-: ಅಕ್ಬರನ ಆಸ್ಥಾನದಲ್ಲಿ ನ ನವರತ್ನಗಳು :-
1) ತೋದರ ಮಲ್ಲ
2) ಅಬುಲ್ ಪಜಲ್
3) ಬೀರ್ ಬಲ್
4) ಅಬ್ದುಲ್ ಫೈಜಿ
5) ತಾನ್ ಸೇನ್
6) ಅಬ್ದುಲ್ ರಹೀಂ ಖಾನ್
7) ಹಮೀಮ್ ಹಮಾಮ್
8) ಮುಲ್ಲಾ ದೋ ಪಯ್ಯಾಜ್
9) ಮಾನಸಿಂಗ್
-: ಜಹಾಂಗೀರ್ :-
* ಅಕ್ಬರನ ಮಗ ಇವನ ಮೊದಲ ಹೆಸರು -ಸಲೀಂ
* ಇವನನ್ನು ” ಹುತಾತ್ಮ ಸಂತ” ಎಂದು ಕರೆಯುತ್ತಾರೆ.
* ಇವನು ಸಿಖ್ ರ ಐದನೇ ಗುರು ಅರ್ಜುನ್ ಸಿಂಗನನ್ನು ನಾಂದೆಡಾದಲ್ಲಿ ಕೊಲ್ಲಿಸಿದನು.
* ಇವನ ಆತ್ಮಕಥೆ – ತುಜುಕ್ -ಇ-ಜಹಂಗೀರ
* ಇವನು ತಂಬಾಕನ್ನು ನಿಷೇಧಿಸಿದನು.ಇವನ ಕಾಲ ವರುಣ ಚಿತ್ರಕಲೆಯ ಸುವರ್ಣ ಯುಗ ಇವನ ಸಮಾಧಿ -ಲಾಹೋರ್ ಬಳಿಯ ಶಹಧರ್
-: ಷಹಜಹಾನ್ :-
* ಇವನು ಮಯೂರ ಸಿಂಹಾಸನವನ್ನು ನಿರ್ಮಿಸಿದನು.
* ಇವನ ಪುತ್ರ ಔರಂಗಜೇಬನನ್ನು ಡೆಕ್ಕನ್ನಿಗೆ ರಾಜ ಪ್ರತಿನಿಧಿಯಾಗಿ ನೇಮಿಸಿದನು.
* ಇವನ ಮೊದಲ ಹೆಸರು – ಖುರ್ರಂ
* ಷಹಜನಾಮ ಕೃತಿ ಬರೆದವರು – ಹಿನಾಯತ್ ಖಾನ್
* ಕವಿರಾಯ ಎಂಬ ಬಿರುದು ಹೊಂದಿದ್ದ ಷಹಜಹಾನ್ ನ ಆಸ್ಥಾನ ಕವಿ – ಜಗನ್ನಾಥ
* ಬಾದ್ ಶಹನಾಮ ಕೃತಿ – ಅಬ್ದುಲ್ ಅಮ್ಮಿದ ಲಾಹೋರಿ
* ಡೆಕ್ಕನ್ ಭಾಗದಲ್ಲಿ ಭೂಮಾಪನ ಮತ್ತು ಮೌಲ್ಯಮಾಪನ ಪದ್ದತಿಯನ್ನು ಜಾರಿಗೊಳಿಸಿದನು.
* ಇವನು ನಿರ್ಮಿಸಿದ ಸ್ಮಾರಕಗಳು – ಮೋತಿ ಮಹಲ್,ರಂಗಿನ್ ಮಹಲ್, ಜಾಮಿ ಮಸೀದಿ,ದಿವಾನ್-ಇ-ಆಮ್,ಕೆಂಪುಕೋಟೆ, ತಾಜ್ಮಹಲ್.
* ಇವನ ಅವಧಿಯನ್ನು ಮೊಘಲರ ಕಲೆ ಮತ್ತು ವಾಸ್ತುಶಿಲ್ಪದ ಸುವರ್ಣ ಯುಗ ಎಂದು ಕರೆಯಲಾಗಿದೆ.
-: ತಾಜ್ಮಹಲ್ :-
* 1632 ರಲ್ಲಿ ಇದರ ನಿರ್ಮಾಣ ಕಾರ್ಯ ಪ್ರಾರಂಭವಾಗಿ 1653 ಸುಮಾರಿಗೆ ಪೂರ್ಣಗೊಂಡಿತು (1632-1653)
* ಇದನ್ನು ಬಿಳಿಯ ಮಾರ್ಬಲ್ ಕಲ್ಲುಗಳಿಂದ ನಿರ್ಮಿಸಲಾಗಿದೆ.
