15. ಪಾಕ್ ಜಲಸಂಧಿ ಮತ್ತು ಮುನ್ನಾರ್ ಕೊಲ್ಲಿಯಿಂದ ರೂಪಗೊಂಡ ಕಿರಿದಾದ ಸಮುದ್ರದ ಚಾನೆಲ್ ಮೂಲಕ ಭಾರತದಿಂದ ಯಾವ ದೇಶಕ್ಕೆ ಬೇರ್ಪಟ್ಟಿದೆ?
1)ಶ್ರೀಲಂಕಾ
2)ಮಯನ್ಮಾರ್
3)ಬಾಂಗ್ಲಾದೇಶ
4)ಪಾಕಿಸ್ತಾನ
ಉ)ಶ್ರೀಲಂಕಾ
* ಪಾಕ್ ಜಲಸಂಧಿ -ಭಾರತ ಮತ್ತು ಶ್ರೀಲಂಕಾ
* ಜಿಬ್ರಾಲ್ಟರ್ ಜಲಸಂಧಿ -ಯುರೋಪ್ ಮತ್ತು ಆಫ್ರಿಕಾ
* ಹರ್ಮೋಜ ಜಲಸಂಧಿ -ಇರಾನ್ ಮತ್ತು ಓಮನ್
* ಮಲಕ್ಕಾ ಜಲಸಂಧಿ -ಮಲೇಶಿಯಾ ಮತ್ತು ಇಂಡೋನೇಷಿಯಾ
16. ಭಾರತದ ಭೂ ದ್ರವ್ಯರಾಶಿ——–ಮಿಲಿಯನ್ ಚದರ ಕಿಲೋಮೀಟರ್ ಪ್ರದೇಶ ಹೊಂದಿದೆ.
1)1.28
2)2.28
3)3.28
4)4.28
ಉ) 3.28
* ಭಾರತವು ಒಟ್ಟು 32,87,263 ಚದರ ಕಿಲೋಮೀಟರ್(32.87ಲಕ್ಷ ಚದರ ಕಿಲೋಮೀಟರ್)ವಿಸ್ತಾರವಾಗಿದೆ.
* ಭೂ ಕ್ಷೇತ್ರದ ದೃಷ್ಟಿಯಿಂದ ಪ್ರಪಂಚದ 7ನೇ ದೊಡ್ಡ ರಾಷ್ಟ್ರ
* ಪ್ರಪಂಚದ ಭೂ ಕ್ಷೇತ್ರದ ಶೇಕಡ 2.4 ರಷ್ಟನ್ನು ಒಳಗೊಂಡಿದೆ.
* ವಿಸ್ತೀರ್ಣದ ಆಧಾರದ ಮೇಲೆ ಕ್ರಮವಾಗಿ ರಷ್ಯಾ, ಕೆನಡಾ, ಚೀನಾ, ಅಮೇರಿಕಾ, ಬ್ರೆಜಿಲ್, ಆಸ್ಟ್ರೇಲಿಯಾ, ಭಾರತ, ಅರ್ಜೆಂಟೇನಾ, ಕಜಿಗಿಸ್ತಾನ್ ಮತ್ತು ಅಲ್ಜೀರಿಯಾ.
* ಜನಸಂಖ್ಯೆಯಲ್ಲಿ ಮೊದಲು ಚೀನಾ ಹಾಗೂ ನಂತರದ ಸ್ಥಾನದಲ್ಲಿ ಭಾರತ ಇದೆ.
17. ಹಿಮಾಲಯದ ಸ್ಥಳದಲ್ಲಿ ಅಸ್ತಿತ್ವದಲ್ಲಿದ್ದ ಸಮುದ್ರ ಯಾವುದು?
