ಪಿಎಮ್ ಕಿಸಾನ್ ಯೋಜನೆ ರೈತರಿಗೆ ಶುಭ ಸುದ್ದಿ! ಈ ಬಾರಿ ಬಡ್ಜೆಟ್ ನಲ್ಲಿ 2000 ರೂ ಹೆಚ್ಚಳಕ್ಕೆ ಶಿಫಾರಸ್ಸು.
ರೈತ ಬಾಂಧವರೇ, ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ(PM kisan samman nidhi yojana) ಅಡಿಯಲ್ಲಿ ರೈತರಿಗೆ ನೀಡಲಾಗುತ್ತಿದ್ದ ಹಣದ ನೆರವನ್ನು ಕೇಂದ್ರ ಸರ್ಕಾರ ಹೆಚ್ಚಿಸಲಿದೆ ಅನ್ನುವ ಬಹುಮುಖ್ಯ ಸುದ್ದಿ ಈಗ ಹೊರಗಡೆ ಬಂದಿದ್ದು, ಈ ಸಂಬಂದಿತ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಪಿಎಮ್ ಕಿಸಾನ್ ಯೋಜನೆಯ ವಿವರ.
ರೈತ ಬಾಂಧವರೇ, ಪಿಎಮ್ ಕಿಸಾನ್ ಯೋಜನೆಯನ್ನು(PM Kisan yojana)ಪ್ರಧಾನಿ ನರೇಂದ್ರ ಮೋದಿಜಿ ಅವರು 2019ರಲ್ಲಿ ಜಾರಿಯಲ್ಲಿ ತಂದರು. ಪ್ರಾರಂಭದಿಂದ ಇಂದಿನವರೆಗೆ ಒಟ್ಟು 17 ಪಿಎಮ್ ಕಿಸಾನ್ ಕಂತುಗಳ ಹಣವನ್ನು ಕೇಂದ್ರ ಸರ್ಕಾರ ಡಿಬಿಟಿ ಮುಖಾಂತರ ಅರ್ಹ ರೈತರ ಖಾತೆಗೆ ವರ್ಷದಲ್ಲಿ ಮೂರು ಬಾರಿ ಪ್ರತಿ ಕಂತಿಗೆ 2000ರೂ ಅಂತೆ ಜಮೆ ಮಾಡುತ್ತದೆ.
ಪಿಎಮ್ ಕಿಸಾನ್ ಯೋಜನೆ ಹಣವು(PM Kisan money) ರೈತರಿಗೆ ವಿವಿಧ ರೀತಿಯಲ್ಲಿ ಉಪಯೋಗಕ್ಕೆ ಬಂದಿದ್ದು, ರೈತರಿಗೆ ಆರ್ಥಿಕ ನೆರವು ನೀಡುವುದೇ ಪಿಎಮ್ ಕಿಸಾನ್ ಯೋಜನೆಯ ಪ್ರಾಥಮಿಕ ಗುರುಯಾಗಿದೆ. ನಿಜ ಹೆಲ್ಲಬೇಕೆಂದರೆ, ಈ ಹಣದಿಂದ ರೈತರು ತಮ್ಮ ಎಲ್ಲ ಅಗತ್ಯ ಪೂರೈಕೆಗಳನ್ನು ಖರೀದಿಸಲು ವಿಫಲವಾಗಿದ್ದರೂ ವಿಪರೀತ ಬರಗಾಲದಿಂದ ಸಂಕಷ್ಟದಲ್ಲಿರುವ ರೈತ ಕುಟುಂಬಕ್ಕೆ ಈ ಹಣ ದೊರಕಿದರೆ ರೈತರ ಮುಖದಲ್ಲಿ ಸಂತೋಷವನ್ನು ನಾವು ಕಾಣಬಹುದು.
ಪಿಎಮ್ ಕಿಸಾನ್ ಯೋಜನೆ.
ಪಿಎಮ್ ಕಿಸಾನ್ ಕಂತಿನ ಹಣ ಹೆಚ್ಚಳಕ್ಕೆ ಶಿಫಾರಸ್ಸು?
ರೈತ ಬಾಂಧವರೆ, ಪ್ರಧಾನಿ ಮೋದಿ ಮೂರನೇ ಬಾರಿ ಆಯ್ಕೆ ಆದ ನಂತರ 2024-25ನೇ ಸಾಲಿನ ಮೊದಲ ಬಡ್ಜೆಟ್(Budget) ಜುಲೈ 24 ರಿಂದ ಆರಂಭಗೊಳ್ಳಲಿದ್ದು ಪಿಎಮ್ ಕಿಸಾನ್ ಹಣ ಹೆಚ್ಚಳಕ್ಕೆ ಶಿಫಾರಸ್ಸು ಮಾಡಲಾಗಿದೆ ಅನ್ನುವ ಸಿಹಿ ಸುದ್ದಿ ಬಂದಿದೆ.
