40 ಲಕ್ಷ ಬಿಪಿಎಲ್ ಕಾರ್ಡ್ ಗೆ ಕಂಟಕ? ಸರ್ಕಾರಿದಿಂದ ಹೊಸ ಆದೇಶ ಜಾರಿ-2024.
ಅನ್ನಭಾಗ್ಯಕ್ಕಾಗಿ ಅಲ್ಲ, ಆರೋಗ್ಯ, ಕೃಷಿ ಸೌಲಭ್ಯಗಳಿಗಾಗಿ ಬಿಪಿಎಲ್ 40 ಲಕ್ಷ ಬಿಪಿಎಲ್‌ಗೆ ಕಂಟಕ?
ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ದಾರರಿಗೆ ಕಂಟಕ ಎದುರಾಗಲಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಸದ್ಯ ಬಿಪಿಎಲ್, ಅಂತ್ಯೋದಯ ಅನ್ನ ಯೋಜನೆ ಸೇರಿ 1.27 ಕೋಟಿ ಕಾರ್ಡ್ ಗಳಿವೆ. 4.36 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಇದರಲ್ಲಿ ಲಕ್ಷಾಂತರ ಕಾರ್ಡ್‌ಗಳನ್ನು ಅರ್ಹತೆಯಿಲ್ಲದವರೂ ಪಡೆದು, ಅನ್ನಭಾಗ್ಯ, ಗೃಹಲಕ್ಷ್ಮಿ ಸೇರಿದಂತೆ ಸರಕಾರದ ನಾನಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದರಿಂದ ಅರ್ಹರಿಗೆ ಸಿಗಬೇಕಿರುವ ಸೌಲಭ್ಯಗಳು ಉಳ್ಳವರ ಪಾಲಾಗುತ್ತಿವೆ. ಹೀಗಾಗಿ, ಇಂತಹ ಕಾರ್ಡ್‌ಗಳನ್ನು ಎಪಿಎಲ್ ಆಗಿ ಪರಿವರ್ತಿ ಸಲು ಉದ್ದೇ ಶಿಸಲಾಗಿದೆ. ಸದ್ಯ ವಿತರಣೆಯಾಗಿರುವ ಬಿಪಿಎಲ್ ಕಾಡ್ ೯ಗಳಲ್ಲಿ ಶೇ.20ರಷ್ಟು ಅನರ್ಹ ಕಾರ್ಡ್‌ಗಳು ಬೆಂಗಳೂರಿ ನಲ್ಲಿಯೇ ಇದ್ದು, ರಾಜ್ಯಾದ್ಯಂತ ಸುಮಾರು ಶೇ.15-20ರಷ್ಟಿವೆ.
ನೀತಿ ಆಯೋಗದ ಪ್ರಕಾರ, ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.5.67ರಷ್ಟಿರಬೇಕು. ಆದರೆ, ರಾಜ್ಯದಲ್ಲಿ ಈ ಪ್ರಮಾಣ ಶೇ 80 ರಷ್ಟಿದೆ. ರಾಜ್ಯದಲ್ಲಿ ಸದ್ಯ 1.27 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ. ಹೀಗಾಗಿ, ಅನರ್ಹ ಬಿಪಿಎಲ್ ಕಾರ್ಡು ಗಳನ್ನು ರದ್ದುಪಡಿಸಿ, ಅರ್ಹರಿಗೆ ಬಿಪಿಎಲ್ ಕಾರ್ಡ್ ಒದಗಿಸಬೇಕು ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಧಿ ಕಾರಿಗಳಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯಪ್ರವೃತ್ತವಾಗಲು ನಿರ್ಧರಿಸಿದ್ದು, ಅರ್ಹರಲ್ಲದ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಲು ಮುಂದಾಗಿದೆ.