1)ಕೆಂಪು ಸಮುದ್ರ
2)ಅರೇಬಿಯನ್ ಸಮುದ್ರ
3) ತೆಥಿಸ್ ಸಮುದ್ರ
4)ಮೃತ್ಯು ಸಮುದ್ರ
ಉ) ತೆಥಿಸ್ ಸಮುದ್ರ
* ವೆಗೆನರನ ಭೂಖಂಡಗಳ ಅಲೆತ ಸಿದ್ಧಾಂತ(Continental Drift Theory of Wegner)ರವರ ಪ್ರಕಾರ ಲಾರೇಷಿಯಾ ಅಥವಾ ಅಂಗಾರ ಮತ್ತು ಗೊಂಡ್ವಾ ನಾ ಭೂ ರಾಶಿಗಳ ನಡುವೆ ಉಂಟಾದ ಜಲ ಭಾಗವನ್ನು ತೆಥಿಸ್ ಸಮುದ್ರ(Tethys Sea)ಎಂದು ಕರೆಯಲಾಗುತ್ತಿತ್ತು.
* ಭೂಖಂಡಗಳು ಕ್ರಮೇಣ ಬೇರ್ಪಟ್ಟು ವಿವಿಧ ದಿಕ್ಕುಗಳಿಗೆ ಚಲಿಸಿದವು ಹಾಗೂ ಇದರಿಂದ ಉಂಟಾದ ಘರ್ಷಣೆಯಿಂದಾಗಿ ಅವುಗಳು ಚಲಿಸಿದ ದಿಕ್ಕಿಗೆ ಅಡ್ಡಲಾಗಿ ಮಡಿಕೆ ಪರ್ವತಗಳು ನಿರ್ಮಿತವಾದವು.
* ಹಿಮಾಲಯ ಪರ್ವತ ಶ್ರೇಣಿ -ಇದೊಂದು ಮಡಿಕೆ ಪರ್ವತವಾಗಿದೆ.
18. ಕುಲು ಕಣಿವೆ ಎಲ್ಲಿ ಕಂಡು ಬರುತ್ತದೆ?
1)ಲಡಾಕ್ ಮತ್ತು ಪೀರ್ ಪಂಜಲ್
2)ರಂಜೋತಿ ಮತ್ತು ನಾಗ್ ಟಿಬ್ಬಾ
3)ಕೆಳ ಹಿಮಾಲಯ ಮತ್ತು ಶಿವಾಲಿಕ್
4) ಧೌಲಾಧರ್ ಮತ್ತು ಪೀರ್ ಪಂಜಲ್
ಉ) ಲಡಾಕ್ ಮತ್ತು ಪೀರ್ ಪಂಜಲ್
* ಕುಲು ಕಣಿವೆ ಪೀರ್ ಪಂಜಾಲ್,ಕೆಳ ಹಿಮಾಲಯ ಮತ್ತು ಮಹಾಯ ಹಿಮಾಲಯ ಸಾಲಿನ ಮಧ್ಯದಲ್ಲಿದೆ.
* ಸ್ಪಿತಿಕಣಿವೆ,ಕುಲು ಕಣಿವೆ, ಕಾಂಗ್ರಾ ಕಣಿವೆ-ಧರ್ಮಶಾಲ,ಹಿಮಾಚಲ ಪ್ರದೇಶದಲ್ಲಿದೆ.
* ಸೈಲೆಂಟ್ ಕಣಿವೆ-ಕೇರಳ
19. ಭಾರತದ ಸ್ಥಳ ಕೃತಿ ನಕ್ಷೆಗಳನ್ನು ಯಾರು ಸಿದ್ಧಪಡಿಸುತ್ತಾರೆ?
1)ಭಾರತದ ಭೂ ವೈಜ್ಞಾನಿಕ ಸಮೀಕ್ಷೆ
2)ಭಾರತದ ಸಮೀಕ್ಷೆ
3)ರಕ್ಷಣಾ ಸಚಿವಾಲಯ
4)ಭಾರತದ ಭೌಗೋಳಿಕ ಸಮೀಕ್ಷೆ
ಉ)ಭಾರತದ ಸಮೀಕ್ಷೆ
* ಭಾರತೀಯ ಸಮೀಕ್ಷೆಯು(Survey of India)ಭಾರತದ ಕೇಂದ್ರೀಯ ಇಂಜಿನಿಯರಿಂಗ್ ಏಜೆನ್ಸಿಯಾಗಿದ್ದು ಮ್ಯಾಪಿಂಗ್ ಮತ್ತು ಸಮೀಕ್ಷೆಯ ಉಸ್ತುವಾರಿಯನ್ನು ಹೊಂದಿದೆ.
* ಇದನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪ್ರದೇಶಗಳನ್ನು ಕ್ರೂಡೀಕರಿಸಲು ಸಹಾಯ ಮಾಡಲು 1767 ರಲ್ಲಿ ಸ್ಥಾಪಿಸಲಾಯಿತು.
* ಇದು ಸಮೀಕ್ಷೆ ಮತ್ತು ಮ್ಯಾಪಿಂಗ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ.
* ಕಾರ್ಯನಿರ್ವಾಹಕರು ಭಾರತೀಯ ಸರ್ವೆಯರ ಜನರಲ್
* ಇದರ ಪ್ರಧಾನ ಕಚೇರಿ -ಡೆಹರಾಡೂನ್,ಉತ್ತರಾಖಾಂಡ
* ಜವಾಬ್ದಾರಿಯುತ ಸಚಿವರು -ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
* ಪೋಷಕ ಇಲಾಖೆ -ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
20.ಭಾರತದ ಮುಖ್ಯ ಭೂಮಿಯ ಅಕ್ಷಾಂಶಗಳು.
1) 8°4’N ಮತ್ತು 37°6′ N
2) 8°4′ W ಮತ್ತು 37°6′ W
3) 8°4′ E ಮತ್ತು 37°6′ E
4) 8°4′ S ಮತ್ತು 37°6′ S
ಉ) 8°4′ N ಮತ್ತು 37°6′ N
* ಭಾರತ ಭೌಗೋಳಿಕವಾಗಿ ಪೂರ್ವ ಭಾಗದ ಉತ್ತರ ಗೋಳಾರ್ಧದ ಮಧ್ಯದಲ್ಲಿ ನೆಲೆಸಿದೆ.
* ಇದು ಆಗ್ನೇಯ ಏಷ್ಯಾದ ಪ್ರಮುಖ ಪರ್ಯಾಯ ದ್ವೀಪವಾಗಿದೆ.
* ಭಾರತದ ಭೂ ಪ್ರಧಾನ ಭೂಬಾಗವು 8°4 ದಿಂದ 37°6′ ಉತ್ತರ ಅಕ್ಷಾಂಶ ಹಾಗೂ 68°7′ ದಿಂದ 97°25′ ಪೂರ್ವ ರೇಖಾಂಶಗಳ ನಡುವೆ ವಿಸ್ತರಿಸಿದೆ.
* ನಿಕೋಬಾರ್ ದ್ವೀಪದ 6°5′ ಉತ್ತರ ಅಕ್ಷಾಂಶದಲ್ಲಿರುವ”ಇಂದಿರಾ ಪಾಯಿಂಟ್” ಭಾರತದ ಅತ್ಯಂತ ದಕ್ಷಿಣ ತುದಿಯಾಗಿದೆ.
* ಜಮ್ಮು ಮತ್ತು ಕಾಶ್ಮೀರದ ಇಂದಿರಾ ಕೋಲ್ ಭಾರತದ ಅತ್ಯಂತ ಉತ್ತರ ತುದಿಯಾಗಿದೆ.
* ಭಾರತವು ಪೂರ್ವ ಪಶ್ಚಿಮವಾಗಿ 2933ಕಿಲೋಮೀಟರ್ ಅಂತರ ಹೊಂದಿದೆ ಮತ್ತು ಉತ್ತರ ದಕ್ಷಿಣವಾಗಿ 3214 ಕಿಲೋ ಮೀಟರ್ ಅಂತರವನ್ನು ಹೊಂದಿದೆ.
21. ವಿವಾದಾಸ್ಪದವಲ್ಲದ ಭಾರತೀಯ ಭೂಪ್ರದೇಶದಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಅತ್ಯುನ್ನತ ಶಿಖರ ?