* ಪ್ರಪಂಚದ ಏಳು ಅದ್ಭುತಗಳಲ್ಲಿ ಇದು ಒಂದು.
* ಯಮುನಾ ನದಿ ದಂಡೆಯ ಮೇಲೆ ತನ್ನ ಹೆಂಡತಿಯಾದ ಮಮ್ತಾಜ್ ನೆನಪಿಗಾಗಿ ನಿರ್ಮಾಣ.
* ಇದರ ನಕ್ಷೆ ತಯಾರಿಸಿದವರು – ವೆನಿಶಿಯಾದ ವೆರೆನೆಸ್
* ಇದರ ಶಿಲ್ಪಿ – ಉಸ್ತಾದ್ ಅಹ್ಮದ್ ಲಾಹೋರಿ
* ಇದು ಪೂರ್ಣ ಪರ್ಶಿಯನ್ ಶೈಲಿಯಲ್ಲಿದೆ.
* 22 ವರ್ಷಗಳಲ್ಲಿ 20,000 ಕಾರ್ಮಿಕರು 3 ಕೋಟಿ ವೆಚ್ಚದಲ್ಲಿ ನಿರ್ಮಿಸಿದರು.
* ಮಯೂರ ಸಿಂಹಾಸನ 1627 -1634 ರವರೆಗೆ ಏಳು ವರ್ಷಗಳ ಕಾಲ ಷಹಜಾನ್ ನ ಕಾಲದಲ್ಲೇ ನಿರ್ಮಾಣವಾಯಿತು.
-: ಔರಂಗಜೇಬ್ :-
* ಇವನ ಆಳ್ವಿಕೆಯನ್ನು ಭಾರತದ ಚರಿತ್ರೆಯಲ್ಲಿ ” ಇಸ್ಲಾಮಿಕ್ ಯುಗ ” ಎನ್ನುವರು.
* ಸಿಖ್ ರ 9ನೇ ಗುರು ತೇಜ್ ಬಹದ್ದೂರ್ ನನ್ನು ಕೊಲ್ಲಿಸಿದನು.
* ಸಿಖ್ ರ ಹತ್ತನೇ ಗುರು ಗೋವಿಂದ ಸಿಂಗ್ ಖಾಲ್ಸಾ ಸೈನಿಕಟ್ಟಿ ಇವನ ವಿರುದ್ಧ ಹೋರಾಡಿದನು.
* ರಾಜ ಜೈಸಿಂಗ್ ಔರಂಗಜೇಬ್ ನೊಂದಿಗೆ ಉದಯಪುರ ಒಪ್ಪಂದ ಮಾಡಿಕೊಂಡನು.
* ಈತ ಕ್ಯಾಲಿಗ್ರಪಿ( ಹಸ್ತಾಕ್ಷರ) ರಚನೆಯಲ್ಲಿ ನಿಪ್ಪಣನಾಗಿದ್ದನು.
* ಸ್ತ್ರೀಯರು ಕಡ್ಡಾಯವಾಗಿ ಪರ್ದಾ ನಿಯಮ ಪಾಲಿಸುವಂತೆ ಆದೇಶಿಸಿದನು.
* 1671ರಲ್ಲಿ ಹಿಂದುಗಳನ್ನು ಸರ್ಕಾರಿ ಕೆಲಸದಿಂದ ವಜಾ ಗೊಳಿಸಿದನು.
* ಹಿಂದುಗಳ ಮೇಲೆ ಪುನಃ ಜೆಜಿಯಾ ತಲೆಗಂದಾಯ ಏರಿದನು.
* ದೇವಾಲಯಗಳ ನಾಶಕ್ಕೆ ” ದರೋಗ ” ಎಂಬ ಅಧಿಕಾರಿಯನ್ನು ನೇಮಿಸಿದನು.
* ಇವನ ಆಡಳಿತದಲ್ಲಿ ಮುಸ್ಲಿಮರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳ ಮನ್ಸ್ ಬ್ದಾರ್ ರಾಗಿದ್ದರು.