ಆರ್ಥಿಕ ಸ್ಥಿತಿವಂತರೂ ಬಿಪಿಎಲ್ ಕಾರ್ಡ್ ಗಳನ್ನು ಪಡೆದು, ಬಡವರ ಸೌಲಭ್ಯಗಳನ್ನು ಕಸಿಯುತ್ತಿದ್ದಾರೆ. ಹೀಗಾಗಿ, ಇಂತಹ ವರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳನ್ನಾಗಿ ಪರಿವರ್ತಿಸಲು ಸರಕಾರ ದೃಢವಾಗಿ ನಿರ್ಧರಿಸಿದೆ. ಈ ಹಿಂದಿನ ಸರಕಾರಗಳು ಕೂಡ ಈ ಬಗ್ಗೆ ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಪೂರ್ಣಪ್ರಮಾಣದ ಸಫಲತೆ ಕಾಣಲಿಲ್ಲ. ಇದೀಗ ಮತ್ತೆ ಕಟ್ಟುನಿಟ್ಟಾಗಿ ಪಾಲಿಸಲು ನಿರ್ಧರಿಸಲಾಗಿದೆ.
ಬಿಪಿಎಲ್ ಕಾರ್ಡುದಾರರ ಹೆಸರಿನಲ್ಲಿ ವಾಹನಗಳು ಇವೆಯಾ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಲಿದೆ. ಫಲಾನುಭವಿಗಳ ಹೆಸರಲ್ಲಿ ಭೂಮಿ ಎಷ್ಟಿದೆ ಎಂಬ ಮಾಹಿತಿಯನ್ನು ಕಂದಾಯ ಇಲಾಖೆ ನೀಡಲಿದೆ. ಇನ್ನು, ಐಟಿ ಪಾವತಿ ಬಗ್ಗೆ ಐಟಿ ಇಲಾಖೆಯಿಂದ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಸರಕಾರಿ ನೌಕರಿ, ಸರಕಾರಿ ಪ್ರಾಯೋಜಿತ ಇಲಾಖೆ, ನಿಗಮ ಮಂಡಳಿಯಲ್ಲಿ ಕೆಲಸ ಮಾಡುತ್ತಿರುವವರ ಬಗ್ಗೆ ಮಾಹಿತಿ ಕಲೆ ಹಾಕಲು ಆಹಾರ ಇಲಾಖೆ ಮುಂದಾಗಿದೆ.
ಅನರ್ಹರು ಯಾರು?
- ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತಲೂ ಹೆಚ್ಚಿರುವವರು
- ವೈಟ್ ಬೋರ್ಡ್ ನಾಲ್ಕು ಚಕ್ರದ ವಾಹನ ಉಳ್ಳವರು
- ಐಟಿ ರಿಟರ್ನ್ಸ್ ಪಾವತಿಸುವರು.
- ಹಳ್ಳಿಯಲ್ಲಿ 3 ಹೆಕ್ಟೇರ್ ಒಣಭೂಮಿ/ ತತ್ಸಮಾನ ನೀರಾವರಿ ಭೂಮಿ ಹೊಂದಿರುವವರು
- ನಗರ ಪ್ರದೇಶಗಳಲ್ಲಿ 1000 ಚದರ ಅಡಿ ವಿಸ್ತೀರ್ಣದ ಸ್ವಂತ ಮನೆ ಹೊಂದಿರುವವರು
- ಸರಕಾರಿ, ಅರೆಸರಕಾರಿ ಉದ್ಯೋಗದಲ್ಲಿರುವವರು
- ಅನರ್ಹ ಕಾರ್ಡ್‌ಗಳ ಪತ್ತೆಗಾಗಿ ಆಹಾರ ಇಲಾಖೆಗೆ ಸಾರಿಗೆ, ಕಂದಾಯ ಮತ್ತಿತರ ಇಲಾಖೆಗಳು ಸಾಥ್ ನೀಡಲಿವೆ.
ಬಿಪಿಎಲ್‌ಗೆ ಯಾಕಿಷ್ಟು ಬೇಡಿಕೆ?