1)ಮೌಂಟ್ ಎವರೆಸ್ಟ್
2)ಕಾಂಚನಜುಂಗಾ
3)ನಂದಾದೇವಿ
4) ನಂಗಾ ಪರ್ಬತ್
ಉ) ನಂದಾದೇವಿ
* ಮೌಂಟ್ ಎವರೆಸ್ಟ್: ನೇಪಾಳ -88 48. 86 ಮೀಟರ್
* ಗಾಡ್ವಿನ್ ಆಸ್ಟೆನ್: ಭಾರತ-8611 ಮೀಟರ್( ಇದು ಪಾರ್ಕ್ ಆಕ್ರಮಿತ ಕಾಶ್ಮೀರದಲ್ಲಿ ಕಂಡುಬರುತ್ತದೆ.)
* ಕಾಂಚನಜುಂಗಾ: ಭಾರತ-8598 ಮೀ (ಭಾರತದ ಸಿಕ್ಕಿ ಮತ್ತು ನೇಪಾಳದ ಪೂರ್ವ ಭಾಗದಲ್ಲಿ ನೆಲೆಗೊಂಡಿದೆ)
* ನಂಗ ಪರ್ಬತ್: ಜಮ್ಮು ಕಾಶ್ಮೀರ-8124 ಮೀಟರ್.( ಇದು ಕೂಡ Pok ಯಲ್ಲಿ ಕಂಡು ಬರುತ್ತದೆ.)
* ನಂದಾದೇವಿ: ಭಾರತ- 7817 ಮೀಟರ್( ಉತ್ತರಕಾಂಡದ ಚಮೋಲಿ ಗರ್ವಾಲ್ ಜಿಲ್ಲೆಯಲ್ಲಿ ನೆಲೆಗೊಂಡಿದೆ)
22. ಪಾಲ್ಘಾಟ್ ಈ ಕೆಳಗಿನ ಯಾವ ರಾಜ್ಯಗಳನ್ನು ಸಂಪರ್ಕಿಸುತ್ತದೆ?
1) ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ
2) ಮಹಾರಾಷ್ಟ್ರ ಮತ್ತು ಗುಜರಾತ್
3) ಕೇರಳ ಮತ್ತು ತಮಿಳುನಾಡು
4) ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ
ಉ) ಕೇರಳ ಮತ್ತು ತಮಿಳುನಾಡು
* ಪಾಲ್ಘಾಟ್ – ನೀಲಗಿರಿ ಮತ್ತು ಅಣ್ಣಮಲೈ ಬೆಟ್ಟದ ಮಧ್ಯದಲ್ಲಿ ಕೇರಳ ಮತ್ತು ತಮಿಳುನಾಡನ್ನು ಸೇರುತ್ತದೆ.
* ಥಾಲ್ ಘಾಟ್(Thal Ghat) – ನಾಸಿಕ್ ನಿಂದ ಮುಂಬೈ
* ಭೋರ್ ಫಾಟ್(Bhor Ghat) -ಮುಂಬೈನಿಂದ ಪುಣೆ
* ಸಂಕೋಟ ಪಾಸ್(SenKota Pass) – ನಾಗೇರ್ ಕೋಯಿಲ್ ಮತ್ತು ಕಾರ್ಡ್ ಮಮ್ ಬೆಟ್ಟಗಳ ಮಧ್ಯೆ ಮತ್ತು ತಿರುವನಂತಪುರಂ ಮತ್ತು ಮಧುರೈಯನ್ನು ಸಂಪರ್ಕಿಸುತ್ತದೆ.
* ಗೋರನ್ ಫಾಟ್ – ಗುರು ಶಿಖರ ಮತ್ತು ಮೌಂಟ್ ಅಬುಗಳನ್ನು ಸಂಪರ್ಕಿಸುವುದು.
* ಹಳದಿ ಘಾಟ್ – ರಾಜಾಸ್ ಮುಂಡ್ ಮತ್ತು ಪಾಲಿ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ.
* ಆಗುಂಬೆ ಘಾಟ್- ಉಡುಪಿ ಮತ್ತು ಶಿವಮೊಗ್ಗವನ್ನು ಸಂಪರ್ಕಿಸುತ್ತದೆ.