* ಅಲಂಗೀರ್ ನಾಮ ಕೃತಿ – ಮಿರ್ಜಾ ಮೊಮ್ಮದ್ ಕಾಸಿಂ
* ಇವನ ಸಮಾಧಿ ಸ್ಥಳ – ಔರಂಗಾಬಾದ್
* ಇವನ ಆದೇಶದ ಮೇರೆಗೆ ಇವನ ಮಗನಾದ ಆಜಂ -ಷಾ-ಬಿಬಿ – ಕಾ-ಮಕಬರ್ ನಿರ್ಮಿಸಿದನು.
-: ಮೊಘಲರ ಆಡಳಿತ :-
* ಇವರ ಆಡಳಿತ ಭಾಷೆ – ಪರ್ಷಿಯನ್
* ಐನ್-ಇ-ಅಕ್ಬರಿ ಮತ್ತು ಅಕ್ಬರ್ ನಾಮ – ಅಬುಲ್ ಫಜಲ್ ( ಪರ್ಶಿಯನ್ ಭಾಷೆಯಲ್ಲಿ)
* ತೌಫಿ-ಇ-ಅಕ್ಬರ ಷಾಹಿ – ಅಬ್ಬಾಸ್ ಸರ್ವಾನಿಯಾ
* ತಬಕಲ್ – ಇ-ಅಕ್ಬರಿ – ನಿಜಾಮುದ್ದಿನ ಅಹ್ಮದ್
* ಹಿಂದೂ ಗಳ ಬೈಬಲ್ – ರಾಮಚರಿತ ಮಾನಸ – ತುಳಸಿದಾಸ
* ಪದ್ಮಾವತ್ – ಮಹಮ್ಮದ್ ಜೈಯ್ಸಿ
-: ಮರಾಠರು :-
-: ಛತ್ರಪತಿ ಶಿವಾಜಿ (1627-1680) :-
* ಪುಣೆಯ ಜುನ್ನಾರದ ಬಳಿಯ ಶಿವನೇರು ದುರ್ಗದಲ್ಲಿ ಜನಿಸಿದನು.
* ಇವನ ತಂದೆ – ಷಹಾಜಿ ಬೋಸ್ಲೆ, ತಾಯಿ ಜೀಜಾಬಾಯಿ
* ಶಿವಾಜಿಯ ಬಾಲ್ಯದ ಗುರು – ದಾದಾಜಿ ಕೊಂಡ ದೇವ
* ಶಿವಾಜಿಯ ಆಧ್ಯಾತ್ಮಿಕ ಗುರು – ಸಮರ್ಥ ರಾಮದಾಸರು
* ಶಿವಾಜಿಯ ಬಿರುದುಗಳು – ಬೆಟ್ಟದ ಹುಲಿ, ಗೋಬ್ರಾಹ್ಮಣ ಪ್ರತಿಪಾಲಕ
* ಶಿವಾಜಿ ಸಂತ ತುಕಾರಾಮನ ಬೋಧನೆಗಳಿಂದಲೂ ಪ್ರಭಾವಿತರಾಗಿದ್ದರು.
-: ಗೆರಿಲ್ಲಾ ಯುದ್ಧ :-
ಬೆಟ್ಟಗುಡ್ಡ,ಕಾಡು ಮೇಡುಗಳಲ್ಲಿ ಅಡಗಿ ಕುಳಿತು ಒಮ್ಮೆಲೆ ಶತ್ರುಗಳ ಮೇಲೆ ದಾಳಿ ಮಾಡುವ ಯುದ್ಧ ಕಲೆ.
* ಔರಂಗಜೇಬನು ಏಕೈಕ ಇಂದು ದಂಡನಾಯಕ ಜೈಸಿಂಗ್ ಶಿವಾಜಿಯನ್ನು ಸೋಲಿಸಿದನು.ಇಲ್ಲಿ ಶಿವಾಜಿಯು 1665ರಲ್ಲಿ ಜೂನ್ 22ರಂದು ರಾಜ ಜೈ ಸಿಂಗನೊಂದಿಗೆ ಪುರಂದರಗಡ ಒಪ್ಪಂದವನ್ನು ಮಾಡಿಕೊಂಡನು ಈ ಒಪ್ಪಂದದ ಪ್ರಕಾರ ಶಿವಾಜಿ 23 ಕೋಟೆಗಳನ್ನು ಮೊಘಲರಿಗೆ ಬಿಟ್ಟು ಕೊಟ್ಟನು ಹಾಗೂ 16ಲಕ್ಷ ವರಮಾನ ಬರುವ ಪ್ರದೇಶವನ್ನು ನೀಡಿದನು.