ರಾಜ್ಯದಲ್ಲಿ ಅತಿ ಹೆಚ್ಚು ಬಿಪಿಎಲ್ ಕಾರ್ಡ್ಗಳು ವಿತರಣೆಯಾಗಿವೆ ಎಂದರೆ ಅದಕ್ಕೆ ‘ಅನ್ನಭಾಗ್ಯ’ ಮಾತ್ರ ಕಾರಣವಲ್ಲ, ಗೃಹಲಕ್ಷ್ಮಿಯೂ ಅಲ್ಲ, ಬದಲಿಗೆ ದುಬಾರಿ ಮೆಚ್ಚದ ಆರೋಗ್ಯ ಸೇವೆ, ಕೃಷಿ ಉದ್ದೇಶಿತ ಯೋಜನೆಗಳು, ವಸತಿ ಯೋಜನೆಗಳಂತಹ ನಾನಾ ಸರಕಾರಿ ಸೌಲಭ್ಯಗಳ ಬಳಕೆಗಾಗಿ ಬಿಪಿಎಲ್ ಕಾರ್ಡ್‌ಗಳು ವ್ಯಾಪಕವಾಗಿ ವಿತರಣೆಯಾಗಿವೆ. ಬಿಪಿಎಲ್ ಕಾರ್ಡ್ ಇದ್ದರೆ ಕ್ಯಾನ್ಸರ್, ಕಿಡ್ನಿ ವೈಫಲ್ಯ ಸೇರಿದಂತೆ ದುಬಾರಿ ವೆಚ್ಚದ ಕಾಯಿಲೆಗಳಿಗೆ ಕೆಲವು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಿಕ್ಕರೆ, ಮತ್ತೆ ಕೆಲವೆಡೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಸಿಗುತ್ತದೆ. ಇದು ಬಡವರಿಗೆ ಮಾತ್ರವಲ್ಲ, ಮಧ್ಯಮ ವರ್ಗದವರಿಗೂ ವರದಾನವಾಗಿದೆ. ಹೀಗಾಗಿ, ಸುಳ್ಳು ದಾಖಲೆ, ಸುಳ್ಳು ಆದಾಯ ಪತ್ರ ಸಲ್ಲಿಸಿ ಸಾಕಷ್ಟು ಮಂದಿ ಬಿಪಿಎಲ್ ಕಾರ್ಡ್ ಗಳನ್ನು ಪಡೆದಿದ್ದಾರೆ.
ಒಂದು ಕುಟುಂಬ, ನಾಲ್ಕು ಕಾರ್ಡ್.
ಇಬ್ಬರು, ಮೂವರು ವಿವಾಹಿತ ಮಕ್ಕಳು ಒಂದೇ ಮನೆಯಲ್ಲಿ ವಾಸವಾಗಿದ್ದರೂ ಪ್ರತ್ಯೇಕವಾಗಿಯೇ ಬಿಪಿಎಲ್ ಕಾರ್ಡ್ ಗಳನ್ನು ಪಡೆದಿದ್ದಾರೆ. ಸ್ವಂತ ಮನೆಯಿದ್ದು, ಬಾಡಿಗೆಗೂ ಮನೆಗಳನ್ನು ಕೊಟ್ಟಿರುವವರು ನಕಲಿ ದಾಖಲೆಗಳನ್ನು ಕೊಟ್ಟು ಕಾರ್ಡ್ ಮಾಡಿಸಿ ಕೊಂಡಿದ್ದಾರೆ. ಸರಕಾರಕ್ಕೆ ಈ ರೀತಿ ವಂಚನೆ ಮಾಡಿರುವವರಲ್ಲಿ ಬೆಂಗಳೂರಿಗರೇ ಹೆಚ್ಚು. ಇವೆಲ್ಲವನ್ನೂ ನ್ಯಾಯಬದ್ಧವಾಗಿ ಪತ್ತೆ ಮಾಡಿದರೆ 1.27 ಕೋಟಿ ಕಾರ್ಡ್ಗಳಲ್ಲಿ ಕನಿಷ್ಠ 40 ಲಕ್ಷ ಕಾರ್ಡ್ ಗಳು ಅನರ್ಹರ ಪಟ್ಟಿಗೆ ಸೇರುತ್ತವೆ ಎನ್ನುತ್ತಾರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.
ಧನ್ಯವಾದಗಳು…..
Click here…
- https://mahitikannada.com/central-ministers-key-response-on-cooking-gas-e-kyc-2024/
- https://mahitikannada.com/good-news-for-pm-kisan-yojana-farmers-this-time-it-is-recommended-to-increase-the-budget-by-rs-2000/
- https://mahitikannada.com/postal-life-insurance-paying-just-rs-755-will-get-rs-15-lakh-2024/