23.ಪಶ್ಚಿಮ ಕರಾವಳಿಯ ಉತ್ತರ ಭಾಗವನ್ನು ಏನೆಂದು ಕರೆಯುತ್ತಾರೆ?
1) ಕೋರಮಂಡಲ್ ಕರಾವಳಿ
2) ಮಲಬಾರ್ ಕರಾವಳಿ
3) ಕೊಂಕಣ ಕರಾವಳಿ
4) ಉತ್ತರ ವಲಯಗಳು
ಉ) ಕೊಂಕಣ ಕರಾವಳಿ
* ಪಶ್ಚಿಮ ಕರಾವಳಿಯ ದಕ್ಷಿಣ ಭಾಗ – ಮಲಬಾರ್ ಕರಾವಳಿ ತೀರ
* ಪೂರ್ವ ಕರಾವಳಿಯ ದಕ್ಷಿಣ ಭಾಗ- ಕೋರಮಂಡಲ ತೀರ
* ಪೂರ್ವ ಕರಾವಳಿಯ ಉತ್ತರ ಭಾಗ – ಉತ್ಕಲ ಕರಾವಳಿ ತೀರ
24. ಭಾರತೀಯ ಪರ್ಯಾಯ ಪ್ರಸ್ಥಭೂಮಿಯ ಕೇಂದ್ರ ಉನ್ನತ ಪ್ರದೇಶಗಳು ಯಾವ ಶಿಲೆಗಳಿಂದ ರೂಪುಗೊಂಡಿವೆ.
1) ಪದರು ಮತ್ತು ರೂಪಾಂತರ ಶಿಲೆಗಳು
2) ಅಗ್ನಿ ಮತ್ತು ಪದರು/ ಕಣ ಶಿಲೆಗಳು
3) ಅಗ್ನಿ ಮತ್ತು ರೂಪಾಂತರ ಶಿಲೆಗಳು
4) ಪದರು ಶಿಲೆಗಳು
ಉ) ಅಗ್ನಿ ಮತ್ತು ರೂಪಾಂತರ ಶಿಲೆಗಳು
* ಪರ್ಯಾಯ ಪ್ರಸ್ಥಭೂಮಿಯನ್ನು ಭೂಸ್ವರೂಪಗಳ ಆಧಾರದ ಮೇಲೆ
1) ಉನ್ನತ ಪ್ರದೇಶ
2) ದಖ್ಖನ್ ಪ್ರಸ್ಥಭೂಮಿಯೆಂದು ವಿಂಗಡಿಸಲಾಗಿದೆ.
* ಕೇಂದ್ರ ಉನ್ನತ ಪ್ರದೇಶವು ಗಟ್ಟಿಯಾದ ಅಗ್ನಿ ಮತ್ತು ರೂಪಾಂತರ ಶಿಲೆಗಳಿಂದ ರೂಪುಗೊಂಡಿದೆ.
* ಈ ಉನ್ನತ ಪ್ರದೇಶವು ಮಾಳ್ವ, ಬುಂದೇಲ್ ಖಂಡ, ಬಾಗೆಲ್ ಖಂಡ,ಅರಾವಳಿ ಪರ್ವತಗಳು, ವಿಂಧ್ಯ ಪರ್ವತ, ಶಿಲ್ಲಾಂಗ್ ಪ್ರಸ್ಥಭೂಮಿ, ಛೋಟಾ ನಾಗ್ಪುರ ಪ್ರಸ್ಥಭೂಮಿಯನ್ನು ಒಳಗೊಂಡಿದೆ.
* ಈ ಉನ್ನತ ಪ್ರದೇಶವು 800 ರಿಂದ 1200 ಮೀಟರ್ ಎತ್ತರವಾಗಿದ್ದು ನೈರುತ್ಯ ದಿಂದ ಈಶಾನ್ಯದ ಕಡೆಗೆ ಇಳಿಜಾರಾಗಿದೆ.
