ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ

ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪಿ.ಎಂ.ಸೂರ್ಯ ಘರ್ ಯೋಜನೆಗೆ ಅನುಮೋದನೆ ನೀಡಿದೆ.

ಏನಿದ ಹೊಸ ಯೋಜನೆ :

ಮನೆಯ ಚಾವಣಿಯಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸುವುದು,ಸ್ವಂತಕ್ಕೆ ಬಳಸಿಕೊಳ್ಳುವದಲ್ಲಿದೆ ಹೆಚ್ಚುವರಿ ವಿದ್ಯುತ್ತನ್ನು ಸ್ಥಳಿಯ ವಿದ್ಯುತ್ ಪೂರೈಕೆ ಮಂಡಳಿಗಳಿಗೆ ಮಾರಾಟ ಮಾಡಿ ಆದಾಯ ಗಳಿಸಬಹುದಾಗಿದೆ. ಸ್ಥಾಪನೆಗೆ ಸಹಾಯ ಧನ ಮತ್ತು ಮಾರಾಟಕ್ಕೆ ನೇರವನ್ನು ಸರ್ಕಾರವೇ ಕಲ್ಪಿಸಿಕೊಡುತ್ತದೆ.ಇದು ಕೇಂದ್ರ ಸರ್ಕಾರದ ನೂತನ ಯೋಜನೆಯಾಗಿದೆ.

 ಗುರಿ ಏನು?

ಒಂದು ಕೋಟಿ ಮನೆಗಳಿಗೆ ಸೌರ್ ವಿದ್ಯುತ್ ಘಟಕ ಸ್ಥಾಪಿಸುವುದು. ಇದಕ್ಕೆ ಕೇಂದ್ರ ಸರ್ಕಾರ ನಿಗದಿಗೊಳಿಸಿರುವ ಒಟ್ಟು ಯೋಜನಾ ವೆಚ್ಚ 75,021 ಕೋಟಿ ರೂ. ಯೋಜನೆಗೆ ಫೆಬ್ರವರಿ,29 ರಂದು ಚಾಲನೆ ನೀಡಲಾಗಿದೆ.

  ಸಹಾಯಧನ ಎಷ್ಟು ?

* 300 ಯೂನಿಟ್ ವಿದ್ಯುತ್ ಉಚಿತವಾಗಿ ಲಭ್ಯ.

* 1, ಕಿ ವ್ಯಾಟ್ ಸಿಸ್ಟಮ್ ಗೆ 30 ಸಾವಿರ ರೂ. ಸಹಾಯಧನ,2, ಕಿ ವ್ಯಾಟ್ ಗೆ 60 ಸಾವಿರ ರೂ,3 ಕಿ ವ್ಯಾಟ್ ಗೆ 78 ಸಾವಿರ ರೂ

* 3 ಕಿ ವ್ಯಾಟ್ ವರೆಗಿನ ” ವಸತಿ ಆರ್ ಟಿ ಎಸ್ ಸಿಸ್ಟ್ ಮ್ ”ಗಳ ಸ್ಥಾಪನೆಗಾಗಿ ಪ್ರಸುತ್ತ ಸುಮಾರು ಶೇ.7 ರಷ್ಟು ಖಾತರಿ ರಹಿತ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದಾಗಿದೆ.

* ಚಾಲ್ತಿಯಲ್ಲಿರುವ ರೆಪೊ  ದರಕ್ಕಿಂತ ಶೇ.0.5 ರಷ್ಟು ಕಡಿಮೆ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ.

-: ರೇವಾ ವಿಶ್ವ ಸಂವಾದ -2024 :-

* ರೇವಾ ವಿಶ್ವವಿದ್ಯಾಲಯದಿಂದ ಮೊದಲ ಬಾರಿಗೆ ” ಭಾರತ-ರಷ್ಯಾ ಟ್ರ್ಯಾಕ್ – 2 ವಿಶ್ವ ಸಂವಾದ ” ನಡೆಯಿತು.

* ರಷ್ಯಾದ ಪ್ರಿಮಾ ಕೋವ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಎಕನಾಮಿ ಮತ್ತು ಇಂಟರ್ ನ್ಯಾಷನಲ್ ರಿಲೇಶನ್ಸ್ ( ಐಎಂಇಎಂಒ) ನಿರ್ದೇಶಕ ಡಾ|| ಫಿಯೋಡರ್ ವೊಯ್ಟೋ ಲೊವ್ ಸ್ಕಿ ಮಾತನಾಡಿ ,ಉಕ್ರೇನ್ ಯುದ್ಧದ ಪರಿಣಾಮ ರಷ್ಯಾ ಜಾಗತಿಕ ನಿರ್ಬಂಧ ಎದುರಿಸುತ್ತಿದೆ.ಆದರೆ,ಈ ನಿರ್ಬಂಧ ಭಾರತ- ರಷ್ಯಾ ನಡುವಣ ಆರ್ಥಿಕ, ರಾಜಕೀಯ ಬಲವರ್ಧನೆಯ ಪೂರಕ ಬದಲಾವಣೆಗೆ ದಾರಿ ಮಾಡಿಕೊಟ್ಟಿದೆ.

* 2023  ರ ಅಂಕಿ-ಅಂಶಗಳ ಪ್ರಕಾರ ಭಾರತ – ರಷ್ಯಾ 65 ಬಿಲಿಯನ್ ಡಾಲರ್ ನಷ್ಟು ವಾರ್ಷಿಕ ವಹಿವಾಟು ನಡೆಸಿವೆ. ಕೆಲ ವರ್ಷಗಳ ಹಿಂದೆ ಈ ವಹಿವಾಟು ಕೇವಲ 8 ಬಿಲಿಯನ್ ಡಾಲರ್ ವರಿಗಿತ್ತು.

* ಪ್ರಧಾನಿ ಮೋದಿ , ರಷ್ಯಾ ಅಧ್ಯಕ್ಷ ಪುಟಿನ್ ಅವರ ಸಕಾರಾತ್ಮಕ ನಿಲುವು ಎರಡು ದೇಶಗಳ ಸುಸ್ಥಿರ ಅಭಿವೃದ್ಧಿಗೆ ಕೊಡುಗೆಯಾಗಿದೆ.

 

 

WhatsApp Group Join Now
Telegram Group Join Now

Leave a Comment