* ಶಿವಾಜಿಯು ಮೊಘಲರ ಪ್ರದೇಶಗಳಿಂದ ಚೌತ ( ಭೂ ಕಂದಾಯದ ನಾಲ್ಕನೇ ಒಂದು ಭಾಗ ) ಮತ್ತು ತನ್ನ ರಾಜ್ಯದಲ್ಲಿ ಸರದೇಶಮುಖಿ ( ಭೂ ಕಂದಾಯದ ಹತ್ತನೇ ಒಂದು ಭಾಗ) ಸಂಗ್ರಹಿಸುತ್ತಿದ್ದನು.
* 1674ರಲ್ಲಿ ರಾಯಗಡದಲ್ಲಿ ಶಿವಾಜಿಯ ಪಟ್ಟಾಭಿಷೇಕ ನಡೆಯಿತು ಅಲ್ಲಿ ಶಿವಾಜಿಗೆ ಛತ್ರಪತಿ ಎಂಬ ಬಿರುದು ನೀಡಿ ಗೌರವಿಸಲಾಯಿತು.
* ಶಿವಾಜಿ 1680ರಲ್ಲಿ ನಿಧನನಾದನು.
* ಮರಾಠರ ಮೊದಲ ಪೇಶ್ವೆ – ಬಾಲಾಜಿ ವಿಶ್ವನಾಥ್ , ಬಿರುದು – ಸೇನಾ ಕರ್ತ
* ಹಿಂದೂ-ಪಾದ್ ಪಾದ್ ಷಾಹಿ ಸಂಘಟನೆಯನ್ನು ಸ್ಥಾಪಿಸಿದವನು ?
-> ಒಂದನೇ ಬಾಜಿರಾವ್ ,ಬಿರುದು – ಮರಾಠ ಸಾಮ್ರಾಜ್ಯದ ಪುನರ್ ಸ್ಥಾಪಕ ಎರಡನೇ ಶಿವಾಜಿ
-: ಸಂವಿಧಾನಾತ್ಮಕ ಕ್ರಾಂತಿ :-
* ಪೇಶ್ವೆ ಸಾಹುವಿನ ಉತ್ತರಾಧಿಕಾರಿಯಾಗಿ ರಾಮರಾಜನೊಂದಿಗೆ ‘ ಬಾಲಾಜಿ ಬಾಜಿರಾವ್ ‘ ಸಂಗೋಲ ಒಪ್ಪಂದ ಮಾಡಿಕೊಂಡು ಮರಾಠ ಒಕ್ಕೂಟದ ನಾಯಕನಾದನು. ಈ ಘಟನೆಯನ್ನು ಸಂವಿಧಾನಾತ್ಮಕ ಕ್ರಾಂತಿ ಎನ್ನುವರು.
* ಮೂರನೇ ಪಾಣಿಪತ್ ಕದನ :- 1761 ರಲ್ಲಿ ಅಫ್ಘಾನಿಸ್ತಾನದ ಅಹ್ಮದ ಷಾ ಅಬ್ದಾಲಿಗೂ ಮತ್ತು ಬಾಜಿರಾವ್ ಗು ಕದನ ನಡೆದು,ಮರಾಠರು ಸಂಪೂರ್ಣವಾಗಿ ಸೋತರು,ಈ ಕದನದಲ್ಲಿ ಮರಾಠರ ದಂಡನಾಯಕ – ಸದಾಶಿವ ರಾವ್ ಭಾಟೆ.
* ಯಾರ ಕಾಲವನ್ನು ಮರಾಠರ ಸುವರ್ಣ ಯುಗ ಎಂದು ಕರೆದಿದ್ದಾರೆ?
-> ಒಂದನೇ ಮಾದವರಾವ್
* ಸೂರತ್ ಒಪ್ಪಂದಕ್ಕೆ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮರಾಠ ಪೇಶ್ವೆ – ರಘುನಾಥ್ ಪೇಶ್ವೆ
* ವಾರನ್ ಹೇಸ್ಟಿಂಗ್ಸ್ ನೊಂದಿಗೆ ಎರಡನೇ ಪುರಂದರಗಡ ಒಪ್ಪಂದಕ್ಕೆ ಸಹಿ ಹಾಕಿದವನು ?