25. ಗ್ರೇಟ್ ನಿಕೋಬಾರ್ ಮತ್ತು ಇಂಡೋನೇಷ್ಯಾದ ಸುಮಾತ್ರಾ ದ್ವೀಪವನ್ನು ಬೇರ್ಪಡಿಸುವ ಚಾನೆಲ್ ?
1) 6°ಚಾನೆಲ್
2) 7° ಚಾನೆಲ್
3) 8° ಚಾನೆಲ್
4) 9°ಚಾನೆಲ್
ಉ) 6° ಚಾನೆಲ್
* ಡಂಕನ್ ಕಾಲುವೆ – ಲಿಟಲ್ ಅಂಡಮಾನ್ ಮತ್ತು ದಕ್ಷಿಣ ಅಂಡ್ ಮಾನ್
* 10°ಚಾನೆಲ್ – ಅಂಡಮಾನ ಗುಂಪು ಮತ್ತು ನಿಕೋಬಾರ್ ಗುಂಪು
* 9° ಚಾನೆಲ್ – ಮಿನಿಕಾಯ್ ಮತ್ತು ಉಳಿದ ಲಕ್ಷದ್ವೀಪಗಳನ್ನು
* 8° ಚಾನೆಲ್ – ಲಕ್ಷದ್ವೀಪ ಮತ್ತು ಮಾಲ್ಡಿವ್ಸ್
* 6° ಚಾನೆಲ್ – ಭಾರತದ ನಿಕೋಬಾರ್ ದ್ವೀಪ ಮತ್ತು ಇಂಡೋನೇಷ್ಯಾ ಯಾದ ಸುಮಾತ್ರ ದ್ವೀಪ.
26. ಥಾಲ್, ಭೋರ್ ಮತ್ತು ಪಾಲ್ ಘಾಟ್ ಮಾರ್ಗಗಳು ಕಂಡುಬರುವುದು________
1) ಪಶ್ಚಿಮ ಘಟ್ಟಗಳು
2) ಪೂರ್ವ ಘಟ್ಟಗಳು
3) ಧೌಲಾಧರ್ ಶ್ರೇಣಿ
4) ಮಹಾಭಾರತ ಶ್ರೇಣಿ
ಉ) ಪಶ್ಚಿಮ ಘಟ್ಟಗಳು
* ಪಶ್ಚಿಮ ಘಟ್ಟಗಳು: ಇವುಗಳ ಸರಾಸರಿ ಎತ್ತರವು 1000 ಮೀ ನಿಂದ 13000 ಮೀ ಆಗಿದೆ.
* ಇದು ತಪತಿ ನದಿ ಕಣಿವೆಯಿಂದ ದಕ್ಷಿಣದ ನೀಲಗಿರಿ ಬೆಟ್ಟಗಳ ವರೆಗೆ 1600 ಕಿ. ಮೀ ವಿಸ್ತಾರವಾಗಿ ಹಬ್ಬಿವೆ.
* ಗುಜರಾತ್ ಮಹಾರಾಷ್ಟ್ರ ಗೋವಾ ಕರ್ನಾಟಕ,ಕೇರಳ ಮತ್ತು ತಮಿಳುನಾಡಿನಲ್ಲಿ ಹರಡಿದೆ.
* ಕಾಸರ ಘಾಟ್ ಮಾರ್ಗ/ ಥಾಲ್/ಥೂಲ್ ಘಾಟ: ಇದು ಮುಂಬೈ -ನಾಸಿಕ್ ಸಂಪರ್ಕಿಸುತ್ತದೆ.
* ಮಲ್ಯೆಜ್(Malshej) ಘಾಟ್ : ಮಹಾರಾಷ್ಟ್ರದ ಕಲ್ಯಾಣ – ಅಹಮದ್ ನಗರ
* ಭೋರ್ ಫಾಟ್(Bhor): ಮುಂಬೈನಿಂದ ಪುಣೆ
* ಪಾಲ್ ಘಾಟ್(Pal): ಕೇರಳ-ತಮಿಳುನಾಡು(ಅಣ್ಣಾಮಲೈ ನೀಲಗಿರಿ ಬೆಟ್ಟಗಳು)