ಏನಿದು ಹೊಸ ಯೋಜನೆ?
ಮನೆಯ ಚಾವಣಿಯಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸುವುದು,ಸ್ವಂತಕ್ಕೆ ಬಳಸಿಕೊಳ್ಳುವದಲ್ಲದೆ ಹೆಚ್ಚುವರಿ ವಿದ್ಯುತ್ ಅನ್ನು ಸ್ಥಳೀಯ ವಿದ್ಯುತ ಪೂರೈಕೆಯ ಮಂಡಳಿಗೆ ಮಾರಾಟ ಮಾಡಿ ಆದಾಯ ಗಳಿಸಿಬಹುದು. ಸ್ಥಾಪನೆಗೆ ಸಹಾಯಧನ ಮತ್ತು ಮಾರಾಟಕ್ಕೆ ನೆರವನ್ನು ಸರ್ಕಾರವೇ ಕಲ್ಪಿಸಲಾಗುವುದು. ಇದು ಕೇಂದ್ರ ಸರ್ಕಾರದ ನೂತನ ಯೋಜನೆಯಾಗಿದೆ.
ಗುರಿ ಏನು?
ಒಂದು ಕೋಟಿ ಮನೆಗಳಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸುವುದು. ಇದಕ್ಕೆ ಕೇಂದ್ರ ಸರ್ಕಾರ ನಿಗದಿಗೊಳಿಸಿರುವ ಒಟ್ಟು ಯೋಜನಾ ವೆಚ್ಚ 75,021 ಕೋಟಿ ರೂ ಯೋಜನೆಗೆ ಫೆಬ್ರವರಿ 29ರಂದು ಚಾಲನೆ ನೀಡಲಾಗಿದೆ.
ಸಹಾಯಧನ ಎಷ್ಟು?
* 300 ಯೂನಿಟ್ ವಿದ್ಯುತ್ ಉಚಿತವಾಗಿ ಲಭ್ಯ.
* 1 ಕಿ. ವ್ಯಾಟ್ ಸಿಸ್ಟ್ ಮ್ ಗೆ 30 ಸಾವಿರ ರೂ ಸಹಾಯಧನ, 2 ಕಿ. ವ್ಯಾಟ್ ಗೆ 60 ಸಾವಿರ ರೂ, 3 ಕಿ. ವ್ಯಾಟ್ ಗೆ 78 ಸಾವಿರ ರೂ.
ಕಡಿಮೆ ಬಡ್ಡಿ ದರ
* 3.ಕಿ ವ್ಯಾಟ್ ವರೆಗಿನ ‘ ವಸತಿ ಆರ್ ಟಿ ಎಸ್ ಸಿಸ್ಟಮ್’ ಗಳ ಸ್ಥಾಪನೆಗಾಗಿ ಪ್ರಸ್ತುತ ಸುಮಾರು ಶೇಕಡ 7 ರಷ್ಟು ಖಾತರಿ ರಹಿತ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು.
* ಚಾಲ್ತಿಯಲ್ಲಿರುವ ರೆಪೋ ದರಕ್ಕಿಂತ ಶೇ.0.5 ರಷ್ಟು ಕಡಿಮೆ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ.
ಸಹಾಯಧನ ಪಡೆಯುವ ಹಂತಗಳು
* ಪೋರ್ಟಲ್ ನಲ್ಲಿ ನೊಂದಾಯಿಸಿ.
* ನಿಮ್ಮ ರಾಜ್ಯ ಮತ್ತು ವಿದ್ಯುತ್ ವಿತರಣಾ ಕಂಪನಿಯನ್ನು ಆಯ್ಕೆ ಮಾಡಿ.
* ನಿಮ್ಮ ವಿದ್ಯುತ್ ಗ್ರಾಹಕರ ಸಂಖ್ಯೆ,ಮೊಬೈಲ್ ಸಂಖ್ಯೆ ಮತ್ತು ಇಮೇಲ್ ನಮೂದಿಸಿ.
* ಗ್ರಾಹಕರ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ. ಸೌರ ಘಟಕ ಅಳವಡಿಕೆಗೆ ಅರ್ಜಿ ಸಲ್ಲಿಸಿ.
* ಯಾವುದೇ ನೊಂದಾಯಿತ ಮಾರಾಟಗಾರರಿಂದ ಘಟಕವನ್ನು ಸ್ಥಾಪಿಸಬಹುದು.
* ಸ್ಥಾಪನೆಯ ನಂತರ ಘಟಕದ ವಿವರಗಳನ್ನು ಸಲ್ಲಿಸುವ ಮತ್ತು ನೆಟ್ ಮೀಟರ್ ಗೆ ಅರ್ಜಿ ಸಲ್ಲಿಸಿ.
* ಕಾರ್ಯಾ ಆರಂಭದ ವರದಿಯನ್ನು ಪಡೆದ ನಂತರ,ಪೋರ್ಟಲ್ ಮೂಲಕ ಬ್ಯಾಂಕು ಖಾತೆ ವಿವರಗಳು ಮತ್ತು ರದ್ದುಗೊಂಡ ಚೆಕ್ ಸಲ್ಲಿಸಿ.
* 30 ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಸಹಾಯಧನವನ್ನು ಪಡೆಯಬಹುದು.
ಅರ್ಜಿ ಸಲ್ಲಿಸಲು ಯಾರು ಅರ್ಹರು?
* ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.
* ಸೌರ ಫಲಕಗಳನ್ನು ಅಳವಡಿಸಲು ಸೂಕ್ತವಾದ ಚಾವಣಿ ಇರುವ ಮನೆ ಮಾಲಿಕರಾಗಿರಬೇಕು.
* ಮನೆಯಲ್ಲಿ ಅಧಿಕೃತ ವಿದ್ಯುತ್ ಸಂಪರ್ಕವನ್ನು ಹೊಂದಿರಬೇಕು.
* ಸೌರ ಫಲಕಗಳಿಗೆ ಬೇರೆ ಯಾವುದೇ ಸಹಾಯಧನವನ್ನು ಪಡೆದಿರಬಾರದು.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಆಸಕ್ತಿ ಗ್ರಾಹಕರು ರಾಷ್ಟ್ರೀಯ ಪೋರ್ಟಲ್ ನಲ್ಲಿ www.pmsuryaghar.gov.in ನೋಂದಾಯಿಸಿಕೊಳ್ಳಬೇಕು.ವಿದ್ಯುತ್ ವಿತರಣಾ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಏಕೆ ಬೇಕು ಈ ಯೋಜನೆ?
* ಮನೆಗಳ ವಿದ್ಯುತ್ ಬಿಲ್ ಉಳಿತಾಯಕ್ಕಾಗಿ.
* ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ ಆದಾಯ ಗಳಿಸಲು .
* ಇದರಿಂದ ತಿಂಗಳಿಗೆ 300 ಯೂನಿಟ್ ಗಳವರೆಗೆ ವಿದ್ಯುತ್ ಬಳಸುವ ಕುಟುಂಬಕ್ಕೆ ವರ್ಷದಲ್ಲಿ ಅಂದಾಜು 15000 ರೂ ಉಳಿತಾಯ ಖಾತ್ರಿ