-> ಎರಡನೇ ಮಾಧವರಾವ್
* ಮರಾಠರ ಕೊನೆಯ ಪೇಶ್ವೆ – ಎರಡನೇ ಬಾಜಿರಾವ್
-: ಭಕ್ತಿ ಪಂಥ :-
-: ರಮಾನಂದರು :-
* ರಮಾನಂದರು ಪ್ರಯಾಗದ ಬ್ರಾಹ್ಮಣ ಕುಟುಂಬ ಒಂದರಲ್ಲಿ ಜನಿಸಿದರು.
* ರಾಮಾನುಜರ ತತ್ವದ ಅನುಯಾಯಿಗಳಾಗಿದ್ದರು.
* ವೈಷ್ಣವ ಧರ್ಮದ ಶಾಲೆ ಪ್ರಾರಂಭಿಸಿದರು.
* ಉತ್ತರ ಭಾರತದಲ್ಲಿ ರಾಮ ಸೀತೆಯರ ಪೂಜೆ ಜನಪ್ರಿಯಗೊಳಿಸಿದರು.
* ” ಜಾತಿ – ಗೀತೀಯ ಗೊಂದಲದಿಂದ ಹೊರಬನ್ನಿ, ಜಾತಿ – ಗೀತಿಯನ್ನು ಪ್ರಶ್ನಿಸಬೇಡಿ ಹರಿಯನ್ನು ಸ್ಮರಿಸಿ, ಹರಿಯಲ್ಲಿ ಒಂದಾಗಿ” – ರಮಾನಂದರು
* ” ಯಾರು ಯಾವ ಜಾತಿಯವನೆಂದು ಪ್ರಶ್ನಿಸುವುದಲ್ಲ,ಯಾರು ದೇವರನ್ನು ನೆನೆಯುವವರು ಅವರನ್ನು ದೇವರು ಆಶೀರ್ವದಿಸುವನು” ರಮಾನಂದರು.
-: ಕಬೀರ್ :-
* ರಮಾನಂದರ ಶಿಷ್ಯರು
* ಜಾತಿ ವ್ಯವಸ್ಥೆ ಮತ್ತು ಬಹುಮೂರ್ತಿಗಳ ಪೂಜೆಯನ್ನು ಖಂಡಿಸಿದರು.
* ” ದೇವರು ಒಬ್ಬನೇ, ಹಿಂದು ಮತ್ತು ಮುಸಲ್ಮಾನರಿಗೆ ಆ ಒಬ್ಬ ದೇವರೇ ಹೊರತು,ಬೇರೆ ಬೇರೆ ದೇವರಿಲ್ಲ”.
* ಈ ಎರಡು ಮತಿಯರಲ್ಲೂ ಸೌಹಾರ್ದ ಮತ್ತು ಸ ಹಿಷ್ಣುತೆಯನ್ನು ಬೆಳೆಸಲು ಯತ್ನಿಸಿದರು.
* ಕಬೀರರು ದೋಹಗಳೆಂಬ ಪದ್ಯಗಳನ್ನು ರಚಿಸಿದರು.
-: ಚೈತನ್ಯ :-
* ಕೃಷ್ಣನ ಆರಾಧನೆ ಮಾಡಿದರು.
* ಚೈತನ್ಯರ ಆಧ್ಯಾತ್ಮಿಕ ಚಿಂತನೆಯ ಬೋಧನೆಗಳನ್ನು ” ಚೈತನ್ಯ ಚರಿತಾಮೃತ ” ಎಂಬುದರಲ್ಲಿ ಸಂಗ್ರಹಿಸಲಾಗಿದೆ.
-: ಗುರುನಾನಾಕರು :-
* ದೇವರು ಒಬ್ಬನೇ ಮೂರ್ತಿ ಪೂಜೆ ಖಂಡಿಸಿದರು.
* ಇವರ ಬೋಧನೆಗಳನ್ನು ” ಗುರು ಗ್ರಂಥ ಸಾಹಿಬ್” ನಲ್ಲಿ ಸಂಗ್ರಹಿಸಲಾಗಿದೆ ಇದು ಸಿಖರ ಪವಿತ್ರ ಗ್ರಂಥ.
-: ಶ್ರೀಮಂತ ಶಂಕರ್ ದೇವ ಹಾಗೂ ಮಾದವ ದೇವ :-
* ಅಸ್ಸಾಂನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಇತಿಹಾಸದಲ್ಲಿ ಶ್ರೀಮಂತ ಶಂಕರ್ ದೇವನ ಪಾತ್ರ ಪ್ರಮುಖವಾದದ್ದು.