ರೈತ ಬಾಂಧವರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ರಸಗೊಬ್ಬರ ಮತ್ತು ಬೀಜ ಖರೀದಿಗಳ ಮೇಲೆ ಸಬ್ಸಿಡಿ ಒದಗಿಸಿಸುತ್ತಿದ್ದರೂ ಹಣದುಬ್ಬರದಿಂದ(inflation) ವಸ್ತುಗಳ ಬೆಲೆ ಗಗನಕ್ಕೆರಿದೆ. ಪ್ರತಿ ವರ್ಷ ಬರಗಾಲ ಬಂದು ಬೆಳೆಹಾನಿ ಆಗಿ ರೈತರು ನಷ್ಟ ಅನುಭವಿಸುವುದು ಸರ್ವೇ ಸಾಮಾನ್ಯವಾಗಿದೆ. ಆದರಿಂದ ಈ ಮೇಲೆ ತಿಳಿಸಿದ ಮತ್ತು ಇನ್ನಿತರ ಅಂಶಗಳನ್ನು ಗಮನಿಸಿ ಹಿರಿಯ ಅಧಿಕಾರಿ ಪ್ರತಿನಿಧಿಗಳು ಮತ್ತು ಎಕ್ಸ್ಪರ್ಟ್ ಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ಅವರಿಗೆ ಪಿಎಮ್ ಕಿಸಾನ್ ಹಣ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿದ್ದರೆ.
ಈ ಬಾರಿ ಬಡ್ಜೆಟ್ ನ ಒಟ್ಟು ಮೊತ್ತ ರೂ 47,65,768 ಕೋಟಿಗಲಾಗಿದ್ದು ಅದರಲ್ಲಿ ಕ್ರಷಿ ಇಲಾಖೆಯ ಅನುದಾನವನ್ನು ಹೆಚ್ಚಿಸುವುದಲ್ಲದೆ ಕ್ರಷಿ ಕ್ಷೇತ್ರದ ಸಂಶೋದನೆಯ ಬಗ್ಗೆ ಹೆಚ್ಚು ಒಟ್ಟು ನೀಡಲಾಗುವುದು ಅಂತ ಕೇಂದ್ರ ಕ್ರಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ವ್ಯಕ್ತ ಪಡಿಸಿದ್ದಾರೆ.
2000ರೂ ಪಿಎಮ್ ಕಿಸಾನ್ ಹಣ ಹೆಚ್ಚಳಕ್ಕೆ ಶಿಫಾರಸ್ಸು?
ವರ್ಷಕ್ಕೆ ಮೂರು ಕಂತುಗಳಲ್ಲಿ ಪ್ರತಿ ಕಂತಿಗೆ 2000ರೂ ಅಂತೆ 6000 ರೂ ಜಮೆ ಆಗುತ್ತಿದ್ದ ಪಿಎಮ್ ಕಿಸಾನ್ ಯೋಜನೆಯ ಹಣವನ್ನು ಈ ಬಾರಿ 2000 ರೂ ಹೆಚ್ಚಿಸಿ ಒಟ್ಟು ನಾಲ್ಕು ಕಂತುಗಳಲ್ಲಿ ವರ್ಷಕ್ಕೆ 8000ರೂ ರೈತರ ಖಾತೆಗೆ ಜಮೆ ಮಾಡುವ ಶಿಫಾರಸ್ಸು ಮಾಡಲಾಗಿದೆ. ಜುಲೈ 04, 2024 ರಂದು ಬಡ್ಜೆಟ್ ಮಂಡನೆ ಆಗಲಿದ್ದು ರೈತರಿಗೆ ಸಿಹಿಸುದ್ದಿ ಸಿಗುವ ಎಲ್ಲ ಸಾಧ್ಯತೆಗಳಿವೆ.
ಕೇಂದ್ರ ಸರ್ಕಾರ ಇಂದಿಗೂ ಅರ್ಹ ರೈತರಿಗೆ ಪಿಎಮ್ ಕಿಸಾನ್ ಯೋಜನೆಗೆ ನೊಂದಣಿ ಮಾಡಿಕೊಳ್ಳಲು ಅವಕಾಶ ನೀಡಿದ್ದು, ಯಾವ ರೈತರು ಇಲ್ಲಿಯವರೆಗೆ ಪಿಎಮ್ ಕಿಸಾನ್ ಯೋಜನೆಗೆ ನೊಂದಣಿ ಮಾಡಿಸಿಕೊಂಡಿಲ್ಲವೋ ಅಂತವರು ಇಂದೇ ನೊಂದಣಿ ಮಾಡಿಸಿಕೊಳ್ಳಬಹುದು. ಪಿಎಮ್ ಕಿಸಾನ್ ಯೋಜನೆಯ ಅಧಿಕ್ರತ ರಿಜಿಸ್ಟ್ರೇಶನ್(PM Kisan new registration) ಪೋರ್ಟಲ್ ಲಿಂಕ್ ಕೆಳಗೆ ನೀಡಲಾಗಿದ್ದು ಅದರ ಮೇಲೆ ಕ್ಲಿಕ್ ಮಾಡಿ ಮಾಹಿತಿಯನ್ನು ನಮೂದಿಸಿ, ನೊಂದನಿಯನ್ನು ಮಾಡಿಸಿಕೊಳ್ಳಿ.
http://ಪಿಎಮ್ ಕಿಸಾನ್ ಯೋಜನೆಯ ಅಧಿಕ್ರತ ರಿಜಿಸ್ಟ್ರೇಶನ್ ಪೋರ್ಟಲ್
ಧನ್ಯವಾದಗಳು….
https://mahitikannada.com/postal-life-insurance-paying-just-rs-755-will-get-rs-15-lakh-2024/
https://mahitikannada.com/great-news-for-farmers-50-lakh-rupees-will-be-yours-from-this-scheme/