ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ( AFSPA).

       -: ವಿಷಯ :-

ಅಸ್ಸಾಂ ಸರ್ಕಾರವು ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ ) ಕಾಯಿದೆ, 1958 ಯನ್ನು ತನ್ನ ನಾಲ್ಕು ಜಿಲ್ಲೆಗಳಲ್ಲಿ ಏಪ್ರಿಲ್ 1 ರಿಂದ ಮುಂದಿನ ಆರು ತಿಂಗಳವರೆಗೆ ವಿಸ್ತರಿಸಿದೆ.

 -: ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ ಬಗ್ಗೆ ತಿಳಿಯಿರಿ :-

* ಕ್ವಿಟ್ ಇಂಡಿಯಾ ಚಳುವಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕಾಯ್ದೆಯನ್ನು ಮೊದಲ ಬಾರಿಗೆ 1942ರಲ್ಲಿ ಲಾರ್ಡ್ ಲಿನ್ಲಿತ್ಗೋ ಘೋಷಿಸಿದ್ದರು.

* ಸ್ವಾತಂತ್ರದ ನಂತರ, ಈ ಕಾನೂನನ್ನು 1958 ರಲ್ಲಿ ಸಂಸತ್ತು ಜಾರಿಗೆ ತಂದಿತು.

* ” ತೊಂದರೆಗಿಡಾದ ಪ್ರದೇಶ” ಗಳಲ್ಲಿ ಸಾರ್ವಜನಿಕ ಸು ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಈ ಕಾಯಿದೆ ಸಶಸ್ತ್ರ ಪಡೆಗಳಿಗೆ ( ಅಂದರೆ ಭೂಸೇನೆ, ವಾಯುಪಡೆ ಮತ್ತು ಕೇಂದ್ರ ಅರೆಸೇನಾ ಪಡೆಗಳಿಗೆ ) ವಿಶೇಷ ಅಧಿಕಾರ ಮತ್ತು ವಿನಾಯಿತಿಯನ್ನು ನೀಡುತ್ತದೆ.

* ಈ ಕಾಯಿದೆಯ ಸೆಕ್ಷನ್ 2 ನಲ್ಲಿ ಹೇಳುವಂತೆ ಒಂದು ಪ್ರದೇಶವನ್ನು ತೊಂದರೆಗೀಡಾದ ಪ್ರದೇಶ ಎಂದು ಘೋಷಿಸಿದ ನಂತರ ಮಾತ್ರ ಈ ಕಾಯಿದೆಯನ್ನು ಅನ್ವಹಿಸಬಹುದಾಗಿದೆ.

ತೊಂದರೆಗೀಡಾದ ಪ್ರದೇಶ ಎಂದರೇನು?

* ವಿವಿಧ ಧಾರ್ಮಿಕ, ಜನಾಂಗಿಯ, ಭಾಷೆ ಮತ್ತು ಪ್ರಾದೇಶಿಕ ಗುಂಪುಗಳು ಅಥವಾ ಜಾತಿಗಳು, ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳು ಹಾಗೂ ವಿವಾದಗಳಿಂದಾಗಿ ಗಲಭೆಯುಂಟಾಗುವ ಪ್ರದೇಶ.

* ಈ ಕಾಯ್ದೆಯ ವಿಭಾಗ (3) ವು , ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ರಾಜ್ಯಪಾಲರಿಗೆ ಪೂರ್ಣ ರಾಜ್ಯ ಅಥವಾ ರಾಜ್ಯದ ನಿರ್ದಿಷ್ಟ ಪ್ರದೇಶವನ್ನು ತೊಂದರೆಗಿಡಾದ ಪ್ರದೇಶ ಎಂದು ಘೋಷಿಸುವ ಅಧಿಕಾರವನ್ನು ನೀಡುತ್ತದೆ.

 ಈ ಕಾಯ್ದೆ ಅನಿವಾರ್ಯತೆ ಇದೆಯೇ?

ಸಾಮಾನ್ಯ,ಭಾರತೀಯ ದಂಡ ಸಂಹಿತೆ ( ಐಪಿಸಿ) ಹಾಗೂ ಅಪರಾಧ ಪ್ರಕ್ರಿಯಾ ಸಂಹಿತೆ ( ಸಿಆರ್ ಪಿ ಸಿ) ಗಳು ಆಂತರಿಕ ದಂಗೆ ಹಾಗೂ ಭಯೋತ್ಪಾದಕ  ಚಟುವಟಿಕೆಯಂತಹ ಹಿಂಸಾತ್ಮಕ ಸನ್ನಿವೇಶಗಳನ್ನು ನಿಭಾಯಿಸಲು ಅಸಮರ್ಥವಾಗಿವೆ ಎಂಬ ಅಭಿಪ್ರಾಯವಿದೆ.

 -: ವಿಶೇಷ ಅಧಿಕಾರಗಳು:-

* ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುವ ಯಾರ ಮೇಲಾದರೂ ಗುಂಡು ಹಾರಿಸುವ ಅಧಿಕಾರವನ್ನು ಈ ಕಾಯ್ದೆ ನೀಡುತ್ತದೆ.

* ಯಾರನ್ನೇ ಆದರೂ ವಾರಂಟಿ ಇಲ್ಲದೆ ಬಂಧಿಸಲು, ಯಾವುದೇ ವಾಹನ ಅಥವಾ ಹಡಗನ್ನು ತಡೆಯಲು ಮತ್ತು ಪರಿಶೀಲಿಸಲು ಹಾಗೂ 5 ಅಥವಾ ಅದಕ್ಕಿಂತ ಹೆಚ್ಚಿನ ಜನರು ಗುಂಪು ಗೂಡದಂತೆ ನಿಷೇಧಿಸುವುದು ಈ ಕಾಯ್ದೆಯ ಕೆಲವು ‘ ವಿಶೇಷ ಅಧಿಕಾರಗಳಲ್ಲಿ’ ಸೇರುವೆ.

 

WhatsApp Group Join Now
Telegram Group Join Now