* ಶಂಕರ ದೇವನ ಭಾಗವತವೂ ಸಂಸ್ಕೃತ,ಅಸ್ಸಾಮಿ ಮತ್ತು ಬೃಜಾವಲಿ ಭಾಷೆಗಳಲ್ಲಿದೆ
* ಶಂಕರದೇವ ಅಸ್ಸಾಂನಲ್ಲಿ ಪ್ರಾರಂಭ ಮಾಡಿದ ಭಕ್ತಿ ಚಳುವಳಿಯನ್ನು ” ಏಕಸರಣ ಧರ್ಮ ವೈಷ್ಣವ ಚಳುವಳಿ ” ಎಂದು ಕರೆಯುತ್ತಾರೆ.
* ಇವರು ತಮ್ಮ ಪಂಥದಲ್ಲಿ ” ಸರಣಿಯ ” ಎಂಬ ಪದ್ಧತಿಯನ್ನು ಪ್ರಾರಂಭಿಸಿದರು.
* ಇವರ ಶಿಷ್ಯರಾದ ಮಾಧವ ದೇವರು ಶಾಕ್ತಾ ಗುಂಪಿಗೆ ಸೇರುತ್ತಾರೆ ಬಹುಮುಖ ಪ್ರತಿಭೆ ಹೊಂದಿದ ಮಾಧವ ದೇವರು ಭಕ್ತಿ ಚಳುವಳಿಯಲ್ಲಿ ಅತ್ಯಂತ ಪ್ರಖ್ಯಾತಿಗಳಿಸಿದರು.
-: ಮೀರಾಬಾಯಿ :-
* ಮೇವಾಡದ ರಾಜಕುಮಾರಿ
* ಕೃಷ್ಣನ ಪರಮ ಭಕ್ತೆ
* ಕೃಷ್ಣನನ್ನು ಕುರಿತು ಭಕ್ತಿಪೂರಿತವಾದ ಕೀರ್ತನೆಗಳನ್ನು ಬರೆದಳು. ಈ ಕೀರ್ತನೆಗಳು ” ಭಜನೆಗಳು” ಎಂದು ಜನಪ್ರಿಯವಾದವು.
* ಮೋಹನ ತರಂಗಿಣಿ ಕೃತಿ – ಕನಕದಾಸರು.
* ಪ್ರಮುಖ ಸೂಫಿ ಸಂತರು :- ಮೋಯಿನ್ – ಉದ್ – ದಿನ್ – ಚಿಸ್ತಿ,ಬಾಬಾ ಫರೀದ್, ನಿಜಾಮ್-ಉದ್-ದೀನ್ ಚೌಲಿಯ,ಮಲ್ಲಿ ಮೊಹಮ್ಮದ್ ಹಾಗೂ ಖ್ವಾಜಾ ಬಂದೇ ನವಾಜ್.
-: ಸೂಫಿ ಸಂತರು :-
* ಪರ್ಶಿಯಾದಿಂದ ಭಾರತಕ್ಕೆ ಬಂದು ನೆಲೆಸಿದರು.
* ಇವರನ್ನು ಪೀರ ( ಗುರು ) ಎಂದು ಕರೆಯುತ್ತಿದ್ದರು.
* ” ಸೂಫ್ ” ಎಂಬ ಸಾದಾ ಉಣ್ಣೆಯ ಬಟ್ಟೆಯನ್ನು ತೊಡುತ್ತಿದ್ದರಿಂದ ಮುಸ್ಲಿಂ ಸಂತರುಗಳನ್ನು ” ಸೂಫಿ” ಎಂದು ಕರೆದರು.
* ಮೃಗಾವತಿ ಎಂಬ ಕೃತಿ ರಚಿಸಿದವರು – ಕುತುಬನ್
* ಪದ್ಮಾವತ್ ಎಂಬ ಕೃತಿ ರಚಿಸಿದವನು – ಮಲ್ಲಿಕ್ ಮಹಮ್ಮದ್ ಜಯ್ಸಿಯ
* ಸೂರ್ ಸಾಗರ್ ಕೃತಿ – ಸೂರದಾಸರು
* ರಾಮಾಚಾರಿತ ಮಾನಸ – ತುಳಸಿದಾಸರು
* ಮರಾಠಿಯಲ್ಲಿ ಆಭಂಗಗಳೆಂಬ ಕೀರ್ತನೆ ರಚಿಸಿದವರು.
* ಜ್ಞಾನೇಶ್ವರಿ ಕಾವ್ಯ – ಜ್ಞಾನದೇವರು