ಸುದ್ಧಿಯಲ್ಲಿರುವ ಗೂಗಲ್ ಮತ್ತು ಭಾರತೀಯ ಡೆವೆಲಪರ್ ಗಳ ವಿವಾದ

ಇತ್ತೀಚೆಗೆ ಸೇವಾ ಶುಲ್ಕ ಪಾವತಿಯ ವಿವಾದದ ಹಿನ್ನೆಲೆ ಗೂಗಲ್ ಭಾರತದಲ್ಲಿನ ತನ್ನ ಪ್ಲೇ ಸ್ಟೋರ್ ನಿಂದ ಜನಪ್ರಿಯ ಸ್ಪಾರ್ಟ್ ಅಪ್ ಮ್ಯಾಟ್ರಿಮೋನಿ ಅಪ್ಲಿಕೇಶನ್ ಗಳು ಸೇರಿದಂತೆ ಹತ್ತು ಅಪ್ಲಿಕೇಶನ್ ಗಳನ್ನು ಮಾ.1ರಂದು ಹಿಂಪಡೆದತ್ತು . ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ವಿವಾದ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಗೂಗಲ್ ನಡೆಯನ್ನು ವಿರೋಧಿಸಿತ್ತು.

  -: ಸಮಸ್ಯೆ ಪ್ರಾರಂಭ :-

ಗೂಗಲ್ ತನ್ನ ಹಿಂದಿನ ಶೇ. 15-30 ರ ಶುಲ್ಕ ಪದ್ಧತಿಯನ್ನು ತೆಗೆದುಹಾಕಲು ಆ್ಯಂಟಿ ಟ್ರಸ್ಟ್ ಅಧಿಕಾರಿಗಳಿಂದ ಆದೇಶ ಅನುಸರಿಸಿ ಅಪ್ಲಿಕೇಶನ್ ನಲ್ಲಿನ ಪಾವತಿಗಳ ಮೇಲೆ ಶೇ. 11- 26 ರವರೆಗೆ ಶುಲ್ಕ ವಿಧಿಸಿರುವುದನ್ನು ಸ್ಪಾರ್ಟ್ಟ ಅಪ್ಗಳು ವಿರೋಧಿಸಿರುವುದರಿಂದ ಈ ಬೆಳವಣಿಗೆ ನಡೆದಿದೆ. ಗೂಗಲ್ ತನ್ನ ಅಪ್ಲಿಕೇಶನ್ ನೀತಿಗಳ ಮೇಲೆ ಭಾರತೀಯ ಡೆವಲಪರ್ ಗಳಿಂದ ತೀವ್ರ ಹಿನ್ನಡೆಯನ್ನು ಎದುರಿಸಿದೆ. ವಿಶೇಷವಾಗಿ ಅಕ್ಟೋಬರ್ 2020 ರ ಗೂಗಲ್ ತನ್ನ ಪ್ಲೇ ಬಿಲ್ಲಿಂಗ್ ಸಿಸ್ಟ್ ಮನ್ ಕಡ್ಡಾಯ ಏಕೀಕರಣವನ್ನು ವಿಶ್ವದಾದ್ಯಂತ ಜಾರಿಗೊಳಿಸುವುದಾಗಿ ಹೇಳಿದ ಬಳಿಕ ಈ ಸಮಸ್ಯೆ ಉಲ್ಬಣಗೊಂಡಿತ್ತು.

   -: ಗೂಗಲ್ ಕೈಗೊಂಡ ಕ್ರಮ :-

ಇತರ ಆ್ಯಪ್ ಸ್ಟೋರ್ ಗಳ ಪಾವತಿ ನೀತಿಗಳಿಗೆ ಬದ್ಧವಾಗಿದ್ದರೂ.ತನ್ನ ಪಾವತಿ ನೀತಿಯನ್ನು ಅನುಸರಿಸಿದ 10 ಡೆವಲಪರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದಾಗಿ ಗೂಗಲ್ ಹೇಳಿದ ಬೆನ್ನಲ್ಲೇ ಪ್ಲೇ ಸ್ಟೋರ್ ನಿಂದ ಭಾರತೀಯ ಅಪ್ಲಿಕೇಶನ್ ಡೆವಲಪರ ಗಳ 150 ಕ್ಕೂ ಹೆಚ್ಚು ಅಪ್ಲಿಕೇಶನ್ಗಳನ್ನು ಗೂಗಲ್ ತೆಗೆದು ಹಾಕಿತ್ತು.ಮುಖ್ಯವಾಗಿ ಈ ಕಂಪನಿಗಳು ಸುಪ್ರೀಂ ಕೋರ್ಟ್ ನಲ್ಲಿ ಗೂಗಲ್ ನ ಅಪ್ಲಿಕೇಶನ್ ಬಿಲ್ಲಿಂಗ್ ನೀತಿಯ ವಿರುದ್ಧದ ಪ್ರಕರಣದಲ್ಲಿ ಅರ್ಜಿದಾರರಾಗಿದ್ದರು.

