ಪಿಎಂ ಸೂರಜ್ ಪೋರ್ಟಲ್

       -: ವಿಷಯ :-

ಇತ್ತೀಚೆಗೆ ಭಾರತದ ಪ್ರಧಾನ ಮಂತ್ರಿಗಳು ಸಮಾಜದ ಕಟ್ಟಕಡೆಯ ವರ್ಗಗಳಿಗೆ ಸಾಲದ ಬೆಂಬಲವನ್ನು ಒದಗಿಸುವ ರಾಷ್ಟ್ರವ್ಯಾಪಿ ಉಪಕ್ರಮವಾದ ” ಪ್ರಧಾನಮಂತ್ರಿ ಸಾಮಾಜಿಕ್ ಉತ್ಥಾನ್ ಮತ್ತು ರೋಜ್ಗಾರ್ ಆಧಾರಿತ ಜನಕಲ್ಯಾಣ ” ( ಪಿ ಎಂ – ಸೂರಜ್ ) ರಾಷ್ಟ್ರೀಯ ಪೋರ್ಟಲ್ ಗೆ ಚಾಲನೆ ನೀಡಿದರು.

-: ಪಿ ಎಂ ಸೂರಜ್ ಪೋರ್ಟಲ್ ಬಗ್ಗೆ ತಿಳಿಯಿರಿ :-

* ಈ ಒಂದೇ ಪೋರ್ಟಲ್ ನಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಯೋಜನೆ, ಸೇವೆಗಳ ಕುರಿತು ಮಾಹಿತಿ ಹಾಗೂ ಸಾಲ ಕೂಡ ಸುಲಭವಾಗಿ ಜನರು ಪಡೆಯಬಹುದಾಗಿದೆ.

* ಮುಖ್ಯವಾಗಿ ಈ ಪೋರ್ಟಲ್ ಗೆ ದೇಶದಲ್ಲಿ ವಂಚಿತ ಸಮುದಾಯ, ಹಿಂದುಳಿದ ವರ್ಗ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಸಾಮಾಜಿಕ ನ್ಯಾಯ ನೀಡುವ ಉದ್ದೇಶ ಹೊಂದಿದೆ. ಜೊತೆಗೆ ಜನರ ಉದ್ದಿಮೆಗಳಿಗೆ ಸಾಲದ ನೆರವು ನೀಡುತ್ತದೆ.

* ದೇಶದಲ್ಲಿ ವಂಚಿತ ಸಮುದಾಯಗಳಿಗೆ ನೇರವಾಗಿ ಹಣಕಾಸಿನ ನೆರವು ನೀಡಲು ಮತ್ತು ಮಧ್ಯವರ್ತಿಗಳು ಹಾಗೂ ಅವರಿಗೆ ನೀಡಬೇಕಿದ್ದ ಕಮಿಷನ್ ಗಳನ್ನು ತೊಡೆದು ಹಾಕಲು ಈ ಪೋರ್ಟಲ್ ಆರಂಭಿಸಲಾಗಿದೆ.

     -: ಗುರಿ :-

ಸಮಾಜದ ಅತ್ಯಂತ ಹಂಚಿನಲ್ಲಿರುವ ವರ್ಗಗಳನ್ನು ಉನ್ನತಿ ಕರಿಸುವ ಹಾಗೂ ಅವರಿಗೆ ನೆಮ್ಮದಿಯಲ್ಲಿ ಬದುಕುವ ಬೇಕಾದ ವ್ಯವಸ್ಥೆಯನ್ನು ರೂಪಿಸುವ ಗುರಿಯನ್ನು ಈ ಪೋರ್ಟಲ್ ಹೊಂದಿದೆ.

   -: ಸಚಿವಾಲಯ :-

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

  -: ಪ್ರಮುಖ ಅಂಶಗಳು :-

* ಪಿ ಎಂ ಸೂರಜ್ ಪೋರ್ಟಲ್ ಅಡಿಯಲ್ಲಿ ಬ್ಯಾಂಕುಗಳು,ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು,ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮತ್ತು ಇತರೆ ಸಂಸ್ಥೆಗಳ ಮೂಲಕ ಅರ್ಹ ಜನರಿಗೆ ಸಾಲವನ್ನು ನೀಡಲಾಗುತ್ತದೆ.

* ಈ ಪೋರ್ಟಲ್ ನ ಮೂಲಕ ಜನರು ಸುಲಭವಾಗಿ ಸಾಲವನ್ನು ಪಡೆಯಲು ಸಾಧ್ಯವಾಗಲಿದ್ದು,ಇದರಲ್ಲಿ 15 ಲಕ್ಷ ರೂಪಾಯಿ ಗಳವರೆಗೆ ವ್ಯಾಪಾರ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

* ಕೇಂದ್ರ ಸರ್ಕಾರದ ಈ ಉಪಕ್ರಮದ ಮೂಲಕ. ದೇಶದಲ್ಲಿ ವಂಚಿತ ಸಮುದಾಯ ಹಾಗೂ ಹಿಂದುಳಿದ ವರ್ಗಗಳ 1 ಲಕ್ಷ  ಉದ್ಯಮಿಗಳಿಗೆ ಸಾಲ ಬೆಂಬಲವನ್ನು ಪ್ರಧಾನಮಂತ್ರಿಯವರು ಅನುಮೋದಿಸಿದರು.

WhatsApp Group Join Now
Telegram Group Join Now

Leave a Comment