ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ನಿಯಮಕಾತಿಗಳ ಅಧಿ ಸೂಚನೆ ಪ್ರಕಟವಾಗುತ್ತಲೇ ಇದೆ.327 ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದ ಮರು ದಿನವೇ ಸಾರಿಗೆ ಇಲಾಖೆಯಲ್ಲಿನ ಮೋಟಾರ್ ವಾಹನ ನಿರೀಕ್ಷಕರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಹೈದರಾಬಾದ್ ಕರ್ನಾಟಕಕ್ಕೆ ಮೀಸಲಿಟ್ಟ ಆರು ಹುದ್ದೆಗಳು ಸೇರಿದಂತೆ ಒಟ್ಟು 76 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.ಏಪ್ರಿಲ್ 22 ರಿಂದ ಮೇ 21ರ ತನಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಒಟ್ಟು ಉದ್ದಗಳು 76
* ಏಪ್ರಿಲ್ 22 ರಿಂದ ಮೇ 21ರ ತನಕ ಅರ್ಜಿ ಸಲ್ಲಿಸಲು ಅವಕಾಶ.
* ಸಹಾಯವಾಣಿ :- 08030574957/30574901
* ಕೆ ಪಿ ಎಸ್ ಸಿ ವೆಬ್ಸೈಟ್ :- Kpsc.kar.nic.in
ಅರ್ಹತೆಗಳೇನು?
ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ವ್ಯಾಸಂಗ ಪೂರ್ಣಗೊಳಿಸಿರಬೇಕು ಮತ್ತು ಆಟೋಮೊಬೈಲ್ ಎಂಜಿನಿಯರಿಂಗ್/ ಮೆಕಾನಿಕಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ ವಿದ್ಯಾರ್ಹತೆ ಹೊಂದಿರಬೇಕು.ಡಿಪ್ಲೋಮೋ ಆಟೋಮೊಬೈಲ್ ಎಂಜಿನಿಯರಿಂಗ್ ನಲ್ಲಿ ಪದವಿ / ಬಿ ಟೆಕ್ ಅರ್ಹತೆ ಇದ್ದರೂ ಅರ್ಜಿ ಸಲ್ಲಿಸಬಹುದು.ಇದರೊಂದಿಗೆ ಚಾಲನಾ ಪರವಾನಗಿ ಹೊಂದಿರುವುದು ಕಡ್ಡಾಯ.ಇದರೊಂದಿಗೆ ದೈಹಿಕ ಅರ್ಹತೆಯು ಬಹಳ ಮುಖ್ಯವಾಗುತ್ತದೆ.ಪುರುಷರಾಗಿದ್ದಲ್ಲಿ 168 ಸೆಂಟಿಮೀಟರ್ ಎತ್ತರ ಮತ್ತು 86 ಸೆಂಟಿಮೀಟರ್ ಎದೆಯ ಅಳತೆಯನ್ನು ಹೊಂದಿರಬೇಕು.ಮಹಿಳೆಯರಾಗಿದ್ದಲ್ಲಿ 157 ಸೆಂಟಿಮೀಟರ್ ಎತ್ತರ ಮತ್ತು 49 ಕೆಜಿ ತೂಕವನ್ನು ಹೊಂದಿರಬೇಕಾಗುತ್ತದೆ.
-: ವಯೋಮಿತಿ :-
18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು,ಪ್ರವರ್ಗ 2 ಎ, 2ಬಿ, 3ಎ ಹಾಗೂ 3ಬಿ ವರ್ಗದ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 38 ವರ್ಷಗಳು ಮತ್ತು ಎಸ್ಸಿ /ಎಸ್ಟಿ ಮತ್ತು ಪ್ರವರ್ಗ -1 ರ ಅಭ್ಯರ್ಥಿಗಳಾಗಿದ್ದಲ್ಲಿ 40 ವರ್ಷಗಳು.
-: ಅರ್ಜಿ ಶುಲ್ಕ :-
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ 600 ರೂ, ಪ್ರವರ್ಗ-2ಎ, 2ಬಿ, 3ಎ, ಹಾಗೂ 2ಬಿ ವರ್ಗದ ಅಭ್ಯರ್ಥಿಗಳಿಗೆ ರೂ.300 ರೂ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50 ಶುಲ್ಕ ನಿಗದಿಪಡಿಸಲಾಗಿದೆ.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ.
Thimmaraju sira 7337668387