   -: ಗೂಗಲ್ ಗೆ ಪತ್ರ ಬರೆದ ಡೆವಲಪರ್ ಗಳು :-

ಆ್ಯಪ್ ಬಿಲ್ಲಿಂಗ್ ನೀತಿಯನ್ನು ಗೂಗಲ್ ಜಾರಿಗೊಳಿಸಿರುವುದನ್ನು ಪ್ರಶ್ನಿಸಿ ತನ್ನ ಮನವಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್ನ ಆದೇಶದ ವಿರುದ್ಧ ಡೆವಲಪ್ ರಗಳು ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದ್ದರು.ಇದಕ್ಕೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಭಾರತೀಯ ಅಪ್ಲಿಕೇಶನ್ಗ ಡೆವಲಪರ್ಗಗಳ ಗುಂಪು ಗೂಗಲ್ ಗೆ ಪತ್ರ ಬರೆದಿತ್ತು.ಮಾರ್ಚ್ 19 ರವರೆಗೆ ಗೂಗಲ್ ಪ್ಲೇ ಸ್ಟೋರ್ ನಿಂದ ಅಪ್ಲಿಕೇಶನ್ಗಳನ್ನು ಡಿಲೀಟ್ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳದಂತೆ ಗೂಗಲ್ ಗೆ ಮನವಿ ಮಾಡಿತ್ತು.

   -: ಡಿಲೀಸ್ಟ್ ಆಗಿದ್ದ ಆ್ಯಪ್ ಗಳು :-

ಯಾರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬ ನಿರ್ದಿಷ್ಟ ಕಂಪನಿಯ ಹೆಸರನ್ನು ಗೂಗಲ್ ಬಹಿರಂಗಪಡಿಸಿಲ್ಲ. ಆದ್ಯಾಗು,shaadi.com, ನೌಕರಿ,ರಿಯಲ್ ಎಸ್ಟೇಟ್ ಪೋರ್ಟಲ್ 99 ಎಕರೆ, ಎಎಲ್ ಟಿ ಟಿ, ಸ್ಟೇಜ್ ಮತ್ತು ಆಹಾ,  ಟ್ರೂಲಿ ಮ್ಯಾಡ್ಲಿ ಮತ್ತು ಕ್ವಾಕ್ ಕ್ವಾಕ್ , ಆಡಿಯೋ ಕಂಟೆಂಟ್ ಪ್ಲಾಟ್ಫಾರ್ಮ್ ಕುಕು ಎಫ್ ಎಂ ಮತ್ತು ಎಫ್ಆರ್ ಎನ್ ಡಿ ಮಾರ್ಚ್ 1ರಿಂದ ಪ್ಲೇ ಸ್ಟೋರ್ ನಿಂದ ಡಿಲಿಸ್ಟ್ ಆಗಿದ್ದವು.ಮ್ಯಾಟ್ರಿಮೋನಿ ಸಂಸ್ಥಾಪಕ ಮುರುಗವೇಲ್ ಜಾನಕಿ ರಾಮನ್ ಲಿಂಕ್ಡ್ ಇನ್ ನಲ್ಲಿ ಪೋಸ್ಟ್ ನಲ್ಲಿ ಗೂಗಲ್ ತನ್ನ 150ಕ್ಕೂ ಹೆಚ್ಚು ಅಪ್ಲಿಕೇಶನ್ಗಳನ್ನು ತೆಗೆದು ಹಾಕಿದೆ ಎಂದು ಹೇಳಿದ್ದರು.

   -: ಮರು ಸ್ಥಾಪನೆಯಾದ ಆ್ಯಪ್ ಗಳು :-

ಗೂಗಲ್ ಕೈ ಬಿಟ್ಟಿದ್ದ ಆ್ಯಪ್ ಗಳ ಪೈಕಿ ಜೀವನ ಸಾಥಿತಿ.ಕಾಂ,shaadi.com,99ಏಕರ್ಸ್ ,ನೌಕ್ರಿ. ಕಾಂ, ಶಿಕ್ಷಾ ಶನಿವಾರ  ಮತ್ತೆ ಪ್ಲೇ ಸ್ಟೋರ್ ನಲ್ಲಿ ಕಾಣಿಸಿಕೊಂಡಿದೆ.

WhatsApp Group Join Now
Telegram Group Join Now

Leave a Comment