾರಿ ಉಲ್ಲೇಖ ಗೊಂಡಿರುವ ನದಿ -ಸರಸ್ವತಿ ಪ್ರಸ್ತುತ ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ  ಕಣ್ಮರೆಯಾಗಿರುವ ಘಗ್ಗರ್ – ಆಕ್ರಾ ನದಿಯೇ ಪ್ರಾಚೀನ ಸರಸ್ವತಿ ನದಿ ಎಂದು ನಂಬಲಾಗಿದೆ.

* ಆಫ್ಘಾನಿಸ್ತಾನದಲ್ಲಿ ಹರಿಯುವ ಯಾವ ನದಿಯನ್ನು ಪ್ರಾಚೀನ ಸರಸ್ವತಿ ನದಿ ಎಂಬ ಅಭಿಪ್ರಾಯವಿದೆ.

-> ಹೇಲ್ಮ್0ಡ್

* ಋಗ್ವೇದ ಕಾಲವನ್ನು ಪೂರ್ವ ವೇದ ಕಾಲ ಎಂದು ಆನಂತರದ ವೇದಗಳ ಕಾಲವನ್ನು ಉತ್ತರ ವೇದ ಕಾಲ ಎಂದು ಕರೆಯಲಾಗುತ್ತದೆ.

    -:ಪೂರ್ವ ವೇದ ಕಾಲ:-

* ಪೂರ್ವ ವೇದ ಕಾಲದಲ್ಲಿ ಕುಟುಂಬವು ಸಮಾಜದ ಮೂಲಕ ಘಟಕವಾಗಿತ್ತು.ತಂದೆಯು ಕುಟುಂಬದ ಮುಖ್ಯಸ್ಥನಾಗಿದ್ದನು. ಅವಿಭಕ್ತ ಕುಟುಂಬ ವ್ಯವಸ್ಥೆ ಸಮಾಜದಲ್ಲಿ ರೂಢಿಯಿತ್ತು.

* ಯುದ್ಧದಲ್ಲಿ ಗೆದ್ದ ದಾಸ, ದಸ್ಯುಗಳನ್ನು ಗುಲಾಮರಂತೆ ನೋಡುತ್ತಿದ್ದರು.

* ಆರ್ಯರ ಪಾನೀಯಗಳು – ಸೋಮ,ಸುರ

* ಪೂರ್ವ ವೇದ ಕಾಲದ ಪ್ರಮುಖ ಸ್ತ್ರೀಯರು

-> ಘೋಷಾ,ಅಪಾಲ,ಲೋಪಮುದ್ರಾ,ಇಂದ್ರಾಣಿ,ವಿಶ್ವವರಾ

* ಬಾಲ್ಯ ವಿವಾಹವಾಗಲಿ,ಸತಿ ಸಹಗಮನ ಪದ್ಧತಿಯಾಗಲಿ ಈ ಕಾಲದಲ್ಲಿ ಇರಲಿಲ್ಲ.

* ಆರ್ಯರ ಬಣದ ಮುಖ್ಯಸ್ಥರು – ರಾಮನ್

* ಆರ್ಯರ ಕಾಲದಲ್ಲಿದ್ದ ರಾಜಕೀಯ ಸಂಸ್ಥೆಗಳು – ಸಭಾ,ಸಮಿತಿ, ವಿಧಾತಗಳು.

* ಉತ್ತರ ವೇದ ಕಾಲದಲ್ಲಿ ರಾಜನು ಬಲಿಷ್ಠನಾಗಿದ್ದನು ವಿದಾತ ಸಂಪೂರ್ಣವಾಗಿ ಕಣ್ಮರೆಯಾದರೆ ಸಭಾ ಮತ್ತು ಸಮಿತಿಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡವು.

* ಉತ್ತರ ವೇದ ಕಾಲದಲ್ಲಿ ” ಗೋತ್ರ ಪದ್ಧತಿ ” ಆರಂಭವಾಯಿತು.

* ಉತ್ತರ ವೇದ ಕಾಲದಲ್ಲಿ ಬ್ರಹ್ಮಚರ್ಯ,ಗೃಹಸ್ಥ,ವಾನಪ್ರಸ್ಥ, ಸನ್ಯಾಸ ಎಂಬ ನಾಲ್ಕು ಆಶ್ರಮಗಳ ವ್ಯವಸ್ಥೆ ಆರಂಭ.

WhatsApp Group Join Now
Telegram Group Join Now

2 thoughts on “ಗ್ರೀಕ್ ನಾಗರಿಕತೆ [CET,TET,GPSTR,HSTR,FDA,SDA.COMPETATIVE EXAM NOTES]”

Leave a Comment